Hmm...ಪಾಂಚ್ ಶಿವರಾಜ್‌ಕುಮಾರ್
ಏನ್ ಶಿವಣ್ಣ, ಡಾಕ್ಟರ್ ಆಗ್ತಾ ಇದೀರಂತೆ? ಸುದ್ದಿ ಕನ್‌ಫರ್ಮಾ? ಎಷ್ಟರ ಮಟ್ಟಿಗೆ ಈ ಸುದ್ದಿ ನಿಜ?
100 ಪರ್ಸೆಂಟ್.
ಸರಿ, ನಿಮಗೆ ಡಾಕ್ಟರೇಟ್ ಬರ್ತಾ ಇದೆ. ಈ ಸಂದರ್ಭದಲ್ಲಿ ಏನ್ ಹೇಳ್ತೀರಿ?
ಏನಿಲ್ಲ, 'ಡಾಕ್ಟರ್ ಮಕ್ಕಳು ಡಾಕ್ಟರ್ರೇ ಆಗ್ತಾರೆ' ಅನ್ನೋ ಮಾತಿಗೆ ಇನ್ನೊಂದು ಉದಾಹರಣೆ ಸಿಕ್ತು, ಅಷ್ಟೇ.
ನಿಮಗೆ ಡಾಕ್ಟರೇಟ್ ಬರ್ತಾ ಇರೋದಕ್ಕೆ ಏನು ಕಾರಣ ಇರಬಹುದು?
ನಾನು ಲಾಂಗ್ ಹಿಡಿಯೋದ್ ನೋಡಿ ನನ್ ಕೈಗುಣ ಚೆನ್ನಾಗಿದೆ ಅಂತ ಹೇಳಿದವರ 'ಆಶೀರ್ವಾದ'ದ ಫಲ.
ಇಷ್ಟು ದಿನ ನಿರ್ಮಾಪಕರು ನಿಮ್ಮ ಮನೆ ಬಾಗಿಲು ಬಡೀತಾ ಇದ್ರು. ಈಗ ನೀವು 'ಆ ಡಾಕ್ಟರ್' ಅಂತ ಕನ್‌ಫ್ಯೂಸ್ ಮಾಡ್ಕೊಂಡು ಪೇಷಂಟ್‌ಗಳು ಬಾಗಿಲು ಬಡಿದ್ರೆ?
ಸಿನಿಮಾದಲ್ಲಿ ಅವಕಾಶಕ್ಕೋಸ್ಕರ ಯಾರಾದ್ರೂ ನಮ್ ಮನೆ ಬಾಗಿಲು ಬಡಿದ್ರೆ ಏನಾದ್ರೂ ಮಾಡಬಹುದು. ಆದ್ರೆ ಈ ವಿಷಯದಲ್ಲಿ ನಮ್ ಕೈಲೇನಿಲ್ಲ. ಎಲ್ಲ ದೇವರಿಚ್ಛೆ.
ಓಹೋ, ಆಗ್ಲೇ ಡಾಕ್ಟರ್‌ಗಳ ಥರಾನೇ ಮಾತಾಡೋಕೆ ಶುರು ಮಾಡಿದೀರ. ಸರಿ, ಸರಿ, ನಿಮ್ ಫ್ಯಾಮಿಲಿಯಲ್ಲಿ ಅಪ್ಪ ಡಾಕ್ಟರ್ ಅಂತ ಎಲ್ಲರಿಗೂ ಗೊತ್ತು, ನಿಮ್ ಮಗಳೂ ಡಾಕ್ಟರ್, ನಿಮ್ ಫ್ಯಾಮಿಲಿಯಲ್ಲಿ ಈಗ ನೀವೂ ಡಾಕ್ಟರ್. ಒಂಥರಾ ಸ್ಪೆಷಲ್ ಅಲ್ವೇ?
ಹೌದು ನಾನು 'ಯಂಗೆಸ್ಟ್' ಡಾಕ್ಟರ್. ಆದ್ರೆ, ಯಾವತ್ತಿದ್ರೂ ಅಪ್ಪಾಜಿ ಅವ್ರು ನಮ್ 'ಫ್ಯಾಮಿಲಿ ಡಾಕ್ಟರ್!'
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ಇದು ಆಕಾಶಕ್ಕೆ ಏಣಿ ಹಾಕೋ ಕೆಲಸ ಅಲ್ಲ. ಝೂಮ್ ಹಾಕೋ ಕೆಲಸ. ಪ್ರಕೃತಿಯ ಹಲವು ಸುಂದರ ಅಂಶಗಳಲ್ಲಿ ಆಕಾಶದಲ್ಲಿನ ಮೋಡಗಳ ವಿನ್ಯಾಸ ಕೂಡ ಒಂದು. ನಿಮಗೆ ಅಂಥ ಮೋಡಗಳ ಫೋಟೋ ತೆಗೆಯುವ ಬಗ್ಗೆ ಆಸಕ್ತಿ ಇದ್ದರೆ ಅದಕ್ಕೆ ಸಹಾಯವಾಗಬಲ್ಲ ಹಲವು ಫೋಟೋಗಳು, ಟಿಪ್ಸ್‌ಗಳು, ಮೋಡ ವಿನ್ಯಾಸಗಳ ಉದಾಹರಣೆಗಳು ಇಲ್ಲಿವೆ.
bit.ly/1p4cpB3
bit.ly/1vXoTwh
bit.ly/1os7ebu
bit.ly/1jHLLL8
bit.ly/1txCHeI
ಹರಿ-ಕಥೆ
ಒಬ್ಬ ಕುರುಡ ಒಂದು ದಿನ ಖೇಮು ಹೊಟೇಲ್‌ಗೆ ಬಂದ. ತಡಕಾಡಿಕೊಂಡು ಬಂದು ಮೂಲೆಯ ಟೇಬಲ್‌ನಲ್ಲಿ ಹೋಗಿ ಕುಳಿತ. ಅವನ ಬಳಿ ಹೋದ ಖೇಮು 'ಸರ್, ಮೆನು' ಅಂದ. ಅದಕ್ಕೆ ಆತ ಹೇಳಿದ 'ಇಲ್ಲಪ್ಪ ನನಗೆ ಕಣ್ಣು ಕಾಣಿಸೊಲ್ಲ. ಜೊತೆಗೆ ಏನು ಆರ್ಡರ್ ಮಾಡಬೇಕು ಅಂತ ಗೊತ್ತಿಲ್ಲ. ಒಂದು ಕೆಲಸ ಮಾಡು. ನಿಮ್ಮ ಅಡುಗೆ ಮನೆಯಲ್ಲಿ ಮಾಡಿರುವ ಡಿಶ್‌ನಲ್ಲಿ ಒಂದು ಸ್ಪೂನ್ ಅದ್ದಿ ತೆಗೆದುಕೊಂಡು ಬಾ. ನಾನು ಆರ್ಡರ್ ಮಾಡ್ತೀನಿ'. ಸರಿ ಖೇಮು ಅಡುಗೆ ಮನೆಗೆ ಹೋಗಿ, ಪನೀರ್ ಬಟರ್ ಮಸಾಲಾದಲ್ಲಿ ಸ್ಪೂನ್ ಅದ್ದಿ ತೆಗೆದುಕೊಂಡು ಬಂದ. ಅದನ್ನು ಮೂಸಿ ನೋಡಿದ ಕುರುಡ. ಪನೀರ್ ಬಟರ್ ಮಸಾಲಾ ಚೆನ್ನಾಗಿದೆ. ರೋಟಿ ಜೊತೆಗೆ ಇದನ್ನೇ ತಗೊಂಡು ಬಾ ಅಂದ. ಈ ಕುರುಡ ಅದು ಹೇಗೆ ಇದು ಪನೀರ್ ಬಟರ್ ಮಸಾಲಾ ಅಂತ ಗುರುತು ಹಿಡಿದ ಅಂತ ಖೇಮುಗೆ ಆಶ್ಚರ್ಯ ಆಯ್ತು. ಸರಿ ತಿಂದು ಹೊರಟ ಆತ ಮರುದಿನ ಮತ್ತೆ ಬಂದ. ಖೇಮು ತಂದುಕೊಟ್ಟ ಸ್ಪೂನ್ ಅನ್ನು ಮೂಸಿ ನೋಡಿ, ಇವತ್ತು ಚಿಕನ್ ಬಿರಿಯಾನಿ ಚೆನ್ನಾಗಿದೆ ಅನ್ಸುತ್ತೆ. ಅದನ್ನೇ ಆರ್ಡರ್ ಮಾಡ್ತೀನಿ ಅಂದ. ಇದು ಪ್ರತಿದಿನ ಮುಂದುವರೆಯಿತು. ಖೇಮು ಒಂದು ದಿನ ಈ ಕುರುಡನ ಜೊತೆಗೆ ಆಟ ಆಡಬೇಕು ಅಂತ ಡಿಸೈಡ್ ಮಾಡಿ, ಕಿಚನ್‌ಗೆ ಹೋಗಿ ತನ್ನ ಹೆಂಡತಿ ಖೇಮುಶ್ರೀಯನ್ನು ಕರೆದು ಈ ಸ್ಪೂನ್ ಅನ್ನು ನಿನ್ನ ತುಟಿಗಳ ಮೇಲೆ ಒರೆಸಿಕೊಡು ಅಂದ. ಸರಿ ಹಾಗೇ ಮಾಡಿಕೊಟ್ಟಳು ಖೇಮುಶ್ರೀ. ಅದನ್ನು ತೆಗೆದುಕೊಂಡು ಹೋಗಿ ಆ ಕುರುಡನ ಕೈಗೆ ಕೊಟ್ಟ ಖೇಮು. ಅದನ್ನು ಒಮ್ಮೆ ಮೂಸಿ ನೋಡಿದವನೇ ಆ ಕುರುಡ ಸ್ವಲ್ಪ ಎಕ್ಸೈಟ್ ಆಗಿ ಹೇಳಿದ 'ಓ ಮೈ ಗಾಡ್ ನನ್ ಕ್ಲಾಸ್‌ಮೇಟ್ ಖೇಮುಶ್ರೀ ಇದೇ ಹೊಟೆಲ್‌ನಲ್ಲಿ ಕೆಲ್ಸ ಮಾಡ್ತಾ ಇದಾಳೆ'.
ಸ್ಯಾಂಡಲ್‌ವುಡ್
ಬಹುಶಃ, ಇತ್ತೀಚಿನ ದಿನಗಳಲ್ಲಿ ರಜನೀಕಾಂತ್ ಚಿತ್ರವೊಂದಕ್ಕೆ ಇಷ್ಟು ತಣ್ಣಗಿನ ಪ್ರತಿಕ್ರಿಯೆ ಬಂದಿರುವುದು ಕೊಚಾಡಿಯನ್ ಚಿತ್ರಕ್ಕೆ ಮಾತ್ರ. ಬಿಡುಗಡೆಯ ದಿನಾಂಕವನ್ನು ಮುಂದೂಡುತ್ತಲೇ ಬಂದಿದ್ದ ಕೊಚಾಡಿಯನ್ ಕಡೆಗೂ ಕನ್ನಡದ ಗಜಕೇಸರಿಯೊಂದಿಗೆ ತೆರೆಕಂಡಿದೆ. ಆದರೆ ಓಪನಿಂಗ್ ವಿಷಯದಲ್ಲಿ ಬೆಂಗಳೂರಿನಂಥ ರಜನೀ ಸೆಂಟರ್‌ನಲ್ಲೂ ಅಂಥ ದೊಡ್ಡ ರಜನೀ ಹವಾ ಕಾಣಲಿಲ್ಲ. ಅದಕ್ಕೆ ಕಾರಣ ಬಿಡುಗಡೆಗೆ ಆದ ತಡ ಅಲ್ಲ ಎಂಬುದು ಸಿನಿಮಾ ನೋಡಿದ ರಜನೀಕಾಂತ್ ಅಭಿಮಾನಿಗಳನ್ನು ಕೇಳಿದರೆ ಅರ್ಥವಾಗುತ್ತದೆ. ಹೇಳಿ ಕೇಳಿ ಕೊಚಾಡಿಯಾನ್ ಅನಿಮೇಶನ್ ಚಿತ್ರ. ಹೆಸರಿಗೆ ಇದು ರಜನೀಕಾಂತ್ ಚಿತ್ರವಾದರೂ ಅಲ್ಲಿ ಅಸಲೀ ರಜನೀ ಇಲ್ಲ. ಅಲ್ಲಿರೋದು ಬರೀ ರಜನೀ ಗೊಂಬೆ. ಹಾಗಾಗಿ ಇದು ಅಪ್ಪಟ ಅಭಿಮಾನಿಗಳಿಗೆ ಅಷ್ಟಾಗಿ ರುಚಿಸಿಲ್ಲ. ಅವರಿಗೇನಿದ್ದರೂ ತಮ್ಮ ನೆಚ್ಚಿನ ನಾಯಕ ನಟ ತೆರೆಯ ಮೇಲೆ ಸಜೀವವಾಗಿ ಕಾಣಿಸಿಕೊಂಡು ತಮ್ಮದೇ ಬಾಯಲ್ಲಿ ಒಂದೆರಡು ನಾಟಿ ಡೈಲಾಗ್‌ಗಳನ್ನು ಉದುರಿಸಿ ತಮ್ಮ ತುಂಟತನದ ಮ್ಯಾನರಿಸಂಗಳನ್ನು ತೋರಿಸಿದರೆ ಮಾತ್ರ ಮನಸ್ಸಿಗೆ ಸಮಾಧಾನ. ರೋಬೋ ಚಿತ್ರದಲ್ಲಿ ರಜನೀ ಬೊಂಬೆ ಇದ್ದರೂ ಅದರಲ್ಲಿ ಅಸಲೀ ರಜನೀ ಕೂಡ ಇದ್ದರು. ಆದರೆ ಕೊಚಾಡಿಯನ್‌ನಲ್ಲಿ ಹಾಗಿಲ್ಲ. ಅದೇ ಕಾರಣಕ್ಕೆ ಚಿತ್ರ ಅಭಿಮಾನಿಗಳಲ್ಲಿ ಯಾವ ಉತ್ಸಾಹವನ್ನೂ ಹುಟ್ಟುಹಾಕಿಲ್ಲ. ಹಾಗಾಗಿ ರಜನೀಕಾಂತ್ ಚಿತ್ರ ಎಂದುಕೊಂಡು ಅದರ ವಿತರಣೆಯ ಹಕ್ಕುಗಳನ್ನು ಖರೀದಿಸಿರುವ ಕನ್ನಡದ ಮಂದಿ ಕೊಂಚ ಆತಂಕದಲ್ಲಿದ್ದಾರೆ ಎನ್ನುವುದಂತೂ ನಿಜ.
