ಮತ್ತೆ ನೆನಪಾದ ಫಿಲಿಪ್ ಹ್ಯೂಸ್ ಘಟನೆ: ಕ್ಯಾಚ್ ಹಿಡಿಯುವ ವೇಳೆ ಡಿಕ್ಕಿ ಹೊಡೆದು ಕ್ರಿಕೆಟಿಗ ಸಾವು
ಬೌಲರ್ ಎಸೆದ ಚೆಂಡು ತಲೆಗೆ ತಾಗಿ ಕ್ರೀಡಾಂಗಣದಲ್ಲೇ ಸಾವನ್ನಪ್ಪಿದ ಆಸ್ಟ್ರೇಲಿಯನ್ ಕ್ರಿಕೆಟಿಗ ಫಿಲಿಫ್ ಹ್ಯೂಸ್ ದುರ್ಘಟನೆ ಇನ್ನೂ ಹಸಿರಾಗಿರುವಾಗಲೇ ಅಂತುಹುದೇ ಮತ್ತೊಂದು ಘಟನೆ ಭಾರತದ ಜೈಪುರದಲ್ಲಿ ನಡೆದಿದೆ...

ಜೈಪುರ: ಬೌಲರ್ ಎಸೆದ ಚೆಂಡು ತಲೆಗೆ ತಾಗಿ ಕ್ರೀಡಾಂಗಣದಲ್ಲೇ ಸಾವನ್ನಪ್ಪಿದ ಆಸ್ಟ್ರೇಲಿಯನ್ ಕ್ರಿಕೆಟಿಗ ಫಿಲಿಫ್ ಹ್ಯೂಸ್ ದುರ್ಘಟನೆ ಇನ್ನೂ ಹಸಿರಾಗಿರುವಾಗಲೇ ಅಂತುಹುದೇ ಮತ್ತೊಂದು ಘಟನೆ ಭಾರತದ ಜೈಪುರದಲ್ಲಿ ನಡೆದಿದೆ.
ಕ್ಯಾಚ್ ಹಿಡಿಯುವ ವೇಳೆ ಇಬ್ಬರು ಕ್ರಿಕೆಟಿಗರು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ 26 ವಷ೯ದ ಯುವ ಕ್ರಿಕೆಟಿಗ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಜೈಪುರದ ಚಿತ್ತೂರ್ ಪುರ್ ಈ ಘಟನೆ ನಡೆದಿದ್ದು, ಮೃತ ಯುವಕನನ್ನು 26 ವರ್ಷದ ಭಾನು ಜೋಶಿ ಎಂದು ಗುರುತಿಸಲಾಗಿದೆ. ರುವ ಘಟನೆ ಕಳೆದ ಭಾನುವಾರ ನಡೆದಿದೆ. ಚಿತ್ತೂರ್ ಪುರ್ ನಲ್ಲಿ ನಡೆದ ಕ್ರಿಕೆಟ್ ಪ೦ದ್ಯದ ವೇಳೆ ಚ೦ಡೇರಿಯಾ ಗ್ರಾಮದ ನಿವಾಸಿ ಭಾನು ಜೋಶಿ ಕ್ಯಾಚ್ ಪಡೆಯುವ ವೇಳೆ ಇತರ ಇಬ್ಬರು ಫೀಲ್ಡರ್‍ಗಳಿಗೆ ಡಿಕ್ಕಿ ಹೊಡೆದಿದ್ದಾನೆ.
ಈ ವೇಳೆ ಭಾನು ಜೋಶಿಯ ತಲೆ ಹಾಗೂ ಯಕೃತ್ತಿಗೆ ಗ೦ಭೀರ ಏಟು ಬಿದ್ದಿತ್ತು. ಕೂಡಲೇ ಆತ ಕೆಳಕ್ಕೆ ಬಿದ್ದು, ಪ್ರಜ್ಞಾಹೀನನಾದ. ತಕ್ಷಣವೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಅಸುನೀಗಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಮೃತ ಭಾನು ಜೋಶಿ ಎರಡು ತಿ೦ಗಳ ಹಿ೦ದೆಯಷ್ಟೇ ವಿವಾಹವಾಗಿದ್ದನಂತೆ. ಅಲ್ಲದೆ ಖಾಸಗಿ ಕ೦ಪನಿಯಲ್ಲಿ 5 ಸಾವಿರ ರು. ಸ೦ಬಳಕ್ಕೆ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಕಳೆದ ವಷ೯ವೂ ಕೂಡ ಇಂತಹುದೇ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿತ್ತು. ಕಳೆದ ಏಪ್ರಿಲ್‍ನಲ್ಲಿ ಬ೦ಗಾಳದ ಕ್ಲಬ್ ಕ್ರಿಕೆಟಿಗ ಅ೦ಕಿತ್ ಕೇಸರಿ ಕೂಡ ಕ್ಯಾಚ್ ಹಿಡಿಯುವ ವೇಳೆ ಡಿಕ್ಕಿ ಸ೦ಭವಿಸಿ ಅಸುನೀಗಿದ್ದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


