ಸಂಪರ್ಕ ತಪ್ಪಿಹೋಗಿದೆ, ಸಂಕಟ ಜೊತೆಯಾಗಿದೆ....
ಮೂರು ವರ್ಷಗಳ ಹಿಂದಿನ ಮಾತು. ಅವತ್ತಷ್ಟೇ ಎಸ್ಸೆಸ್ಸೆಲ್ಸಿಯ ಫಲಿತಾಂಶ ಬಂದಿತ್ತು. ನಮ್ಮ ಸಂಬಂಧಿಕರ ಹುಡುಗನೊಬ್ಬ ಶೇ. 72 ಅಂಕಗಳೊಂದಿಗೆ ಪಾಸ್ ಆಗಿದ್ದಾನೆ ಎಂಬ ಸುದ್ದಿಯನು ಅಮ್ಮ ಖುಷಿಯಿಂದ ತಿಳಿಸಿದ್ದಳು. ಫ್ರೀ ಮಾಡಿಕೊಂಡು ಅವರ ಮನೆಗೆ ಹೋಗಿ ಆ ಹುಡುಗನಿಗೆ ಶುಭಾಶಯ ಹೇಳಿ ಬಾ. 72 ಪರ್ಸೆಂಟ್‌ನಷ್ಟು ಮಾರ್ಕ್ಸ್ ತಗೊಳೋದು ಅಂದ್ರೆ ಸುಮೆ ಆಯ್ತಾ? ಆ ಹುಡುಗ ತುಂಬಾ ಕಷ್ಟ ಪಟ್ಟಿರ್ತಾನೆ... ಅಂದರು. ಸಂಬಂಧಿಕರ ಹುಡುಗನ ಯಶಸ್ಸು ಕಂಡು ಅಮ್ಮನೇ ಇಷ್ಟೊಂದು ಖುಷಿ ಪಡುವಾಗ ಆ ಹುಡುಗನ ಹೆತ್ತವರು ಇನೆಷ್ಟು ಖುಷಿಯಾಗಿರ್ತಾರೋ ಅಂದುಕೊಂಡೇ ಆ ಹುಡುಗನ ಮನೆಗೆ ಹೋದರೆ, ಅಲ್ಲಿ ಹೇಳಿಕೊಳ್ಳುವಂಥ ಸಂಭ್ರಮ ಕಾಣಲಿಲ್ಲ.
'ಬನಿ ಬನಿ' ಎಂದು ಸ್ವಾಗತಿಸಿದ ಆ ಹುಡುಗನ ತಂದೆ, ಹತ್ತು ನಿಮಿಷದ ನಂತರ ಹೇಳಿದರು: ನಿಮಗೆ ಗೊತ್ತಿದೆಯೋ ಇಲ್ವೋ? ನಾನು ಬಹಳ ಕಷ್ಟದಲ್ಲಿ ಬೆಳೆದವನು. ವಾರಾನದ ಹೆಸರಲ್ಲಿ ದಿನಕ್ಕೊಂದು ಮನೆಯಲ್ಲಿ ಊಟ ಮಾಡಿಕೊಂಡು ಬೆಳೆದವನು. ಪುಸ್ತಕ ತಗೊಳ್ಳುವ ಶಕ್ತಿ ಕೂಡ ಇರಲಿಲ್ಲ. ಸೀನಿಯರ್ಸ್‌ಗಳ ಬುಕ್ಸ್ ಇಟ್ಟುಕೊಂಡೇ ಓದು ಮುಗಿಸಿದೆ. ಫಸ್ಟ್ ಕ್ಲಾಸ್‌ನಲ್ಲಿ ಪಾಸ್ ಆದೆ. ಈಗ ನಮ್ಮ ಕುಲಪುತ್ರನ ಕತೆ ಕೇಳಿ: ಇವನಿಗೆ ಒಂದಲ್ಲ, ಎರಡು ಥರದ ಡೈಜೆಸ್ಟ್ ತಂದುಕೊಟ್ಟೆ. ಟ್ಯೂಶನ್‌ಗೆ ಕಳಿಸಿದೆ. ಲ್ಯಾಪ್‌ಟಾಪ್‌ಗೆ ಇಂಟರ್‌ನೆಟ್ ಕನೆಕ್ಷನ್ ಹಾಕಿಸಿಕೊಟ್ಟೆ. ಇಷ್ಟೆಲ್ಲಾ ಅನುಕೂಲ ಮಾಡಿಕೊಟ್ರೂ ಇವನು ತಗೊಂಡಿರೋ ಮಾರ್ಕ್ಸ್ ಎಷ್ಟು ಗೊತ್ತಾ? ಜಸ್ಟ್ 72 ಪರ್ಸೆಂಟ್...