ಡಬ್ಕುಡಬಲ್ ತುದಾಂಡಲ್...
ಕೊಚಾಡಿಯನ್‌ಗೆ ಕ್ರೇಜ್ ಇಲ್ಲದ್ದನ್ನು ನೋಡಿದ ಕಿಡಿಗೇಡಿಗಳ ಹೊಸ ಜೋಕು
ರಜನೀಕಾಂತ್ ತಮ್ಮ ಸಿನಿಮಾನೂ ಫ್ಲಾಪ್ ಆಗಿಸೋ ಕೆಪ್ಯಾಸಿಟಿ ಇರೋರು
ಕಾಂಗ್ರೆಸ್‌ಗೆ ಪ್ರಿಯಾಂಕಾ ಸಾರಥ್ಯಕ್ಕೆ ಒತ್ತಾಯ
ಆರತಿಗೊಬ್ಬಳು ಮಗಳು, ಕೀರ್ತಿಗೊಬ್ಬ ಮಗ ಅಂತ ಕೇಳಿದ್ವಿ, ಈಗ ಕೀರ್ತಿಗೂ ಮಗಳು ಬೇಕಾಯ್ತು.
ಒಬ್ಬ ಡಾಕ್ಟರ್, ಹೆಂಗಸೊಬ್ಬಳ 20 ಹಲ್ಲುಗಳನ್ನು ಒಟ್ಟಿಗೇ ಕೀಳಲು ಹೋಗಿ ರೋಗಿಯನ್ನು ಸಾಯಿಸಿದ್ದಾರಂತೆ.
ಖೇಮುಶ್ರೀ ಉವಾಚ: ಅದು ಡೆಂಟಲ್ ಡಾಕ್ಟರ್ ಅಲ್ಲ, ಮೆಂಟಲ್ ಡಾಕ್ಟರ್
ಖೇಮು ಉವಾಚ: ಕ್ಲಿನಿಕ್‌ಗೆ ಬಂದವಳು ಪೇಷಂಟ್, ಡಾಕ್ಟರ್ ಇಂಪೇಷಂಟ್.
ಐಪಿಎಲ್‌ನಲ್ಲಿ ಮಿಂಚುತ್ತಿರುವ ಕನ್ನಡಿಗರು.
ಬೆಂಗಳೂರಿನ ಅಭಿಮಾನಿಗಳು: ಕರ್ನಾಟಕದಲ್ಲಿ ಕನ್ನಡಿಗರಿಗೆ ಮಣೆ ಹಾಕಲ್ಲ, ಹೊರಗಿನಿಂದ ಬಂದವರಿಗೇ ಆದ್ಯತೆ ಅನ್ನೋದು ಆರ್‌ಸಿಬಿ ವಿಷಯದಲ್ಲೂ ಪ್ರೂವ್ ಆಯ್ತು.
ಡಾಕ್ಟರ್ ಒಬ್ಬನ ಸ್ವಗತ:
ಮಧ್ಯರಾತ್ರಿ ಪೇಷಂಟ್ ಒಬ್ಬ ನನ್ನ ಮನೆ ಬಾಗಿಲು ಬಡಿದಾಗ, ಮಲಗಿದ್ದ ನನ್ನೊಳಗಿನ ಡಾಕ್ಟರ್ 'ಎಚ್ಚೆತ್ತುಕೊಂಡ'.
ರಾಗಿಣಿ ಅಭಿನಯದ ಹೊಸ ಚಿತ್ರದ ಹೆಸರು 'ಅಮ್ಮ'
ಶರಣ್‌ರ 'ಜಯಲಲಿತಾ' ತಮಿಳುನಾಡಿನ ಪ್ರೆಶರ್‌ನಿಂದಾಗಿ 'ಜೈ ಲಲಿತಾ' ಎಂದು ಬದಲಾಗಿದ್ದಾಳೆ. ಈಗ ರಾಗಿಣಿಯ 'ಅಮ್ಮ' ಟೈಟಲ್‌ಗೂ ಕಂಟಕ ಬರಬಹುದು.
ಹರಿ
harikannadaprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

