ಬ್ರಿಟನ್‌ಗೆ ಬುದ್ಧಿಕಲಿಸುವ ಗಟ್ಟಿತನ ನಮ್ಮ ನಾಯಕರಿಗೇಕಿಲ್ಲ?
ಮಾರ್ಗರೇಟ್ ಥ್ಯಾಚರ್, ಬ್ರಿಟನ್‌ನ ಹಾಲಿ ಪ್ರಧಾನಿ ಡೇವಿಡ್ ಕೆಮರೂನ್ ಕನಸಿನಲ್ಲೂ...
ಮಾರ್ಗರೇಟ್ ಥ್ಯಾಚರ್, ಬ್ರಿಟನ್‌ನ ಹಾಲಿ ಪ್ರಧಾನಿ ಡೇವಿಡ್ ಕೆಮರೂನ್ ಕನಸಿನಲ್ಲೂ ಯೋಚಿಸದಿರುವಷ್ಟರ ಮಟ್ಟಿಗೆ ಸಾಮ್ರಾಜ್ಯಶಾಹಿಯಾಗಿದ್ದರು. 1980 ದಶಕದಲ್ಲಿ ಇಂಗ್ಲೆಂಡಿನ ಈ ಉಕ್ಕಿನ ಮಹಿಳೆ ವಿದೇಶಿ ವಿದ್ಯಾರ್ಥಿಗಳ ಟ್ಯೂಷನ್ ಶುಲ್ಕವನ್ನು ಹೆಚ್ಚಿಸುವ ಮೂಲಕ ಸುಲಭವಾಗಿ ಹಣ ಕಲೆಹಾಕುವ ಕೆಲಸಕ್ಕೆ ಮುಂದಾದರು. ಬಹಳಷ್ಟು ರಾಷ್ಟ್ರಗಳು ಈ ನಿಯಮವನ್ನು ತಲೆಬಾಗಿ ಒಪ್ಪಿಕೊಂಡವಾದರೂ, ಮಲೇಷ್ಯಾಕ್ಕೆ ಮಾತ್ರ ಬ್ರಿಟನ್‌ನ ಈ ನಡೆ ಇಷ್ಟವಾಗಲಿಲ್ಲ.
ಮಲೇಷ್ಯಾ ಪ್ರಧಾನಿ ಮಹತಿರ್ ಮೊಹಮ್ಮದ್ ತಮ್ಮ ಶಾಂತಿಯುತ ಸ್ವಭಾವಕ್ಕೆ ಹೆಸರಾಗಿದ್ದರು. ಆದರೆ ಲಂಡನ್‌ನ ಉಕ್ಕಿನ ಮಹಿಳೆಗಿಂತಲೂ ಹೆಚ್ಚು ಬಲಿಷ್ಠವಾಗಿತ್ತು ಅವರ ಇಚ್ಛಾಶಕ್ತಿ. ವಿದೇಶೀ ವಿದ್ಯಾರ್ಥಿಗಳಿಂದ ಹೆಚ್ಚು ಹಣ ಕೀಳುವ ಮಾರ್ಗರೇಟ್‌ರ ಏಕಪಕ್ಷೀಯ ನಿರ್ಧಾರದಿಂದ ಅವರ ಕಣ್ಣು ಕೆಂಪಗಾಯಿತು. ಏಕೆಂದರೆ ಇಂಗ್ಲೆಂಡಿನಲ್ಲಿ ಆಗ ಸಾವಿರಾರು ಮಲೇಷ್ಯಾದ ವಿದ್ಯಾರ್ಥಿಗಳಿದ್ದರು. ಅವರಲ್ಲಿ ಬಹುತೇಕರು ಸರ್ಕಾರದ ವಿದ್ಯಾರ್ಥಿ ವೇತನದ ಮೇಲೆಯೇ ಅಲ್ಲಿಗೆ ಹೋಗಿದ್ದರು. ಹಾಗಾಗೆ ಇಂಗ್ಲೆಂಡಿನ ಈ ನಿಯಮದಿಂದ ಎಲ್ಲರಿಗಿಂತಲೂ ಹೆಚ್ಚಾಗಿ ಮಲೇಷ್ಯಾಗೆ ಹಾನಿಯಾಗುತ್ತಿತ್ತು.
