ಬ್ರಾಡ್ ಗೆ ಯುವಿ ಸತತ 6 ಸಿಕ್ಸರ್ ಹೊಡೆಯಲು ಕಾರಣವಾದ ಆ ಘಟನೆ!
2007ರ ಪ್ರಥಮ ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಇಂಗ್ಲೆಂಡ್ ನ ವೇಗಿ ಸ್ಟುವರ್ಟ್ ಬ್ರಾಡ್ ಗೆ ಸತತ 6 ಸಿಕ್ಸರ್...

ನವದೆಹಲಿ: 2007ರ ಪ್ರಥಮ ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಇಂಗ್ಲೆಂಡ್ ನ ವೇಗಿ ಸ್ಟುವರ್ಟ್ ಬ್ರಾಡ್ ಗೆ ಸತತ 6 ಸಿಕ್ಸರ್ ಹೊಡೆಯಲು ಕಾರಣವಾದ ಘಟನಾವಳಿಯ ಬಗ್ಗೆ ಸ್ವತಃ ಯುವಿ ಹೇಳಿಕೊಂಡಿದ್ದಾರೆ.
ಸ್ಟುವರ್ಟ್ ಬ್ರಾಡ್ ಓವರ್ ಗೂ ಮುನ್ನ ಮಾಡಿದ್ದ ಆ್ಯಂಡ್ರೂ ಫ್ಲಿಂಟಾಫ್ ಓವರ್ ನಲ್ಲಿ ನಾನು 2 ಬೌಂಡರಿ ಬಾರಿಸಿದ್ದೆ ಇದರಿಂದ ಕೋಪಗೊಂಡ ಫ್ಲಿಂಟಾಫ್ ನನ್ನನ್ನು ನಿಂದಿಸಿದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಅದರಲ್ಲೂ ಬಳಸಬಾರದ ಪದಗಳನ್ನು ಫ್ಲಿಂಟಾಫ್ ಬಳಸಿದ್ದು ನನ್ನ ಕೋಪಕ್ಕೆ ಕಾರಣವಾಯಿತು. ಆ ಕೋಪ ಸ್ಟುವರ್ಟ್ ಬ್ರಾಡ್ ಓವರ್ ನಲ್ಲಿ ಸತತ 6 ಸಿಕ್ಸರ್ ಬಾರಿಸುವುದರೊಂದಿಗೆ ಫ್ಲಿಂಟಾಫ್ ಬಾಯಿ ಮುಚ್ಚಿಸಿದೆ ಎಂದರು ಹೇಳಿಕೊಂಡಿದ್ದಾರೆ.
ರಣಕಣದಲ್ಲಿ ಫ್ಲಿಂಟಾಫ್ ಹಾಗೂ ಯುವಿ ನಡುವಿನ ಜಗಳದ ಮಾತುಗಳು
ಫ್ಲಿಂಟಾಫ್: ಎರಡು ಬೌಂಡರಿ ಬಾರಿಸಿದ್ದರ ಕುರಿತಾಗಿ ಫ್ಲಿಂಟಾಫ್ ಅವು ದರಿದ್ರ-----ಹೊಡೆತಗಳು.
ಯುವಿ: ಐ ವಿಲ್-----ಯೂ.
ಫ್ಲಿಂಟಾಫ್: ಏನಂದೆ?
ಯುವಿ: ನಾನು ಏನು ಹೇಳಿದೆ ಎಂದು ನಿನಗೆ ಗೊತ್ತಿದೆ.
ಫ್ಲಿಂಟಾಫ್: ನಿನ್ನ ಕತ್ತು ಕತ್ತರಿಸುತ್ತೀನಿ.
ಯುವಿ: ನನ್ನ ಕೈಲಿ ಬ್ಯಾಟಿರೋದು ಕಾಣ್ತಾ ಇದೆಯಾ? ಇದರಿಂದ ನಾನು ಎಲ್ಲಿಗೆ ಹೊಡೆಯಬಹುದೆಂದು ಗೊತ್ತಾ ನಿನಗೆ?
ಈಗೇ ಇಬ್ಬರ ನಡುವೆ ಮಾತಿನ ಸಮರ ಆರಂಭವಾಗಿದ್ದು ಇದರಿಂದ ಕೋಪಗೊಂಡ ಯುವಿ ಮುಂದಿನ ಓವರ್ ನಲ್ಲಿ ಸಿಕ್ಸರ್ ಬಾರಿಸಬೇಕು ಅನಿಸಿತಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


