ಕ್ರಿಕೆಟ್

ಐಪಿಎಲ್-9 ಆರ್ ಸಿಬಿಗೆ ಎರಡೆರಡು ಜೆರ್ಸಿ

ಐಪಿಎಲ್ ಸೀಸನ್ 9 ನಲ್ಲಿ ಹಲವು ವಿಶೇಷಗಳನ್ನು ಹೊತ್ತು ಬಂದಿದ್ದು, ಈ ಬಾರಿ ಆರ್ ಸಿಬಿ ಮಲ್ಯ ಹುಡುಗರು ಎರಡೆರಡು ಜೆರ್ಸಿಗಳನ್ನು ತೊಟ್ಟು ಕಣಕ್ಕಳಿಯಲಿದ್ದಾರೆ...

ಐಪಿಎಲ್-9 ಆರ್ ಸಿಬಿಗೆ ಎರಡೆರಡು ಜೆರ್ಸಿ
ಆರ್ ಸಿಬಿ ಹೊಸ ಜೆರ್ಸಿ
Published On :

ಬೆಂಗಳೂರು: ಐಪಿಎಲ್ ಸೀಸನ್ 9 ನಲ್ಲಿ ಹಲವು ವಿಶೇಷಗಳನ್ನು ಹೊತ್ತು ಬಂದಿದ್ದು, ಈ ಬಾರಿ ಆರ್ ಸಿಬಿ ಮಲ್ಯ ಹುಡುಗರು ಎರಡೆರಡು ಜೆರ್ಸಿಗಳನ್ನು ತೊಟ್ಟು ಕಣಕ್ಕಳಿಯಲಿದ್ದಾರೆ.

ಇಷ್ಟು ದಿನ ಫುಟ್‍ಬಾಲ್‍ನಲ್ಲಿದ್ದ ಎರಡೆರಡು ಜೆರ್ಸಿ ತೊಡುವ ಪದ್ಧತಿ ಈಗ ಭಾರತಕ್ಕೂ ಕಾಲಿಟ್ಟಿದ್ದು. ಇದೇ ಮೊದಲ ಬಾರಿಗೆ ಆರ್ ಸಿಬಿ ತಂಡ ಒಂದೇ ಟೂರ್ನಿಯಲ್ಲಿ ಎರಡೆರಡು ಬಗೆಯ ಜೆರ್ಸಿಗಳಲ್ಲಿ ಕಾಣಿಸಿಕೊಳ್ಳಲಿದೆ. ತವರಿನ ಅಂದರೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುವಾಗ ಒಂದು ಬಗೆಯ ಜೆರ್ಸಿಯನ್ನು ತೊಟ್ಟರೆ, ಬೇರೆ ಕ್ರೀಡಾಂಗಣದಲ್ಲಿ ಅಂದರೆ ಕರ್ನಾಟಕವಲ್ಲದೇ ಇತರೆ ರಾಜ್ಯಗಳಲ್ಲಿ ಆಡುವಾಗ ಮತ್ತೊಂದು ಬಗೆಯ ಜೆರ್ಸಿಯಲ್ಲಿ ಮಲ್ಯ ಹುಡುಗರು ಮಿಂಚಲಿದ್ದಾರೆ.

ಕಪ್ಪು ಮತ್ತು ಕೆಂಪು ಬಣ್ಣಗಳಿಂದ ಕೂಡಿರುವ ಜೆರ್ಸಿಯಲ್ಲಿ ಆರ್ ಸಿಬಿ ಆಟಗಾರರು ಈ ಬಾರಿ ಕಣಕ್ಕಿಳಿಯಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.