Hmmm... ಪಾಂಚ್ ರಾಹುಲ್ ಗಾಂಧಿ
ಅಮೆರಿಕಾದಲ್ಲಿ ಹಿಮಪಾತ ಯಾಕೆ ಜಾಸ್ತಿ ಆಗ್ತಾ ಇದೆ?
ಇಂಡಿಯಾ ಟೀಮ್‌ನವ್ರು ಯಾಕೆ ನ್ಯೂಜಿಲ್ಯಾಂಡ್‌ನಲ್ಲಿ ಒಂದೂ ಮ್ಯಾಚ್ ಗೆಲ್ಲಲಿಲ್ಲ ಅಂದ್ರೆ....
- ರೀ, ರೀ, ಅದಲ್ಲ ನನ್ ಪ್ರಶ್ನೆ, ಹೋಗ್ಲಿ, ಚಿರಾಪುಂಜಿಯಲ್ಲಿ ಯಾಕೆ ಮಳೆ ಕಡಿಮೆ ಆಗಿದೆ?
ಅದೇನಾಗುತ್ತೆ ಅಂದ್ರೆ, ಜಾನ್ ಅಬ್ರಹಾಂ ಮತ್ತು ಬಿಪಾಶಾ ಸಂಬಂಧ ಮೊದಲಿನಿಂದಲೂ ಅಷ್ಟಕ್ಕಷ್ಟೆ ಇತ್ತಂತೆ..
- ಸರ್, ಸಾಕು ಬಿಡಿ, ಹೋಗ್ಲಿ, ಕರ್ನಾಟಕದಲ್ಲಿ ಡಬ್ಬಿಂಗ್ ಬೇಕಾ ಬೇಡ್ವಾ ಅದನ್ನಾದ್ರೂ ಹೇಳಿ?
ಈ ಡಬ್ಬಿಂಗ್ ಅಂದ್ರೆ ಏನು?
- ನಮ್ಮ, ಐ ಮೀನ್ ನಿಮ್ಮ ಪ್ರಧಾನಿ ಮನಮೋಹನ್ ಸಿಂಗ್ ಅವರ ತುಟಿಚಲನೆಗೆ ನಿಮ್ಮ ತಾಯಿ ಸೋನಿಯಾಗಾಂಧಿ ಅವರು ಕಂಠದಾನ ಮಾಡ್ತಾರಲ್ಲ ಅದು..
ಓ ಹಂಗಿದ್ರೆ ಬೇಕು, ಡಬ್ಬಿಂಗ್ ಬೇಕೇ ಬೇಕು.
- ನೋಡಿದ್ರಾ ನಿಮ್ಗೆ ಇಷ್ಟೊತ್ತು ಯಾಕೆ ಸೀರಿಯಸ್ ಪ್ರಶ್ನೆಗಳನ್ನು ಕೇಳಲಿಲ್ಲ ಅಂತ ಗೊತ್ತಾಯ್ತಾ?. ಹೋಗ್ಲಿ ಒಂದಾದ್ರೂ ಗಂಭೀರ ಪ್ರಶ್ನೆಗೆ ಉತ್ತರಿಸಿ. ನಾಳೆ ನೀವು ನಮ್ಮ ದೇಶದ ಪ್ರಧಾನಿ ಆದ್ರೆ ಏನ್ ಮಾಡ್ತೀರಾ?
ಅಯ್ಯೋ, ಇದೆಂಥಾ ಪ್ರಶ್ನೆ? ಪ್ರಧಾನಿ ಆಗೋಕೆ ಏನೇನ್ ಮಾಡ್ತೀರಾ ಅಂತ ಕೇಳಿದ್ರೆ ಹೇಳಬಹುದಪ್ಪ. ಪ್ರಧಾನಿ ಆದ್‌ಮೇಲೆ ಏನಿರುತ್ತೆ ಮಾಡೋಕೆ.
