ಹೊರನೋಟಕ್ಕೆ ವ್ಯವಹಾರ, ಆಂತರ್ಯದಲ್ಲಿ ಭ್ರಷ್ಟಾಚಾರ
ತಮ್ಮ ಉನ್ನತ ಹುದ್ದೆಯಿಂದ ತಾವು ಕಂಡುಕೊಂಡ ಒಳನೋಟಗಳನ್ನು ಚೌಧರಿ...
ತಮ್ಮ ಉನ್ನತ ಹುದ್ದೆಯಿಂದ ತಾವು ಕಂಡುಕೊಂಡ ಒಳನೋಟಗಳನ್ನು ಚೌಧರಿ ಓದುಗರ ಜತೆ ಹಂಚಿಕೊಳ್ಳುತ್ತಾರೆ. ಕುಪ್ರಸಿದ್ಧ ಜೈನ್ ಹವಾಲಾ ಪ್ರಕರಣದಲ್ಲಿ, 62 ರಾಜಕಾರಣಿಗಳು ಮತ್ತು 18 ಸರ್ಕಾರಿ ನೌಕರರು ನಿಯಮಿತವಾಗಿ ಹವಾಲಾ ಹಣ ಪಡೆಯುತ್ತಿದ್ದುದು ಬೆಳಕಿಗೆ ಬಂದಿತ್ತು. ಕೊಡು-ಕೊಳ್ಳು ಆಧಾರದಲ್ಲಿ ಹೇಳುವುದಾದರೆ ಇದು 'ಲಂಚ' ಆಗಿರಲಿಲ್ಲ. ಏಕೆಂದರೆ, ಹಣ ಪಡೆದವರಲ್ಲಿ ಅನೇಕರು ಆ ಅವಧಿಯಲ್ಲಿ ಅಧಿಕಾರ ಸ್ಥಾನದಲ್ಲಿ ಇರಲಿಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಆ ವ್ಯವಹಾರಗಳಲ್ಲಿ ಹೊರನೋಟಕ್ಕೆ ಭ್ರಷ್ಟಾಚಾರ ಕಂಡುಬರುತ್ತಿರಲಿಲ್ಲ. ಆದರೆ, ಅಲ್ಲಿ ವಿದೇಶಿ ವಿನಿಮಯ ಕಾನೂನುಗಳ ಗಂಭೀರ ಉಲ್ಲಂಘನೆ ನಡೆದಿತ್ತು.
ಸರ್ಕಾರಿ ಸೇವೆಯ ಅಧಿಕಾರಿಗಳು ರಚಿಸುವ ಸ್ಮರಣ ಗ್ರಂಥಗಳು ಹೆಚ್ಚಾಗಿ ' ನಾನು ' ಎಂಬ ಅಹಂಭಾವದಿಂದಲೇ ತುಂಬಿರುತ್ತವೆ. ತಮ್ಮ ತಪ್ಪುಗಳನ್ನು ಸಮರ್ಥಿಸುವಲ್ಲಿ ಉತ್ಸುಕತೆ ಎದ್ದು ಕಾಣುತ್ತದೆ. ಆದರೆ, ಜಾವಿದ್ ಚೌಧರಿ ಅವರ ಕೃತಿ (ದ ಇನ್‌ಸೈಡರ್ಸ್ ವ್ಯೂ- ಪೆಂಗ್ವಿನ್) ಈ ಮಾತಿಗೆ ಹೊರತಾದುದು. ತಾವು ಹೊಂದಿದ್ದ ಹುದ್ದೆಗಳು, ಅಧಿಕಾರದ ಬಗ್ಗೆ ಅವರು ಚರ್ಚಿಸುತ್ತಾರೆ ನಿಜ. ಆದರೆ, ಅದೆಲ್ಲವೂ ಆಡಳಿತದ ಬಗ್ಗೆ ತಾವು ಪ್ರಸ್ತುತಪಡಿಸುವ ದೃಷ್ಟಿಕೋನವನ್ನು ವಿಶದಪಡಿಸುವುದಕ್ಕಾಗಿ ಎಂಬುದು ಸ್ಪಷ್ಟ. ಅಲ್ಲಿ ವಿಸ್ತೃತ ವಿಚಾರ, ಚಿಂತನೆಗಳಿವೆ, ವಿಶ್ಲೇಷಣೆಯ ಪ್ರಯತ್ನವೂ ಇದೆ. ಹೀಗಾಗಿ ಅವರು ಓದುಗರ ವಿಶ್ವಾಸವನ್ನು ಗೆದ್ದುಕೊಳ್ಳುತ್ತಾರೆ.
