hmmm... ಪಾಂಚ್
ವೀರೇಂದ್ರ ಸೆಹ್ವಾಗ್
ಟ ಸೆಹ್ವಾಗ್ ಅಂದ್ರೆ ಇಡೀ ಆಪೋಸಿಟ್ ಟೀಮ್ ಹೊಡೆಯೋವಷ್ಟು ರನ್‌ಗಳನ್ನು ಒಬ್ರೇ ಹೊಡೆಯುವಂಥವ್ರು, ಅಂಥದ್ರಲ್ಲಿ ನಿಮ್ಮನ್ನೇ ಟೀಮ್‌ನಿಂದ ಸಾಗಹಾಕಿಬಿಟ್ರಲ್ಲ?
ಏನ್ ಮಾಡೋದು, 'ದೋಣಿ' ಹೊಳೆ ದಾಟಿದ ಮೇಲೆ ಅಂಬಿಗ ಯಾರಿಗೆ ಬೇಕು ಅಲ್ವಾ?
ಟಿ ನೀವೂ ಕೂಡಾ ಇತ್ತೀಚೆಗೆ ರನ್ನೇ ಹೊಡೀತಿಲ್ಲವಲ್ಲ, ಹೌ ಈಸ್ ದಟ್?
ಹೌದ್ರೀ, ಅದ್ ಹಂಗೆನೇ, ಸಚಿನ್ ಒಂದ್ ಸೆಂಚುರಿ ಹೊಡೆದ್ರೆ ನೂರು ಸೆಂಚುರಿ ಹೊಡೆದಂಗೆ, ನಾವು ಒಂದ್ ಫ್ಲಾಪ್ ಆದ್ರೆ ನೂರು ಫ್ಲಾಪ್ ಆದಂಗೆ, ಊಪರ್ ಕಟ್!
ಟಿ ಸೂಪರ್ ಕಟ್... ನಿಮಗಂತೂ ಬ್ಯಾಟಿನ ತುದಿಯಲ್ಲೇ ಕೋಪ ಇರುತ್ತಪ್ಪ. ಹೋಗ್ಲಿ, ನಿಮ್ಮನ್ನ, ಬ್ಯಾಟಿಂಗ್ ಮಾಡುವಾಗ, ಚೀಪ್ ಆಗಿ ಔಟ್ ಆಗ್ತೀರ ಅಂತ ಟೀಮಿಂದ ಔಟ್ ಮಾಡಿದ್ರಾ ಅಥವಾ ಫೀಲ್ಡಿಂಗ್ ಮಾಡುವಾಗ, ಕ್ಯಾಚ್ ಡ್ರಾಪ್ ಮಾಡ್ತೀರಾ ಅಂತ ಡ್ರಾಪ್ ಮಾಡಿದ್ರಾ?
ಬ್ಯಾಟಿಂಗೋ, ಫೀಲ್ಡಿಂಗೋ, ಅದ್ಯಾಕೋ ಇತ್ತೀಚೆಗೆ ಹಗಲೊತ್ತಲ್ಲಿ ಕನ್ನಡಕ ಹಾಕ್ಕೊಂಡು ಹುಡುಕಿದ್ರೂ ಬಾಲೇ ಕಾಣ್ಸಲ್ಲ ಕಣ್ರೀ.
ಟಿ ಟೀಮ್‌ನಲ್ಲಿ ನೀವು ಗಂಭೀರ್ ಇಬ್ರೂ ಪಾಪ ಅಣ್ಣ ತಮ್ಮನಂಗೆ ಇದ್ರಿ, ಈಗ ಇಬ್ರನ್ನೂ ಮನೆಯಿಂದ ಹೊರಗೆ ಹಾಕ್‌ಬಿಟ್ರಲ್ಲಾ?
ಇರಲಿ, ಹೆಂಗಿದ್ರೂ ಇಬ್ರೂ ಟೀಮ್‌ನಿಂದ ಔಟ್ ಆಗಿದೀವಿ, ಒಂದ್ ಔಟಿಂಗ್ ಹೋಗಿ ಒಂದ್ ಸಿನಿಮಾ ಪ್ಲ್ಯಾನ್ ಮಾಡ್ತೀವಿ, 'ದಂಗೆ ಎದ್ದ ಮಕ್ಕಳು' ಅಂತ.
