ಅಂಕಣಗಳು

ಅಕ್ಕಿ ತಿನ್ನಕ್ಕೆ ಬಾ ಅಂತ ಆನೆಗೆ ಪೋನಾಕಿದ್ರಂತೆ

'ಮೈಕೋ ಲಾರಿ ಈವತ್ತು ಪೇಪ್ರು ನೋಡ್ದ. ಅಲ್ಲೆಲ್ಲೋ ಆನೆ ಮನೆಗೆ ನುಗ್ಬುಟ್ಟು ...

Published On :

'ಮೈಕೋ ಲಾರಿ ಈವತ್ತು ಪೇಪ್ರು ನೋಡ್ದ. ಅಲ್ಲೆಲ್ಲೋ ಆನೆ ಮನೆಗೆ ನುಗ್ಬುಟ್ಟು ಇಪ್ಪತ್ತೈದು ಕೆಜಿ ಅಕ್ಕಿ ತಿಂದಾಕ್ಬುಡ್ತಂತೆ. ಆನೆಗ್ಳು ಹಿಂಗೂ ಇರ್ತವೇನ್ಲ ?' ಅಂತೇಳಿ ಅಮಾಸೆ ಕೇಳ್ದ.
'ಲೇ ಪೆಕರ, ಸಿಯೆಮ್ಮು ಸಿದ್ರಾಮಣ್ಣ ಅನ್ನಭಾಗ್ಯ ಸ್ಕೀಮು ತಕ್ಕಂಡು ಬಂದವ್ರೆ. ರೇಸನ್ ಕಾರ್ಡ್ಗೆ ಮೂವತ್ತು ಕೆಜಿ ಅಕ್ಕಿ ಕೊಡ್ತರಂತೆ. ಈ ವಿಚಾರ ಆನೆಗ್ಳುಗೆ ಗೊತ್ತಾಗದೆ. ಹೆಂಗೂ ಮನ್ಯಾಗೆ ಆಕ್ಕಿ ಸ್ಟಾಕು ಮಡಿಗಿರ್ತರೆ ಅಂತೇಳಿ ನುಗ್ಗವೆ ಬುಡ್ಲಾ' ಅಂದ ಮೈಲಾರಿ. 'ಅಲ್ಲ ಆನೆಗ್ಳುಗೆ ಹೆಂಗಲಾ ತಿಳೀತು ಅನ್ನಭಾಗ್ಯ ಸ್ಕೀಮು ಬಂದದೆ ಅಂತ ?' ಅಂದ ಅಮಾಸೆ.
'ಹೂ ಕಣಪ್ಪ, ಕಾಡು ಮಂತ್ರಿ ರಮಾನಾಥ ರೈ ಸಾಹೇಬ್ರು ಪೋನಾಕಿ ಯೋಳಿದ್ರಂತೆ. ಎಸ್ಸೆಮ್ಮೆಸ್ಸೂ ಬುಟ್ಟಿದ್ರಂತೆ. ಅದುಕ್ಕೆ ಆನೆಗ್ಳು ವೋಡೋಡಿ ಬಂದ್ವಂತೆ. ಮುಚ್ಕಂಡು ವೋಗಲೆ, ಹೆಂಗೋ ಬಂದ್ವು, ತಿಂದ್ವು ವೋದ್ವು' ಅಂತೇಳಿ ಮೈಲಾರಿ ಬೈದ್ಬುಟ್ಟು ವೊಂಟ.
ಆ ಕಡೆಯಿಂದ ಮಂತ್ರಿ ಸಿವ್ರಾಜು ತಂಗಡಗಿ ಮಖ ಸಪ್ಗೆ ಮಾಡ್ಕಂಡು ಬತ್ತಾಯಿದ್ರು. 'ಯಾಕೆ ಸಿವನೇ, ಹಿಂಗಾಗ್ಬುಟ್ರಿ. ವೊಳ್ಳೇ ಗನ್ನಾಗಿರೋ ಬುಲೆಟ್ಟು ಥರ ಇದ್ರಿ. ಅಲ್ಲ ಅದೇನೋ ಮನೆ ಕಟ್ಟಕ್ಕೋಗಿ ಮೈಮೇಲೆ ಕೆಡವುಕಂಡ್ರಿ ಅಂತ ಸುದ್ದಿ ಬಂತು. ದಿಟ್ವಾ ?' ಅಂತ ಮೈಲಾರಿ ಕೇಳ್ದ.
