ಆಸ್ಟ್ರೇಲಿಯಾದ ಕೋಚ್ ಲೆಹ್ಮನ್‌ರನ್ನು ನೀವು ಗರ್ಭಿಣಿಯೇ ಎಂದು ಕೇಳಿದ್ದೆ: ಹರ್ಭಜನ್ ಸಿಂಗ್
ಟೀಂ ಇಂಡಿಯಾದ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಆಸ್ಟ್ರೇಲಿಯಾದ ಮಾಜಿ ಆಟಗಾರ ಹಾಗೂ ಹಾಲಿ ಕೋಚ್ ಡರೇನ್ ಲೆಹ್ಮನ್ ಅವರ ದೊಡ್ಡ ಹೊಟ್ಟೆ ನೋಡಿ ನೀವು...

ನವದೆಹಲಿ: ಟೀಂ ಇಂಡಿಯಾದ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಆಸ್ಟ್ರೇಲಿಯಾದ ಮಾಜಿ ಆಟಗಾರ ಹಾಗೂ ಹಾಲಿ ಕೋಚ್ ಡರೇನ್ ಲೆಹ್ಮನ್ ಅವರ ದೊಡ್ಡ ಹೊಟ್ಟೆ ನೋಡಿ ನೀವು ಗರ್ಭಿಣಿಯೇ ಎಂದು ಕೇಳಿದ್ದರಂತೆ. ಹೌದು ಆಗಂತ ಹರ್ಭಜನ್ ಸಿಂಗ್ ಹೇಳಿದ್ದಾರೆ.
ಆಪ್ ಕೀ ಅದಾಲತ್ ಟಿವಿ ಕಾರ್ಯಕ್ರಮದಲ್ಲಿ ಮಾತನಾಡಿದ ಹರ್ಭಜನ್ ಸಿಂಗ್ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಪಂದ್ಯದ ವೇಳೆ ಲೆಹ್ಮನ್ ಹಾಗೂ ಗ್ಲೆನ್ ಮೆಕ್ ಗ್ರಾತ್ ಸೇರಿದಂತೆ ಕೆಲ ಆಟಗಾರರು ಎದುರಾಳಿ ತಂಡದ ಆಟಗಾರರನ್ನು ಕೆಣಕುತ್ತಿದ್ದರು(ಸೆಡ್ಜಿಂಗ್). ಪಂಜಾಬ್ ನವನಾದ ನಾನು ಅವರಿಗೆ ಮೈದಾನದಲ್ಲೇ ತಿರುಗೇಟು ನೀಡುತ್ತಿದೆ.
ಆಸ್ಟ್ರೇಲಿಯಾದ ಪಂದ್ಯದ ವೇಳೆ ಲೆಹ್ಮನ್ ಸತತವಾಗಿ ನನ್ನನ್ನು ಕೆಣಕುತ್ತಿದ್ದರು. ಈ ವೇಳೆ ಲೆಹ್ಮನ್ ಹತ್ತಿರ ಹೋಗಿ ಅವರ ಹೊಟ್ಟೆಯ ಕಡೆ ಕೈತೋರಿಸಿ ನೀನು ಗರ್ಭಿಣಿಯೇ ಎಂದು ಕೇಳಿದ್ದೆ. ಈ ವಿಚಾರವನ್ನು ಲೆಹ್ಮನ್ ಶೇನ್ ವಾರ್ನ್ ಹತ್ತಿ ಹೇಳಿದಾಗ ಅವರು ಜೋರಾಗಿ ನಕಿದ್ದರು ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


