ಅಭ್ಯರ್ಥಿ ಆಸ್ತಿ ಹೆಚ್ಚಾಗಿದ್ದು ಹೇಗೆಂದು ಮತ ನೀಡುವ ಮುಂಚೆ ಯೋಚಿಸಿ!
ಚುನಾವಣೆ ಸಂದರ್ಭದಲ್ಲಿ ಪಕ್ಷದ ಟಿಕೇಟ್ ಪಡೆಯುವುದಕ್ಕೆ ಆ ಪರಿಯ ಬೊಬ್ಬೆ ಏಳುವುದು ಏಕೆ ಎಂದು ನೀವು ಎಂದಾದರೂ ಆಶ್ಚರ್ಯಪಟ್ಟಿರುವಿರಾ? ಕರ್ನಾಟಕದಲ್ಲಿ ಮೇ 5ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಕ್ಕೆ ನಾನಾ ರಾಜಕೀಯ ಪಕ್ಷಗಳ ಕಚೇರಿಯ ಹೊರಗೆ ಆಕಾಂಕ್ಷಿಗಳ ದೊಡ್ಡ ಸಮೂಹವೇ ನೆರೆದಿದ್ದನ್ನು ನಾವು ನೋಡಿದ್ದೇವೆ. ಪ್ರತಿ ವಿಧಾನಸಭೆ ಕ್ಷೇತ್ರದ ಸ್ಪರ್ಧೆಗೂ ಒಂದು ಪಕ್ಷದಿಂದ ಹತ್ತೆಂಟು ಉಮೇದುವಾರರು ಟಿಕೇಟ್ ಪಡೆದುಕೊಳ್ಳುವುದಕ್ಕೆ ಹಪಾಹಪಿಸಿಕೊಂಡಿರುತ್ತಾರೆ. ಯಾವಾಗ ಟಿಕೇಟ್ ಸಿಗುವುದಿಲ್ಲವೋ ಆಗ ಇವರು ಮತ್ತು ಇವರ ಹಿಂಬಾಲಕರು ಸೇರಿಕೊಂಡು ಮಹಾ ಕೋಲಾಹಲವನ್ನೇ ಎಬ್ಬಿಸುತ್ತಾರೆ. ಟಿಕೆಟ್ ಸಿಕ್ಕಿದವರಂತೂ ತಾವೇನು ಚುನಾವಣೆಯನ್ನೇ ಗೆದ್ದುಬಿಟ್ಟೆವೇನೋ ಎಂಬಂತೆ ಸಂಭ್ರಮಿಸುವುದನ್ನೂ ನೋಡಿದ್ದೇವೆ.
ಶಾಸಕರಾಗುವುದರಲ್ಲಿ ಇರುವ ಅಂಥ ಆಕರ್ಷಣೆಯಾದರೂ ಏನು? ಅವರನ್ನೇ ಕೇಳಿದರೆ ಉತ್ತರ ಸಿದ್ಧವಿರುತ್ತದೆ. ನಾವು ಜನಸೇವೆ ಮಾಡಬೇಕು ಎಂಬ ಉತ್ತರ. ಈ ಕಹಿ ಉತ್ತರವನ್ನು ನಾವು ನುಂಗಿಕೊಳ್ಳಬೇಕಷ್ಟೆ. ಆದರೆ ವಾಸ್ತವ ಏನೆಂದರೆ ಜನಪ್ರತಿನಿಧಿಗಳಾಗುವುದು ಅಂತಂದ್ರೆ ಶ್ರೀಮಂತಿಕೆಗೆ ಪರವಾನಗಿ ದೊರೆತಂತೆ. ಗಳಿಸುವ ಹಣ ಮತ್ತು ಆಸ್ತಿಗಳನ್ನು ಗಮನಕ್ಕೆ ತೆಗೆದುಕೊಂಡಾಗ ಜನಪ್ರತಿನಿಧಿಗಳಾಗುವುದಕ್ಕಿಂತ ಉತ್ತಮ ಫಲಕಾರಿ ಉದ್ಯೋಗ ಇನ್ನೊಂದಿರಲು ಸಾಧ್ಯವಿಲ್ಲ ಎಂದು ಮನದಟ್ಟಾಗುತ್ತದೆ. ಹೀಗಾಗಿಯೇ ಆಯ್ಕೆಯಾದವರಲ್ಲಿ ಹೆಚ್ಚಿನವರು ಆನಂತರದಲ್ಲಿ ಭೇಟಿಗೆ ಸಿಗದವರಂತೆ ವೈಭೋಗದ ವರ್ಗದವರಾಗುತ್ತಾರೆ. ಇದಕ್ಕೆ ಅಪವಾದ ಎಂಬಂತಿರುವವರು ಕೆಲವರಿದ್ದಾರೆ ನಿಜ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ (ಎಡಿಆರ್) ಹಾಗೂ ಕರ್ನಾಟಕ ಎಲೆಕ್ಷನ್ ವಾಚ್ (ಕೆಇಡಬ್ಲ್ಯು) ಇವು ನಿರಂತರವಾಗಿ ಚುನಾವಣೆ ಸುಧಾರಣೆಗೆ ಕೆಲಸ ಮಾಡುತ್ತಿರುವ ಸಂಸ್ಥೆಗಳು. ಅವು ನೀಡುತ್ತಿರುವ ಕೆಲ ಆಘಾತಕಾರಿ ಅಂಕಿ-ಅಂಶಗಳನ್ನು ಗಮನಿಸೋಣ.
