ಚೀನಾದಲ್ಲಿ ಭ್ರಷ್ಟರಿಗೆ ಎದುರಾಗುತ್ತಿದೆ ಕಷ್ಟ
ತಮ್ಮ ರಾಷ್ಟ್ರದ ಭ್ರಷ್ಟ ಅಧಿಕಾರಿಗಳ ವಿರುದ್ಧ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತೆಗೆದುಕೊಂಡಿರುವ ಕಠಿಣ ಕ್ರಮಗಳ ಬಗೆಗಿನ ಸುದ್ದಿಯೇ ಈಗ ಚೀನಾದ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. ಚೀನಿಯರು ಎಷ್ಟೇ ತಪ್ಪಿತಸ್ಥರಿಗೆ ಶಿಕ್ಷೆಕೊಟ್ಟರೂ ಭ್ರಷ್ಟಾಚಾರವನು ಮಾತ್ರ ಅಲ್ಲಿಂದ ಅಷ್ಟು ಸುಲಭವಾಗಿ ಅಳಿಸಿ ಹಾಕುವುದಕ್ಕೆ ಸಾಧ್ಯವಿಲ್ಲ ಎನುವ ಮಾತಿದೆ. ಆದರೆ ಈ ಹೊಸ ಅಧ್ಯಕ್ಷರು ಈ ವಿಷಯದಲ್ಲಿ ಬಹಳ ಬಿಗಿ ನಿಲುವು ಹೊಂದಿದಂತೆ ಕಾಣುತ್ತಿದ್ದಾರೆ. ಹಾಗಂತ ಅವರೇನು ಕೇಜ್ರೀವಾಲ್ ಶೈಲಿಯ ಹೋರಾಟಗಾರರಲ್ಲ ಬಿಡಿ. ಆದರೂ ಆ ರಾಷ್ಟ್ರದ ಬೃಹತ್ ವ್ಯಾಪ್ತಿ, ಅಲ್ಲಿ ಬೇರೂರಿರುವ ಭ್ರಷ್ಟಾಚಾರವನು ನೋಡಿದಾಗ, ಈ ವಿಷಯದಲ್ಲಿ(ಭ್ರಷ್ಟಾಚಾರ ನಿಗ್ರಹದಲ್ಲಿ) ಮಾತ್ರ ಅವರೂ ಕೂಡ ಕೇಜ್ರೀವಾಲರಂತೆಯೇ ಆಶಾಜನಕವಲ್ಲದ ವ್ಯಕ್ತಿಯಾಗಿ ಕಾಣಿಸುತ್ತಿದ್ದಾರೆ ಎನಬೇಕಾಗುತ್ತದೆ.
ಆ ರಾಷ್ಟ್ರದ ಇತಿಹಾಸವನು ಗಮನಿಸಿದಾಗ, ಭಾರತದಂತೆಯೇ ಆ ರಾಷ್ಟ್ರವೂ ಕೂಡ ಭ್ರಷ್ಟಾಚಾರದಿಂದ ಮುಕ್ತಗೊಳ್ಳಲಾಗದ ವಾತಾವರಣ ಹೊಂದಿದೆ ಎನುವುದು ಅರಿವಾಗುತ್ತದೆ. ಈ ಎರಡೂ ರಾಷ್ಟ್ರಗಳಿಗೆ ಸ್ವಾತಂತ್ರ್ಯ ಸಿಕ್ಕಾಗ, ಸ್ವಾತಂತ್ರ್ಯ ದೊರಕಿಸಿಕೊಟ್ಟವರು "ದೇಶವನು ಭ್ರಷ್ಟಾಚಾರದಿಂದ ದೂರವಿರಿಸಬೇಕು" ಎಂದೇ ಆಶಿಸಿದರು. ಆದರೆ ಆದದ್ದೇನು? ಚೀನಾದಲ್ಲಿ ಡೆಂಗ್ ಸಿಯೋಪಿಂಗ್ ಅಧಿಕಾರ ವಹಿಸಿಕೊಂಡ ಕೂಡಲೇ ಮಾರುಕಟ್ಟೆ ಉದಾರೀಕರಣದ ಬಾಗಿಲನು ತೆರೆದುಬಿಟ್ಟರು. "To be rich is glorious' ಎಂದು ಘೋಷಿಸಿದರು. ಇತ್ತ ಇಂದಿರಾಗಾಂಧಿಯವರು ತುರ್ತುಪರಿಸ್ಥಿತಿಯನು ಹೇರಿ ಆಡಳಿತದ ನೈತಿಕ ಬುನಾದಿಯನು ತಿರುಗುಮರುಗು ಮಾಡಿಬಿಟ್ಟರು. ನಂತರ ಭ್ರಷ್ಟಾಚಾರವೆನುವುದು ಜಾಗತಿಕ ಸಮಸ್ಯೆ ಎಂದು ಹುಚ್ಚು ತೇಪೆ ಹಚ್ಚುವ ಕೆಲಸ ಮಾಡಿದರು. ಅಂದಿನಿಂದ ಇಂದಿನವರೆಗೂ ಚೀನಾ ಮತ್ತು ಭಾರತದಲ್ಲಿ ಭ್ರಷ್ಟಾಚಾರ ನಿರಾತಂಕವಾಗಿ ಸಾಗಿದೆ.
