ಅಂಕಣಗಳು

ಶ್ರೀಮಂತ ಗಂಡನನ್ನು ಪಡೆಯುವುದು ಹೇಗೆ?

ಈ ವರ್ಷ ನನಗೆ 25 ತುಂಬಿದೆ. ನಾನು ನೋಡುವುದಕ್ಕೆ ತುಂಬ...

Published On :

ಈ ವರ್ಷ ನನಗೆ 25 ತುಂಬಿದೆ. ನಾನು ನೋಡುವುದಕ್ಕೆ ತುಂಬ ಚಂದವಿದ್ದೇನೆ, ಸ್ಟೈಲ್ ಇದೆ, ಅಭಿರುಚಿ ಇದೆ. ವರ್ಷಕ್ಕೆ ನೂರು ಕೋಟಿ ಇಲ್ಲವೇ ಅದಕ್ಕೂ ಹೆಚ್ಚಿನ ಆದಾಯವಿರುವ ಹುಡುಗನನ್ನು ಮದುವೆ ಆಗಬೇಕು ಎಂಬುದು ನನ್ನ ಆಸೆ
ಶ್ರೀಮಂತ ಗಂಡನನ್ನು ದೊರಕಿಸಿಕೊಳ್ಳುವುದಕ್ಕೆ ಏನು ಮಾಡಬೇಕು ಎಂದು ಸುಂದರ ಹುಡುಗಿಯೊಬ್ಬಳು ಕೇಳಿದ ಪ್ರಶ್ನೆಗೆ ರಿಲಾಯನ್ಸ್ ಸಮೂಹದ ಮುಕೇಶ್ ಅಂಬಾನಿ ನೀಡಿದರು ಎನ್ನಲಾದ ಉತ್ತರವೊಂದು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ಇದು ಯಾರದ್ದೋ ಕಾಲ್ಪನಿಕ ಸೃಷ್ಟಿಯೇ ಆಗಿದ್ದಿರಬಹುದು. ಆದರೆ ಆ ಉತ್ತರ ಮತ್ತು ಅದು ಸಾರುತ್ತಿರುವ ನೀತಿ ಭಲೇ ಆಸಕ್ತಿಕರವಾಗಿದೆ.
ಜನಪ್ರಿಯ ಸಾಮಾಜಿಕ ತಾಣದಲ್ಲಿ ಚೆಲುವಿನ ಖಣಿಯೊಬ್ಬಳು ಹೀಗೊಂದು ವಿಷಯವನ್ನು ಮಂಡಿಸುತ್ತಾಳೆ.
ವಿಷಯ: ಶ್ರೀಮಂತ ಹುಡುಗನನ್ನು ಮದುವೆಯಾಗೋಕೆ ನಾನು ಏನು ಮಾಡಬೇಕು?
ಈ ವೇದಿಕೆಯಲ್ಲಿ ಬಹಳ ಪ್ರಾಮಾಣಿಕವಾಗಿ ಕೆಲ ಮಾತುಗಳನ್ನು ಹೇಳುತ್ತಿದ್ದೇನೆ. ಈ ವರ್ಷ ನನಗೆ 25 ತುಂಬಿದೆ. ನಾನು ನೋಡುವುದಕ್ಕೆ ತುಂಬ ಚಂದವಿದ್ದೇನೆ, ಸ್ಟೈಲ್ ಇದೆ, ಅಭಿರುಚಿ ಇದೆ. ವರ್ಷಕ್ಕೆ ನೂರು ಕೋಟಿ ಇಲ್ಲವೇ ಅದಕ್ಕೂ ಹೆಚ್ಚಿನ ಆದಾಯವಿರುವ ಹುಡುಗನನ್ನು ಮದುವೆ ಆಗಬೇಕು ಎಂಬುದು ನನ್ನ ಆಸೆ. ನಂದು ದುರಾಸೆ ಎಂದು ನೀವೆಲ್ಲ ಅಂದುಕೊಳ್ಳಬಹುದು. ಆದರೆ ಈ ದಿನಗಳಲ್ಲಿ ವರ್ಷಕ್ಕೆ 2 ಕೋಟಿ ರುಪಾಯಿಗಳ ಆದಾಯವಿದ್ದರೂ ಅದು ಕೇವಲ ಮಿಡ್ಲ್‌ಕ್ಲಾಸ್ ಸಾಧನೆ ಎನ್ನಿಸಿಕೊಳ್ಳುತ್ತಿದೆ. ಹೀಗಾಗಿ ನನ್ನ ಅವಶ್ಯಕತೆಯೇನೂ ತುಂಬ ದೊಡ್ಡದಿಲ್ಲ. ಈ ವೇದಿಕೆಯಲ್ಲಿ ಭಾಗವಹಿಸುತ್ತಿರುವ ಯಾರಾದರೂ ವರ್ಷಕ್ಕೆ 100 ಕೋಟಿ ರು. ವಾರ್ಷಿಕ ಆದಾಯವನ್ನು ಹೊಂದಿರುವವರು ಇದ್ದೀರಾ? ನಿಮಗೆಲ್ಲ ಮದುವೆ ಆಗಿಬಿಟ್ಟಿದೆಯೇ? ಒಂದೊಮ್ಮೆ ಮದುವೆ ಆದವರಾಗಿದ್ದರೂ ನನಗೆ ಸಲಹೆಯನ್ನಾದರೂ ನೀಡಿ. ನಿಮ್ಮಂಥ ಶ್ರೀಮಂತರನ್ನು ಮದುವೆ ಆಗುವುದಕ್ಕೆ ನಾನು ಮಾಡಬೇಕಿರುವುದೇನು? ನಾನು ಸಲ್ಲಾಪಕ್ಕಿಳಿದ ಹುಡುಗರ ಪೈಕಿ ಒಬ್ಬನ ವಾರ್ಷಿಕ ಆದಾಯ 50 ಕೋಟಿ ರುಪಾಯಿಗಳಾಗಿತ್ತು. ಅದೇ ಹೆಚ್ಚಿನದು. ಆದರೆ ನ್ಯೂಯಾರ್ಕ್ ಸಿಟಿ ಗಾರ್ಡನ್‌ನ ಐಷಾರಾಮಿ ವಾಸ್ತವ್ಯ ಪ್ರದೇಶದಲ್ಲಿ ಮನೆ ಮಾಡುವುದಕ್ಕೆ ಆ ಆದಾಯ ಸಾಕಾಗುವುದಿಲ್ಲ. ಈ ನಿಟ್ಟಿನಲ್ಲಿ ನಾನು ವಿನಮ್ರಳಾಗಿ ನಿಮಗೆ ಕೆಲ ಪ್ರಶ್ನೆಗಳನ್ನು ಕೇಳುತ್ತೇನೆ.