-ಮತ್ತೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಎಲ್ಲ ಪಕ್ಷಗಳ ಹಾಲಿ ಶಾಸಕರ ಸರಾಸರಿ ಆಸ್ತಿಯು ಕಳೆದ ಐದು ವರ್ಷಗಳಲ್ಲಿ ಶೇಕಡ 100ರಷ್ಟು ಏರಿದೆ. ಸರಾಸರಿ ಮೌಲ್ಯ ತೆಗೆದುಕೊಂಡರೆ 2008ರಲ್ಲಿ 10.59 ಕೋಟಿ ರುಪಾಯಿಗಳಿದ್ದದ್ದು 2013ರಲ್ಲಿ 19.87 ಕೋಟಿ ರುಪಾಯಿಗಳು. 9.27 ಕೋಟಿ ರುಪಾಯಿಗಳ ಜಿಗಿತ.
-ಶಾಸಕರೊಬ್ಬರ ಆಸ್ತಿಮೌಲ್ಯವು 2008ರಲ್ಲಿ 75.59 ಕೋಟಿ ರುಪಾಯಿಗಳಿಂದ 2013ರಲ್ಲಿ ಬರೋಬ್ಬರಿ 251.50 ಕೋಟಿ ರುಪಾಯಿಗಳಿಗೆ ನೆಗೆದಿದೆ! ಎಲ್ಲ ದಾಖಲೆಗಳನ್ನೂ ಪುಡಿ ಮಾಡಿದ ಶ್ರೇಯಸ್ಸು ಅವರದ್ದು. ಇನ್ನೊಬ್ಬ ಶಾಸಕರು ಶೇ. 21051ರ ಹೆಚ್ಚಳ ತೋರಿದ್ದಾರೆ. 2008ರಲ್ಲಿ 1.71 ಲಕ್ಷ ರುಪಾಯಿಗಳಿದ್ದ ಆಸ್ತಿ 2013ರಲ್ಲಿ 3.62 ಕೋಟಿ ರುಪಾಯಿಗಳಿಗೆ ಏರಿದೆ.
-ಅತಿಹೆಚ್ಚಿನ ಆಸ್ತಿ ಮತ್ತು ಹಣವನ್ನು ಹೊಂದಿದವರಲ್ಲಿ ಕಾಂಗ್ರೆಸ್‌ನವರೇ ಅಗ್ರಸ್ಥಾನದಲ್ಲಿದ್ದರೆ, ಆಸ್ತಿ ಗಳಿಕೆಯಲ್ಲಿ ಅತಿಹೆಚ್ಚಿನ ಶೇಕಡಾವಾರು ಅಭಿವೃದ್ಧಿದರವನ್ನು ದಾಖಲಿಸಿದವರು ಬಿಜೆಪಿ ನಾಯಕರು. ಜೆಡಿಎಸ್ ತುಂಬ ಹಿಂದೇನೂ ಉಳಿದುಕೊಂಡಿಲ್ಲ. ಅದು ಈ ವಿಷಯದಲ್ಲಿ ಉಳಿದೆರಡು ಪಕ್ಷಗಳಿಗೆ ಸ್ಪರ್ಧೆಯನ್ನಂತೂ ಒಡ್ಡುತ್ತಿದೆ.
-ನಾನಾ ರಾಜಕೀಯ ಪಕ್ಷಗಳಿಂದ ಅಪರಾಧ ಪ್ರಕರಣಗಳನ್ನು ಹೊಂದಿರುವ ಒಟ್ಟು 40 ಶಾಸಕರಿಗೆ ಈ ಚುನಾವಣೆಯಲ್ಲಿ ಟಿಕೆಟ್ ಕೊಡಲಾಗಿದೆ.
