ಕ್ರಿಕೆಟ್

ವಿಂಡೀಸ್ ಪ್ರವಾಸ ಕೈಗೊಂಡ ಯುವ ಕ್ರಿಕೆಟಿಗರಿಗೆ ಧೋನಿ ಸ್ಫೂರ್ತಿದಾಯಕ ಮಾತು!

ಸುದೀರ್ಘ ಟೆಸ್ಟ್ ಸರಣಿ ಗಳಿಗೆ ಸಜ್ಜಾಗಿ ವಿಂಡೀಸ್ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾಗೆ ಏಕದಿನ ಮತ್ತು ಟಿ20 ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಶುಭಕೋರಿದ್ದು, ಬೆಂಗಳೂರಿನಲ್ಲಿ ನಡೆದ ತರಬೇತಿಯಲ್ಲಿ ಧೋನಿ ಸಹ ಆಟಗಾರರಿದೆ ಕೆಲ ಸ್ಪೂರ್ತಿದಾಯಕ ಮಾತುಗಳನ್ನಾಡಿದ್ದಾರೆ...

ವಿಂಡೀಸ್ ಪ್ರವಾಸ ಕೈಗೊಂಡ ಯುವ ಕ್ರಿಕೆಟಿಗರಿಗೆ ಧೋನಿ ಸ್ಫೂರ್ತಿದಾಯಕ ಮಾತು!
ಆಟಗಾರರನ್ನುದ್ದೇಶಿಸಿ ಮಾತನಾಡಿದ ಧೋನಿ (ಬಿಸಿಸಿಐ ಚಿತ್ರ)
Published On :

ಬೆಂಗಳೂರು: ಸುದೀರ್ಘ ಟೆಸ್ಟ್ ಸರಣಿ ಗಳಿಗೆ ಸಜ್ಜಾಗಿ ವಿಂಡೀಸ್ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾಗೆ ಏಕದಿನ ಮತ್ತು ಟಿ20 ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ  ಶುಭಕೋರಿದ್ದು, ಬೆಂಗಳೂರಿನಲ್ಲಿ ನಡೆದ ತರಬೇತಿಯಲ್ಲಿ ಧೋನಿ ಸಹ ಆಟಗಾರರಿದೆ ಕೆಲ ಸ್ಪೂರ್ತಿದಾಯಕ ಮಾತುಗಳನ್ನಾಡಿದ್ದಾರೆ.

ನೂತನ ಕೋಚ್ ಅನಿಲ್ ಕುಂಬ್ಳೆ ಆಯೋಜಿಸಿದ್ದ ವಿಶೇಷ ಸಂಗೀತ ಸಹಿತ ತರಬೇತಿಯಲ್ಲಿ ಪಾಲ್ಗೊಂಡು ಬಳಿಕ ಆಟಗಾರರನ್ನು ಉದ್ದೇಶಿಸಿ ಮಾತನಾಡಿದ ಮಹೇಂದ್ರ ಸಿಂಗ್ ಧೋನಿ, ಆಟದಲ್ಲಿ  ಗಂಭೀರತೆ ಇರಬೇಕು ನಿಜ. ಹಾಗೆಯೇ ಮೋಜು ಮತ್ತು ಹಾಸ್ಯ ಕೂಡ ಇರಬೇಕು. ಆಟವನ್ನು ನೀವು ನಿಜಕ್ಕೂ ಆನಂದಿಸಿ ಆಡಿದರೆ ಖಂಡಿತ ಯಶಸ್ಸು ನಮ್ಮ ಪಾಲಾಗುತ್ತದೆ ಎಂದು ಹೇಳಿದರು.