ಟಿ ಅದ್ಸರಿ ಸೆಹ್ವಾಗ್ ಅವ್ರೇ, ಒಂದು ಸೆಂಚುರಿ ಆಗ್‌ಬೇಕು ಅಂದ್ರೆ ಎಷ್ಟು ರನ್ ಹೊಡೀಬೇಕು?
ಏನ್ ಕಿಂಡಲ್ಲಾ? ಸಿನಿಮಾ ಜರ್ನಲಿಸ್ಟ್‌ಗಳು ಸಿನಿಮಾ ನೋಡ್ಕೊಂಡ್ ಇರಬೇಕು, ಅದ್ ಬಿಟ್ಟು ಸ್ಪೋರ್ಟ್ಸ್ ವಿಷ್ಯದಲ್ ಯಾಕ್ರೀ ತಲೆಹಾಕ್ತೀರಾ, ಹೋಗ್ರೀ..ಹೋಗ್ರೀ...
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ಭಾಷಾನುವಾದ ಎಂಬುದು ಇಂದಿನ ಅತಿ ಜನಪ್ರಿಯ ಪ್ರೀಲಾನ್ಸ್ ಕೆಲಸಗಳಲ್ಲೊಂದು. ಇತರ ಕೆಲಸಗಳಿಗೆ ಹೋಲಿಸಿದರೆ ಇದರಲ್ಲಿ ಒಳ್ಳೆಯ ಹಣವೂ ಸಿಗುತ್ತದೆ. ಆದರೆ ಇದಕ್ಕೆ ನೀವು ಹಲವು ಭಾಷೆಗಳನ್ನು ಕಲಿತಿರಬೇಕು ಅಷ್ಟೆ. ಆದರೆ ಭಾಷೆಗಳು ಗೊತ್ತಿದ್ದರೂ ಕೂಡ ಒಮ್ಮೊಮ್ಮೆ ಭಾಷಾಂತರ ಮಾಡುವುದು ಕಷ್ಟದ ಕೆಲಸವಾಗಬಹುದು. ಹಾಗಾಗಿ ಅದಕ್ಕೊಂದಿಷ್ಟು ತಾಂತ್ರಿಕ ವಿಷಯಗಳ ಅರಿವಿದ್ದರೆ ಚೆನ್ನ. ಇಲ್ಲಿ ಅಂಥ ಕೆಲವು ಟಿಪ್ಸ್‌ಗಳಿವೆ, ನೋಡಿ.
http://bit.ly/VTo4EP
http://bit.ly/16gtr3Q
http://bit.ly/I4maVA
http://bit.ly/13N6yWq
http://bit.ly/Oe6BzJ
ಹರಿ-ಕಥೆ
ಒಬ್ಬ ಸಾಹುಕಾರನ ಮಗಳು ಏನೇ ಆಗಲಿ, ನಾನು ಒಬ್ಬ ಸರ್ದಾರ್ಜಿಯನ್ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿದು ಕೂತಳು. ಸಾಹುಕಾರ ಹೇಳುವಷ್ಟು ಹೇಳಿದ, ಮಗಳು ಕೇಳಲಿಲ್ಲ, ಕೊನೆಗೆ ತನ್ನ ಮಗನನ್ನು ಕರೆದು 'ನೋಡಪ್ಪಾ ನಿನ್ನ ತಂಗಿ ಸರ್ದಾರ್ಜಿಯನ್ನೇ ಮದುವೆಯಾಗಬೇಕಂತೆ, ಏನಾದ್ರೂ ಮಾಡಿ ಒಬ್ಬ ಒಳ್ಳೆ ಸರ್ದಾರ್ಜಿಯನ್ನು ಹುಡುಕ್ಕೊಂಡ್ ಬಾ' ಎಂದು ಹೇಳಿದ. ಈ ವಿಷಯ ಊರಿನ ತುಂಬಾ ಹಬ್ಬಿತು. ಊರಲ್ಲಿರೋ ಎಲ್ಲಾ ಹ್ಯಾಂಡ್‌ಸಮ್ ಸದಾರ್ಜಿಗಳು ವೇಷ ಮರೆಸಿಕೊಂಡು ಓಡಾಡಲಾರಂಭಿಸಿದರು. ಯಾಕಂದ್ರೆ ಆ ಸಾಹುಕಾರನ ಮಗಳು ನೋಡೋಕೆ ಅಷ್ಟು ಕೆಟ್ಟದಾಗಿದ್ಳು. ಕೊನೆಗೂ ಒಂದು ತಿಂಗಳ ನಂತರ ಸಾಹುಕಾರನ ಮಗ ಒಬ್ಬ ಯಂಗ್ ಸರ್ದಾರ್ಜಿಯನ್ನು ಕರೆದುಕೊಂಡು ಬಂದ. ಮಗನ ಯಶಸ್ವೀ ಕಾರ್ಯಾಚರಣೆ ನೋಡಿ ಖುಷಿಯಾದ ಸಾಹುಕಾರ ಕೇಳಿದ 'ಊರಲ್ಲಿ ಸರ್ದಾರ್ಜಿಗಳು ಸಿಗೋದೇ ಕಷ್ಟ ಆಗಿಬಿಟ್ಟಿದೆ, ಇವನು ಹೆಂಗೆ ಸಿಕ್ಕ?' ಅದಕ್ಕೆ ಮಗ ಹೇಳಿದ 'ಏನಿಲ್ಲ ಅಪ್ಪಾ, ಊರಲ್ಲಿ, ಒಂದಷ್ಟು ಜನ ಸೇರಿದ್ರು, ಆದ್ರೆ ಯಾರು ಸರ್ದಾರ್ಜಿ ಅಂತ ಗುರುತೇ ಸಿಗುತ್ತಿರಲಿಲ್ಲ. ಹಾಗಾಗಿ ಅವರೆಲ್ಲರನ್ನೂ ಸೇರಿಸಿ ಮಾತಾಡ್ತಾ ಇದ್ದೆ. ಮಾತಿನ ನಡುವೆ 'ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಪಂಜಾಬ್ ತುಂಬಾ ಹಿಂದುಳಿದಿದೆ. ಹಾಗಾಗಿ, ನಾವು ಅಮೆರಿಕಾದ ಮೇಲೆ ದಂಡೆತ್ತಿ ಹೋಗಿ ಯುದ್ಧ ಮಾಡೋಣ, ಅದರಲ್ಲಿ ನಾವು ಸೋಲುತ್ತೇವೆ, ಆಗ ಅವರು ನಮ್ಮ ರಾಜ್ಯವನ್ನು ವಶಪಡಿಸಿಕೊಳ ್ಳುತ್ತಾರೆ. ಅವರದ್ದು ಮುಂದುವರಿದ ದೇಶವಾದ್ದರಿಂದ ನಮ್ಮನ್ನು ವಶಪಡಿಸಿಕೊಂಡ ನಂತರ ನಮ್ಮದೂ ಮುಂದುವರಿದ ರಾಜ್ಯ ಆಗುತ್ತದೆ' ಎಂದು ಹೇಳಿದೆ. ಆಗ ಎಲ್ಲರೂ 'ಇದು ಒಳ್ಳೆಯ ಐಡಿಯಾ' ಅಂದ್ರು. ಇವನೊಬ್ಬ ಮಾತ್ರ ಸುಮ್ಮನೇ ಕೂತಿದ್ದ. ಹೋಗಿ 'ಏನ್ ಯೋಚನೆ ಮಾಡ್ತಿದೀಯಾ, ಐಡಿಯಾ ಚೆನ್ನಾಗಿಲ್ವಾ?' ಅಂತ ಕೇಳ್ದೆ. ಅದಕ್ಕೆ ಇವನು ಹೇಳ್ದ 'ಐಡಿಯಾ ಏನೋ ಚೆನ್ನಾಗಿದೆ, ಆದ್ರೆ ಒಂದು ವೇಳೆ ಯುದ್ಧದಲ್ಲಿ ನಾವೇ ಗೆದ್ದುಬಿಟ್ರೆ ಏನು ಮಾಡೋದು'. ಇಮ್ಮೀಡಿಯೆಟ್ಟಾಗಿ ಇವನನ್ನು ಎತ್ತಾಕ್ಕೊಂಡ್ ಬಂದೆ'.