ಮಹತಿರ್ ಬ್ರಿಟನ್‌ಗೆ ತಿರುಗೇಟು ನೀಡಿದರು. ಆ ಏಟು ಸರಿಯಾಗಿ ನೋವು ಕೊಡುವ ಜಾಗಕ್ಕೇ ಬಿದ್ದಿತ್ತು. ಮೊದಲ ಏಟು, 'ಇ್ಡಣ ಇ್ಠ್ಝಡ್ಝಿಝ ಔಛಡಡಿ' ಎಂಬ ನೀತಿಯ ಮೂಲಕ ಹೊರಬಿತ್ತು. ಮೊದಲಾದರೆ ಬ್ರಿಟಿಷರ ಸರಕುಗಳು ಯಾವುದೇ ತೊಂದರೆಯಿಲ್ಲದೆ ಮಲೇಷ್ಯಾದೊಳಗೆ ಸರಬರಾಜಾಗುತ್ತಿದ್ದವು. ಅದಕ್ಕೆ ಕಡಿವಾಣ ಹಾಕಿತು ಮಲೇಷ್ಯಾ. ಗಾಯಕ್ಕೆ ಬರೆ ಎಳೆದಂತೆ 'ಔ್ಟ್ಟ್ಞ ಊಛಡಡಿ' ಪಾಲಿಸಿಗೆ ಹೆಚ್ಚು ಒತ್ತು ಕೊಟ್ಟಿತು. ತ್ವರಿತವಾಗಿ ಬೆಳೆಯುತ್ತಿದ್ದ ಮಲೇಷ್ಯಾದ ಆರ್ಥಿಕತೆಗೆ ಅತಿದೊಡ್ಡ ಪೂರೈಕೆದಾರನಾಗಿ ಮತ್ತು ಮಾದರಿಯಾಗಿ ಜಪಾನ್ ಹೊರಹೊಮ್ಮಿತು. ಕಂಗೆಟ್ಟು ಹೋದ ಮಾರ್ಗರೇಟ್ ಥ್ಯಾಚರ್ ಕೌಲಾಲಂಪುರ್‌ಗೆ ದೌಡಾಯಿಸಿ, ಮಹಾತಿರ್ ಮೊಹಮ್ಮದ್ ಮುಂದೆ ಮಂಡಿಯೂರಿ ಕುಳಿತರು.
ಮಹಾತಿರ್, ಥ್ಯಾಚರ್‌ಗೆ ಉತ್ತಮ ಆತಿಥ್ಯ ನೀಡಿದರಾದರೂ, 'ನಮ್ಮ ದೇಶವನ್ನು ಕಡೆಗಣಿಸಿದರೆ ನಿಮಗೆ ಅಧೋಗತಿ ತಪ್ಪಿದ್ದಲ್ಲ' ಎನ್ನುವ ಸಂದೇಶವನ್ನು ಬ್ರಿಟನ್‌ಗೆ ಕಳುಹಿಸಿಕೊಟ್ಟರು. ಅದೇ ವರ್ಷ, ಅಂದರೆ 1985ರಲ್ಲಿ ಥ್ಯಾಚರ್ ಮತ್ತೊಮ್ಮೆ ಕೌಲಾಲಂಪುರ್‌ಗೆ ಭೇಟಿ ಕೊಟ್ಟರೆ, ಮಹಾತಿರ್ ಲಂಡನ್‌ಗೆ ತೆರಳಿ ಬ್ರಿಟಿಷ್ ಉದ್ಯಮ ಒಕ್ಕೂಟವನ್ನುದ್ದೇಶಿಸಿ ಮಾತನಾಡಿದರು. ಅವರು ಬ್ರಿಟಿಷರು ಒಳಗೊಳಗೆ ಮೆಚ್ಚುವಂತಹ ದ್ವಂದ್ವಾರ್ಥದ ಮಾತುಗಳನ್ನಾಡಿದರು:
'ನಮಗೆ ಸ್ವಾತಂತ್ರ್ಯ ದೊರೆತಾಗ, ನೀವು ಅನುಕೂಲಕರ ಸ್ಥಾನದಲ್ಲಿದ್ದಿರಿ. ಆದರೆ ನೀವು ಆ ಸ್ಥಾನದ ದುರ್ಲಾಭ ಮಾಡಿಕೊಳ್ಳಲಿಲ್ಲ ಎನ್ನುವ ಬಗ್ಗೆ ನಮಗೆ ವ್ಯಸನವಿದೆ! ಆದರೆ ಸ್ವಲ್ಪಮಟ್ಟಿಗೆ ತಪ್ಪು ನಮ್ಮದೇ ಆಗಿತ್ತು ಎನ್ನಬಹುದು. ನಾವು ನಿಮ್ಮನ್ನು ತುಂಬಾ ಎತ್ತರದಲ್ಲಿದ್ದೀರೆಂದು ಅಂದುಕೊಂಡೇ ನೋಡುತ್ತಿದ್ದೆವು. ಇದರಿಂದ ನೀವೇ ಗೊಂದಲಕ್ಕೊಳಗಾಗಿ, 'ನಿಜವಾದ ಸ್ಥಾನಕ್ಕಿಂತ ಇನ್ನಷ್ಟು ಎತ್ತರದಲ್ಲಿದ್ದೇವೆಂದು' ಭಾವಿಸತೊಡಗಿದಿರಿ. ಹಾಗಾಗೇ ನಿಮ್ಮಂಥ ಆಶ್ರಯದಾತರನ್ನು ಸರಿಮಾಡಲು ನಾವು ಈ ರೀತಿ ಕಠಿಣ ನಡೆಯನ್ನು ಅನುಸರಿಸಬೇಕಾಯಿತು. ಮಲೇಷ್ಯಾ ಬ್ರಿಟನ್‌ನ ಜೊತೆ ಸಮಾನ ಸ್ಥಾನದಲ್ಲಿಲ್ಲವಾದರೂ, ನಮ್ಮಂತಹ ಯುವ ರಾಷ್ಟ್ರಗಳು ಸಮಾನತೆಯನ್ನು ಗಂಭೀರವಾಗಿ ಪರಿಗಣಿಸುತ್ತವೆ!' ಎಂದರು.
