30 ಸೆಕೆಂಡ್ ನಲ್ಲಿ ಸಮಿ ನಾಯಕತ್ವ ಕಿತ್ತುಕೊಂಡ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ
2012 ಮತ್ತು 2016ರ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ವೆಸ್ಟ್ ಇಂಡೀಸ್ ನಾಯಕ ಡರೆನ್ ಸಮಿ ತನ್ನನ್ನು ಆಯ್ಕೆ ಮಂಡಳಿ ಅಧ್ಯಕ್ಷರು ಕೇವಲ 30 ಸೆಕೆಂಡುಗಳ ಫೋನ್...

ಸೇಂಟ್ ಜಾನ್ಸ್: 2012 ಮತ್ತು 2016ರ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ವೆಸ್ಟ್ ಇಂಡೀಸ್ ನಾಯಕ ಡರೆನ್ ಸಮಿ ತನ್ನನ್ನು ಆಯ್ಕೆ ಮಂಡಳಿ ಅಧ್ಯಕ್ಷರು ಕೇವಲ 30 ಸೆಕೆಂಡುಗಳ ಫೋನ್ ಸಂಭಾಷಣೆ ನಡೆಸಿ ನಾಯಕ ಸ್ಥಾನದಿಂದ ಕಿತ್ತು ಹಾಕಿದ್ದಾರೆ ಎಂದು ತಮ್ಮ ನೋವನ್ನು ತೊಡಿಕೊಂಡಿದ್ದಾರೆ.
ತಮ್ಮ ಆರು ವರ್ಷಗಳ ಯಶಸ್ವಿ ನಾಯಕತ್ವಕ್ಕೆ ತೆರೆಬಿದ್ದಿದೆ ಎಂಬ ನೋವಿನ ನುಡಿಗಳನ್ನು ದಾಖಲಿಸಿದ ವಿಡಿಯೋವನ್ನು ಇದೀಗ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದಾರೆ.
2012ರ ಟಿ20 ವಿಶ್ವಕಪ್ ನಲ್ಲಿ ಡರೆನ್ ಸಮಿ ಫೈನಲ್ ನಲ್ಲಿ ಶ್ರೀಲಂಕಾ ವಿರುದ್ಧ ತಂಡವನ್ನು ಗೆಲ್ಲಿಸುವ ಮೂಲಕ ಚೊಚ್ಚಲ ಟಿ20 ವಿಶ್ವಕಪ್ ಗೆ ಮುತ್ತಿಡುವಂತೆ ಮಾಡಿದ್ದರು. ಬಳಿಕ 2016ರಲ್ಲಿ ಭಾರತದಲ್ಲಿ ನಡೆದ ಟಿ20 ವಿಶ್ವಕಪ್ ನಲ್ಲಿ ಇಂಗ್ಲೇಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ತಂಡ 4 ವಿಕೆಟ್ ಗಳಿಂದ ಗೆಲುವು ಸಾಧಿಸಿತ್ತು. ಈ ಎರಡು ಗೆಲುವಿಗೂ ಡರೆನ್ ಸಮಿ ಅವರ ಅಪ್ರತಿಭ ನಾಯಕತ್ವ ಸಾಕ್ಷಿಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


