ಕ್ರಿಕೆಟ್

ತ್ರಿಶತಕ ಕ್ಲಬ್ ಗೆ ಸ್ವಾಗತ, 12 ವರ್ಷಗಳ ಒಂಟಿತನ ಕೊನೆಗಾಣಿಸಿದೆ ಕರುಣ್ : ಸೆಹ್ವಾಗ್

ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ಸಿಡಿಸಿದ ಕರುಣ್ ನಾಯರ್ ಗೆ ಭಾರತೀಯ ಕ್ರಿಕೆಟ್ ತಂಡದ ಹಿರಿಯ ಆಟಗಾರದಿಂದ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದ್ದು, ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕರುಣ್ ನಾಯರ್ ಗೆ ತ್ರಿಶತಕ ಕ್ಲಬ್ ಗೆ ಸ್ವಾಗತ ಕೋರಿದ್ದಾರೆ.

ತ್ರಿಶತಕ ಕ್ಲಬ್ ಗೆ ಸ್ವಾಗತ, 12 ವರ್ಷಗಳ ಒಂಟಿತನ ಕೊನೆಗಾಣಿಸಿದೆ ಕರುಣ್ : ಸೆಹ್ವಾಗ್
ವಿರೇಂದ್ರ ಸೆಹ್ವಾಗ್ ಟ್ವೀಟ್
Published On :
ನವದೆಹಲಿ: ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ಸಿಡಿಸಿದ ಕರುಣ್ ನಾಯರ್ ಗೆ ಭಾರತೀಯ ಕ್ರಿಕೆಟ್ ತಂಡದ ಹಿರಿಯ ಆಟಗಾರದಿಂದ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದ್ದು, ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕರುಣ್ ನಾಯರ್ ಗೆ ತ್ರಿಶತಕ ಕ್ಲಬ್ ಗೆ ಸ್ವಾಗತ ಕೋರಿದ್ದಾರೆ. 
ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಗರಿಷ್ಠ ರನ್ ದಾಖಲಿಸಿರುವ ಏಕೈಕ ಆಟಗಾರ ವಿರೇಂದ್ರ ಸೆಹ್ವಾಗ್  ತ್ರಿಶತಕ ಸಿಡಿಸಿರುವ ಎರಡನೇ ಆಟಗಾರ ಕರುಣ್ ನಾಯರ್ ಗೆ ಟ್ವಿಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದು, ತ್ರಿಶತಕ ಕ್ಲಬ್ ಗೆ ಸ್ವಾಗತ ಕೋರಿದ್ದಾರೆ. 
ಎಂದಿನಂತೆಯೇ ವಿನೂತನ ರೀತಿಯಲ್ಲಿ ಟ್ವೀಟ್ ಮಾಡಿರುವ ವಿರೇಂದ್ರ ಸೆಹ್ವಾಗ್, "12 ವರ್ಷಗಳಿಂದ ತ್ರಿಶತಕದ ಕ್ಲಬ್ ನಲ್ಲಿ ಒಂಟಿತನ ಕಾಡುತ್ತಿತ್ತು. ಆದರೆ ಈಗ ತ್ರಿಶತಕ ದಾಖಲಿಸಿದ ಕರುಣ್ ಜೊತೆಗಾರನಾಗಿದ್ದಾರೆ. ಮಜಾ ಬಂತು". ಎಂದು ಟ್ವೀಟ್ ಮಾಡಿದ್ದಾರೆ. ಕರುಣ್ ನಾಯರ್ ತ್ರಿಶತಕ ದಾಖಲಿಸುವುದಕ್ಕೂ 12 ವರ್ಷಗಳ ಹಿಂದೆ ವಿರೇಂದ್ರ ಸೆಹ್ವಾಗ್ ಟೆಸ್ಟ್ ನಲ್ಲಿ ತ್ರಿಶತಕ ದಾಖಲಿಸಿದ್ದ ಏಕೈಕ ಆಟಗಾರರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.