-ಕರ್ನಾಟಕದ ಶಾಸಕರು ದಕ್ಷಿಣ ಭಾರತದಲ್ಲೇ ಅತಿ ಶ್ರೀಮಂತರು. ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಕೇರಳದ ಶಾಸಕರು ನಂತರದ ಸ್ಥಾನಗಳಲ್ಲಿ ಇದ್ದಾರೆ.
-ಮೇ5ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 6-7 ಸಾವಿರ ಕೋಟಿ ರುಪಾಯಿಗಳವರೆಗೆ ಹಣ ಹರಿದಾಡಲಿದೆ. ಇದು ಸರಿಯಾದ ಲೆಕ್ಕವಿಲ್ಲದ ಹಣ. 2012ರಲ್ಲಿ ಉತ್ತರ ಪ್ರದೇಶದ ವಿಧಾನಸಭೆಗೆ ಚುನಾವಣೆ ನಡೆದಾಗ ಅಲ್ಲಿ 10 ಸಾವಿರ ಕೋಟಿ ರುಪಾಯಿಗಳ ಕಪ್ಪುಹಣ ಹರಿದಾಡಿತ್ತು. ಕರ್ನಾಟಕವೂ ಈ ಹಂತವನ್ನು ಮುಟ್ಟುವತ್ತ ದಾಪುಗಾಲು ಹಾಕುತ್ತಿದೆ. ಇದು ಆಘಾತಕಾರಿ ಅಲ್ಲವೇ?
ಇವೆಲ್ಲ ಅಂಕಿ-ಅಂಶಗಳು ಹೇಳುತ್ತಿರುವುದಾದರೂ ಏನನ್ನು? ಅಧಿಕಾರದಲ್ಲಿ ಇರುವುದು ಅತಿ ಲಾಭದಾಯಕವಾದದ್ದು ಎಂಬುದನ್ನೇ ಅಲ್ಲವೇ? ಅಂದಮೇಲೆ, ಏಕೆ ಎಲ್ಲರೂ ಶಾಸಕರಾಗುವುದಕ್ಕೆ ಪೈಪೋಟಿಗೆ ಬೀಳುತ್ತಿದ್ದಾರೆ ಎಂಬುದಕ್ಕೆ ಉತ್ತರ ಸ್ಪಷ್ಟ. ಹಾಗೆಯೇ ಪ್ರತಿ ಶಾಸಕನೂ ಏಕೆ ಆಕರ್ಷಕ ಖಾತೆಯೊಂದರ ಮಂತ್ರಿಯಾಗಬೇಕು ಎಂದು ಬಯಸುತ್ತಾನೆ ಎಂಬುದಕ್ಕೂ ಕಾರಣ ಸ್ಪಷ್ಟವಾಗುತ್ತದೆ. ಅವರ ಆಸ್ತಿ ಮತ್ತು ಹಣದ ವಹಿವಾಟುಗಳು ಅವರ ಆದಾಯದ ಮೂಲಕ್ಕೆ ಸರಿ ಹೊಂದುವಂತಿದ್ದರೆ ಯಾರೂ ಅವರ ಶ್ರೀಮಂತಿಕೆ ಬಗ್ಗೆ ಅಸೂಯೆ ಬೆಳೆಸಿಕೊಳ್ಳುವುದಿಲ್ಲ.
ಸರಿಯಾದ ಸಮಯದಲ್ಲೇ ಇಂಥದೊಂದು ವರದಿ ಅನಾವರಣವಾಗಿದೆ. ಮತದಾರರು ತಮ್ಮ ಅಭ್ಯರ್ಥಿ ಬಗ್ಗೆ ಜಾಗೃತರಾಗಿ ಮತದಾನದ ಹಕ್ಕನ್ನು ಬುದ್ಧಿವಂತಿಕೆಯಿಂದ ಬಳಸಿಕೊಳ್ಳುವುದಕ್ಕೆ ಇದು ಸಹಕಾರಿ. ಇಂಥ ತ್ವರಿತ ದರದಲ್ಲಿ ಶಾಸಕರ ಆಸ್ತಿಮೌಲ್ಯ ಹೆಚ್ಚಳವಾಗುವ ಬಗೆಯಾದರೂ ಹೇಗೆ? ಅವರು ಹಣದ ಚೀಲವನ್ನು ತರುವುದೆಲ್ಲಿಂದ? ಇದಕ್ಕೆ ಯಾವ ನಿಯಂತ್ರಣವೂ ಇಲ್ಲವೇ? ಇಷ್ಟಕ್ಕೂ ಎಲ್ಲರೂ ಅವರ ಸಂಪೂರ್ಣ ಆಸ್ತಿಯನ್ನು ಘೋಷಿಸಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ತಿಳಿದುಕೊಳ್ಳುವುದೂ ಸಾಧ್ಯವಿಲ್ಲ. ಅವರ ಹಲವು ಆಸ್ತಿಗಳು ಬೇನಾಮಿ ಹೆಸರಲ್ಲೇ ಇದ್ದಿರಬಹುದು.