  •  ಶ್ರೀಮಂತ ಬ್ಯಾಚುಲರ್‌ಗಳು ಸಮಯ ಕಳೆಯುವ ಪ್ರದೇಶಗಳು ಯಾವವು? (ಬಾರ್, ರೆಸ್ಟೊರೆಂಟ್, ಜಿಮ್‌ಗಳ ವಿಳಾಸವಿದ್ದರೆ ತಿಳಿಸಿಕೊಡಿ)
  •  ಯಾವ ವಯೋವಾನದವರನ್ನು ನಾನು ಗುರಿಯಾಗಿ ಇರಿಸಿಕೊಳ್ಳಬೇಕು?
  •  ಸಾಮಾನ್ಯವಾಗಿ ಶ್ರೀಮಂತರ ಮಡದಿಯರೆಲ್ಲ ಸಾಮಾನ್ಯ ರೂಪಿನವರೇ ಆಗಿರುತ್ತಾರೆ ಏಕೆ?
  •  ನಾನು ಭೇಟಿ ಮಾಡಿರುವ ಕೆಲ ಹುಡುಗಿಯರು ರೂಪವತಿಯರಲ್ಲ, ಅವರ ಆಸಕ್ತಿಗಳೂ ಬಹಳ ಕುತೂಹಲಕಾರಿಯೇನಲ್ಲ. ಆದರೆ ಅವರೆಲ್ಲ ಶ್ರೀಮಂತರನ್ನು ಮದುವೆ ಆಗುವುದರಲ್ಲಿ ಯಶಸ್ವಿ ಆಗಿದ್ದಾರೆ.
  •  ನೀವು ನೂರು ಕೋಟಿಯ ಒಡೆಯರಾಗಿದ್ದ ಪಕ್ಷದಲ್ಲಿ ಯಾರು ನಿಮ್ಮ ಹೆಂಡತಿ ಆಗಬೇಕು ಹಾಗೂ ಯಾರು ಕೇವಲ ಗರ್ಲ್‌ಫ್ರೆಂಡ್ ಮಾತ್ರ ಆಗಿದ್ದರೆ ಸಾಕು ಎಂಬ ನಿರ್ಧಾರಕ್ಕೆ ಹೇಗೆ ಬರುತ್ತೀರಿ? (ಇವೆಲ್ಲ ನಾನು ಶ್ರೀಮಂತ ಹುಡುಗನನ್ನು ಮದುವೆ ಆಗುವುದಕ್ಕೆ ಸಹಕಾರಿ ಆಗಬಲ್ಲವು)
-ಪೂಜಾ ಚೌಹಾಣ್
ಪ್ರಿಯ ಪೂಜಾ,
ಹುಡುಕುವುದಕ್ಕಿಂತ ಈ ಮಾರ್ಗವೇ ನಿನಗೆ ಸಲೀಸಾಗಬಹುದು!
-ಮುಕೇಶ್ ಅಂಬಾನಿ
ಅಬ್ಬಾ, ಎಷ್ಟೊಂದು ನಾಯಕರು!

-ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.