ತಮ್ಮ ಮೆಚ್ಚಿನ ಸರ್ಕಾರಿ ಸೇವಕರನ್ನು ಅವರು ಆದರಪೂರ್ವಕ ಸ್ಮರಿಸಿಕೊಳ್ಳುತ್ತಾರೆ. “ ವರ್ಕಿಂಗ್ ಕಲೆಕ್ಟರ್ ’ ಎಂದೇ ಖ್ಯಾತರಾದ ಅನುಭವಿ ಹೆಡ್‌ಕ್ಲರ್ಕ್ ಆತ್ಮಾರಾಮ್ ಭಾಯ್ ಅವರಿಂದ ಹಿಡಿದು ಪ್ರಾಮಾಣಿಕತೆಗೆ ಹೆಸರಾದ ಎಂ.ಜಿ. ಪಿಂಪುತ್ಕರ್ ವರೆಗೆ ಹಲವರನ್ನು ಗೌರವದಿಂದ ನೆನಪಿಸಿಕೊಳ್ಳುತ್ತಾರೆ. ಆದರೆ, ಉನ್ನತ ಮಟ್ಟದ ಕೆಲ ಅಧಿಕಾರಿಗಳ ಪ್ರವೃತ್ತಿಯನ್ನು ಕಟುವಾಗಿ ಟೀಕಿಸಲೂ ಅವರು ಮರೆಯುವುದಿಲ್ಲ. ನಿವೃತ್ತಿ ಬಳಿಕದ ಲಾಭದಾಯಕ ಸ್ಥಾನಕ್ಕಾಗಿ ಕಂಪನಿ ಪ್ರಮುಖರನ್ನು ಓಲೈಸಲು ಪ್ರಯತ್ನಿಸುವ ಅಧಿಕಾರಿಗಳ ಬಗ್ಗೆ ಅಸಹನೆ ತೋರ್ಪಡಿಸುತ್ತಾರೆ. ತನಿಖೆಯಲ್ಲಿರುವ ಪ್ರಕರಣಗಳ ಸಂಬಂಧ ನ್ಯಾಯಯುತ ಹಾಗೂ ನೈತಿಕ ಸಹಕಾರ ನೀಡದ ಲಾಬಿಗಾರರನ್ನು ದೂಷಿಸುತ್ತಾರೆ. ಇಂಥ ಲಾಬಿಗಾರರ ಲಂಚ ವ್ಯವಹಾರದ ಬಗ್ಗೆಯೂ ಪ್ರಸ್ತಾಪಿಸುತ್ತಾರೆ.
ತಮ್ಮ ಉನ್ನತ ಹುದ್ದೆಯಿಂದ ತಾವು ಕಂಡುಕೊಂಡ ಒಳನೋಟಗಳನ್ನು ಚೌಧರಿ ಓದುಗರ ಜತೆ ಹಂಚಿಕೊಳ್ಳುತ್ತಾರೆ. ಕುಪ್ರಸಿದ್ಧ ಜೈನ್ ಹವಾಲಾ ಪ್ರಕರಣದಲ್ಲಿ, 62 ರಾಜಕಾರಣಿಗಳು ಮತ್ತು 18 ಸರ್ಕಾರಿ ನೌಕರರು ನಿಯಮಿತವಾಗಿ ಹವಾಲಾ ಹಣ ಪಡೆಯುತ್ತಿದ್ದುದು ಬೆಳಕಿಗೆ ಬಂದಿತ್ತು. ಕೊಡು-ಕೊಳ್ಳು ಆಧಾರದಲ್ಲಿ ಹೇಳುವುದಾದರೆ ಇದು “ÄM^Ú’ ಆಗಿರಲಿಲ್ಲ. ಏಕೆಂದರೆ, ಹಣ ಪಡೆದವರಲ್ಲಿ ಅನೇಕರು ಆ ಅವಧಿಯಲ್ಲಿ ಅಧಿಕಾರ ಸ್ಥಾನದಲ್ಲಿ ಇರಲಿಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಆ ವ್ಯವಹಾರಗಳಲ್ಲಿ ಹೊರನೋಟಕ್ಕೆ ಭ್ರಷ್ಟಾಚಾರ ಕಂಡುಬರುತ್ತಿರಲಿಲ್ಲ. ಆದರೆ, ಅಲ್ಲಿ ವಿದೇಶಿ ವಿನಿಮಯ ಕಾನೂನುಗಳ ಗಂಭೀರ ಉಲ್ಲಂಘನೆ ನಡೆದಿತ್ತು.