"ಕ್ರಿಕೆಟ್ ಅನ್ನು ನಾವು ಕಷ್ಟಪಟ್ಟು ಆಡುವುದಕ್ಕಿಂತ ಇಷ್ಟಪಟ್ಟು ಮತ್ತು ಸಂತೋಷದಿಂದ ಆಡಬೇಕು. ಆಗಷ್ಟೇ ಯಶಸ್ಸು ನಮಗೊಲಿಯುತ್ತದೆ. ಸಂಗೀತವೇ ಗೊತ್ತಿಲ್ಲದ ನಾವು ಇಲ್ಲಿ  ಸಂಗೀತವಾದ್ಯಗಳನ್ನು ಬಾರಿಸಿ ಆನಂದಪಟ್ಟೆವು. ಅಂತೆಯೇ ಕ್ರಿಕೆಟ್ ಅನ್ನು ಕೂಡ ಆನಂದಿಸಿ ಆಡಿದರೆ ಗೆಲುವು ಸಿಗುತ್ತದೆ. ಹಿಂದೆಲ್ಲಾ ಭಾರತ ತಂಡ ಕೇವಲ ಐದರಿಂದ ಆರು ಬ್ಯಾಟ್ಸಮನ್  ಗಳನ್ನೇ ನೆಚ್ಚಿಕೊಂಡಿತ್ತು. ಈಗ ಕಾಲ ಬದಲಾಗಿದ್ದು, ಭಾರತೀಯ ಕ್ರಿಕೆಟ್ ಮುಂದವರೆದಿದೆ. ಯುವ ಕ್ರಿಕೆಟಿಗರ ಆಗಮನದೊಂದಿಗೆ ಭಾರತೀಯ ಕ್ರಿಕೆಟ್ ಸಾಮರ್ಥ್ಯ ಹೆಚ್ಚಿದೆ. 10ನೇ ವಿಕೆಟ್ ನಲ್ಲೂ  ನಾವು ಉತ್ತಮ ರನ್ ಕಲೆಹಾಕಬಲ್ಲೆವು ಎಂಬುದನ್ನು ತೋರಿಸಿಕೊಟ್ಟಿದ್ದೇವೆ.

ನಮ್ಮಲ್ಲಿ ಇದೀಗ ಬ್ಯಾಟ್ಸಮನ್ ಮತ್ತು ಬೌಲರ್ ಗಳ ಸಮೂಹವೇ ಇದ್ದು, ನಮ್ಮಲ್ಲಿ ಸಾಕಷ್ಟು ಆಯ್ಕೆಗಳಿವೆ. ನಾವೆಲ್ಲರೂ ಒಂದು ತಂಡವಾಗಿ ಆಡಬೇಕು. ನಿಮ್ಮನ್ನು ಯಾವುದಾದರೂ ಒಂದು  ವಿಷಯ ತಡೆಯಲೆತ್ನಿಸಬಹುದು ಎಂದು ಚಿಂತಿಸಬೇಡಿ. ಈ ಚಿಂತೆಯೇ ನಿಮ್ಮ ಮೇಲೆ ಒತ್ತಡ ಹೇರಿ ನಿಮ್ಮ ನೈಜ ಆಟಕ್ಕೆ ತಡೆಯಾಗಬಲ್ಲದು ಎಂದು ಧೋನಿ ಹೇಳಿದರು.

ಅಂತೆಯೇ ಸುದೀರ್ಘ ಟೆಸ್ಚ್ ಸರಣಿ ವೇಳೆ ಖಂಡಿತಾ ನಾನು ತಂಡವನ್ನು ಮಿಸ್ ಮಾಡಿಕೊಳ್ಳಲ್ಲಿದ್ದೇನೆ ಎಂದು ಧೋನಿ ಭಾವುಕರಾಗಿ ಹೇಳಿದರು.

ಸತತ 17 ಟೆಸ್ಟ್ ಪಂದ್ಯಗಳ ಸುಧೀರ್ಘ ಟೆಸ್ಟ್ ಸರಣಿಗಳಿಗೆ ಟೀಂ ಇಂಡಿಯಾ ಸಜ್ಜಾಗಿದ್ದು, ಇದರ ಮೊದಲ ಭಾಗವಾಗಿ ವಿಂಡೀಸ್ ಪ್ರವಾಸದಲ್ಲಿ 4 ಟೆಸ್ಟ್ ಪಂದ್ಯಗಳನ್ನು ಆಡಲಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.