'ವೂ ಕಣಲೇ, ಹಂಗೇ ಆಬುಟ್ಟದೆ ನನ್ ಪೊಜಿಸನ್ನು. ನನ್ ತಮ್ಮ ಮನೆ ಕಟ್ಟುಸ್ತಾವ್ನೆ. ಆದ್ರೆ ಎಲ್ಲಾರೂ ಸೇರ್ಕಂಡು ನನ್ನುನ್ನ ಮನೆಗೆ ಕಳ್ಸಕ್ಕೆ ಸ್ಕೆಚ್ಚು ಹಾಕ್ಕಂಬುಟ್ಟವ್ರೆ. ಯಾಕಾದ್ರೂವೆ ಮಂತ್ರಿ ಆಬುಟ್ನೋ ಅಂತ ಅನ್ಸದೆ ಕಣ್ಲಾ' ಅಂತೇಳಿ ಸಿವ್ರಾಜು ಕಣ್ಣೀರಾಕ್ಕಂಬುಟ್ರು.
'ವಸಿ ಸಮಾಧಾನ ತಕ್ಕಳಿ, ರಾಜ್ಕೀಯ ಅಂದ್ರೆ ಹಿಂಗೇಯಾ. ಅಲ್ಲ, ನಿಮ್ಮುನ್ನ ಮನೆಗೆ ಕಳ್ಸಕ್ಕೆ ಸ್ಕೆಚ್ಚು ಹಾಕ್ತಾಯಿರೋರು ಯಾರು ಅದಾದ್ರೂವೆ ಯೋಳಿ' ಅಂದ ಮೈಲಾರಿ. 'ಇನ್ಯಾರ್ಲಾ ಅವ್ರೆ, ಆ ರಾಯರೆಡ್ಡಿ ಸುಮ್ಕೆ ಕಡ್ಡಿ ಆಡುಸ್ತಾವ್ರೆ' ಅಂದ್ರು ಸಿವ್ರಾಜು. 'ವೋಗ್ಲಿ ಬುಡಿ ಇನ್ಮೇಕೆ ಮನೆ ಕಟ್ಟಕ್ಕೆ ವೋಗ್ಬೇಡಿ' ಅಂತ ಅಡ್ವೈಜು ಮಾಡಿ ಮೈಲಾರಿ ವೊಂಟ.
ಯಾಕೋ ಏನೋ ಹೊರೆ ಹೊತ್ತಿರೋ ಲೇಡೀಸು ಪಕ್ಸದ ಲೀಡ್ರು ರೇವಣ್ಣೋರು ಸ್ಯಾನೆ ಅರ್ಜೆಂಟ್ನಾಗೆ ವೋಯ್ತಾಯಿದ್ರು. 'ಸಾ, ಇದ್ಯಾಕೆ ಹಿಂಗೆ ವೋಡ್ತಾಯಿದ್ದೀರ. ಈ ಪಾಟಿ ಅವುಸರ ಯಾಕೆ?'ಅಂತ ಮೈಲಾರಿ ಕೇಳ್ದ.
'ಸಿಯೆಮ್ಮು ಸಿದ್ರಾಮಣ್ಣ ಬಜೆಟ್ಟು ಮಡುಗ್ತರೆ ಅಶೆಂಬ್ಲಿವೊಳ್ಗೆ. 'ಅದುಕ್ಕೆ ವೋಬೇಕು ತಡೀಲಾ' ಅಂದ್ರು ರೇವಣ್ಣ. 'ವತ್ತಾರೆ 11 ಗಂಟೆಗೆ ಬಜೆಟ್ಟು ಅಂದಿದ್ರು. ಆಮ್ಯಾಲೆ 12.30 ಮಾಡ್ಬುಟ್ಟವ್ರೆ ಅಲ್ವಾ ?' ಅಂದ ಮೈಲಾರಿ. 'ನಾನೇ ಯೋಳಿದ್ದು ಕಣ್ಲಾ, ರಾಹುಕಾಲ್ದಾಗೆ ನೀವು ಬಜೆಟ್ಟು ಮಾಡುದ್ರೆ ನಾನು ಅಶೆಂಬ್ಲಿಗೆ ಬರೋದು ಹೆಂಗೆ ? ರಾಹುಕಾಲ ಕಳುದ್ಮೇಲೆನೇ ನಾನು ಮನೆಯಿಂದ ಆಚೆ ಕಾಲು ಮಡ್ಗಾದು ಅಂತ. ರೇವಣ್ಣ ನೀನು ನಂಗೆ ಬೇಕಾದೋನು. ಟೇಮು ಚೇಂಜು ಮಾಡ್ತೀನಿ ಬುಡು ಅಂದ್ರು. ಹಂಗೆ ಮಾಡವ್ರೆ ಕಣ್ಲಾ. ಅದುಕ್ಕೆ ವೋಯ್ತಾಯಿದ್ದೀನಿ' ಅಂತೇಳಿ ರೇವಣ್ಣ ರೊಯ್ ಅಂತ ವೊಂಟ್ರು.
