ಬಾಲ್ಯದ ಕರುಣ್ ದಪ್ಪಗಿದ್ದರಿಂದ ಒಂದು ವರ್ಷ ಕಾಲ ಬ್ಯಾಟಿಂಗ್ ನೀಡಿರಲಿಲ್ಲ: ಕರುಣ್ ಬಾಲ್ಯದ ಕೋಚ್
ಕನ್ನಡಿಗ ಕರುಣ್ ನಾಯರ್ ಟೆಸ್ಟ್ ಕ್ರಿಕೆಟ್ ನಲ್ಲಿ ತ್ರಿಶತಕ ಬಾರಿಸಿ ಐತಿಹಾಸಿಕ ಸಾಧನೆ ಮಾಡಿದ್ದು ಕರುಣ್ ಬಾಲ್ಯದ ಕೋಚ್ ಬಿ ಶಿವಾನಂದ ಅವರು ತನ್ನ ಮತ್ತು ಕರುಣ್...

Published On :
ಬೆಂಗಳೂರು: ಕನ್ನಡಿಗ ಕರುಣ್ ನಾಯರ್ ಟೆಸ್ಟ್ ಕ್ರಿಕೆಟ್ ನಲ್ಲಿ ತ್ರಿಶತಕ ಬಾರಿಸಿ ಐತಿಹಾಸಿಕ ಸಾಧನೆ ಮಾಡಿದ್ದು ಕರುಣ್ ಬಾಲ್ಯದ ಕೋಚ್ ಬಿ ಶಿವಾನಂದ ಅವರು ತನ್ನ ಮತ್ತು ಕರುಣ್ ನಾಯರ್ ಒಡನಾಟವನ್ನು ಹಂಚಿಕೊಂಡಿದ್ದಾರೆ.
ಕರುಣ್ ನಾಯರ್ ಅವರು ನಾಲ್ಕನೇ ತರಗತಿಯ ಪರೀಕ್ಷೆ ಮುಗಿಸಿಕೊಂಡು 2001ರಲ್ಲಿ ಕೋರಮಂಗಲ ಕ್ರಿಕೆಟ್ ಅಕಾಡೆಮಿಯಲ್ಲಿ ಬಾಲ್ಯದ ತರಬೇತಿ ಆರಂಭಿಸಿದರು. ಬಾಲ್ಯದಲ್ಲಿ ಅವರು ಹೆಚ್ಚು ದಪ್ಪಗಿದ್ದರಿಂದ ಒಂದು ವರ್ಷಗಳ ಕಾಲ ಬ್ಯಾಟ್ ಮುಟ್ಟದೆ ದಿನ ಓಡುವಂತೆ ವ್ಯಾಯಾಮ ಮಾಡುವಂತೆ ತಿಳಿಸಿದ್ದೇ ಎಂದು ಹೇಳಿದ್ದಾರೆ.
ಕರುಣ್ ನಾಯರ್ ಗೆ ಬಾಲ್ಯದಲ್ಲಿ ಅವರಲ್ಲಿದ್ದ ಬದ್ಥತೆ ಮತ್ತು ಕಠಿಣ ಅಭ್ಯಾಸ ಈಗಲೂ ಇದೆ. ಒಂದು ವರ್ಷ ಕಾಲ ಬ್ಯಾಟ್ ಮುಟ್ಟದೆ ದಿನ ವ್ಯಾಯಾಮ ಮತ್ತು ಓಡುವಂತೆ ತಿಳಿಸಿದ್ದರು ಯಾಕೆ ಅಂತ ಒಂದು ದಿನವೂ ಪ್ರಶ್ನೆ ಮಾಡಿಲ್ಲ ಎಂದರು. 2002 ಜನವರಿ 6ರಂದು ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಹುಟ್ಟುಹಬ್ಬದ ದಿನದಿಂದ ಕರುಣ್ ನಾಯರ್ ಗೆ ಬ್ಯಾಟಿಂಗ್ ಪ್ರಾಕ್ಟಿಸ್ ಕೊಡಲು ಮುಂದಾದೆ ಎಂದರು.
2002ರಲ್ಲಿ ಕರ್ನಾಟಕ ವಲಯ ತಂಡಕ್ಕೆ ಆಯ್ಕೆಯಾದರು. ಅಲ್ಲಿಂದ ಅವರ ವೃತ್ತಿ ಜೀವನ ಬದಲಾಯಿತು. ಇಂಗ್ಲೆಂಡ್ ವಿರುದ್ಧದ ತ್ರಿಶತಕದಂತೆ 2014-15ರ ರಣಜಿ ಟೂರ್ನಿಯ ಫೈನಲ್ ನಲ್ಲಿ ಕರುಣ್ ಸಿಡಿಸಿದ್ದ ತ್ರಿಶತಕ ಸಹ ಅವಿಸ್ಮರಣೀಯ ಎಂದು ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ತಮಿಳುನಾಡು ವಿರುದ್ಧದ ರಣಜಿ ಟೂರ್ನಿಯ ಫೈನಲ್ ನಲ್ಲಿ 328 ರನ್ ಗಳನ್ನು ಗಳಿಸಿದ್ದರು. 872 ನಿಮಿಷಗಳ ಕಾಲ ಕ್ರೀಸ್ ನಲ್ಲಿದ್ದ ಅವರು 93 ಓವರ್ ಕ್ರೀಸ್ ನಲ್ಲಿದ್ದರು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