ಹಾಗಿದ್ದರೂ ಭ್ರಷ್ಟಾಚಾರ ತಡೆ ಕಾಯಿದೆಯಡಿ ಸಿಬಿಐ ಇಂಥ ಪ್ರಕರಣಗಳ ವಿಚಾರಣೆ ನಡೆಸಿತ್ತು ಮತ್ತು “A ಕೇಸುಗಳನ್ನು ಕೋರ್ಟ್ ಹೊಸಿಲಿನಲ್ಲೇ P}æ¡Ñæ¦}Úß¡’. ಬಹಳಷ್ಟು ಕಠಿಣವಾಗಿರುವ ವಿದೇಶಿ ವಿನಿಮಯ ನಿಯಂತ್ರಣ ಕಾಯಿದೆ(ಫೆರಾ)ಯ ನಿಯಮಾವಳಿಗಳನ್ನು ಚೌಧರಿ ಉಲ್ಲೇಖಿಸುತ್ತಾರೆ. ಫೆರಾ ಅನ್ವಯ ವಿಚಾರಣೆ ನಡೆದಿರುತ್ತಿದ್ದರೆ ತಕ್ಷಣದ ಫಲಿತಾಂಶ ದೊರೆಯುತ್ತಿತ್ತು ಎಂದು ಒತ್ತಿ ಹೇಳುತ್ತಾರೆ. ಹಾಗಾದರೆ, ಸಿಬಿಐ ಹಾಗೇಕೆ ಮಾಡಲಿಲ್ಲ? ನಿಜಕ್ಕೂ ಉತ್ತಮ ಪ್ರಶ್ನೆಯೇ.
ಈ ಪ್ರಶ್ನೆಯ ಹಿನ್ನೆಲೆಯಲ್ಲಿ, ಭಾರತ- ಅಮೆರಿಕ ನಡುವಣ ರುಪಾಯಿ- ರೂಬಲ್ ವ್ಯಾಪಾರ ಒಪ್ಪಂದದತ್ತ ಗಮನ ಹರಿಸಬೇಕಾಗುತ್ತದೆ. ಈ ಒಪ್ಪಂದವು ಭಾರತದ ಇತಿಹಾಸದಲ್ಲೇ ಏಕೈಕ ಕಾರ್ಯವಿಧಾನವನ್ನು ಬಳಸಿ ನಡೆಸಿದ ಭಾರಿ ಮೊತ್ತದ ವಿದೇಶಿ ವಿನಿಮಯ ಹಗರಣ ಎಂಬುದು ನಮ್ಮಲ್ಲಿ ಎಷ್ಟೋ ಮಂದಿಗೆ ತಿಳಿದಿರಲಾರದು. ಈ ಹಗರಣವು ಕೇವಲ ಒಂದು ವರ್ಷದಲ್ಲಿ ದೇಶದಿಂದ 40 ದಶಲಕ್ಷ ಡಾಲರ್(218 ಕೋಟಿ ರು.) ಕೊಚ್ಚಿಹೋಗುವುದಕ್ಕೆ ಅವಕಾಶ ಮಾಡಿಕೊಟ್ಟಿತು.