ಶಾಸಕರು ಹೊಂದಿರುವ ಆಸ್ತಿ ಅವರ ಅಧಿಕೃತ ಆದಾಯ ಮೂಲಕ್ಕೆ ಸರಿಹೋಗುತ್ತದೆಯೇ ಇಲ್ಲವೇ, ಅದು ವಾಮಮಾರ್ಗದಿಂದ ಗಳಿಸಿದ್ದೇ ಎಂಬ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ತನಿಖೆ ನಡೆಸಬೇಕು. ಕೆಲವೇ ವರ್ಷಗಳಲ್ಲಿ ಅವರ ಆಸ್ತಿಮೌಲ್ಯ ಹಲವು ಪಟ್ಟು ಹೆಚ್ಚಾಗಿದ್ದಾರೂ ಹೇಗೆ? ಲೋಕಾಯುಕ್ತವೂ ಈ ನಿಟ್ಟಿನಲ್ಲಿ ಮಧ್ಯಪ್ರವೇಶಿಸಬೇಕು. ನಾಗರಿಕರಿಗೆ ಈ ಬಗ್ಗೆ ತಿಳಿದುಕೊಳ್ಳುವ ಅಧಿಕಾರವಿದೆ. ಆಗಮಾತ್ರ ಅವರು ಭ್ರಷ್ಟರನ್ನು ಹೊರಗಿಟ್ಟು, ಪ್ರಾಮಾಣಿಕರನ್ನು ಆರಿಸಿ ತರುವುದಕ್ಕೆ ಸಾಧ್ಯವಾಗುತ್ತದೆ. ಆ ಕೆಲಸ ಈಗಲೇ ಆಗಲಿ, ಅಥವಾ ಐದು ವರ್ಷಗಳ ನಂತರವಾದರೂ. ಆದರೆ ಆ ವೇಳೆಗೆ ಚುನಾಯಿತ ಪ್ರತಿನಿಧಿಗಳಲ್ಲಿ ಭ್ರಷ್ಟರಾಗಿದ್ದವರು ಹಲಪಟ್ಟು ಹೆಚ್ಚಿನ ಆಸ್ತಿ ಹೊಂದಿರುತ್ತಾರೆ. ಸಾರ್ವಜನಿಕರು ಅದಕ್ಕೆ ಬೆಲೆ ತೆರಬೇಕಾಗುತ್ತದೆ.
ಕೊನೆ ಗುಟುಕು: ಉತ್ತಮ ಬೆಂಗಳೂರಿನ ನಿರ್ಮಾಣಕ್ಕಾಗಿ ನಿಮ್ಮ ಮತದಾನದ ಹಕ್ಕಿಗೆ ಮೌಲ್ಯ ನೀಡಿ. ಇದು ನಮ್ಮ ಬೆಂಗಳೂರು ಫೌಂಡೇಷನ್, ಬೆಂಗಳೂರಿಗರನ್ನು ಕೇವಲ ಮತದಾನ ಮಾಡುವುದಕ್ಕಷ್ಟೇ ಅಲ್ಲ ಜವಾಬ್ದಾರಿಯುತ ಮತದಾನ ಮಾಡುವುದಕ್ಕೆ ಪ್ರೇರೇಪಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಅಭಿಯಾನ. ಮತದಾರರು ತಮ್ಮ ಅಭ್ಯರ್ಥಿಗಳಿಗೆ ಕೇಳಬೇಕಾದ ಪ್ರಶ್ನೆಗಳ ಯಾದಿಯನ್ನು ಸಿದ್ಧಪಡಿಸಿ ನೀಡಿರುವ ಫೌಂಡೇಷನ್‌ನ ಪ್ರಯತ್ನ ಬೆಂಗಳೂರಿನ ನಿವಾಸಿಗರನ್ನು ಬಹುವಾಗಿ ಸೆಳೆದಿದೆ. ನಮ್ಮ ಬೆಂಗಳೂರು ಫೌಂಡೇಷನ್ ಮತ್ತು ಅದರ ಅಭಿಯಾನದ ಬಗ್ಗೆ ತಿಳಿದುಕೊಳ್ಳಬೇಕೆಂದರೆ ನೀವು ಚುನಾವಣೆ ಸಂದರ್ಭದಲ್ಲಿ ಪಕ್ಷದ ಟಿಕೇಟ್ ಪಡೆಯುವುದಕ್ಕೆ ಆ ಪರಿಯ ಬೊಬ್ಬೆ ಏಳುವುದು ಏಕೆ ಎಂದು ನೀವು ಎಂದಾದರೂ ಆಶ್ಚರ್ಯಪಟ್ಟಿರುವಿರಾ? ಕರ್ನಾಟಕದಲ್ಲಿ ಮೇ 5ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಕ್ಕೆ ನಾನಾ ರಾಜಕೀಯ ಪಕ್ಷಗಳ ಕಚೇರಿಯ ಹೊರಗೆ ಆಕಾಂಕ್ಷಿಗಳ ದೊಡ್ಡ ಸಮೂಹವೇ ನೆರೆದಿದ್ದನ್ನು ನಾವು ನೋಡಿದ್ದೇವೆ. ಪ್ರತಿ ವಿಧಾನಸಭೆ ಕ್ಷೇತ್ರದ ಸ್ಪರ್ಧೆಗೂ ಒಂದು ಪಕ್ಷದಿಂದ ಹತ್ತೆಂಟು ಉಮೇದುವಾರರು ಟಿಕೇಟ್ ಪಡೆದುಕೊಳ್ಳುವುದಕ್ಕೆ ಹಪಾಹಪಿಸಿಕೊಂಡಿರುತ್ತಾರೆ. ಯಾವಾಗ ಟಿಕೇಟ್ ಸಿಗುವುದಿಲ್ಲವೋ ಆಗ ಇವರು ಮತ್ತು ಇವರ ಹಿಂಬಾಲಕರು ಸೇರಿಕೊಂಡು ಮಹಾ ಕೋಲಾಹಲವನ್ನೇ ಎಬ್ಬಿಸುತ್ತಾರೆ. ಟಿಕೆಟ್ ಸಿಕ್ಕಿದವರಂತೂ ತಾವೇನು ಚುನಾವಣೆಯನ್ನೇ ಗೆದ್ದುಬಿಟ್ಟೆವೇನೋ ಎಂಬಂತೆ ಸಂಭ್ರಮಿಸುವುದನ್ನೂ ನೋಡಿದ್ದೇವೆ.
ಶಾಸಕರಾಗುವುದರಲ್ಲಿ ಇರುವ ಅಂಥ ಆಕರ್ಷಣೆಯಾದರೂ ಏನು? ಅವರನ್ನೇ ಕೇಳಿದರೆ ಉತ್ತರ ಸಿದ್ಧವಿರುತ್ತದೆ. ನಾವು ಜನಸೇವೆ ಮಾಡಬೇಕು ಎಂಬ ಉತ್ತರ. ಈ ಕಹಿ ಉತ್ತರವನ್ನು ನಾವು ನುಂಗಿಕೊಳ್ಳಬೇಕಷ್ಟೆ. ಆದರೆ ವಾಸ್ತವ ಏನೆಂದರೆ ಜನಪ್ರತಿನಿಧಿಗಳಾಗುವುದು ಅಂತಂದ್ರೆ ಶ್ರೀಮಂತಿಕೆಗೆ ಪರವಾನಗಿ ದೊರೆತಂತೆ. ಗಳಿಸುವ ಹಣ ಮತ್ತು ಆಸ್ತಿಗಳನ್ನು ಗಮನಕ್ಕೆ ತೆಗೆದುಕೊಂಡಾಗ ಜನಪ್ರತಿನಿಧಿಗಳಾಗುವುದಕ್ಕಿಂತ ಉತ್ತಮ ಫಲಕಾರಿ ಉದ್ಯೋಗ ಇನ್ನೊಂದಿರಲು ಸಾಧ್ಯವಿಲ್ಲ ಎಂದು ಮನದಟ್ಟಾಗುತ್ತದೆ. ಹೀಗಾಗಿಯೇ ಆಯ್ಕೆಯಾದವರಲ್ಲಿ ಹೆಚ್ಚಿನವರು ಆನಂತರದಲ್ಲಿ ಭೇಟಿಗೆ ಸಿಗದವರಂತೆ ವೈಭೋಗದ ವರ್ಗದವರಾಗುತ್ತಾರೆ. ಇದಕ್ಕೆ ಅಪವಾದ ಎಂಬಂತಿರುವವರು ಕೆಲವರಿದ್ದಾರೆ ನಿಜ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ (ಎಡಿಆರ್) ಹಾಗೂ ಕರ್ನಾಟಕ ಎಲೆಕ್ಷನ್ ವಾಚ್ (ಕೆಇಡಬ್ಲ್ಯು) ಇವು ನಿರಂತರವಾಗಿ ಚುನಾವಣೆ ಸುಧಾರಣೆಗೆ ಕೆಲಸ ಮಾಡುತ್ತಿರುವ ಸಂಸ್ಥೆಗಳು. ಅವು ನೀಡುತ್ತಿರುವ ಕೆಲ ಆಘಾತಕಾರಿ ಅಂಕಿ-ಅಂಶಗಳನ್ನು ಗಮನಿಸೋಣ.
