ಕ್ರಿಕೆಟ್

ವಿಂಡೀಸ್ ನಲ್ಲಿ ಕ್ಲೀನ್ ಸ್ವೀಪ್ ಮಾಡಿದರೆ ಭಾರತಕ್ಕೆ ನಂಬರ್ 1 ಸ್ಥಾನ!

ಟೆಸ್ಟ್ ರ‍್ಯಾಂಕಿಂಗ್‌ ನಲ್ಲಿ ಅಗ್ರ ಸ್ಥಾನಕ್ಕೇರುವ ಅಪೂರ್ವ ಅವಕಾಶ ಟೀಂ ಇಂಡಿಯಾಕ್ಕೆ ಲಭಿಸಿದ್ದು, ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸದಲ್ಲಿನ ಟೆಸ್ಟ್ ಸರಣಿಯನ್ನು ಒಂದೂ ಪಂದ್ಯ ಸೋಲದೇ ಕ್ಲೀನ್ ಸ್ವೀಪ್ ಮಾಡಿದರೆ ಭಾರತ ತಂಡ ಅಗ್ರ ಸ್ಥಾನಕ್ಕೇರುತ್ತದೆ...

ವಿಂಡೀಸ್ ನಲ್ಲಿ ಕ್ಲೀನ್ ಸ್ವೀಪ್ ಮಾಡಿದರೆ ಭಾರತಕ್ಕೆ ನಂಬರ್ 1 ಸ್ಥಾನ!
ಟೀಂ ಇಂಡಿಯಾ (ಸಂಗ್ರಹ ಚಿತ್ರ)
Published On :

ನವದೆಹಲಿ: ಟೆಸ್ಟ್ ರ‍್ಯಾಂಕಿಂಗ್‌ ನಲ್ಲಿ ಅಗ್ರ ಸ್ಥಾನಕ್ಕೇರುವ ಅಪೂರ್ವ ಅವಕಾಶ ಟೀಂ ಇಂಡಿಯಾಕ್ಕೆ ಲಭಿಸಿದ್ದು, ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸದಲ್ಲಿನ ಟೆಸ್ಟ್ ಸರಣಿಯನ್ನು ಒಂದೂ ಪಂದ್ಯ  ಸೋಲದೇ ಕ್ಲೀನ್ ಸ್ವೀಪ್ ಮಾಡಿದರೆ ಭಾರತ ತಂಡ ಅಗ್ರ ಸ್ಥಾನಕ್ಕೇರುತ್ತದೆ.

ಪ್ರಸ್ತುತ ಟೆಸ್ಟ್ ರ‍್ಯಾಂಕಿಂಗ್‌ ನಲ್ಲಿ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡ 118 ಅಂಕಗಳನ್ನು ಗಳಿಸಿದ್ದರೆ, 2 ನೇ ಸ್ಥಾನದಲ್ಲಿರುವ ಭಾರತ ತಂಡ 112 ಅಂಕಗಳನ್ನು ಗಳಿಸಿದೆ. ಒಂದು ವೇಳೆ ವೆಸ್ಟ್  ಇಂಡೀಸ್ ಪ್ರವಾಸದಲ್ಲಿ ವಿಂಡೀಸ್ ತಂಡವವನ್ನು 4-0 ಅಂತರದಲ್ಲಿ ಮಣಿಸಿದರೆ ಟೀಂ ಇಂಡಿಯಾದ ಅಂಕಗಳಿಕೆ ಆಸ್ಟ್ರೇಲಿಯಾಗಿಂತ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಭಾರತ್ತಕ್ಕೆ ವಿಂಡೀಸಲ್  ಪ್ರವಾಸದಲ್ಲಿ ಕ್ಲೀನ್ ಸ್ವೀಪ್ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ.

ಇನ್ನು ವಿಂಡೀಸ್ ಪ್ರವಾಸದ ನಿಮಿತ್ತ ಇಂದು ಟೀಂ ಇಂಡಿಯಾ ಮತ್ತು ನೂತನ ಕೋಚ್ ಅನಿಲ್ ಕುಂಬ್ಳೆ ವೆಸ್ಟ್ ಇಂಡೀಸ್ ಪ್ರಯಾಣ ಬೆಳೆಸಲಿದ್ದು, ನಾಳೆ ವಿಶ್ರಾಂತಿ ಬಳಿಕ ಅಭ್ಯಾಸ  ನಡೆಸಲಿದ್ದಾರೆ. ಇದಕ್ಕೂ ಮೊದಲು ನಿನ್ನೆ ಬೆಂಗಳೂರಿನಲ್ಲಿ ನಡೆದ ಅಭ್ಯಾಸದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತಂಡದ ನಾಯಕ ವಿರಾಟ್ ಕೊಹ್ಲಿ, ರ‍್ಯಾಂಕಿಂಗ್‌ ನಲ್ಲಿ ಅಗ್ರ  ಸ್ಥಾನಕ್ಕೇರುವುದು ನಮ್ಮ ಗುರಿಯಲ್ಲ. ಬದಲಿಗೆ ಪಂದ್ಯವನ್ನು ಹೇಗೆ ಗೆಲ್ಲಬೇಕು ಎಂಬುದೇ ನಮ್ಮ ಗುರಿಯಾಗಿರುತ್ತದೆ. ರ‍್ಯಾಂಕಿಂಗ್‌  ಅನ್ನು ಗಮನದಲ್ಲಿಟ್ಟುಕೊಂಡು ನಾವು ಆಡುವುದಿಲ್ಲ ಎಂದು  ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.