ಅಂಕಣಗಳು

Hmmm...ಪಾಂಚ್ -ಶಿವರಾಜ್‌ಕುಮಾರ್

ನಿಮ್ಮ ಸಿನಿಮಾದ ಟ್ರೈಲರ್ ನೋಡ್ತಾ ಇದ್ದೆ, ನೀವೇ ಸಿಕ್‌ಬಿಟ್ರಿ, ನಿಮ್ಮ ಸಿನಿಮಾಕ್ಕೆ '100 ದಿನ' ಆಯಸ್ಸು ಬಿಡಿ. ಅದ್ಸರಿ ಈ ವಯಸ್ಸಲ್ಲೂ ಹಿಂಗ್ ಕುಣಿತೀರಲ್ಲ ನೀವು, ಅದ್ ಹೆಂಗೆ?
ವಯಸ್ಸು 50 ವರ್ಷ ಆಗಿ, ಅರ್ಧಭಾಗ ಆಯಸ್ಸು ಕಳೆದ್ರೂ, ನನ್ನ 'ಕಾಲು'ಭಾಗ ಮಾತ್ರ 100 ಪರ್ಸೆಂಟ್
ಚೆನ್ನಾಗಿದೆ

 ಅಂದಹಾಗೆ, ನೀವು ರಿಮೇಕ್ ಸಿನಿಮಾ ಮಾಡೋದನ್ನ ನಿಲ್ಲಿಸಿದ್ದು ಯಾಕೆ?
'ಇನ್ನೊಬ್ರು ಮಾಡಿದ್ದುಣ್ಣೋ ಮಹಾರಾಯ' ಅನ್ನೋ ಮಾತಲ್ಲಿ ನಂಗೆ 100 ಪರ್ಸೆಂಟ್ ನಂಬಿಕೆ ಇಲ್ಲ, ಅದಕ್ಕೆ!
 ಹಾಗಾದ್ರೆ, ನಿಮಗೆ 100 ಪರ್ಸೆಂಟ್ ನಂಬಿಕೆ ಇರೋ ಒಂದು ಗಾದೆ ಮಾತು ಯಾವುದು?
ಕುಣಿಯಲಾರದವನು ನೆಲ ಡೊಂಕು ಅಂದ್ನಂತೆ!
 ನೀವು ಸೆಂಚುರಿ ಪೂರೈಸಿದಾಗ ಸಚಿನ್ ತೆಂಡೂಲ್ಕರ್ ಥರಾ ಬ್ಯಾಟ್ ಎತ್ತಿ ಆಕಾಶ ನೋಡಿದ್ರಾ?
100 ಪರ್ಸೆಂಟ್ ಇಲ್ಲ, ಜೋಗಯ್ಯನ ಸ್ಟೈಲ್‌ನಲ್ಲಿ ಲಾಂಗ್ ಎತ್ತಿ, ವಿಲನ್‌ಗಳಿಗೆ ಕೈಲಾಸ ತೋರಿಸಿದೆ!
 ಸರಿ, ಅದೇನು, ನೀವು ಎಲ್ಲಾ ಪ್ರಶ್ನೆಗಳಿಗೂ '100 ಪರ್ಸೆಂಟ್‌' ಅಂತ ಸೇರಿಸಿಯೇ ಉತ್ತರ ಕೊಡ್ತೀರಲ್ಲ ಯಾಕೆ, ನೀವು ಸೆಂಚುರಿ ಸ್ಟಾರ್ ಅಂತನಾ?
100 ಪರ್ಸೆಂಟ್ ಹೌದು, ಎಷ್ಟೇ ಆದ್ರೂ ನಾನು ಗಾಜ100 ಗಂಡು. ಅದಕ್ಕೆ!
(ಕಾಲ್ಪನಿಕ ಸಂದರ್ಶನ )
ಒಮ್ಮೆ ಭೇಟಿ ಕೊಡಿ
Your education can take u a distanceಎಂಬ ಕಾರಣಕ್ಕೋ ಏನೋ, ಈಗೀಗ ಡಿಸ್ಟೆನ್ಸ್ ಎಜ್ಯುಕೇಷನ್ ಹೆಚ್ಚು ಜನಪ್ರಿಯವಾಗುತ್ತಿದೆ. ಒಂದು ಡಿಗ್ರಿ ಮಾಡಿದವರೂ ಕೂಡಾ ಅದರ ಜೊತೆಗೆ ಇನ್ನೊಂದಿರಲಿ ಎನ್ನುತ್ತಿದ್ದಾರೆ. ಎಲ್‌ಎಲ್‌ಬಿ, ಜರ್ನಲಿಸಂನಂಥ ವಿಭಾಗಗಳತ್ತ ಈಗಾಗಲೇ ಬೇರೆ ಪದವಿ ಹೊಂದಿದವರೂ ಗಮನಹರಿಸುತ್ತಿದ್ದಾರೆ. ಇಲ್ಲಿ ಜರ್ನಲಿಸಂನ ಕರಸ್ಪಾಂಡೆನ್ಸ್ ಅಥವಾ ಡಿಸ್ಟೆನ್ಸ್ ಎಜ್ಯುಕೇಷನ್‌ನಲ್ಲಿ ಆಸಕ್ತಿ ಇದ್ದವರಿಗೆ, ಎಲ್ಲೆಲ್ಲಿ ಯಾವ ಕಾಲೇಜುಗಳಲ್ಲಿ ಈ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ಒಂದಿಷ್ಟು  ವಿವರಗಳಿವೆ.