ಯಾಕೋ ಅವರ ಮಾತಿನ ಧಾಟಿ ಇಷ್ಟವಾಗಲಿಲ್ಲ. 72 ಪರ್ಸೆಂಟ್ ಅಂದ್ರೆ ಸುಮೇನಾ ಅಂಕಲ್ ಅಂದೆ. ಅಷ್ಟಕ್ಕೇ ತಡೆದ ಅವರು-ನಿಮ್ಗೆ ಗೊತ್ತಿಲ್ಲಾ. ಇವನಿಗೆ ಇರುವ ಟ್ಯಾಲೆಂಟ್ 95 ಪರ್ಸೆಂಟ್ ಬರಬೇಕಿತ್ತು. ಇವನ ಜೊತೇನೇ ಟ್ಯೂಷನ್‌ಗೆ ಹೋಗುತ್ತಿದ್ದ ನನ ಕೊಲೀಗ್ ಮಗ 91 ಪರ್ಸೆಂಟ್ ಬಂದಿದ್ದಾನೆ. ಈ ಸರ್ತಿ ನಮ್ಮ ರಿಲೇಟಿವ್ಸ್ ಪೈಕಿ 5 ಜನ ಎಸ್ಸೆಸ್ಸೆಲ್ಸಿ ಬರೆದಿದ್ರು. ಎಲ್ರೂ ಇವನಿಗಿಂತ ಜಾಸ್ತಿ ಮಾರ್ಕ್ಸ್ ತಗೊಂಡಿದ್ದಾರೆ. ಅವರ ಪೇರೆಂಟ್ಸ್ ಮುಂದೆ ನಾವು ತಲೆತಗ್ಗಿಸೋ ಹಾಗೆ ಮಾಡಿಬಿಟ್ಟ... ಅದುವರೆಗೂ ಸುಮ್ಮನಿದ್ದ ಅವರ ಪತಿ ಈಗ ತಾವೂ ಮಾತಿಗೆ ನಿಂತರು: ಒಬ್ಬನೇ ಮಗನನು ಡಾಕ್ಟರ್ ಮಾಡಬೇಕು. ಮಗನ ಟ್ಯಾಲೆಂಟ್ ನೋಡಿ ರಿಲೇಟಿವ್ಸ್ ಮಧ್ಯೆ ಬೀಗಬೇಕು ಎಂದೆಲ್ಲಾ ಕನಸು ಕಂಡಿದ್ದೆ. ಆದ್ರೆ ಇವನು ಬಹಳ ನಿರಾಸೆ ಮಾಡಿಬಿಟ್ಟ. ಇವನಿಗೆ ಮಾಡಿಕೊಟ್ಟ ಅನುಕೂಲದಲ್ಲಿ ಐಎಎಸ್ ಕೂಡ ಮಾಡಬಹುದಿತ್ತು...ಅಂದರು!
ಅಪ್ಪ-ಅಮ್ಮನ ಸಿಡಿಮಿಡಿಯ ಮಧ್ಯೆ, ಪಾಪ ಆ ಹುಡುಗ ಹೊರಗೇ ಬರಲಿಲ್ಲ. ಪಿ.ಜಿ.ಗೆ ಬಂದವಳೇ ಅಮ್ಮನಿಗೆ ಫೋನ್ ಮಾಡಿ ಎಲ್ಲವನೂ ವಿವರಿಸಿದೆ. ಆ ಮಗುವಿನ ಕಷ್ಟ ಏನಿತ್ತೋ ಯಾರಿಗ್ಗೊತ್ತು? ಮಕ್ಕಳು ಅಂದ್ರೆ ಮಾರ್ಕ್ಸ್ ತೆಗೆಯೋ ಮಿಷನ್ ಅಂದುಕೊಂಡಿರೋ ಹಾಗಿದೆ. ಆ ಹುಡುಗನನು ಸಪೋರ್ಟ್ ಮಾಡಿ ಯಾರಾದ್ರೂ ಮಾತಾಡಬೇಕಿತ್ತು ಅಂದಳು. ತಕ್ಷಣವೇ ಆ ಹುಡುಗನಿಗೆ ಫೋನ್ ಮಾಡಿ, ಅಮ್ಮನ ಮಾತನೆಲ್ಲ ಹೇಳಬೇಕು ಅನಿಸಿತು. ಆದರೆ ಫೋನ್ ಮಾಡಲು ಮನಸ್ಸಾಗಲಿಲ್ಲ.