ಆಮ್ಯಾಲೆ ಆಪೋಜಿಸನ್ ಲೀಡ್ರು ಕುಮಾರಣ್ಣೋರೂವೆ ಬಂದ್ರು. 'ಅಣ್ಣಾ ನೀವೂ ಯಾಕಣ್ಣೋ ಲೇಟು' ಅಂತ ಮೈಲಾರಿ ಕೇಳ್ದ. 'ಅಕ್ಕಿ ತಕ್ಕಂಡು ಬರಕ್ಕೆ ವೋಗಿದ್ದೆ ಕಣ್ಲಾ' ಅಂದ್ರು ಕುಮಾರಣ್ಣ. 'ಅನ್ನಭಾಗ್ಯ ಅಕ್ಕಿ ತರಕ್ಕೆ ವೋಗಿದ್ರಾ ? ಅದು ರೇಸನ್ ಕಾರ್ಡು ಇರೋರ್ಗೆ ಕೊಡಾದು ಕಣಣ್ಣೋ. ಆ ಅಕ್ಕಿ ಯಾಕೆ ಬೇಕು ನಿಮ್ಗೆ ?' ಅಂತ ಮೈಲಾರಿ ಕೇಳ್ದ.
'ವುಳಗಿಳ ಐತೇನೋ ಅಂತ ನೋಡೋದು ಬ್ಯಾಡ್ವ ? ಅಲ್ಲ, ಬರೇ ಅಕ್ಕಿ ಕೊಟ್ರೆ ಹೆಂಗೆ, ಸಾರು ಮಾಡಕ್ಕೆ ತರ್ಕಾರಿ, ವಾರುಕ್ಕೆ ಒಂದಪ ಚಿಕನ್ನು, ಮಟನ್ನು ಕೊಡಾದು ಯಾರು. ಈ ಜನ್ರುಗೆ ಬುದ್ಧಿ ಇಲ್ಲ. ನಮ್ ಪಕ್ಸಾವ ಏನರ ಅಧಿಕಾರುಕ್ಕೆ ತಂದಿದ್ರೇ...' ಅಂದ್ರು ಕುಮಾರಣ್ಣ.  'ಏನಣ್ಣ ಮಾಡ್ತಾಯಿದ್ರಿ ?' ಅಂತ ಮೈಲಾರಿ ಕೇಳ್ದ. 'ಬರೇ ಅಕ್ಕಿ ಕೊಟ್ರೆ ಅನ್ನ ಮಾಡಕ್ಕೆ ಗ್ಯಾಸು, ಕರೆಂಟು ಖರ್ಚು ಆಯ್ತದೆ. ಅದುಕ್ಕೆ ಎಲ್ಲಾರ್ಗೂವೆ ದಿನಾಗ್ಲು ಬೆಳಗ್ಗೆ ಇಡ್ಲಿ-ವಡೆ, ಮಧ್ಯಾನ ಬಿರ್ಯಾನಿ, ರಾತ್ರಿ ಪುಳಿಯೋಗರೆ, ಚಿತ್ರಾನ್ನ ಪಾರ್ಸಲ್ಲು ಕೊಡಂಗೆ ಯವಸ್ಥೆ ಮಾಡ್ಬುಡ್ತಾಯಿದ್ದೆ' ಅಂದ್ರು ಕುಮಾರಣ್ಣ. ಮೈಲಾರಿ ಆವಾಗ ಪುಲ್ ಖುಸಿ ಆಗೋದ. 'ಮುಂದಿನ್ಕಿತ ನಿಮ್ದೆ ಸರ್ಕಾರ ಬುಡಣ್ಣೋ' ಅಂತೇಳಿ ಕೂಕ್ಕಂಡು ವೋಡೋದ.

 ಕೆ.ವಿ.ಪ್ರಭಾಕರ್
prabhukolar@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.