ಭ್ರಷ್ಟಾಚಾರದ ವಿಷಯದಲ್ಲಿ ಭಾರತ ಮತ್ತು ಚೀನಾದ ನಡುವೆ ಹೆಚ್ಚು ವ್ಯತ್ಯಾಸವೇನೂ ಇಲ್ಲ. ಆದರೆ ನಮಗಿಂತಲೂ ಅಲ್ಲಿ ಈ ಭೂತ ಹೆಚ್ಚು ಉಗ್ರವಾಗಿದೆ ಎನುವುದಂತೂ ಸತ್ಯ. ಕ್ಸಿ ಅವರು ಅಧಿಕಾರ ಸ್ವೀಕರಿಸುವುದಕ್ಕಿಂತಾ ಮುಂಚೆ ಬೆಟ್ಟದಂಥ ಹಗರಣಗಳು ಅಲ್ಲಿ ಹೊರಬಿದ್ದಿದ್ದವು. ಆದರೆ ಅಲ್ಲಿ ಕೆಲವು ವರ್ಷಗಳಿಂದ ಭ್ರಷ್ಟರಿಗೆ ಶಿಕ್ಷೆಯೂ ಆಗತೊಡಗಿದೆ. 2008ರಲ್ಲಿ ಚೀನಾದ ನ್ಯೂಕ್ಲಿಯರ್ ಪವರ್ ಏಜೆನ್ಸಿಯ ಮಾಜಿ ಮುಖ್ಯಸ್ಥಮತ್ತು ವಾಣಿಜ್ಯ ನಗರಿ ಶೆನ್‌ಜೆನ್‌ನ ಮಾಜಿ ಮೇಯರ್‌ಗೆಲ್ಲ ಜೈಲುಶಿಕ್ಷೆಯಾದರೆ, ಬೀಜಿಂಗ್ ವಿಮಾನನಿಲ್ದಾಣದ ಮುಖ್ಯಸ್ಥನನು ಭ್ರಷ್ಟಾಚಾರವೆಸಗಿದ್ದಕ್ಕಾಗಿ ನೇಣಿಗೇರಿಸಲಾಯಿತು! ಈಗ ಜಿನ್‌ಪಿಂಗ್ ಅವರು ಪಾಲಿಟ್‌ಬ್ಯೂರೋದ ಪ್ರಮುಖ ಸದಸ್ಯ ಝೋ ಯಾಂಗ್‌ಕ್ಯಾಂಗ್ ಅವರನು(ಪ್ರಮುಖ ಭದ್ರತಾ ಸಂಸ್ಥೆಯೊಂದರ ಮಾಜಿ ಮುಖ್ಯಸ್ಥ) ಭ್ರಷ್ಟಾಚಾರದ ಆರೋಪದ ಮೇಲೆ ಗೃಹಬಂಧನದಲ್ಲಿಟ್ಟಿದ್ದಾರೆ. ಝೋ ಅಂಥ ಬಲಿಷ್ಠ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಂಡರೆ ಭೂಕಂಪ ಸಂಭವಿಸುತ್ತದೆ ಎಂದು ರಾಜಕೀಯ ವಿಶ್ಲೇಷಕರೆಲ್ಲ ಎಚ್ಚರಿಸುತ್ತಿದ್ದರಾದರೂ, ಅವರ ಮಾತಿಗೆ ಆ ರಾಷ್ಟ್ರದ ಅಧ್ಯಕ್ಷ ತಲೆಕೆಡಿಸಿಕೊಳ್ಳಲಿಲ್ಲ. ಅಧಿಕಾರವಹಿಸಿಕೊಂಡು ಹೆಚ್ಚು ಸಮಯವಾಗಿಲ್ಲವಾದರೂ ಜಿನ್‌ಪಿಂಗ್ ಬಹುತೇಕ ಎಲ್ಲಾ ಪ್ರಮುಖ ನಿರ್ಣಯಗಳನು ತಾವೇ ತೆಗೆದುಕೊಳ್ಳುವಷ್ಟು ಬಲಿಷ್ಠರಾಗಿ ಬದಲಾಗಿದ್ದಾರೆ. ಆದರೆ ಚೀನಾದ ಇನೊಂದು ಗುಣವನು ನಾವು ಮೆಚ್ಚಲೇಬೇಕು. ಇಷ್ಟೆಲ್ಲ ಆವಾಂತರಗಳ ನಡುವೆಯೂ ಆ ರಾಷ್ಟ್ರ ಮಿಲಿಟರಿ ಮತ್ತು