http://bit.ly/XObtlo
http://bit.ly/WywdfL
http://bit.ly/12QOJAL
http://bit.ly/12TEq39
http://bit.ly/ZhJUUu
ಹರಿ-ಕಥೆ
ತನ್ನ ಪಾಸಿಟಿವ್ ಥಿಂಕಿಂಗ್ ಪವರ್‌ನ ಫಲವಾಗಿ, ಕಳೆದ ವಾರ ತಮ್ಮ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಖೇಮುವನ್ನು ಟೆರರಿಸ್ಟ್‌ಗಳು ಮುಗಿಸಬೇಕು ಎಂದು ನಿರ್ಧರಿಸಿದರು. ಆದರೆ ಸುಮ್ಮನೇ ಇವನೊಬ್ಬನನ್ನೇ ಮುಗಿಸುವುದು ಬೇಡ ಎಂದು ಯೋಚಿಸಿ ಅವನನ್ನು ತಮ್ಮ ಆತ್ಮಹತ್ಯಾ ದಳಕ್ಕೆ ನೇಮಿಸಿಕೊಂಡರು. ಅದರಂತೆಯೇ ಖೇಮುವನ್ನು ಕರೆದು 'ನೋಡು, ನಿನ್ನನ್ನು ಹೆಂಗಿದ್ರೂ ಸಾಯಿಸ್ತೀವಿ, ಆದರೆ ಒಂದು ವ್ಯತ್ಯಾಸ, ನಿನ್ನನ್ನು ಆತ್ಮಹತ್ಯಾ ದಳದ ಸದಸ್ಯನಾಗಿ ಮಾಡುತ್ತೇವೆ. ನೀನು ಹೋಗಿ ಆದಷ್ಟೂ ಹೆಚ್ಚು ಜನರಿರುವ ಜಾಗದಲ್ಲಿ ಆತ್ಯಹತ್ಯೆ ಮಾಡಿಕೊಳ್ಳಬೇಕು' ಎಂದು ತಾಕೀತು ಮಾಡಿದರು. ಅವನ ಮೈಗೆ ಬಾಂಬುಗಳಿರುವ ಜಾಕೆಟ್ ಕಟ್ಟಿ, ಜೊತೆಗೊಂದು ವಾಕಿ ಟಾಕಿ ಕೊಟ್ಟು ಕಳಿಸಿದರು. ಜನನಿಬಿಡ ಪ್ರದೇಶಕ್ಕೆ ಹೋದ ಖೇಮು ವಾಕಿ ಟಾಕಿಯಿಂದ ಕಾಲ್ ಮಾಡಿದ 'ಇಲ್ಲಿ ಹತ್ತು ಜನ ಇದಾರೆ, ಸೂಸೈಡ್ ಮಾಡಿಕೊಳ್ಳಲಾ?' ಆ ಕಡೆಯಿಂದ 'ಬೇಡ, ಇನ್ನಷ್ಟು ಜನ ಬರುವವರೆಗೂ waitಮಾಡು' ಎಂಬ ಸಂದೇಶ ಬಂತು. ಹತ್ತು ನಿಮಿಷದ ನಂತರ ಖೇಮು ಮತ್ತೆ ಕೇಳಿದ 'ಈಗ 25 ಜನ ಇದಾರೆ, ಸೂಸೈಡ್ ಮಾಡಿಕೊಳ್ಳಲಾ?' ಆಗಲೂ 'ಬೇಡ' ಎಂಬ ಉತ್ತರ ಬಂತು. 50, ಜನ ಆದ್ರು, ನೂರು ಜನ ಆದ್ರು.  ಖೇಮು ಮತ್ತೆ ಕಾಲ್ ಮಾಡಿದ 'ಈಗ ಸೂಸೈಡ್ ಮಾಡಿಕೊಳ್ಳಲಾ?' ಆ ಕಡೆಯಿಂದ ಈ ಬಾರಿ ಉತ್ತರ ಬಂತು 'ಹ್ಞೂ, ಇದೇ  ಸರಿಯಾದ ಸಮಯ, ಮಾಡ್ಕೊ'. ಮಾತು ಮುಗಿಸಿದವನೇ ಖೇಮು, ತನ್ನ ಜೇಬಿನಿಂದ ಒಂದು ಚಾಕು ತೆಗೆದು ತನ್ನ  ಹೊಟ್ಟೆಗೆ ಚುಚ್ಚಿಕೊಂಡ! ಖೇಮು ಏನೂ ಸಾಯಲಿಲ್ಲ, ಆದರೆ ಈ ವಿಷಯ ಕೇಳಿದ ಟೆರರಿಸ್ಟ್‌ಗಳು, ಹೋಲ್‌ಸೇಲ್ ಆಗಿ ಸೂಸೈಡ್ ಮಾಡಿಕೊಂಡರು!
