ಕ್ರಿಕೆಟ್

ಮೆಕ್ಕಲಮ್ ಆರೋಪದಲ್ಲಿ ಹುರುಳಿಲ್ಲ; ನನ್ನ ಕರ್ತವ್ಯ ನಿಭಾಯಿಸಿದ್ದೇನೆ: ರವಿ ಸಾವನಿ

2008ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಂಬಂಧ ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ಬ್ರೆಂಡನ್ ಮೆಕ್ಕಲಂ ಸಿಡಿಸಿದ್ದ ಫಿಕ್ಸಿಂಗ್ ಆರೋಪದಲ್ಲಿ ಹುರುಳಿಲ್ಲ ಎಂದು ಐಸಿಸಿಯ ಭ್ರಷ್ಟಾಚಾರ ನಿಗ್ರಹದಳದ ಮಾಜಿ ಮುಖ್ಯಸ್ಥ ರವಿ ಸಾವನಿ ಹೇಳಿದ್ದಾರೆ.

ಮೆಕ್ಕಲಮ್ ಆರೋಪದಲ್ಲಿ ಹುರುಳಿಲ್ಲ; ನನ್ನ ಕರ್ತವ್ಯ ನಿಭಾಯಿಸಿದ್ದೇನೆ: ರವಿ ಸಾವನಿ
ಮೆಕ್ಕಲಂ ಮತ್ತು ಐಸಿಸಿ ಭ್ರಷ್ಟಾಚಾರ ದಳದ ಮಾಜಿ ಮುಖ್ಯಸ್ಥ ರವಿ ಸಾವನಿ (ಸಂಗ್ರಹ ಚಿತ್ರ)
Published On :

ನವದೆಹಲಿ: 2008ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಂಬಂಧ ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ಬ್ರೆಂಡನ್ ಮೆಕ್ಕಲಂ ಸಿಡಿಸಿದ್ದ ಫಿಕ್ಸಿಂಗ್ ಆರೋಪದಲ್ಲಿ ಹುರುಳಿಲ್ಲ ಎಂದು  ಐಸಿಸಿಯ ಭ್ರಷ್ಟಾಚಾರ ನಿಗ್ರಹದಳದ ಮಾಜಿ ಮುಖ್ಯಸ್ಥ ರವಿ ಸಾವನಿ ಹೇಳಿದ್ದಾರೆ.

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಂಬಂಧ ಮೆಕ್ಕಲಂ ಆರೋಪಿಸಿರುವಂತೆ ಏನೂ ಇಲ್ಲ. ಕ್ರಿಸ್ ಕೇರ್ನ್ಸ್ ರನ್ನು ಬುಕ್ಕಿಯೊಬ್ಬ ಸಂಪರ್ಕಿಸಿದ ಕುರಿತು ಮೆಕ್ಕಲಂ ಮಾಹಿತಿ ನೀಡುತ್ತಿದ್ದಂತೆಯೇ  ತಾವು ಅದನ್ನು ಐಸಿಸಿ ಗಮನಕ್ಕೆ ತಂದಿದ್ದೇನೆ. ಇದರಲ್ಲಿ ಯಾವುದೇ ವಿಳಂಬ ಮಾಡಿಲ್ಲ. ನನ್ನ ಕರ್ತವ್ಯವನ್ನು ನಾನು ಚಾಚೂ ತಪ್ಪದೇ ಮಾಡಿದ್ದೇನೆ ಎಂದು ರವಿ ಸಾವನಿ ಹೇಳಿದ್ದಾರೆ.

ಇತ್ತೀಚೆಗೆ ಲಂಡನ್ ನಲ್ಲಿ ನಡೆದ ‘ಎಂಸಿಸಿ ಸ್ಪಿರಿಟ್‌ ಆಫ್‌ ಕ್ರಿಕೆಟ್‌’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದ ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ಮೆಕ್ಕಲಂ "2008ರ ಚೊಚ್ಚಲ  ಐಪಿಎಲ್‌ ಟೂರ್ನಿಯ ವೇಳೆ ಮತ್ತು ನಮ್ಮ ತಂಡ ಇಂಗ್ಲೆಂಡ್‌ ಪ್ರವಾಸ ಕೈಗೊಂಡಾಗ ನಮ್ಮದೇ ತಂಡದ ಆಟಗಾರ ಕ್ರಿಸ್‌  ಕೇರ್ನ್ಸ್‌ ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗುವಂತೆ ಸಂಪರ್ಕಿಸಿದ್ದರು.  ಈ ವಿಷಯವನ್ನು ಐಸಿಸಿಯ ಭ್ರಷ್ಟಾಚಾರ ನಿಗ್ರಹ ತಡೆ ಘಟಕಕ್ಕೆ ತಿಳಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಗಂಭೀರ ವಿಚಾರವನ್ನು ವಿಶ್ವ ಕ್ರಿಕೆಟ್ ಮಂಡಳಿ ಲಘುವಾಗಿ ಪರಿಗಣಿಸಿತು" ಎಂದು  ಆರೋಪಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.