ಮಹಿಳೆಯರಿಂದ ಮಹಿಳೆಯರಿಗಾಗಿ!
ಮಹಿಳೆಯರ ಆರೈಕೆಗೆ ಸದಾ ಸನ್ನದ್ಧವಾಗಿರಬೇಕಾದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ವೈದ್ಯಕೀಯ ಕ್ಷೇತ್ರದ ಬೆನ್ನೆಲುಬು...

ಮಹಿಳೆಯರ ಆರೈಕೆಗೆ ಸದಾ ಸನ್ನದ್ಧವಾಗಿರಬೇಕಾದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ವೈದ್ಯಕೀಯ ಕ್ಷೇತ್ರದ ಬೆನ್ನೆಲುಬು. ವೈದ್ಯಕೀಯ ವಿಜ್ಞಾನದಲ್ಲಿ ಆದ ಪ್ರಗತಿಯ ಕಾರಣ, ಭ್ರೂಣಾವಸ್ಥೆಯಲ್ಲಿ ಇರುವಾಗಲೇ ಭ್ರೂಣದ ನ್ಯೂನತೆಗಳನ್ನು ಪತ್ತೆ ಮಾಡುವ ಕ್ಷೇತ್ರ 'ಫೀಟಲ್ ಮೆಡಿಸಿನ್' ಇಂದು ಮಹಿಳೆಯರ ವಿಶೇಷ ಆರೈಕೆಗೆ ತನ್ನ ಅಪೂರ್ವ ಕೊಡುಗೆ ನೀಡುತ್ತಿದೆ. ಮಹಿಳೆಯರ ಜೊತೆಗೆ ಸದಾ ಇರುವ ಅಂಥ ಕೆಲವು ತಜ್ಞರ ಸಮೂಹಕ್ಕೆ 'ವಿಶ್ವ ಮಹಿಳಾ ದಿನ'ದಂದು ವಿಶೇಷ ಸಲಾಂ!

ಡಾ. ಪ್ರತಿಮಾ ರಾಧಾಕೃಷ್ಣನ್
ನಿರ್ದೇಶಕರು ಮತ್ತು ಕನ್ಸಲ್ಟೆಂಟ್ - ಫೀಟಲ್ ಮೆಡಿಸಿನ್
ಯುನೈಟೆಡ್ ಕಿಂಗ್‌ಡಮ್‌ನ 'ಫೀಟಲ್ ಮೆಡಿಸಿನ್ ಫೌಂಡೇಶನ್'ನಿಂದ ಡಿಪ್ಲೋಮಾ (ಫೀಟಲ್ ಮೆಡಿಸಿನ್) ಪಡೆದ ಪ್ರಪ್ರಥಮ ಭಾರತೀಯ ವೈದ್ಯೆ ಡಾ. ಪ್ರತಿಮಾ ರಾಧಾಕೃಷ್ಣನ್. ಫೀಟಲ್ ಮೆಡಿಸಿನ್ (ಭ್ರೂಣ ವೈದ್ಯಶಾಸ್ತ್ರ)ಗಾಗಿಯೇ ಮುಡುಪಾಗಿಟ್ಟ ಡಾ. ಪ್ರತಿಮಾ ರಾಧಾಕೃಷ್ಣನ್ ಆ ಕ್ಷೇತ್ರದ ಏಳ್ಗೆಗಾಗಿ ತಮ್ಮ ಅಪೂರ್ವ ಕಾಣಿಕೆಯನ್ನು ಸಲ್ಲಿಸುತ್ತಿದ್ದಾರೆ. ಭ್ರೂಣದ ಹಂತದಲ್ಲಿದ್ದಾಗಲೇ ಚಿಕಿತ್ಸೆ (ಫೀಟಲ್ ಥೆರಪಿ) ಅವರ ವಿಶೇಷ ಆಸಕ್ತಿ. ಜೊತೆಗೆ ಭ್ರೂಣದ ಹಂತದಲ್ಲಿರುವಾಗಲೇ ನ್ಯೂನತೆಗಳನ್ನು ಪತ್ತೆ ಹಚ್ಚುವುದು ಮತ್ತು ಗರ್ಭಿಣಿಯಾಗುವ ಮುನ್ನ ಭ್ರೂಣದಲ್ಲಿ ತೊಂದರೆ ಇದ್ದಾಗ ಅದಕ್ಕಾಗಿ ಕೌನ್ಸೆಲಿಂಗ್ (ಆಪ್ತ ಸಲಹೆ) ನೀಡುವುದರಲ್ಲಿ ಸಹ ಅಪಾರ ಆಸ್ಥೆ.
ಲಂಡನ್‌ನ ಪ್ರಸಿದ್ಧ ಆಸ್ಪತ್ರೆಯಾದ 'ಕಿಂಗ್ಸ್ ಕಾಲೇಜ್ ಹಾಸ್ಪಿಟಲ್'ನಿಂದ ಫೀಟಲ್ ಮೆಡಿಸಿನ್‌ನಲ್ಲಿ ತರಬೇತಿ ಪಡೆದಿರುವ ಡಾ. ಪ್ರತಿಮಾ ರಾಧಾಕೃಷ್ಣನ್ ಈ ಪದವಿ ಹೊಂದಿದ ಏಷ್ಯಾದ ಏಕೈಕ ಮಹಿಳೆ ಕೂಡಾ ಹೌದು.