-ಮತ್ತೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಎಲ್ಲ ಪಕ್ಷಗಳ ಹಾಲಿ ಶಾಸಕರ ಸರಾಸರಿ ಆಸ್ತಿಯು ಕಳೆದ ಐದು ವರ್ಷಗಳಲ್ಲಿ ಶೇಕಡ 100ರಷ್ಟು ಏರಿದೆ. ಸರಾಸರಿ ಮೌಲ್ಯ ತೆಗೆದುಕೊಂಡರೆ 2008ರಲ್ಲಿ 10.59 ಕೋಟಿ ರುಪಾಯಿಗಳಿದ್ದದ್ದು 2013ರಲ್ಲಿ 19.87 ಕೋಟಿ ರುಪಾಯಿಗಳು. 9.27 ಕೋಟಿ ರುಪಾಯಿಗಳ ಜಿಗಿತ.
-ಶಾಸಕರೊಬ್ಬರ ಆಸ್ತಿಮೌಲ್ಯವು 2008ರಲ್ಲಿ 75.59 ಕೋಟಿ ರುಪಾಯಿಗಳಿಂದ 2013ರಲ್ಲಿ ಬರೋಬ್ಬರಿ 251.50 ಕೋಟಿ ರುಪಾಯಿಗಳಿಗೆ ನೆಗೆದಿದೆ! ಎಲ್ಲ ದಾಖಲೆಗಳನ್ನೂ ಪುಡಿ ಮಾಡಿದ ಶ್ರೇಯಸ್ಸು ಅವರದ್ದು. ಇನ್ನೊಬ್ಬ ಶಾಸಕರು ಶೇ. 21051ರ ಹೆಚ್ಚಳ ತೋರಿದ್ದಾರೆ. 2008ರಲ್ಲಿ 1.71 ಲಕ್ಷ ರುಪಾಯಿಗಳಿದ್ದ ಆಸ್ತಿ 2013ರಲ್ಲಿ 3.62 ಕೋಟಿ ರುಪಾಯಿಗಳಿಗೆ ಏರಿದೆ.
-ಅತಿಹೆಚ್ಚಿನ ಆಸ್ತಿ ಮತ್ತು ಹಣವನ್ನು ಹೊಂದಿದವರಲ್ಲಿ ಕಾಂಗ್ರೆಸ್‌ನವರೇ ಅಗ್ರಸ್ಥಾನದಲ್ಲಿದ್ದರೆ, ಆಸ್ತಿ ಗಳಿಕೆಯಲ್ಲಿ ಅತಿಹೆಚ್ಚಿನ ಶೇಕಡಾವಾರು ಅಭಿವೃದ್ಧಿದರವನ್ನು ದಾಖಲಿಸಿದವರು ಬಿಜೆಪಿ ನಾಯಕರು. ಜೆಡಿಎಸ್ ತುಂಬ ಹಿಂದೇನೂ ಉಳಿದುಕೊಂಡಿಲ್ಲ. ಅದು ಈ ವಿಷಯದಲ್ಲಿ ಉಳಿದೆರಡು ಪಕ್ಷಗಳಿಗೆ ಸ್ಪರ್ಧೆಯನ್ನಂತೂ ಒಡ್ಡುತ್ತಿದೆ.
-ನಾನಾ ರಾಜಕೀಯ ಪಕ್ಷಗಳಿಂದ ಅಪರಾಧ ಪ್ರಕರಣಗಳನ್ನು ಹೊಂದಿರುವ ಒಟ್ಟು 40 ಶಾಸಕರಿಗೆ ಈ ಚುನಾವಣೆಯಲ್ಲಿ ಟಿಕೆಟ್ ಕೊಡಲಾಗಿದೆ.
-ಕರ್ನಾಟಕದ ಶಾಸಕರು ದಕ್ಷಿಣ ಭಾರತದಲ್ಲೇ ಅತಿ ಶ್ರೀಮಂತರು. ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಕೇರಳದ ಶಾಸಕರು ನಂತರದ ಸ್ಥಾನಗಳಲ್ಲಿ ಇದ್ದಾರೆ.