ಸ್ಯಾಂಡಲ್‌ವುಡ್
'ಸಿಂಪಲ್ಲಾಗ್ ಹೇಳ್ತೀನ್ ಕೇಳೆ ನೀನಂದ್ರೆ ಇಷ್ಟಾನೆ' ಎಂಬ 'ರೋಮಿಯೋ' ಚಿತ್ರದ ಹಾಡನ್ನು ತೆಗೆದುಕೊಂಡು ಎರಡು ಭಾಗ ಮಾಡಿದಂತೆ ಈ ವಾರ ಎರಡು ಸಿನಿಮಾಗಳು ಬಿಡುಗಡೆಯಾಗಿವೆ. ಒಂದು 'ಸಿಂಪಲ್ಲಾಗೊಂದ್ ಲವ್‌ಸ್ಟೋರಿ', ಇನ್ನೊಂದು 'ನೀನಂದ್ರೆ ಇಷ್ಟಕಣೋ'. ಈ ಪೈಕಿ 'ರ್ಯಾಂಬೋ' ಚಿತ್ರದಿಂದ ನಾಯಕನಾಗಿ ಶರಣ್ ಗಳಿಸಿದ ಯಶಸ್ಸನ್ನು ನಂಬಿಕೊಂಡೇ ಬಿಡುಗಡೆಯಾದಂತಿರುವ ಚಿತ್ರ 'ನೀನಂದ್ರೆ ಇಷ್ಟಕಣೋ'. ಹಾಸ್ಯನಟನಾಗಿದ್ದ ಕಾಲದಲ್ಲಿ ಪೋಸ್ಟರ್‌ಗಳ ಮೂಲೆಯಲ್ಲಿ 'ಸಣ್ಣತಲೆ'ಗೆ ಸೀಮಿತವಾಗಿದ್ದ ಶರಣ್ ಈಗ ದೊಡ್ಡ ತಲೆ ಎನಿಸಿಕೊಂಡಿರುವುದರಿಂದಲೋ ಏನೋ ಈ ಚಿತ್ರದ ಪೋಸ್ಟರ್‌ಗಳಲ್ಲಿ ಅವರು ಮಿಂಚುತ್ತಿದ್ದಾರೆ. ಆದರೆ ಅರೆಬರೆ ಬಟ್ಟೆಯಲ್ಲಿ ಕಾಣಿಸುವ ಅವರ ಚಿತ್ರ ಅವರಿಗೆ ಎಷ್ಟು ಖುಷಿ ತಂದಿದೆಯೋ ಗೊತ್ತಿಲ್ಲ. ಒಂದು ಲೆಕ್ಕದಲ್ಲಿ ಯಾವುದೋ ಕಾಲದಲ್ಲಿ ಒಪ್ಪಿಕೊಂಡ ಈ ಚಿತ್ರವನ್ನು ಅವರು ನನ್ನ ಚಿತ್ರ ಎಂದು ಹೆಮ್ಮೆಯಿಂದ ಒಪ್ಪಿಕೊಳ್ಳಲಿಕ್ಕಿಲ್ಲ. 'ರ್ಯಾಂಬೋ' ಚಿತ್ರದಿಂದ ಹೆಸರಿನ ಜೊತೆ, ಹಣವನ್ನೂ ಗಳಿಸಿದ್ದರೂ ಹಣಕಾಸಿನ ವಿಷಯದಲ್ಲೂ ಅವರು ಇನ್ನೂ ಅಷ್ಟು ದೊಡ್ಡ ತಲೆ ಎನಿಸಿಕೊಂಡಿಲ್ಲ. ಇಲ್ಲದಿದ್ದರೆ ಶರಣ್, ನಿರ್ಮಾಪಕರು ಕೇಳಿದಷ್ಟು ಹಣ ಕೊಟ್ಟು 'ಬಿಡುಗಡೆಯಾಗಲಾರೆ ಎಂದೂ' ಎಂಬಂತಿದ್ದ ಈ ಚಿತ್ರವನ್ನು ಖರೀದಿಸಿ ತಾವೇ ಇಟ್ಟುಕೊಳ್ಳುತ್ತಿದ್ದರು ಎಂಬುದು ಗಾಂಧಿನಗರದ ಕುಹಕ.