ಈ ಮಧ್ಯೆ, ಮನೆಯಲ್ಲೇ ಇದ್ರೆ ಮಕ್ಕಳು ಸರಿಯಾಗಿ ಓದುವುದಿಲ್ಲ ಎಂಬ ಇನೊಂದು ಯೋಚನೆ ಆ ದಂಪತಿಗೆ ಬಂತು. ಅವರು, ಎರಡನೇ ಯೋಚನೆ ಮಾಡದೆ ಮಗನನು ಹಾಸ್ಟೆಲ್‌ಗೆ ಹಾಕಿದರು. ಆಗಲಾದರೂ ಸಾಫ್ಟ್ ಮಾತುಗಳಿಂದ ಮಗನನೂ ಬೀಳ್ಕೊಡಲಿಲ್ಲ. ಬದಲಾಗಿ- ನಿನನು ಡಾಕ್ಟರ್ ಮಾಡಬೇಕು. ಇಲ್ಲಾಂದ್ರೆ ಸಾಫ್ಟ್‌ವೇರ್ ಎಂಜಿನಿಯರ್ ವೇಷದಲ್ಲಿ ನೋಡಬೇಕು ಎಂಬುದು ನಮ್ಮ ಆಸೆ. ಮೆಡಿಕಲ್ ಸೀಟು ಸಿಗಬೇಕು ಅಂತಾದ್ರೆ ಪಿಯುಸಿಯಲ್ಲಿ 90 ಪರ್ಸೆಂಟ್ ಬರಲೇಬೇಕು. ಎಸ್ಸೆಸ್ಸೆಲ್ಸಿಯಲ್ಲಿ ಎಲ್ಲರ ಮುಂದೆಯೂ ತಲೆ ತಗ್ಗಿಸುವ ಹಾಗೆ ಮಾಡಿಬಿಟ್ಟೆ. ಪಿಯೂಸಿಲಿ ಕೂಡ ಹಾಗೆ ಮಾಡಬೇಡ ಎಂದು ಕಟುವಾಗಿಯೇ ಹೇಳಿಬಿಟ್ಟರು.
ಆನಂತರದಲ್ಲಿ ನಿಜವಾದ ಪವಾಡ ನಡೆದು ಹೋಯ್ತು. ಹಾಸ್ಟೆಲ್ ಸೇರಿದ ಈ ಹುಡುಗ ತುಂಬಾ ಶ್ರದ್ಧೆಯಿಂದ ಓದಿದ. ಹೆತ್ತವರಿಗೆ, ಹಾಸ್ಟೆಲು ಹಾಗೂ ಕಾಲೇಜಿನಿಂದ ಮಗನ ಪ್ರೊಗ್ರೆಸ್ ರಿಪೋರ್ಟ್ ಬರುತ್ತಿತ್ತು. ಅವರು ತುಂಬಾ ಹೆಮ್ಮೆಯಿಂದ -ನಮ್ಮ ಮಗ ರ್ಯಾಂಕ್ ಬರ್ತಾನೆ. ಎಂಬಿಬಿಎಸ್ ಮುಗಿದ ತಕ್ಷಣ ಕ್ಲಿನಿಕ್ ಶುರು ಮಾಡಿಸ್ತೀವಿ. ಎರಡು ವರ್ಷ ಹಗಲುರಾತ್ರಿ ದುಡಿದ್ರೆ ದೊಡ್ಡದೊಂದು ನರ್ಸಿಂಗ್ ಹೋಂ ಕಟ್ಟಿಸಬಹುದು ಎಂದು ನೆಂಟರ ಮುಂದೆಲ್ಲಾ ಹೇಳಿಕೊಂಡು ಬಂದರು. ಹಬ್ಬದ ನೆಪದಲ್ಲಿ ಮನೆಗೆ ಬಂದ ಮಗನಿಗೂ ಇದೇ ಮಾತು ಹೇಳಿದರು. ಅವನು ಏನೂ ಮಾತಾಡಲಿಲ್ಲ.