ಸ್ಯಾಂಡಲ್‌ವುಡ್
'ಅಟ್ಟಹಾಸ' ಚಿತ್ರದಲ್ಲಿ ಡಾ.ರಾಜ್‌ಕುಮಾರ್ ಅವರ ಪಾತ್ರದಲ್ಲಿ ಬಾಲಿವುಡ್ ನಟ ಸುರೇಶ್ ಒಬೆರಾಯ್ ಕಾಣಿಸಿಕೊಂಡಿದ್ದಾರೆ. ರಾಜ್‌ಕುಮಾರ್ ಅವರ ಪಾತ್ರದಲ್ಲಿ ಅಭಿನಯಿಸುವುದು ಸುಲಭದ ಮಾತಲ್ಲ. ಅಲ್ಲದೆ ಕರ್ನಾಟಕದ ಎಲ್ಲ ಮಿಮಿಕ್ರಿ ಕಲಾವಿದರೂ ಮೊದಲು ಆಯ್ಕೆ ಮಾಡಿಕೊಳ್ಳುವುದು ರಾಜ್ ಅವರನ್ನೇ ಆದ ಕಾರಣ ಸಿನಿಮಾದಲ್ಲೂ ಅದು ಕೇವಲ ಮಿಮಿಕ್ರಿ ಎನಿಸುವ ಅಪಾಯವಿರುತ್ತದೆ.ಅಟ್ಟಹಾಸ ಚಿತ್ರದಲ್ಲೂ ಅದ್ಯಾಕೋ ಅಣ್ಣಾವ್ರ ಎಪಿಸೋಡ್ ಅಷ್ಟೊಂದು ಸೀರಿಯಸ್ ಎನಿಸುವುದಿಲ್ಲ. ಹಾಗಾಗಿ ಡಾ.ರಾಜ್‌ಕುಮಾರ್ ಅವರನ್ನು ಗಂಭೀರವಾಗಿ ಅನುಕರಿಸುವುದು ಸಾಧ್ಯವೇ ಇಲ್ಲ ಎನಿಸಬಹುದು. ಅಲ್ಲದೆ ಈ ಎಪಿಸೋಡ್ ಬಗ್ಗೆ ಏನೇನನ್ನೋ ನಿರೀಕ್ಷಿಸಿ ಬಂದ ಪ್ರೇಕ್ಷಕರಿಗೂ ನಿರಾಸೆ. ಒಂದು ದೃಶ್ಯದಲ್ಲಂತೂ ಅದು ಕಾಮಿಡಿ ಎಪಿಸೋಡ್ ಎನಿಸಿದರೂ ತಪ್ಪಿಲ್ಲ.
ಆದರೆ, ಸುರೇಶ್ ಒಬೆರಾಯ್, ರಾಜ್ ಪಾತ್ರಕ್ಕೆ ಮೋಸವನ್ನಂತೂ ಮಾಡಿಲ್ಲದಿದ್ದರೂ, ಅವರ ಅಭಿನಯದ ಬಗ್ಗೆ ಅಲ್ಲಲ್ಲಿ ಒಂದಿಷ್ಟು ಗೊಂದಲಗಳಿವೆ ಎನಿಸುತ್ತದೆ. ಒಂದು ದಿನ, 'ರಾಜ್ ಕುಮಾರ್ ಪಾತ್ರದಲ್ಲಿ ಸುರೇಶ್ ಒಬೆರಾಯ್ ಪರಕಾಯ ಪ್ರವೇಶ ಮಾಡಿದ್ದಾರೆ' ಎಂದುಕೊಂಡವರು, ಇನ್ನೊಂದು ದಿನ, 'ಅದೇನೋ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ' ಎಂದು ತಮ್ಮ ಅಭಿಪ್ರಾಯವನ್ನೇ ಬದಲಾಯಿಸಿಕೊಳ್ಳುವ ಮಟ್ಟಿಗೆ. ಯಾವುದೇ  ವಿಷಯದಲ್ಲೂ, 'ಡಿಫರೆನ್ಸ್ ಆಫ್ ಒಪೀನಿಯನ್ಸ್‌' ಎನ್ನುವುದು ಸಹಜ. ಆದರೆ ಈ 'difference in own opinions" ಮಾತ್ರ ಸ್ವಲ್ಪ ವಿಚಿತ್ರ.
ಡಬ್ಕುಡಬಲ್ ತುದಾಂಡಲ್...
ಒಂದು ಡರ್ಟಿ ಜೋಕ್
ಒಂದು ಬಿಳಿ ಕುದುರೆ 'ಕೆಸರಲ್ಲಿ ಜಾರಿ ಬಿತ್ತು'!