ಡಾ. ಲೀಲಾ ಭಗವಾನ್
ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆ
1974ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಬಿ.ಬಿ.ಎಸ್. ಪದವಿ ಹೊಂದಿದ ಡಾ. ಲೀಲಾ ಭಗವಾನ್ ಉನ್ನತ ವಿದ್ಯಾಭ್ಯಾಸ (ಲೈಸೆನ್ಷಿಯೇಟ್ ಇನ್ ಮಿಡ್‌ವೈಫರಿ- ರೋಟಂಡ ಹಾಸ್ಪಿಟಲ್, ಡಬ್ಲಿನ್) ಮುಗಿಸಿ, ಡಬ್ಲಿನ್ (ಐರ್ಲೆಂಡ್) ವಿಶ್ವವಿದ್ಯಾಲಯದಿಂದ ಪ್ರಸೂತಿ ಮತ್ತು ಸ್ತ್ರೀರೋಗದಲ್ಲಿ ಡಿಪ್ಲೊಮಾ ಪದವಿ ಪಡೆದರು. ವೆಜೈನಲ್ ಹಿಸ್ಟೆರೆಕ್ಟಮಿಯಲ್ಲಿ ಅಪಾರ ಪರಿಣಿತಿ ಹೊಂದಿರುವ ಡಾ. ಲೀಲಾ ಭಗವಾನ್ ಕಳೆದ 3 ದಶಕಗಳಿಂದ ವೈದ್ಯಕೀಯ ಕ್ಷೇತ್ರವನ್ನು ತಮ್ಮ ಸೇವೆಯಿಂದ ಶ್ರೀಮಂತಗೊಳಿಸಿದ್ದಾರೆ. ಈ ಕ್ಷೇತ್ರದಲ್ಲಿ (ವೆಜೈನಲ್ ಹಿಸ್ಟೆರೆಕ್ಟಮಿ) 300ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಅವರು ಮಾಡಿದ್ದಾರೆ. 2010ರಲ್ಲಿ ಬೀಜಿಂಗ್‌ನಲ್ಲಿ ಈ ಕುರಿತು ಪ್ರಬಂಧವನ್ನು ಮಂಡಿಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ತ್ರಿವಳಿ, ಚತುರ್ವಳಿಗಳನ್ನು ನಿಭಾಯಿಸಿದ ಭಾಗ್ಯ ಮತ್ತು ಪರಿಣಿತಿ ಅವರದು.