-ಮೇ5ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 6-7 ಸಾವಿರ ಕೋಟಿ ರುಪಾಯಿಗಳವರೆಗೆ ಹಣ ಹರಿದಾಡಲಿದೆ. ಇದು ಸರಿಯಾದ ಲೆಕ್ಕವಿಲ್ಲದ ಹಣ. 2012ರಲ್ಲಿ ಉತ್ತರ ಪ್ರದೇಶದ ವಿಧಾನಸಭೆಗೆ ಚುನಾವಣೆ ನಡೆದಾಗ ಅಲ್ಲಿ 10 ಸಾವಿರ ಕೋಟಿ ರುಪಾಯಿಗಳ ಕಪ್ಪುಹಣ ಹರಿದಾಡಿತ್ತು. ಕರ್ನಾಟಕವೂ ಈ ಹಂತವನ್ನು ಮುಟ್ಟುವತ್ತ ದಾಪುಗಾಲು ಹಾಕುತ್ತಿದೆ. ಇದು ಆಘಾತಕಾರಿ ಅಲ್ಲವೇ?
ಇವೆಲ್ಲ ಅಂಕಿ-ಅಂಶಗಳು ಹೇಳುತ್ತಿರುವುದಾದರೂ ಏನನ್ನು? ಅಧಿಕಾರದಲ್ಲಿ ಇರುವುದು ಅತಿ ಲಾಭದಾಯಕವಾದದ್ದು ಎಂಬುದನ್ನೇ ಅಲ್ಲವೇ? ಅಂದಮೇಲೆ, ಏಕೆ ಎಲ್ಲರೂ ಶಾಸಕರಾಗುವುದಕ್ಕೆ ಪೈಪೋಟಿಗೆ ಬೀಳುತ್ತಿದ್ದಾರೆ ಎಂಬುದಕ್ಕೆ ಉತ್ತರ ಸ್ಪಷ್ಟ. ಹಾಗೆಯೇ ಪ್ರತಿ ಶಾಸಕನೂ ಏಕೆ ಆಕರ್ಷಕ ಖಾತೆಯೊಂದರ ಮಂತ್ರಿಯಾಗಬೇಕು ಎಂದು ಬಯಸುತ್ತಾನೆ ಎಂಬುದಕ್ಕೂ ಕಾರಣ ಸ್ಪಷ್ಟವಾಗುತ್ತದೆ. ಅವರ ಆಸ್ತಿ ಮತ್ತು ಹಣದ ವಹಿವಾಟುಗಳು ಅವರ ಆದಾಯದ ಮೂಲಕ್ಕೆ ಸರಿ ಹೊಂದುವಂತಿದ್ದರೆ ಯಾರೂ ಅವರ ಶ್ರೀಮಂತಿಕೆ ಬಗ್ಗೆ ಅಸೂಯೆ ಬೆಳೆಸಿಕೊಳ್ಳುವುದಿಲ್ಲ.
ಸರಿಯಾದ ಸಮಯದಲ್ಲೇ ಇಂಥದೊಂದು ವರದಿ ಅನಾವರಣವಾಗಿದೆ. ಮತದಾರರು ತಮ್ಮ ಅಭ್ಯರ್ಥಿ ಬಗ್ಗೆ ಜಾಗೃತರಾಗಿ ಮತದಾನದ ಹಕ್ಕನ್ನು ಬುದ್ಧಿವಂತಿಕೆಯಿಂದ ಬಳಸಿಕೊಳ್ಳುವುದಕ್ಕೆ ಇದು ಸಹಕಾರಿ. ಇಂಥ ತ್ವರಿತ ದರದಲ್ಲಿ ಶಾಸಕರ ಆಸ್ತಿಮೌಲ್ಯ ಹೆಚ್ಚಳವಾಗುವ ಬಗೆಯಾದರೂ ಹೇಗೆ? ಅವರು ಹಣದ ಚೀಲವನ್ನು ತರುವುದೆಲ್ಲಿಂದ? ಇದಕ್ಕೆ ಯಾವ ನಿಯಂತ್ರಣವೂ ಇಲ್ಲವೇ? ಇಷ್ಟಕ್ಕೂ ಎಲ್ಲರೂ ಅವರ ಸಂಪೂರ್ಣ ಆಸ್ತಿಯನ್ನು ಘೋಷಿಸಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ತಿಳಿದುಕೊಳ್ಳುವುದೂ ಸಾಧ್ಯವಿಲ್ಲ. ಅವರ ಹಲವು ಆಸ್ತಿಗಳು ಬೇನಾಮಿ ಹೆಸರಲ್ಲೇ ಇದ್ದಿರಬಹುದು.
