ಬರಪೀಡಿತ ರಾಂಚಿಯಲ್ಲಿ ಧೋನಿಯ ಈಜುಕೊಳಕ್ಕೆ ಪ್ರತಿದಿನ 15 ಸಾವಿರ ಲೀಟರ್ ನೀರು!
ಕುಡಿಯಲು ನೀರಿಲ್ಲದೆ ಇಲ್ಲಿನ ಜನ ಬಸವಳಿದಿದ್ದಾರೆ. ಆದರೆ ಧೋನಿ ತಮ್ಮ ರಾಂಚಿಯಲ್ಲಿರುವ ಮನೆಯ ಈಜುಕೊಳಕ್ಕೆ ಪ್ರತಿ ದಿನ 15000...

Published On :
ನವದೆಹಲಿ: ಏಪ್ರಿಲ್ ತಿಂಗಳು ಮಹೇಂದ್ರ ಸಿಂಗ್ ಧೋನಿ ಪಾಲಿಗೆ ಅಷ್ಟೊಂದು ಶುಭವಾಗಿಲ್ಲ ಎಂದು ಅನಿಸುತ್ತಿದೆ. ಐಸಿಸಿ ಟಿ20 ವಿಶ್ವಕಪ್ ಗೆಲ್ಲಲು ಟೀಂ ಇಂಡಿಯಾಗೆ ಸಾಧ್ಯವಾಗಿಲ್ಲ. ಇತ್ತ ಐಪಿಎಲ್‌ನಲ್ಲಿ ಧೋನಿ ನಾಯಕತ್ವದ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಗೆಲುವಿಗಾಗಿ ಒದ್ದಾಡುತ್ತಿದೆ.
ಕ್ರಿಕೆಟ್ ವಿಷಯದ ಹೊರತಾಗಿ ಆಮೃಪಾಲಿ ಗ್ರೂಪ್‌ನ ರಾಯಭಾರಿ ಸ್ಥಾನದಿಂದಲೂ ಧೋನಿ ಕೆಳಗಿಳಿದಿದ್ದಾರೆ. ಇದೀಗ ಧೋನಿ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ.
ಧೋನಿ ರಾಜ್ಯವಾದ ಜಾರ್ಖಂಡ್‌ನಲ್ಲಿ ಈಗ ಬರಗಾಲ ಒಕ್ಕರಿಸಿದೆ. ಕುಡಿಯಲು ನೀರಿಲ್ಲದೆ ಇಲ್ಲಿನ ಜನ ಬಸವಳಿದಿದ್ದಾರೆ. ಆದರೆ ಧೋನಿ ತಮ್ಮ ರಾಂಚಿಯಲ್ಲಿರುವ ಮನೆಯ ಈಜುಕೊಳಕ್ಕೆ ಪ್ರತಿ ದಿನ 15000 ಲೀಟರ್ ಬಳಸುತ್ತಿದ್ದಾರೆ ಎಂದು ಧೋನಿಯ ನೆರೆಹೊರೆಯವರು ದೂರಿದ್ದಾರೆ.
ಇಲ್ಲಿ ನಾಲ್ಕು ಕೊಳವೆಬಾವಿಗಳಿದ್ದರೂ ಅವು ಉಪಯೋಗ ಶೂನ್ಯವಾಗಿವೆ. ಆದರೆ ಪಕ್ಕದಲ್ಲೇ ಧೋನಿ ಮನೆಯಿದೆ. ಅಲ್ಲಿ ಪ್ರತಿದಿನ ಸಾವಿರಗಟ್ಟಲೆ ನೀರು ಪೋಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಧೋನಿ ನೆರೆಹೊರೆಯವರಾದ ರಾಜು ಶರ್ಮಾ ಎಂಬವರು ಹೇಳಿದ್ದಾರೆ.
ಆದಾಗ್ಯೂ, ಈ ವಿಷಯವನ್ನು ರಾಜ್ಯದ ಕಂದಾಯ ಸಚಿವ ಅಮರ್ ಬೌರಿ ಅವರ ಗಮನಕ್ಕೆ ತರಲಾಗಿದ್ದು, ಧೋನಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ.
ಧೋನಿಯ ಈಜುಕೊಳಕ್ಕೆ ಪ್ರತಿದಿನ 15,000 ಲೀಟರ್ ನೀರು ಪೂರೈಸಲಾಗುತ್ತಿದೆ. ಆದರೆ ಯಮುನಾನಗರ್‌ನಲ್ಲಿರುವ 5,000 ಜನರು ನೀರಿಲ್ಲದೆ ತತ್ತರಿಸುತ್ತಿದ್ದು, ಅವರಿಗೆ ಇಲ್ಲಿಯವರೆಗೆ ಯಾವುದೇ ರೀತಿಯ ವ್ಯವಸ್ಥೆಯನ್ನು ಮಾಡಿಕೊಡಲಾಗಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಏತನ್ಮಧ್ಯೆ, ಈ ಆಪಾದನೆಗಳಲ್ಲಿ ಹುರುಳಿಲ್ಲ ಎಂದು ಧೋನಿಯ ಸಲಹೆಗಾರ ಹೇಳಿದ್ದಾರೆ. ಪ್ರತಿ ದಿನವೂ ಈ ಈಜುಕೊಳಕ್ಕೆ ನೀರು ಪೂರೈಕೆಯಾಗುವುದಿಲ್ಲ. ಧೋನಿ ಊರಲ್ಲಿದ್ದಾಗ ಮಾತ್ರ ಈಜುಕೊಳಕ್ಕೆ ನೀರು ಪೂರೈಸಲಾಗುತ್ತಿದೆ ಎಂದು ಸಲಹೆಗಾರ ಹೇಳಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