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಿ ಎಂಬ ಪರಿಸರ ಕಳಕಳಿಯ ಮನವಿಗೆ ಎಲ್ಲರೂ ಸ್ಪಂದಿಸುತ್ತಾರೆ. ಆದರೆ ಪ್ಲಾಸ್ಟಿಕ್ ಬಳಕೆಯ ನಿಯಂತ್ರಣ ಹೇಗೆ ಎಂಬ ಬಗ್ಗೆ ಇಲ್ಲಿ ಒಂದಿಷ್ಟು ಮಾಹಿತಿ ಇದೆ. ಆದರೆ ಸಂಪೂರ್ಣ ನಿಯಂತ್ರಿಸುವುದು ನಮಗಂತೂ ಸಾಧ್ಯವಿಲ್ಲ. ಹಾಗಾಗಿ ಅಟ್‌ಲೀಸ್ಟ್ ವೇಸ್ಟ್ ಆದ ಪ್ಲಾಸ್ಟಿಕ್ ಅನ್ನು ಹೇಗೆ ಇತರ ಕೆಲಸಗಳಿಗೆ ಬಳಸಬಹುದು ಎಂಬ ಬಗ್ಗೆಯೂ ತಿಳಿದುಕೊಳ್ಳಿ.
n bit.ly/1d8cVsx n bit.ly/1hWrDlm n bit.ly/1eCvsZh n bit.ly/1hWrEWsn bit.ly/LvR4Q2
ಹರಿ-ಕಥೆ
ಕುಟುಂಬದ ಯಜಮಾನ ಖೇಮು ಸಾವಿನ ಹೊಸ್ತಿಲಲ್ಲಿದ್ದ. ಆದರೆ ಸದ್ಯಕ್ಕೆ ಆಸ್ಪತ್ರೆಯ ಹಾಸಿಗೆಯ ಮೇಲಿದ್ದ. ಅವನ ಪಕ್ಕದಲ್ಲಿ ಪತ್ನಿ ಖೇಮುಶ್ರೀ, ಇಬ್ಬರು ಗಂಡು ಮಕ್ಕಳು, ಒಬ್ಬ ಮಗಳು ಮತ್ತು ಅವರ ಪಕ್ಕದಲ್ಲಿ ನರ್ಸ್. ಅಪ್ಪ ಇನ್ನೇನು ಕೆಲವೇ ಕ್ಷಣದಲ್ಲಿ ಸಾಯುತ್ತಾನೆ ಎಂಬ ಆತಂಕದಲ್ಲಿ ಮಕ್ಕಳು ಮತ್ತು ಗಂಡ ಸಾಯುತ್ತಾನೆ ಎಂಬ ನೋವಿನಲ್ಲಿ ಪತ್ನಿ ಖಿನ್ನರಾಗಿದ್ದರು. ಆದರೆ ಬಾಯಿ ಬಿಟ್ಟು 'ಕೇಳೋದು ಹೇಗೆ?' ಎಂಬ ಸಂಕೋಚ ಎಲ್ಲರಲ್ಲೂ ಇತ್ತು. ಆದರೆ, ಕೊನೆಗೂ ಆ ಕ್ಷಣ ಬಂದೇಬಿಡ್ತು. ಖೇಮು ಕೊನೆಗೂ ತನ್ನ ಆಸ್ತಿಯ ಪಾಲುದಾರಿಕೆ ಬಗ್ಗೆ ಮಾತನಾಡಲು ಶುರುಮಾಡಿದ. ಖೇಮುಶ್ರೀಯತ್ತ ನೋಡಿದ ಖೇಮು ಮೆಲ್ಲನೆ ಶುರುಮಾಡಿ, 'ಲೇ ಇವಳೇ, ಇಷ್ಟು ನನ್ನ ಎಲ್ಲಾ ಕಿರಿಕಿರಿಗಳನ್ನು ಸಹಿಸಿಕೊಂಡು ನನ್ನ ಜೊತೆ ಇದ್ದೀಯಾ ನಿನಗೆ ಸದಾಶಿವನಗರದ 10 ಮನೆಗಳನ್ನು ಕೊಡುತ್ತಿದ್ದೇನೆ' ಎಂದ. ನಂತರ ಮಕ್ಕಳ ಕಡೆ ತಿರುಗಿ ದೊಡ್ಡ ಮಗನನ್ನು ನೋಡಿ 'ಮಗಾ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳಬೇಕಾದ ಕೆಲಸ ನಿನ್ನ ಹೆಗಲೇರಿದೆ, ನಿನಗೆ ಕೋರಮಂಗಲದ 25 ಮನೆಗಳನ್ನು ಕೊಡುತ್ತಿದ್ದೇನೆ' ಎಂದ. ಆ ನಂತರ ಕಿರಿಮಗನ ಸರದಿ. ಖೇಮು ಅವನಿಗೆ 15 ಮನೆಗಳನ್ನು ಕೊಟ್ಟ. ಇದೆಲ್ಲದರ ನಂತರ ಖೇಮುಗೆ ಏನನ್ನಿಸಿತೋ ಏನೋ ನರ್ಸ್‌ಮ್ಮನ ಕಡೆ ತಿರುಗಿ, 'ಅಮ್ಮಾ ನನ್ನನ್ನು ಇಷ್ಟು ದಿನ ಆಸ್ಪತ್ರೆಯಲ್ಲಿ ಎಷ್ಟು ಚೆನ್ನಾಗಿ ನೋಡಿಕೊಂಡಿದ್ದೀಯಾ, ನಿನಗೆ ಏನೂ ಕೊಡದಿದ್ದರೆ ಭಗವಂತ ಮೆಚ್ಚೋದಿಲ್ಲ ನೀನೂ 5 ಮನೆ ಇಟ್ಕೊ' ಅಂದ. ನರ್ಸಮ್ಮ ಪುಲ್ ಖುಷ್. ಆದರೆ ಉಳಿದ ಯಾರ ಮುಖದಲ್ಲೂ ಯಾವ ಸಂತೋಷವೂ ಕಾಣಲಿಲ್ಲ. ಸ್ವಲ್ಪ ಕನ್‌ಫ್ಯೂಶನ್ನಲ್ಲೇ ನರ್ಸಮ್ಮ ಖೇಮುಶ್ರೀಗೆ ಹೇಳಿದಳು, 'ಎಂಥಾ ಒಳ್ಳೆ ಫ್ಯಾಮಿಲಿ ನಿಮ್ದು. ನಿಮ್ ಯಜಮಾನ್ರು ಸಾಯ್ತಾ ಇದಾರೆ ಅಂತ ಅವರು ನಿಮಗೆ ಎಂಥೆಂಥಾ ಏರಿಯಾಗಳಲ್ಲಿ ಕೋಟಿಗಟ್ಟಲೆ ಬೆಲೆಬಾಳುವ ಮನೆಗಳನ್ನು ಕೊಟ್ರೂ ನಿಮ್ಮ ಮುಖದಲ್ಲಿ ಖುಷಿನೇ ಇಲ್ಲ, ಆದ್ರೆ ನಂಗಂತೂ ಖುಷಿಯಾಯ್ತು' ಅಂದ್ಳು. ಅದಕ್ಕೆ ಖೇಮುಶ್ರೀ ಹೇಳಿದಳು 'ಏನಂದೆ? ಕೋಟಿಗಟ್ಟಲೆ ಬೆಲೆಬಾಳುವ ಮನೆಗಳಾ? ನಿನ್ ತಲೆ. ನನ್ನ ಗಂಡ ಮನೆಮನೆಗೆ ಹಾಲು ಹಾಕೋನು. ಅವ್ನು ಸತ್ತ ಮೇಲೆ ಯಾರ್ಯಾರು ಎಲ್ಲೆಲ್ಲಿ ಅವನ ಕೆಲಸ ಮುಂದುವರಿಸಬೇಕು ಅಂತ ಹೇಳ್ತಿದಾರೆ ಅಷ್ಟೆ'.