ಶಾಸಕರು ಹೊಂದಿರುವ ಆಸ್ತಿ ಅವರ ಅಧಿಕೃತ ಆದಾಯ ಮೂಲಕ್ಕೆ ಸರಿಹೋಗುತ್ತದೆಯೇ ಇಲ್ಲವೇ, ಅದು ವಾಮಮಾರ್ಗದಿಂದ ಗಳಿಸಿದ್ದೇ ಎಂಬ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ತನಿಖೆ ನಡೆಸಬೇಕು. ಕೆಲವೇ ವರ್ಷಗಳಲ್ಲಿ ಅವರ ಆಸ್ತಿಮೌಲ್ಯ ಹಲವು ಪಟ್ಟು ಹೆಚ್ಚಾಗಿದ್ದಾರೂ ಹೇಗೆ? ಲೋಕಾಯುಕ್ತವೂ ಈ ನಿಟ್ಟಿನಲ್ಲಿ ಮಧ್ಯಪ್ರವೇಶಿಸಬೇಕು. ನಾಗರಿಕರಿಗೆ ಈ ಬಗ್ಗೆ ತಿಳಿದುಕೊಳ್ಳುವ ಅಧಿಕಾರವಿದೆ. ಆಗಮಾತ್ರ ಅವರು ಭ್ರಷ್ಟರನ್ನು ಹೊರಗಿಟ್ಟು, ಪ್ರಾಮಾಣಿಕರನ್ನು ಆರಿಸಿ ತರುವುದಕ್ಕೆ ಸಾಧ್ಯವಾಗುತ್ತದೆ. ಆ ಕೆಲಸ ಈಗಲೇ ಆಗಲಿ, ಅಥವಾ ಐದು ವರ್ಷಗಳ ನಂತರವಾದರೂ. ಆದರೆ ಆ ವೇಳೆಗೆ ಚುನಾಯಿತ ಪ್ರತಿನಿಧಿಗಳಲ್ಲಿ ಭ್ರಷ್ಟರಾಗಿದ್ದವರು ಹಲಪಟ್ಟು ಹೆಚ್ಚಿನ ಆಸ್ತಿ ಹೊಂದಿರುತ್ತಾರೆ. ಸಾರ್ವಜನಿಕರು ಅದಕ್ಕೆ ಬೆಲೆ ತೆರಬೇಕಾಗುತ್ತದೆ.
ಕೊನೆ ಗುಟುಕು: ಉತ್ತಮ ಬೆಂಗಳೂರಿನ ನಿರ್ಮಾಣಕ್ಕಾಗಿ ನಿಮ್ಮ ಮತದಾನದ ಹಕ್ಕಿಗೆ ಮೌಲ್ಯ ನೀಡಿ. ಇದು ನಮ್ಮ ಬೆಂಗಳೂರು ಫೌಂಡೇಷನ್, ಬೆಂಗಳೂರಿಗರನ್ನು ಕೇವಲ ಮತದಾನ ಮಾಡುವುದಕ್ಕಷ್ಟೇ ಅಲ್ಲ ಜವಾಬ್ದಾರಿಯುತ ಮತದಾನ ಮಾಡುವುದಕ್ಕೆ ಪ್ರೇರೇಪಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಅಭಿಯಾನ. ಮತದಾರರು ತಮ್ಮ ಅಭ್ಯರ್ಥಿಗಳಿಗೆ ಕೇಳಬೇಕಾದ ಪ್ರಶ್ನೆಗಳ ಯಾದಿಯನ್ನು ಸಿದ್ಧಪಡಿಸಿ ನೀಡಿರುವ ಫೌಂಡೇಷನ್‌ನ ಪ್ರಯತ್ನ ಬೆಂಗಳೂರಿನ ನಿವಾಸಿಗರನ್ನು ಬಹುವಾಗಿ ಸೆಳೆದಿದೆ. ನಮ್ಮ ಬೆಂಗಳೂರು ಫೌಂಡೇಷನ್ ಮತ್ತು ಅದರ ಅಭಿಯಾನದ ಬಗ್ಗೆ ತಿಳಿದುಕೊಳ್ಳಬೇಕೆಂದರೆ ನೀವು www.namma-bengaluru.orgಗೆ ಲಾಗ್‌ಆನ್ ಆಗಬಹುದು.
- ಎಚ್.ಎಸ್. ಬಲರಾಮ್
hsbalram@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.