ಡಬ್ಕುಡಬಲ್ ತುದಾಂಡಲ್...
ಟೀಮ್ ಇಂಡಿಯಾದಿಂದ ಸೆಹ್ವಾಗ್ ಡ್ರಾಪ್.
- ಓಪನಿಂಗ್ ಬ್ಯಾಟ್ಸ್‌ಮನ್ ಕಥೆ ಕ್ಲೋಸ್.
- ಟೀಮ್ ಇಂಡಿಯಾಗೆ ಇನ್ನು ಮೇಲೆ ಡ್ರಿಂಕ್ಸ್ ಬ್ರೇಕ್‌ನಲ್ಲಿ ತುಂಬಾ ಕಷ್ಟ ಆಗುತ್ತೆ, ಯಾಕಂದ್ರೆ ಅವರತ್ರ
ಈಗ ಒಳ್ಳೆ ಓಪನರ್ ಇಲ್ಲ.
- ಇನ್ಮೇಲೆ ಒಬ್ಬ ಬ್ಯಾಟ್ಸ್‌ಮನ್‌ಗೆ 94ರಿಂದ 100 ರನ್ ತಲುಪೋಕೆ ಮಿನಿಮಮ್ ಆರು ಬಾಲು ಬೇಕೇ ಬೇಕು.
ಹೆಸರಿನ ಆರಂಭದಲ್ಲೇ ಸರ್‌ನೇಮ್ ಇರುವ ಕ್ರಿಕೆಟಿಗ ಯಾರು?
'ಸರ್' ಡೊನಾಲ್ಡ್ ಬ್ರಾಡ್‌ಮನ್
ಹಳೆಯ ಕಾಲದ ಸ್ವಯಂವರಗಳಿಗೆ ಪಡ್ಡೆಗಳು ಇಟ್ಟ ಮಾಡರ್ನ್ ಹೆಸರು
ಎಕ್ಸಿಬಿಷನ್ ಕಮ್ ಸೇಲ್
ಸಲ್ಮಾನ್ ಖಾನ್‌ರ 'ದಬಾಂಗ್' ಸಿನಿಮಾ ಕನ್ನಡಕ್ಕೆ ರಿಮೇಕ್ ಆದರೆ ಅದಕ್ಕೊಂದು ಅಡಿಬರಹ
ಏ 'ಚುಲ್‌ಬುಲ್' ಮಾತಾಡಕಿಲ್ವಾ?
ಅಂದು
ಪ್ರಧಾನಿ ಮನಮೋಹನ್‌ಸಿಂಗ್ ಅವರದ್ದು ಕಾಲ್ಪನಿಕ ಸಂದರ್ಶನ ಮಾತ್ರ ಮಾಡೋಕೆ ಸಾಧ್ಯ.
ಯಾಕಂದ್ರೆ ಅವರು ಮಾತಾಡೋದೇ ಇಲ್ಲವಲ್ಲ.
ಇಂದು
ಮನಮೋಹನ್‌ಸಿಂಗ್ ಅವರನ್ನು ಅವರ ತಾಯಿ, ಬೇಬಿ ಸಿಟ್ಟಿಂಗ್‌ಗೆ ಸೇರಿಸಬೇಕು ಅಂತ ಡಿಸೈಡ್ ಮಾಡಿದ್ದಾರೆ.
ಯಾಕಂದ್ರೆ, ಅವರೀಗ ಮಾತಾಡೋಕೆ ಶುರು ಮಾಡಿದ್ದಾರೆ.
ಹರಿ
harikannadaprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