ರುಪಾಯಿ ಲೆಕ್ಕದಲ್ಲಿ ಭಾರತವು ರಷ್ಯಾದಿಂದ ರಕ್ಷಣಾ ಸಾಧನಗಳನ್ನು ಆಮದು ಮಾಡಿಕೊಂಡಿತು. ಆದರೆ, ಈ ವ್ಯವಹಾರ ನಡೆದಿದ್ದು ಮನಬಂದಂತೆ ನಿಗದಿಪಡಿಸಿದ ವಿನಿಮಯ ದರದಲ್ಲಿ. ಇದರಿಂದ ಎರಡೂ ರಾಷ್ಟ್ರಗಳ ಅಧಿಕಾರಿಗಳಿಗೆ ಭಾರಿ ಲಾಭವಾಯಿತು. ಹಾಗೆಯೇ ರಷ್ಯಾ ಸರ್ಕಾರ ಮತ್ತು ದಲ್ಲಾಳಿಗಳಿಗೆ ಕೂಡಾ. ನಷ್ಟವಾಗಿದ್ದು ಭಾರತೀಯರಿಗೆ, ದೇಶದ ಪ್ರಜೆಗಳಿಗೆ ಮಾತ್ರ.
ಆ ದಿನಗಳಲ್ಲಿ ಜಾರಿ ನಿರ್ದೇಶನಾಲಯದ ನಿರ್ದೇಶಕರಾಗಿದ್ದ ಚೌಧರಿ ದಗಾಕೋರರನ್ನು ದೂರವಿರಿಸಲು ಸರಳ ಉಪಾಯವೊಂದನ್ನು ಮುಂದಿಟ್ಟರು. ರಾಜಸ್ವ ಇಲಾಖೆಯಿಂದ ತಕ್ಷಣ ಉತ್ತರವೇನೋ ಬಂತು. ಆದರೆ, ಅದು ಚೌಧರಿಯ ಸಲಹೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಮೋಸದ ವ್ಯವಹಾರದಲ್ಲಿ ಉನ್ನತ ಅಧಿಕಾರಿಗಳು ಕೂಡ ಆಸಕ್ತಿ ವಹಿಸಿದ್ದುದು ಇದರಿಂದ ಸ್ಪಷ್ಟ.
ಒಂದಷ್ಟು ಸಂಕೋಚದಿಂದಲೇ ಚೌಧರಿ ಅವರು ರುಪಾಯಿ- ರೂಬಲ್ ಒಪ್ಪಂದ ನಡೆದ ಅವಧಿಯನ್ನು ಸ್ಮರಿಸುತ್ತಾರೆ. ಹಣಕಾಸು ಕ್ಷೇತ್ರದಲ್ಲಿ ಮನಮೋಹನ್ ಸಿಂಗ್ ಅವರು ವಿವಿಧ ಹುದ್ದೆಗಳನ್ನು ವಹಿಸಿದ್ದ- ಆರ್ಥಿಕ ವ್ಯವಹಾರ ಇಲಾಖೆ ಕಾರ್ಯದರ್ಶಿ ಸ್ಥಾನದಿಂದ ಹಣಕಾಸು ಕಾರ್ಯದರ್ಶಿ, ಕೊನೆಗೆ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲೇ ಒಪ್ಪಂದದ ಬಗ್ಗೆ ಚರ್ಚೆ ನಡೆದದ್ದು, ಅನೇಕ ಬಾರಿ ಒಪ್ಪಂದದ ಪರಿಷ್ಕರಣೆ ನಡೆದದ್ದು. ಹಗರಣದ ಸ್ವರೂಪ ಮತ್ತು ವ್ಯಾಪ್ತಿಯು ಉನ್ನತ ವ್ಯಕ್ತಿಗಳಿಗೆ ಮಾತ್ರ ತಿಳಿದಿತ್ತು ಎಂಬುದನ್ನು ಬಿಟ್ಟರೆ ಇನ್ನೇನನ್ನೂ ವಿವರಿಸಹೋಗುವುದಿಲ್ಲ ಚೌಧರಿ.