ಸ್ಕ್ಯಾಂಡಲ್‌ವುಡ್
ಮೊನ್ನೆ ರಜನೀಕಾಂತ್ ಬೆಂಗಳೂರಿಗೆ ಬಂದಿದ್ದರು. ಪಾಪ, ಅವರು ಇಲ್ಲಿಗೆ ಬರೋದು, ಬೋರೇಗೌಡ ಬೆಂಗಳೂರಿಗೆ ಬಂದ ಎನ್ನುವಷ್ಟು ದೊಡ್ಡ ಸುದ್ದಿ ಏನೂ ಅಲ್ಲ. ಆದರೆ ಅದು ಸುದ್ದಿಯಾಗುವುದಕ್ಕೆ ಯಾರು ಕಾರಣ ಅಂತ ಹುಡುಕ ಹೊರಟರೆ ಅದಕ್ಕೆ ನಮ್ಮ ಮಂಡ್ಯದ ಬೋರೇಗೌಡರೇ ಕಾರಣವಂತೆ. ಹೌದು ರಜನೀಕಾಂತ್ ಅವರಿಗೆ ಗಾಲ್ಫ್ ಕ್ಲಬ್ ಸಮೀಪ ಇರುವ ಗೆಳೆಯರ ಮನೆಗೆ ಯಾವಾಗಲೋ ಒಮ್ಮೆ ಬರೋ ವಾಡಿಕೆ ಇಟ್ಟುಕೊಂಡಿದ್ದಾರೆ. ಮೊನ್ನೆ ಕೂಡಾ ಹಾಗೇ ಬಂದಿದ್ದರು. ಆದರೆ ಎಂದಿನಂತೆ ಬಂದಿದ್ದು ಯಾರಿಗೂ ಗೊತ್ತಾಗದಂತೆ ಎಚ್ಚರವನ್ನೂ ವಹಿಸಿದ್ದರು. ಆದರೂ ಅದು ಗೊತ್ತಾಗಿದ್ದು ಹೇಗೆ ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ. ಅಲ್ಲೇ ಹತ್ತಿರದ ಕ್ಲಬ್‌ನಲ್ಲಿ ಇಸ್ಪೀಟ್ ಆಡುತ್ತಾ ಕೂತಿದ್ದ, ಜೂಜು, ಕುದುರೆ ಮೇಲೆ ವ್ಯಾಮೋಹ ಇರುವ ನಮ್ಮ ಚಿತ್ರರಂಗದ ಈ ಹಳೆಯ ಜಾಕಿ, ತಮ್ಮ ಮೊಬೈಲ್ ಎತ್ತಿಕೊಂಡು 'ರಜನಿ ಬಂದವ್ರೆ ಕಣ್ರಲಾ' ಅಂತ ತಮಟೆ ಬಜಾಯಿಸಿದ್ದಾರೆ. ಹಾಗಾಗಿ ಅಲ್ಲಿಗೆ ಎಲ್ಲ ಮೀಡಿಯಾಗಳು ಲಗ್ಗೆ ಇಟ್ಟಿವೆ. ರಜನೀ ಏನೂ ಮಾತನಾಡದಿದ್ದರೂ ಒಂದಷ್ಟು ಹೊತ್ತು ಅವರ ವೈಯಕ್ತಿಕ ಸಮಯಕ್ಕೆ ಒಂದಿಷ್ಟು ಟ್ರಬಲ್ ಮತ್ತು ಅಲ್ಲಿದ್ದವರಲ್ಲಿ ಒಂದಿಷ್ಟು ಕೋಲಾಹಲ ಆಗಿದ್ದಕ್ಕೆ ಈ ನಮ್ಮ 'ಟ್ರಬಲ್‌ಸ್ಟಾರೇ' ಕಾರಣ ಎಂಬುದು ರೇಸ್‌ಕೋರ್ಸ್‌ನಲ್ಲಿ ಕುದುರೆಗೆ ಹುರುಳಿ ತಿನಿಸುವವನ ನಾಲಿಗೆ ಹೊರಳಿ ಆಯತಪ್ಪಿ ಹೊರ ಬಂದ ಸುದ್ದಿ.
ಡಬ್ಕುಡಬಲ್ ತುದಾಂಡಲ್...