ಪಿಯುಸಿಯಲ್ಲಿ ಅವನ ಪರ್ಸೆಂಟೇಜ್ ಶೇ.85 ಆಯಿತು. ಸಿಇಟಿಯಲ್ಲಿ ಒಳ್ಳೆಯ ರ್ಯಾಂಕ್ ಬಂದಿದ್ದರಿಂದ ಮೆಡಿಕಲ್ ಹಾಗೂ ಎಂಜಿನಿಯರಿಂಗ್, ಎರಡೂ ಕಡೆ ಸೀಟ್ ಸಿಕ್ಕಿತು. ಮನೆಯವರ ಆಗ್ರಹಕ್ಕೆ ಕೇರ್ ಮಾಡದ ಈತ, ಮೆಡಿಕಲ್ ಸೀಟು ತಿರಸ್ಕರಿಸಿ ಎಂಜಿನಿಯರಿಂಗ್‌ಗೆ ಸೇರಿಕೊಂಡ: ಮಗನ ಈ ವರ್ತನೆಯಿಂದ ನೊಂದ ಪೋಷಕರು ಅವನನು ಎದುರು ಕೂರಿಸಿಕೊಂಡು -'ಡಾಕ್ಟರ್ ಆಗಬೇಕು ಅಂತ ನಿಂಗೆ ಆಸೇನೇ ಇಲ್ವಾ? ಅಂದರು.
ಆಗ ಆ ಹುಡುಗ ಹೇಳಿದ: ಡಾಕ್ಟರ್ ಆಗಬೇಕು ಅಂತ ಆಸೆಯಿತ್ತು. ಅಂದರೆ, ಎಲ್ಲರಿಗೂ ಫ್ರೀ ಟ್ರೀಟ್‌ಮೆಂಟ್ ಕೊಡುವ ಡಾಕ್ಟರ್ ಆಗಬೇಕು ಅಂತ ಖಂಡಿತ ಆಸೆಯಿತ್ತು. ಅಂದರೆ, ನಿಮ್ಮ ಆಲೋಚನೆ ನರ್ಸಿಂಗ್ ಹೋಂ ಶುರು ಮಾಡಿ ಕಾಸು ಮಾಡಬೇಕು ಅಂತಾನೇ ಇದೆ. ಒಂದು ವೇಳೆ ನಾನು ಡಾಕ್ಟರ್ ಆಗಿಬಿಟ್ರೆ ಹೀಗೇ ಬದುಕು ಅಂತೆಲ್ಲಾ ಆರ್ಡರ್ ಮಾಡ್ತೀರ. ಅದಕ್ಕೇ ಮೆಡಿಕಲ್‌ಗೆ ಹೋಗಲಿಲ್ಲ. ಎಂಜಿನಿಯರಿಂಗ್ ಮುಗೀತಿದ್ದ ಹಾಗೇ ನಾನು ವಿದೇಶಕ್ಕೆ ಹೋಗಿ ಬಿಡ್ತೀನಿ. ವರ್ಷಕ್ಕೆ ಒಮ್ಮೆ ಮಾತ್ರ ಬರ್ತೀನಿ. ಪರಿಚಯದವರು ಹಾಗೂ ಬಂಧುಗಳ ಮುಂದೆ ದೊಡ್ಡಸ್ತಿಕೆ ತೋರಿಸಿಕೊಳ್ಳುವುದೇ ನಿಮಗೆ ಮುಖ್ಯ ತಾನೆ? ಮಗ ವಿದೇಶದಲ್ಲಿದ್ದಾನೆ, ಲಕ್ಷ ಲಕ್ಷ ದುಡೀತಾನೆ ಅಂತ ಹೇಳಿಕೊಂಡು ಖುಷಿಪಡಿ. ಆದ್ರೆ, ನನ ಆತ್ಮವಿಶ್ವಾಸವನೇ ಕೊಂದು ಬಿಡುವ ಥರಾ ನಡೆಸಿಕೊಂಡ್ರಲ್ಲ; ಅದನು ನಾನು ಯಾವತ್ತೂ ಕ್ಷಮಿಸುವುದಿಲ್ಲ ಎಂದು ಹೇಳಿ ದಪದಪ ಹೆಜ್ಜೆಯಿಡುತ್ತಾ ಮನೆಯಿಂದ ಹೋಗಿಬಿಟ್ಟನಂತೆ. ಅವನೀಗ ಮತ್ತೆ ಹಾಸ್ಟೆಲ್ ವಾಸಿಯಾಗಿದ್ದಾನೆ. ಮನೆಗೆ ಬರಲ್ಲ ಎಂದು ಕಟುವಾಗಿಯೇ ಹೇಳಿದ್ದಾನೆ. ಅವನ ಮೊಬೈಲು ಈಗ ಸ್ವಿಚ್ ಆಫ್ ಆಗಿದೆ. ಮಗ ಕೈ ತಪ್ಪಿ ಹೋದನೆಂಬ ಸಂಕಟ ಹಾಗೂ ಪಶ್ಚಾತ್ತಾಪದ ಮಧ್ಯೆ ಆ ದಂಪತಿ ಬಿಕ್ಕಳಿಸುತ್ತಿದ್ದಾರೆ...
- ನಾನು ಪ್ರಣತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

