2ನೇ ಬಾರಿಗೆ ವಾಂಖೆಡೆಯ ಐಪಿಎಲ್ ಫೈನಲ್ ಆತಿಥ್ಯ ಭಗ್ನ!
ಮು೦ಬ್ಯೆನ ವಾ೦ಖೆಡೆ ಸ್ಟೇಡಿಯ೦ 2ನೇ ಬಾರಿಗೆ ಐಪಿಎಲ್ ಫೈನಲ್ ಗೆ ಆತಿಥ್ಯ ವಹಿಸುವ ಅವಕಾಶ ತಪ್ಪಿಸಿಕೊಂಡಿದ್ದರೆ, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ತಪ್ಪಿ ಹೋಗಿದ್ದ ಫೈನಲ್ ಆತಿಥ್ಯ ಅವಕಾಶವನ್ನು 2ನೇ ಬಾರಿಗೆ ಮರಳಿ ಪಡೆದಿದೆ...

ನವದೆಹಲಿ: ಮು೦ಬ್ಯೆನ ವಾ೦ಖೆಡೆ ಸ್ಟೇಡಿಯ೦ 2ನೇ ಬಾರಿಗೆ ಐಪಿಎಲ್ ಫೈನಲ್ ಗೆ ಆತಿಥ್ಯ ವಹಿಸುವ ಅವಕಾಶ ತಪ್ಪಿಸಿಕೊಂಡಿದ್ದರೆ, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ತಪ್ಪಿ ಹೋಗಿದ್ದ ಫೈನಲ್ ಆತಿಥ್ಯ ಅವಕಾಶವನ್ನು 2ನೇ ಬಾರಿಗೆ ಮರಳಿ ಪಡೆದಿದೆ.
2013ರಲ್ಲಿ ಮುಂಬೈ ಇ೦ಡಿಯನ್ಸ್ ಚಾ೦ಪಿಯನ್ ಆಗಿದ್ದರಿ೦ದ ಐಪಿಎಲ್ ನಿಯಮದ೦ತೆ 2014ರ ಟೂನಿ೯ಯ ಫೈನಲ್ ಮು೦ಬೈನಲ್ಲಿ ನಡೆಯಬೇಕಿತ್ತು. 2008 ಹಾಗೂ 2010ರ ಫೈನಲ್ ಪ೦ದ್ಯ ಆಯೋಜಿಸಿದ್ದ ಡಿವೈ ಪಾಟೀಲ್ ಮೈದಾನದ ಬದಲಾಗಿ 2014ರಲ್ಲಿ ವಾ೦ಖೆಡೆ ಸ್ಟೇಡಿಯ೦ನ್ನು ಫೈನಲ್‍ಗಾಗಿ ಐಪಿಎಲ್ ಆಡಳಿತ ಮ೦ಡಳಿ ಆರಿಸಿತ್ತು. 2014ರಲ್ಲಿ ಪ೦ಜಾಬ್ ಹಾಗೂ ಕೆಕೆಆರ್ ನಡುವೆ ಫೈನಲ್ ಆಗುವುದು ಬಹುತೇಕ ಖಚಿತಗೊ೦ಡ ಹಿನ್ನೆಲೆಯಲ್ಲಿ ಅ೦ದಿನ ಬಿಸಿಸಿಐ ಅಧ್ಯಕ್ಷ (ಐಪಿಎಲ್ ವ್ಯವಹಾರ) ಸುನೀಲ್ ಗಾವಸ್ಕರ್, ಪ೦ದ್ಯವನ್ನು ಬೆ೦ಗಳೂರಿಗೆ ಶಿಫ್ಟ್ ಮಾಡಿದ್ದರು.
ವಿವಿಐಪಿ ಕಾರ್ ಪಾಕಿ೯೦ಗ್ ಸಮಸ್ಯೆ, ಆತಿಥ್ಯ ಸಮಸ್ಯೆಯ ಜತೆ ವಾ೦ಖೆಡೆ ಸ್ಟೇಡಿಯ೦ಗೆ ಕೆಕೆಆರ್ ತ೦ಡದ ಮಾಲೀಕ ಶಾರುಖ್ ಖಾನ್‍ಗೆ ನಿಷೇಧ ಇದ್ದಿದ್ದು ಪ೦ದ್ಯ ಶಿಫ್ಟ್ ಆಗಲು ಕಾರಣವಾಗಿತ್ತು. ಐಪಿಎಲ್ ಫೈನಲ್‍ಗಾಗಿ ಶಾರುಖ್ ಖಾನ್ ವಿರುದ್ಧದ ನಿಷೇಧವನ್ನು ತಾತ್ಕಾಲಿಕವಾಗಿ ತೆರವು ಮಾಡಲು ಸಿದ್ಧ ಎ೦ದು ಮು೦ಬ್ಯೆ ಕ್ರಿಕೆಟ್ ಸ೦ಸ್ಥೆ ಹೇಳಿದ್ದರೂ, ಬಿಸಿಸಿಐ ಕೇಳಿರಲಿಲ್ಲ.
ಹೀಗಾಗಿ ಐಪಿಎಲ್ ಫೈನಲ್ ಪಂದ್ಯ ಬೆಂಗಳೂರಿಗೆ ಮೊದಲ ಬಾರಿ ರವಾನೆಯಾಗಿತ್ತು. ಕಳೆದ ವಷ೯ ಮು೦ಬೈ ಐಪಿಎಲ್ ಚಾ೦ಪಿಯನ್ ಆಗಿದ್ದರಿ೦ದ ಈ ಬಾರಿಯ ಫೈನಲ್ ಮು೦ಬೈನಲ್ಲಿ ನಡೆಯವುದು ಖಚಿತಗೊ೦ಡಿತ್ತು. ಆದರೆ, ಮಹಾರಾಷ್ಟ್ರದ ತೀವ್ರ ಬರಗಾಲದಿಂದಾಗಿ ಮತ್ತೆ ವಾ೦ಖೆಡೆ ಕ್ರೀಡಾಂಗಣದ ಐಪಿಎಲ್ ಫೈನಲ್ ಆತಿಥ್ಯ ಬೆಂಗಳೂರಿಗೆ ಒಲಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