ಮೇಡಂ ಸೋನಿಯಾಗಾಂಧಿ ಒಂದ್ ಸ್ಕೂಲ್ ವಿಸಿಟ್‌ಗೆ ಹೋಗಿದ್ರು. ಅಲ್ಲಿ ಮಕ್ಕಳ ಜೊತೆ ಮಾತಾಡಿದ ಮೇಲೆ 'ಮಕ್ಕಳೇ ಏನಾದ್ರೂ ಪ್ರಶ್ನೆ ಕೇಳೋದಿದ್ರೆ ಕೇಳಿ' ಅಂದ್ರು. ಪಪ್ಪು ಎದ್ದು ನಿಂತು ಮೇಡಂ ನಂಗೆ 3 ಪ್ರಶ್ನೆ ಕೇಳೋದಿದೆ ಅಂತ ಶುರು ಮಾಡಿದ. Ú
-ಅವರಿವರನ್ನು ಪ್ರೈಮ್ ಮಿನಿಸ್ಟರ್ ಮಾಡೋ ನೀವೇ ಯಾಕೆ ಪ್ರೈಮ್ ಮಿನಿಸ್ಟರ್ ಆಗಲಿಲ್ಲ,
- ನಿಮ್ಮ ಅಳಿಯ ಅಷ್ಟೊಂದು ದುಡ್ಡು ಹೆಂಗೆ ಮಾಡಿದ?
-ಸ್ವಿಸ್ ಬ್ಯಾಂಕಲ್ಲಿ ನೀವು ಎಷ್ಟು ದುಡ್ ಇಟ್ಟಿದೀರಾ?
ಅಷ್ಟರಲ್ಲೇ ಬ್ರೇಕ್ ಬೆಲ್ ಆಯ್ತು. ಎಲ್ಲಾ ಮಕ್ಕಳೂ ಹೊರಗೆ ಹೋಗಿ 10 ನಿಮಿಷ ಆದಮೇಲೆ ವಾಪಸ್ ಬಂದರು. ಈ ಬಾರಿ ಅಪ್ಪು ಎದ್ದು ನಿಂತ. ಮೇಡಂ ನನಗೆ 5 ಪ್ರಶ್ನೆ ಕೇಳೋದಿದೆ. ಮೊದಲ 3 ಪಪ್ಪು ಕೇಳಿದಾನೆ. ಇನ್ನೆರಡು
- ಇವತ್ತು ಬ್ರೇಕ್ ಬೆಲ್ 15 ನಿಮಿಷ ಮುಂಚೆ ಯಾಕೆ ಹೊಡೆದ್ರು?
- ಪಪ್ಪು ಎಲ್ಲಿ ಕಾಣಿಸ್ತಾ ಇಲ್ಲ?
ಅಮೆರಿಕಾದಲ್ಲಿ ಮಂಜು ಹೆಚ್ಚಾಗಿ ಆಗಿರುವ ಅನಾಹುತಗಳಿಗೆ ಕಾರಣ
ಸ್ನೋ ಪಾಯಿಸನ್
ಮಾಡರ್ನ್ ಗಾದೆ:
ಸೈಕಲ್ ಶಾಪಲ್ಲಿ ಟ್ಯೂಬ್‌ಗೆ ಗಾಳಿ ಹೊಡೆಯೋ ಕೆಲಸ ಮಾಡೋ ಹುಡುಗನ್ನ ವಾಯುಪುತ್ರ ಅನ್ನೋಕಾಗ್ತದ?
ಹಾಲಿವುಡ್‌ಗಿಂತ ಸ್ಟಾಂಡಲ್‌ವುಡ್‌ನಲ್ಲೇ ಹೈ ಬಜೆಟ್ ಸಿನಿಮಾ ಬರೋದು. ಹೇಗೆ?
ಅವರು 'ಐರನ್'ಮ್ಯಾನ್ ಸಿನಿಮಾ ಮಾಡ್ತಾರೆ. ನಾವು 'ಬಂಗಾರ'ದ ಮನುಷ್ಯ ಮಾಡ್ತೀವಿ.
'ಅತಿ ಶೀಘ್ರದಲ್ಲೇ ಬಿಡುಗಡೆ' ಎಂಬ ಜಾಹೀರಾತು ಅತಿ ಚೆನ್ನಾಗಿ ಒಪ್ಪುವ ಚಿತ್ರ
ಖೈದಿ
ಹರಿ
harikannadaprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