ಮಲೇಷ್ಯಾದಂತೆ ಭಾರತವೂ ಕೂಡ ಯುವ ರಾಷ್ಟ್ರವೇ. ಆದರೆ ಬ್ರಿಟನ್‌ನಲ್ಲಿನ ನಮ್ಮ ಹೂಡಿಕೆಯನ್ನು ಪರಿಗಣಿಸಿದಾಗ, ನಾವು ಕೂಡ ಅವರೊಂದಿಗೆ ಸಮಾನ ಸ್ಥಾನದಲ್ಲಿದ್ದೇವೆ ಎನ್ನುವುದು ಅರ್ಥವಾಗುತ್ತದೆ. ಆದರೆ ಭಾರತದಲ್ಲಿರುವ ನಾಯಕತ್ವ 'ಸಮಾನತೆಯನ್ನು' ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ವಿಸಾಗೆ ಅರ್ಜಿ ಹಾಕುವ ಅಭ್ಯರ್ಥಿಗಳು 3000 ಸಾವಿರ ಯೂರೋ(2.75 ಲಕ್ಷ ರುಪಾಯಿ) ನಗದು ಬಾಂಡ್ ನೀಡಬೇಕೆಂದು ಬ್ರಿಟನ್ ಹೇಳಿದಾಗ, ನಮ್ಮ ದೇಶ ಆ ಕುರಿತು ಸ್ಪಷ್ಟನೆಯನ್ನೂ ಕೇಳು ಗೊಜಿಗೆ ಹೋಗಲಿಲ್ಲ. ಸ್ಪಷ್ಟನೆಗಳು ಅಲ್ಲಿಂದ ಬಂದವಾದರೂ ಅವು ಕೇವಲ ನೆಪಗಳಷ್ಟೇ ಎನ್ನುವುದು ಮೇಲ್ನೋಟಕ್ಕೆ ತಿಳಿದುಹೋಗುತ್ತಿತ್ತು. ಸತ್ಯವೇನೆಂದರೆ ಭಾರತವನ್ನು 'ಹೈ ರಿಸ್ಕ್' ದೇಶವೆಂದೂ, ಅದು ಇಂಗ್ಲೆಂಡಿನ ತಾಳಕ್ಕೆ ತಕ್ಕಂತೆ ಕುಣಿಯುತ್ತದೆಂದೂ ಬಿಂಬಿಸಲಾಗುತ್ತಿದೆ.
ಆದರೆ, ಭಾರತವನ್ನು 'ಹೈ ಸ್ಪೆಂಡಿಂಗ್'(ಹೆಚ್ಚು ಖರ್ಚು ಮಾಡುವ) ರಾಷ್ಟ್ರವೆನ್ನುವುದು ಒಳಿತು. ಇಂಗ್ಲೆಂಡ್‌ನಲ್ಲಿನ ಪ್ರಾಮಾಣಿಕ ಭಾರತೀಯ ಪ್ರವಾಸಿಗರು ತಲಾ 793 ಯೂರೊ ಖರ್ಚು ಮಾಡಿದರೆ, ಅಮೆರಿಕದವರು 710 ಯೂರೋ ವ್ಯಯಿಸುತ್ತಾರೆ. ಕಳೆದೊಂದು ದಶಕದಲ್ಲಿ ಇಂಗ್ಲೆಂಡಿಗೆ ಭೇಟಿ ನೀಡುವ ಭಾರತೀಯರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ವ್ಯಾಪಾರಿ ರಾಷ್ಟ್ರ ಇಂಗ್ಲೆಂಡಿಗೆ ಇದರಿಂದ ಎಷ್ಟು ಲಾಭವಾಗುತ್ತಿದೆಯೋ ಲೆಕ್ಕ ಹಾಕಿ?
