ಜಾತ್ಯತೀತರ ಜಾಡ್ಯ ಬಯಲಾದಾಗ...
ವ್ಯಕ್ತಿಯೊಬ್ಬನಿಗೆ ಜಾತ್ಯತೀತತೆ ಎನ್ನುವ ಅಂಟುರೋಗ ತಗುಲಿಕೊಂಡಿತೆಂದರೆ ಮುಗಿದೇ ಹೋಯಿತು. ಅರೆ ಪ್ರಜ್ಞಾವಸ್ಥೆಯಲ್ಲಿ ಬಡಬಡಿಸುವಂತೆ ಬಾಯಿಗೆ ಬಂದದ್ದು ಒದರುತ್ತಾ ಹೋಗುತ್ತಾನೆ. ಆದರೆ ಅವರ ಬಾಯಲ್ಲಿ ಬರುವ ಅಸಂಬದ್ಧ ಪದಗಳೆಲ್ಲ ಯಾವುದಾದರೊಂದೇ ಕೋಮಿಗೆ ಮೀಸಲಾಗಿರುತ್ತವೆ ಎನ್ನುವುದೇ ವಿಶೇಷ. ಇತ್ತೀಚೆಗೆ ಕಾಂಗ್ರೆಸ್ನ ಚಿಂತನಾ ಶಿಬಿರದಲ್ಲಿ 'ಬಿಜೆಪಿ ಮತ್ತು ಆರ್ಎಸ್ಎಸ್ ಕೇಸರಿ ಭಯೋತ್ಪಾದಕರನ್ನು ಬೆಳಸುತ್ತಿವೆ ಎಂದು ಹಿಂದೆ ಮುಂದೆ ನೋಡದೆ ಅಂದ 'ಶಿಂದೆ' ಇದಕ್ಕೆ ಉತ್ತಮ ಉದಾಹರಣೆ. ಉಗ್ರವಾದದ ವಿಷಯ ಬಂದಾಗ "There is no colour to any terrorism,' ಎಂದು ವೇದಾಂತಿಗಳಂತೆ ಆಕಾಶ ನೋಡುವ ಜಾತ್ಯತೀತರಿಗೆ 'ಕೇಸರಿ' ಮಾತ್ರ ಮೊದಲಿನಿಂದಲೂ ಕ್ರಿಮಿನಲ್ ಬಣ್ಣದಂತೆಯೇ ಕಾಣಿಸುತ್ತಾ ಬಂದಿದೆ. ಜೊತೆಗೆ ಎಲ್ಲರಿಗೂ ಆ ಬಣ್ಣ ಹಾಗೆಯೇ ಕಾಣಲಿ ಎಂಬ ಉತ್ಕಟ ವಾಂಛೆ! ಬಹುಶಃ ಈ ಕಾರಣಕ್ಕೋ ಏನೋ, ಆ ಬಣ್ಣದ ಜೊತೆಗೆ ನಿಕಟ ಸಂಬಂಧ ಹೊಂದಿರುವ ಬಿಜೆಪಿ ಮತ್ತು ಆರ್ಎಸ್ಎಸ್ ಜಾತ್ಯತೀತ ಜಾಡ್ಯಗಳಿಗೆ ಉಗ್ರವಾದಿ ಸಂಘಟನೆಗಳಂತೆ ಕಾಣಿಸುವುದು.
ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾ ಸಲ್ಮಾನ್ ಖುರ್ಷಿದ್, 'ಶಿಂದೆ ಸರಿಯಾಗೇ ಹೇಳಿದ್ದಾರೆ. ಬಿಜೆಪಿ ಮತ್ತು ಆರ್ಎಸ್ಎಸ್ ಹಿಂದೂ ಉಗ್ರವಾದಿಗಳನ್ನು ಸೃಷ್ಟಿಸುತ್ತಿವೆ ಎನ್ನುವುದರ ಬಗ್ಗೆ ನಮ್ಮ ಬಳಿ ದಾಖಲೆಗಳಿವೆ' ಎಂದು ಹೇಳಿದರು. ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ 'ಭಾರತದಲ್ಲಿ ನಡೆದ ವಿವಿಧ ಸ್ಫೋಟಗಳಲ್ಲಿ ಭಾಗಿಯಾಗಿರುವ 10 ಜನರು ಆರ್ಎಸ್ಎಸ್ನೊಂದಿಗೆ ಒಂದಲ್ಲ ಒಂದು ರೀತಿಯ ಸಂಬಂಧ ಹೊಂದಿದ್ದಾರೆಂಬ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ' ಎಂದು ಇವರಿಬ್ಬರ ಹುಚ್ಚಾಟಕ್ಕೆ ಹೆಗಲು ಕೊಟ್ಟರು. ಆಗ ಮಂಗಗಳಂತಾಡುವ ಕೆಲ ಮಾಧ್ಯಮಗಳ ಕೈಗೆ ಮಾಣಿಕ್ಯ ಸಿಕ್ಕಂತಾಯಿತು. 'ಆರ್ಎಸ್ಎಸ್ ಭಯೋತ್ಪಾದಕರನ್ನು ಹುಟ್ಟುಹಾಕುತ್ತಿದೆಯೇ?' ಎಂದು ತಾವೇ ಪ್ರಶ್ನಿಸಿ, 'ಹೌದು' ಎನ್ನುವ ಧಾಟಿಯ ಉತ್ತರವನ್ನು ತಾವೇ ಕೊಟ್ಟುಕೊಂಡು ಕುಣಿದಾಡಿದವು.