ಮಾರುತಿ ಢಜ್ಠಡಛ ತೆಗೆದುಕೊಂಡವರನ್ನು ಹೇಗೆ ಅಭಿನಂದಿಸಬೇಕು?
ಹೊಸ 'ವರ್ಸ'ದ ಹಾರ್ದಿಕ ಶುಭಾಷಯಗಳು

ರೈಲಿನಲ್ಲೇ ಹುಟ್ಟಿದ್ದ ಮಗುವಿನ ಬರ್ತ್‌ಡೇಗೆ ಏನೆಂದು ವಿಶ್ ಮಾಡಬೇಕು?
ಹ್ಯಾಪಿ 'ಬರ್ತ್‌' ಡೇ

ವ್ಯಾಲೆಂಟೈನ್ಸ್ ಡೇ ದಿನ ಒಬ್ಬ ಹುಡುಗ ಒಂದು ಹುಡುಗಿಗೆ ರೋಸ್ ಕೊಟ್ಟರೆ ಅದು - ಪ್ರೇಮಿಕುಲ 'ರೋಸು'
ಅದೇ, ಕಂಡ ಕಂಡ ಹುಡುಗಿಯರಿಗೆಲ್ಲ ರೋಸ್ ಕೊಟ್ಟರೆ ಅದು - 'ರೋಸ್‌'ಗಾರ್ ಯೋಜನೆ

ಎಂದೂ ಪ್ರೀತಿ ತೋರಿಸದ ಹೆಂಡತಿ ಇದ್ದಕ್ಕಿದ್ದಂತೆ ಒಂದು ದಿನ ಗಂಡನ ಮೊಬೈಲ್‌ಗೆ 'ಐ ಲವ್ ಯೂ' ಎಂದು ಮೆಸೇಜ್ ಕಳಿಸಿದರೆ ಬರಬಹುದಾದ ರಿಪ್ಲೈಗಳು
 ವಾಟ್?!
 ಏನು? ಮತ್ತೆ ಕಾರನ್ನ ಎಲ್ಲಾದ್ರೂ ಗುದ್ದಿಸಿದೆಯಾ?
 ಸುತ್ತಿ ಬಳಸಿ ಮಾತಾಡ್‌ಬೇಡ, ಸೀದಾ ಮ್ಯಾಟ್ರಿಗೆ ಬಾ. ಶಾಪಿಂಗ್‌ಗೆ ಎಷ್ಟು ದುಡ್ ಬೇಕಿತ್ತು?
 ನಿಜ ಹೇಳು, ಯಾರಿಗೆ ಕಳಿಸಬೇಕು ಅಂದ್ಕೊಂಡಿದ್ದ ಮೇಸೇಜ್ ಇದು?
 ನೀನೂ ಕುಡಿಯೋಕೆ ಶುರುಮಾಡಿಬಿಟ್ಯಾ?
 ಹೂ ಈಸ್ ದಿಸ್?

ಡಿಯರ್, ನಿನ್ನ ಜೀವನದಲ್ಲಿ ನೀನು ಪ್ರೀತಿಸಿದ ಮೊದಲನೇ ಹುಡುಗ ನಾನೇ ಅಲ್ವಾ?
ಖಂಡಿತಾ ಹೌದು ಡಾರ್ಲಿಂಗ್. ಆದ್ರೆ, ಎಲ್ಲಾ ಹುಡುಗರು ಯಾಕೆ ಇದೇ ಸಿಲ್ಲಿ ಪ್ರಶ್ನೆ ಕೇಳ್ತಾರೋ ಗೊತ್ತಾಗಲ್ಲ!

-   ಹರಿ
harikannadaprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.