ಕ್ರಿಕೆಟ್

ಡಕ್‍ವರ್ತ್ ಲೂಯಿಸ್ ನಿಯಮದಡಿ ಹೈದರಾಬಾದ್ ವಿರುದ್ಧ ಗೆದ್ದ ಧೋನಿ ಪಡೆ

ಸತತ ನಾಲ್ಕು ಪಂದ್ಯಗಳ ಸೋಲಿನಿಂದ ಕಂಗೆಟ್ಟಿದ್ದ ಎಂಎಸ್ ಧೋನಿ ನೇತೃತ್ವದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡ 34 ಪಂದ್ಯಗಳಿಂದ ಅತಿಥೇಯ ಸನ್...

ಡಕ್‍ವರ್ತ್ ಲೂಯಿಸ್ ನಿಯಮದಡಿ ಹೈದರಾಬಾದ್ ವಿರುದ್ಧ ಗೆದ್ದ ಧೋನಿ ಪಡೆ
ರೈಸಿಂಗ್ ಪುಣೆ ಸೂಪರ್ ಜೈಂಟ್ಸ್
Published On :

ಹೈದರಾಬಾದ್: ಸತತ ನಾಲ್ಕು ಪಂದ್ಯಗಳ ಸೋಲಿನಿಂದ ಕಂಗೆಟ್ಟಿದ್ದ ಎಂಎಸ್ ಧೋನಿ ನೇತೃತ್ವದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡ 34 ಪಂದ್ಯಗಳಿಂದ ಅತಿಥೇಯ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸುವ ಮೂಲಕ ಗೆಲುವಿನ ನಗೆ ಬೀರಿದೆ.

ಉಪ್ಪಳದ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಧೋನಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್ ಆರಂಭಕ್ಕೂ ಮುನ್ನ ಮಳೆ ಬಂದಿದ್ದರಿಂದ ಪಂದ್ಯ 1 ಗಂಟೆ ತಡವಾಗಿ ಆರಂಭಗೊಂಡಿತು. ಇನ್ನು ನಿಗದಿತ ಓವರ್ ನಲ್ಲಿ ಹೈದರಾಬಾದ್ 8 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿತು. ಇನ್ನು 119 ರನ್ ಗಳ ಸಾಧಾರಣ ಗುರಿ ಬೆನ್ನಟ್ಟಿದ ಪುಣೆ ತಂಡ 11ನೇ ಓವರ್ ಮುಕ್ತಾಯಕ್ಕೆ 3 ವಿಕೆಟ್ ಗೆ 94 ರನ್ ಗಳಿಸಿತ್ತು. ಈ ವೇಳೆ ಮತ್ತೆ ಮಳೆ ಬಂದಿದ್ದರಿಂದ ಡಕ್ ವರ್ತ್ ಲೂಯಿಸ್ ನಿಯಮದಡಿಯಲ್ಲಿ 34ರನ್ ಗಳಿಸಿ ಜಯಗಳಿಸಿತು.

ಪುಣೆ ಪರ ಅಜಿಂಕ್ಯಾ ರಹಾನೆ 0, ಡುಪ್ಲೆಸಿಸ್ 30, ಧೋನಿ 5, ಸ್ಟೀವನ್ ಸ್ಮಿತ್ ಅಜೇಯ 46 ಗಳಿಸಿದ್ದಾರೆ.

ಹೈದರಾಬಾದ್ ಪರ ಭುವನೇಶ್ವರ್ ಕುಮಾರ್, ಆಶಿಶ್ ನೆಹ್ರಾ ಹಾಗೂ ಮೋಯ್ಸೆಸ್ ಹೆನ್ರಿಕ್ಸ್ ತಲಾ 1 ವಿಕೆಟ್ ಪಡೆದಿದ್ದಾರೆ.

ಹೈದರಾಬಾದ್ ಪರ ಡೇವೀಡ್ ವಾರ್ನರ್ 0, ಶಿಖರ್ ಧವನ್ 56, ಆದಿತ್ಯ 8, ಮಾರ್ಗನ್ 0, ದೀಪಕ್ ಹೂಡಾ 1, ಮೋಯ್ಸಸ್ 1, ನಮನ್ ಓಜಾ 18, ಜಿಪುಲ್ ಶರ್ಮ 5, ಭುವನೇಶ್ವರ್ 21 ಹಾಗೂ ಆಶಿಶ್ ನೆಹ್ರಾ ಅಜೇಯ 0 ರನ್ ಗಳಿಸಿದ್ದಾರೆ.

ಪುಣೆ ಪರ ಅಶೋಕ್ ದಿಂಡಾ 3, ಮಿಚೆಲ್ ಮಾರ್ಷ್ 2, ಥಿಸ್ಸರ ಪೆರೇರಾ ಹಾಗೂ ಆರ್ ಅಶ್ವಿನ್ ತಲಾ 1 ವಿಕೆಟ್ ಪಡೆಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.