ಕ್ರಿಕೆಟ್

ಟೆಸ್ಟ್ ಪಂದ್ಯಗಳ ನಡುವಿನ ಅಂತರ ನಮಗೆ ಪ್ರಯೋಜನವಾಗಲಿದೆ: ವಿರಾಟ್ ಕೊಹ್ಲಿ

ಟೆಸ್ಟ್ ಪಂದ್ಯಗಳ ನಡುವೆ ಹೆಚ್ಚು ಅಂತರವಿದ್ದರೆ ನಮಗೆ ಪ್ರಯೋಜನವಾಗಲಿದೆ ಎಂದು ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ...

ಟೆಸ್ಟ್ ಪಂದ್ಯಗಳ ನಡುವಿನ ಅಂತರ ನಮಗೆ ಪ್ರಯೋಜನವಾಗಲಿದೆ: ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Published On :
ಮುಂಬೈ: ಟೆಸ್ಟ್ ಪಂದ್ಯಗಳ ನಡುವೆ ಹೆಚ್ಚು ಅಂತರವಿದ್ದರೆ ನಮಗೆ ಪ್ರಯೋಜನವಾಗಲಿದೆ ಎಂದು ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. 
ಟೆಸ್ಟ್ ಪಂದ್ಯಗಳ ನಡುವೆ ಅಂತರವಿಡುವಂತೆ ನಾವು ಕೇಳಿರಲಿಲ್ಲ. ಇದು ವೇಳಾಪಟ್ಟಿಯ ಒಂದು ಭಾಗವಾಗಿದೆ. ಮೂರನೇ ಟೆಸ್ಟ್ ಪಂದ್ಯದ ನಂತರ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಎಂಟು ದಿನಗಳ ಅಂತರವಿದ್ದು ಇದು ನಮಗೆ ಅನುಕೂಲವಾಗಲಿದೆ ಎಂದರು. 
ಪಂದ್ಯಗಳು ನಿರಂತರವಾಗಿದ್ದರೆ ನಾವು ಹೆಚ್ಚು ಬಳಲುತ್ತೇವೆ. ಇದರಿಂದ ಪಂದ್ಯಗಳ ನಡುವೆ ಹೆಚ್ಚು ಅಂತರವಿದ್ದಾಗ ನಮಗೂ ಸ್ವಲ್ಪ ವಿರಾಮ ತೆಗೆದುಕೊಳ್ಳಲು ಅನುಕೂಲವಾಗುತ್ತದೆ. ಸದ್ಯ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಎರಡು ಪಂದ್ಯಗಳನ್ನು ಗೆದ್ದು ಬಹುತೇಕ ಸರಣಿಯನ್ನು ಗೆದ್ದಿದ್ದೇವೆ. ಇನ್ನಿರುವ ಎರಡು ಟೆಸ್ಟ್ ಪಂದ್ಯಗಳು ಡ್ರಾ ಆದರೆ ಸರಣಿ ಟೀಂ ಇಂಡಿಯಾಗೆ ಒಲಿಯಲಿದೆ ಎಂದರು. 
ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯ ನಾಳೆ ಮುಂಬೈನ ವಾಖೆಂಡೆ ಮೈದಾನದಲ್ಲಿ ನಡೆಯಲಿದೆ. ಸದ್ಯ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 2 ಪಂದ್ಯಗಳನ್ನು ಗೆದ್ದಿದ್ದು 1 ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.