ಆರ್ಥಿಕ ವಲಯದಲ್ಲಿ ಮಾಡಿರುವ ಸಾಧನೆ ಅಷ್ಟಿಷ್ಟಲ್ಲ. ಅದರ ಬೆಳವಣಿಗೆಯ ವೇಗಕ್ಕೆ ಸರಿಸಾಟಿಯಾಗಲು ಏಷ್ಯಾದ ಯಾವ ರಾಷ್ಟ್ರಗಳಿಗೂ ಈಗ ಸಾಧ್ಯವಾಗುತ್ತಿಲ್ಲ. ಆದರೆ ಇದೇ ಸಮಯದಲ್ಲಿ ಅಲ್ಲಾದ ಪರಿಸರ ಹಾನಿ, ಸಾಮಾಜಿಕ ಅವ್ಯವಸ್ಥೆಯನು ಸರಿಪಡಿಸುವುದು ಅಷ್ಟು ಸುಲಭ ಸಾಧ್ಯವಲ್ಲ. ಬಹುಶಃ ಇಷ್ಟು ವರ್ಷಗಳಿಂದ ಕಡೆಗಣಿಸುತ್ತಾ ಬಂದಿದ್ದ ಸಮಸ್ಯೆಗಳತ್ತ ಈಗಲಾದರೂ ಕಣ್ಣುಹಾಯಿಸಲೇಬೇಕು ಎನುವುದು ಆ ನಾಯಕರಿಗೆ ಈಗ ಅರ್ಥವಾಗಿರಬೇಕು.
ಈ ಕಾರಣಕ್ಕಾಗಿಯೇ ಅಲ್ಲಿನ ಅಧ್ಯಕ್ಷರು ಕಠಿಣಾತಿಕಠಿಣ ಕ್ರಮಗಳನು ಭ್ರಷ್ಟರ ವಿರುದ್ಧ ತೆಗೆದುಕೊಳ್ಳತೊಡಗಿದ್ದಾರೆ. ಚೀನಾ ಬೆಳೆಯುತ್ತಾ ಸಾಗಿದಂತೆಲ್ಲ, ಅದರ ಪ್ರಾಂತೀಯ ರಾಜಕೀಯ ನಾಯಕರೂ ಬಲಿಷ್ಠವಾಗುತ್ತಾ ಸಾಗಿದರು. ಕೇಂದ್ರವನು ಅಲ್ಲಾಡಿಸುವಂಥ ಶಕ್ತಿ ಅವರೆಲ್ಲರಲ್ಲೂ ಬಂದಿತ್ತು. ಆದರೆ ಚುಂಗ್‌ಕಿಂಗ್‌ನ ಮುಖ್ಯಸ್ಥ, ಬೋ ಕ್ಸಿಲಾಯಿ ಅವರಿಗೆ ಕಳೆದ ವರ್ಷ ಶಿಕ್ಷೆಯಾಗುತ್ತಿದ್ದಂತೆಯೇ(ಜೀವಾವಧಿ) ಅಲ್ಲಿನ ಸನಿವೇಶ ಬದಲಾಗುತ್ತಾ ಹೋಯಿತು. ಈಗ ಕ್ಸಿ ಜಿನ್‌ಪಿಂಗ್ ಅವರು ತಮ್ಮ ನೇರ ದಿಟ್ಟ ಹೆಜ್ಜೆಯಿಂದಾಗಿ ಜನಪ್ರಿಯತೆ ಗಳಿಸುತ್ತಾ ಸಾಗಿದ್ದಾರೆ. ಜನತೆಯ ಅಧ್ಯಕ್ಷ ಎಂದವರನು ಕರೆಯಲಾಗುತ್ತಿದೆ. ಒಂದು ವೇಳೆ ಅವರು ಭ್ರಷ್ಟಾಚಾರವನೇನಾದರೂ ಬುಡಸಮೇತ ಕಿತ್ತುಹಾಕುವಲ್ಲಿ ಅಥವಾ ಇನಷ್ಟು ಕಡಿಮೆಮಾಡುವಲ್ಲಿ ಯಶಸ್ವಿಯಾದರೆಂದರೆ ನಿಸ್ಸಂಶಯವಾಗಿಯೂ ಇತಿಹಾಸದ ಪುಟಗಳಲ್ಲಿ ಅವರಿಗೆ ದೊಡ್ಡ ಸ್ಥಾನ ಸಿಗಲಿದೆ.
ಟಿ.ಜೆ.ಎಸ್ ಜಾರ್ಜ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