ಅಂದು ಇದೇ ಧಾಟಿಯಲ್ಲೇ ಚರ್ಚೆ ನಡೆಸಿದ್ದ "CNN-IBN'' ವಿಶೇಷ ತನಿಖೆಯೊಂದನ್ನು ಕೈಗೊಂಡು 'ಆರ್ಎಸ್ಎಸ್ ನಾಯಕ ಇಂದ್ರೇಶ್ ಕುಮಾರ್ ಆರ್ಎಸ್ಎಸ್ನ ಭಯೋತ್ಪಾದನಾ ಕಿಂಗ್ಪಿನ್ ಆಗಿದ್ದರು ಎನ್ನುವುದರ ಬಗ್ಗೆ ಸೂಕ್ತ ದಾಖಲೆಗಳು ಇಲ್ಲವೇ ಇಲ್ಲ' ಎಂದು ಹೇಳಿದೆ. ಅಷ್ಟೇ ಅಲ್ಲದೆ 'ಭಯೋತ್ಪಾದನಾ ನಿಗ್ರಹ ದಳ (ATS), ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಕೇಂದ್ರೀಯ ತನಿಖಾ ದಳ(CBI)ಗಳ ದಾಖಲೆಗಳು ಒಂದಕ್ಕೊಂದು ಸಂಬಂಧವೇ ಇಲ್ಲದಂತಿವೆ. ಮಾಲೇಗಾಂವ್, ಮೆಕ್ಕಾ ಮಸೀದಿ, ಅಜ್ಮೇರ್ ಶರೀಫ್ ಮತ್ತು ಸಂಜೋತಾ ಎಕ್ಸ್ಪ್ರೆಸ್ ಸ್ಫೋಟದ ರೂವಾರಿಗಳ ಬಗೆಗಿನ ಅವುಗಳ ಹೇಳಿಕೆಗಳಲ್ಲಿ ಬಹಳಷ್ಟು ವ್ಯತ್ಯಾಸವಿದೆ' ಎಂದು ಹೇಳಿದೆ. ಜೊತೆಗೆ 'ಶಿಂದೆ ಸುಳ್ಳು ಹೇಳಿದರೇ' ಎಂಬ ಪ್ರಶ್ನೆಯನ್ನೂ ಎತ್ತಿದೆ!
ಶಿಂದೆ ಸುಳ್ಳು ಹೇಳಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಲು ತನಿಖೆ ಕೈಗೊಳ್ಳಬೇಕಾದ ಅವಶ್ಯಕತೆಯೇ ಇಲ್ಲ. ಭಾವೈಕ್ಯತೆಯ ಬುನಾದಿಯ ಮೇಲೆ ಬೆಳೆದು ಬಂದ ಆರ್ಎಸ್ಎಸ್ ಭಯೋತ್ಪಾದನೆಗೆ ಇಳಿಯುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ(ಜಾತ್ಯತೀತರೊಬ್ಬರನ್ನು ಬಿಟ್ಟು)!
ಕಾಂಗ್ರೆಸ್ ಭಯೋತ್ಪಾದನಾ ವಿರೋಧಿ ತಂಡ, ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಕೇಂದ್ರೀಯ ತನಿಖಾ ದಳಗಳನ್ನು ತನ್ನ tool ಗಳಂತೆ ಬಳಸಿಕೊಳ್ಳುತ್ತಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಹಾಗಾಗೆ ಅವುಗಳ ಹೆಸರನ್ನು ಹೇಳಿಕೊಂಡು ಶಿಂದೆ, ಖುರ್ಷಿದ್, ಆರ್ಕೆ ಸಿಂಗ್ರಂಥವರು ತಮ್ಮ ಬಳಿ foolproof evidence ಇದೆ ಎಂದು ಹೇಳಿಕೊಂಡು ತಮಟೆ ಬಾರಿಸಿದ್ದು. ಆದರೆ A fool with a tool is still a foolಎನ್ನುವುದು ಈಗ ಮತ್ತೊಮ್ಮೆ ಸಾಬೀತಾಗಿದೆ!
- ರಾಘವೇಂದ್ರ ಆಚಾರ್ಯ
raghu.bioastra@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