ಇದರೊಟ್ಟಿಗೆ ಭಾರತೀಯ ಚಿತ್ರ ನಿರ್ಮಾಪಕರು ಲೊಕೇಷನ್ ಶೂಟಿಂಗ್ ಎಂದು ಅಲ್ಲಿ ಹರಿಸುತ್ತಿರುವ ಹಣವೇನು ಕಡಿಮೆಯೇ? ಆದರೂ ಕೂಡ 'ನಗದು ಬಾಂಡ್' ಕೊಡಬೇಕು ಎಂದು ಇಂಗ್ಲೆಂಡ್ ಹೇಳುತ್ತಿದೆ. ನಿಸ್ಸಂಶಯವಾಗಿಯೂ ಈ ನಿಯಮ ಅದನ್ನು ಮೆತ್ತಗೆ ಮಾಡಲಿದೆ.
ಎಲ್ಲದಕ್ಕಿಂತ ಹೆಚ್ಚಾಗಿ ಭಾರತ ಗಮನಿಸಬೇಕಾದದ್ದು 'ನೀತಿ'ಯ ಹೆಸರಲ್ಲಿ ಅವರು ನಮಗೆ ಮಾಡುತ್ತಿರುವ ಅಪಮಾನದತ್ತ. ಭಾರತದ ಮಧ್ಯಮ ವರ್ಗ, ಬಂಡವಾಳ ಹೂಡಿಕೆದಾರರು, ಸಿನೆಮಾ ನಟರು ಮತ್ತು ಲೇಖಕರುಗಳಿಂದಲೇ ಬ್ರಿಟನ್ ಇಂದು 'ಗ್ರೇಟ್' ಎಂದು ಕರೆಸಿಕೊಳ್ಳುತ್ತಿದೆಯಷ್ಟೆ. ಆ ದೇಶದಲ್ಲೂ ಸಾವಿರಾರು ಸಮಸ್ಯೆಗಳಿವೆ. ಆದರೆ ಅವರು ಭಾರತದಲ್ಲೇ ಹುಳುಕು ಹುಡುಕುತ್ತಾರೆ. ನಮ್ಮ ದೇಶವನ್ನು ಅಸಮರ್ಪಕವಾಗಿ ಕೆಲಸ ನಿರ್ವಹಿಸುವ ಉಳಿದ ದೇಶಗಳಂತೆಯೇ ಬಿಂಬಿಸಲಾಗುತ್ತಿದೆ.
ಆದರೆ ಅಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿರುವ ರಾಷ್ಟ್ರಗಳು ಅಸಹಾಯಕವಾಗಿವೆ. ಆದರೆ ಭಾರತ ಅಸಹಾಯಕವಲ್ಲ. ಪ್ರವಾಸಿಗರು ಮತ್ತು ವಿದ್ಯಾರ್ಥಿಗಳು ಬೇರೆ ದೇಶಗಳಿಗೆ ಹೋಗುವ ಮೂಲಕ ಬ್ರಿಟನ್‌ಗೆ ಬುದ್ಧಿ ಕಲಿಸಲಿದ್ದಾರೆ. ಅದಾಗಲೇ ಬ್ರಿಟನ್‌ನಲ್ಲಿನ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 25 ಪ್ರತಿಶತ ಕುಸಿದಿದೆ. ಭಾರತವೂ ಈ ಏಟಿಗೆ ಎದುರೇಟು ನೀಡಬಲ್ಲದು. ಅದು ಮಾಡಬೇಕಾದದ್ದು ಇಷ್ಟೇ- ಇಂಡಿಯಾದ ವೀಸಾ ಬಯಸುವ ಬ್ರಿಟನ್ ನಾಗರಿಕರ ಮೇಲೂ ಕ್ಯಾಶ್ ಬಾಂಡ್ ಹೇರಬೇಕು. ಅಥವಾ ಮಲೇಷ್ಯಾದಂತೆ 'ಇ್ಡಣ ಇ್ಠ್ಝಡ್ಝಿಝ ಔಛಡಡಿ' ಎನ್ನುವ ತಂತ್ರವನ್ನು ಅನುಸರಿಸಬೇಕು. ಇದೆಲ್ಲ ಸಾಧ್ಯವಾಗಬೇಕಾದರೆ ಬೆನ್ನೆಲುಬಿರುವ ನಾಯಕತ್ವ ಬೇಕು. ಅದು ನಮ್ಮಲ್ಲಿದೆಯೇ? ಬಹುಶಃ ದೆಹಲಿಗೆ ಎದ್ದುನಿಂತು ಎದುರೇಟು ನೀಡುವ ಶಕ್ತಿ ಇಲ್ಲ ಎನ್ನುವುದು ಬ್ರಿಟನ್‌ಗೂ ಗೊತ್ತಿದೆಯೇನೋ?!
-ಟಿ.ಜೆ.ಎಸ್.ಜಾರ್ಜ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