ಜಾವಿದ್ ಚೌಧರಿ ಒಬ್ಬ ಗುಜರಾತಿ. ಹಾಗಾಗಿ ನರೇಂದ್ರ ಮೋದಿಯವರ ಚಿಂತನೆಗಳು ಮತ್ತು ಕಾರ್ಯಗಳನ್ನೂ ಅವರು ಪ್ರಸ್ತಾಪಿಸುತ್ತಾರೆ. ಸತ್ಯನಿಷ್ಠೆಗೆ ಬದ್ಧರಾಗಿ ತಮಗೆ ತಿಳಿದಿರುವ ವಿಚಾರಗಳನ್ನು ವಿವರಿಸುತ್ತಾರೆ. ಅಲ್ಲಿ “ ಅಮೂಲ್ಯ ಹರಳು ’VÚ×Úà ದೊರೆಯುತ್ತವೆ. 2002ರ ಗಲಭೆಯ ಸಮಯದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದರು ಚೌಧರಿ. “ ಶಾ ಆಲಂ ಪರಿಹಾರ ಕೇಂದ್ರ ’ ಕ್ಕೆ ಭೇಟಿ ನೀಡಲು ಕೇಂದ್ರ ಆರೋಗ್ಯ ಸಚಿವರಿಗೆ ಮೋದಿ ಅವಕಾಶ ನೀಡಲಿಲ್ಲವಂತೆ. ಪರಿಹಾರ ಕೇಂದ್ರಕ್ಕೆ ಭೇಟಿ ನೀಡುವುದಾಗಿ ಕೇಂದ್ರ ಸಚಿವರು ಹಟ ಹಿಡಿದರೆ ಕಾರಿನಿಂದ ಹೊರಜಿಗಿಯುವುದಾಗಿ ರಾಜ್ಯದ ಆರೋಗ್ಯ ಸಚಿವರು ಬೆದರಿಕೆ ಹಾಕಿದರಂತೆ.
ಗುಜರಾತಿ ರಾಜಕೀಯದಲ್ಲಿನ ಜಾತಿ ಇತಿಹಾಸದ ಸಂಕ್ಷಿಪ್ತ ಚಿತ್ರಣವನ್ನೂ ನೀಡುತ್ತಾರೆ ಚೌಧರಿ. ನರೇಂದ್ರ ಭಾಯಿಯವರು ಇತರ ಹಿಂದುಳಿದ ವರ್ಗದ ಉಪ ಜಾತಿಯೊಂದಕ್ಕೆ ಸೇರಿದವರು. ಅಧಿಕಾರ ವ್ಯವಸ್ಥೆಯಿಂದ ದೂರದಲ್ಲೇ ಇಡಲಾಗಿದ್ದ ಜಾತಿಯದು. ಮೇಲ್ಜಾತಿ ಪರವಾದ ಬಿಜೆಪಿಯಲ್ಲಿ ಅವರ ಉನ್ನತಿಯು ವಿಚಿತ್ರವಾದ ಬದಲಾವಣೆಯೇ ಸರಿ ಎನ್ನುತ್ತಾರೆ ಚೌಧರಿ. ನೀತಿಗೆ ಸಂಬಂಧಿಸಿದ ಅಶಕ್ತತೆಗಾಗಿ ಮೋದಿಯಲ್ಲಿ ದೋಷ ಕಾಣುತ್ತಾರೆ.
ಆದರೆ ಅವರ ಮುಖ್ಯವಾದ ಟೀಕೆಯೆಂದರೆ, ಸಾರ್ವಜನಿಕ ಆಡಳಿತ ಶಾಸ್ತ್ರದ ವಿಚಾರದಲ್ಲಿ ಮೋದಿಯಲ್ಲಿ ಅರಿವಿನ ಕೊರತೆಯಿದೆ, ಚಿಂತನೆಯ ಕೊರತೆಯಿದೆ ಎಂಬುದು. ಮೋದಿಯವರ ಕೇಂದ್ರೀಕೃತ ಆಡಳಿತ ಮಾದರಿಯು ಗುಜರಾತ್ ಅನ್ನು ಆಡಳಿತ ಸಂಬಂಧಿ ಪಾಳುಭೂಮಿಯನ್ನಾಗಿ ಪರಿವರ್ತಿಸೀತು ಎಂಬ ಆತಂಕ ವ್ಯಕ್ತಪಡಿಸುತ್ತಾರೆ ಅವರು. ಚುನಾವಣೆ ಅಬ್ಬರದ ಈ ವರ್ಷದಲ್ಲಿ, ಇದನ್ನೆಲ್ಲ ಯಾರು ತಾನೇ ಆಲಿಸುತ್ತಾರೆ?
-ಟಿಜೆಎಸ್ ಜಾರ್ಜ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