ಡಾ. ಮೀನಾಕ್ಷಿ ಭಟ್
ಕ್ಲಿನಿಕಲ್ ಜೆನೆಟಿಕ್ಸ್ (ಕನ್ಸಲ್ಟೆಂಟ್)
ಡಾ. ಮೀನಾಕ್ಷಿ ಭಟ್, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಬಿ.ಬಿ.ಎಸ್.ನಲ್ಲಿ ಪ್ರಥಮ ರ್ಯಾಂಕ್ ಗಳಿಸಿ, 7 ಚಿನ್ನದ ಪದಕಗಳೊಂದಿಗೆ ಝಗಮಗಿಸಿದವರು. ಮುಂಬಯಿಯ ಕೆ.ಇ.ಎಂ. ಆಸ್ಪತ್ರೆಯಲ್ಲಿ ಎಂ.ಡಿ. ಪೀಡಿಯಾಟ್ರಿಕ್ಸ್‌ನಲ್ಲಿ ಪ್ರಥಮ ರ್ಯಾಂಕ್ ಪಡೆದು ಮತ್ತೊಂದು ಚಿನ್ನದ ಮುಕುಟ ಧರಿಸಿದರು. ಯು.ಕೆ.ಯಲ್ಲಿ ಎಂ.ಆರ್.ಸಿ.ಪಿ. (ಪೀಡಿಯಾಟ್ರಿಕ್ಸ್) ಮತ್ತು ಕ್ಲಿನಿಕಲ್ ಜೆನೆಟಿಕ್ಸ್‌ನಲ್ಲಿ ಸೂಪರ್ ಸ್ಪೆಷಾಲಿಟಿ (ಲಂಡನ್) ಹೊಂದಿ ಸಿಸಿಎಸ್‌ಟಿ ಪ್ರಶಸ್ತಿ ಪಡೆದರು. ಲಂಡನ್‌ನ ಗಯ್ಸ್ ಅಂಡ್ ಸೇಂಟ್ ಥಾಮಸ್ ಹಾಸ್ಪಿಟಲ್ಸ್‌ನ 'ಕ್ಲಿನಿಕಲ್ ಜೆನೆಟಿಕ್ಸ್' ವಿಭಾಗದಲ್ಲಿ ಕನ್ಸಲ್ಟೆಂಟ್ ಆಗಿ ಕಾರ್ಯ ನಿರ್ವಹಿಸಿ 1995ರಲ್ಲಿ ಬೆಂಗಳೂರಿಗೆ ಹಿಂತಿರುಗಿದರು.
ಪ್ರೀ ನೇಟಲ್ ಡಯಾಗ್ನಾಸಿಸ್, ಸಿಂಡ್ರೋಮ್ಸ್ ವಿಥ್ ಮೆಂಟಲ್ ರೆಟಾರ್ಡೇಷನ್, ಕ್ಲಿನಿಕಲ್ ಡಿಸ್ ಮಾರ್ಫಾಲಜಿ, ಕಂಜೆನೈಟಲ್ ಹಾರ್ಟ್ ಡಿಸೀಸ್ ಮತ್ತು ಜೆನೆಟಿಕ್ ಕೌನ್ಸೆಲಿಂಗ್‌ನಲ್ಲಿ ವಿಶೇಷ ಆಸಕ್ತಿಯಿಂದ ಕ್ಲಿನಿಕಲ್ ಜೆನೆಟಿಕ್ಸ್‌ನ ಪರಿಣಿತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಡಾ. ವೀಣಾ ಆಚಾರ್ಯ
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ
ಫೀಟಲ್ ಮೆಡಿಸಿನ್ ಕನ್ಸಲ್ಟೆಂಟ್
ಮುಂಬಯಿಯ ಪ್ರಸಿದ್ಧ ಆಸ್ಪತ್ರೆಯಾದ ಕೆ.ಇ.ಎಂ. ಹಾಸ್ಪಿಟಲ್‌ನಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗದಲ್ಲಿ ಉನ್ನತ ವ್ಯಾಸಂಗ ಮುಗಿಸಿದ ಡಾ. ವೀಣಾ ಆಚಾರ್ಯ ಅದೇ ಕ್ಷೇತ್ರದಲ್ಲಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸುತ್ತ, ಡಾ. ಪ್ರತಿಮಾ ರಾಧಾಕೃಷ್ಣನ್‌ರ ಬಳಿ ಫೀಟಲ್ ಮೆಡಿಸಿನ್ ನಲ್ಲಿ ಪಾರಿಣತ್ಯ ಪಡೆದರು. ಭ್ರೂಣದ ಹಂತದಲ್ಲಿದ್ದಾಗಲೇ ಚಿಕಿತ್ಸೆ (ಫೀಟಲ್ ಥೆರಪಿ) ಮತ್ತು ಫೀಟಲ್ ಮೆಡಿಸಿನ್‌ನಲ್ಲಿ ಅಪಾರ ಆಸಕ್ತಿ ಮತ್ತು ಆಸ್ಥೆ ಹೊಂದಿದ ಡಾ. ವೀಣಾ ಆಚಾರ್ಯ ಫೀಟಲ್ ಮೆಡಿಸಿನ್ ಕನ್ಸಲ್ಟೆಂಟ್ ಆಗಿ ತಮ್ಮ ಸೇವೆ ಮುಂದುವರಿಸುತ್ತಿದ್ದಾರೆ.

ಡಾ. ಪ್ರತಿಮಾ ರೆಡ್ಡಿ
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ
ಡಾ. ಪ್ರತಿಮಾ ರೆಡ್ಡಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆಯಾಗಿ ಯುನೈಟೆಡ್ ಕಿಂಗ್‌ಡಮ್ ಮತ್ತು ಭಾರತದಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಲ್ಯಾಪರೋಸ್ಕೋಪಿ ಮತ್ತು ಹಿಸ್ಟೆರೋಸ್ಕೋಪಿ ಕ್ಷೇತ್ರದಲ್ಲಿ ಅಪಾರ ಪರಿಣಿತಿ ಹೊಂದಿದ ಶ್ರೇಯಸ್ಸು ಅವರದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


