ಮದುವೆಯಾಗುವುದು ಅಷ್ಟು ಮುಖ್ಯವೇ? ಮದುವೆ ಇಲ್ಲದೆಯೂ ನಾವು ಖುಷಿಯಾಗಿದ್ದೇವೆ ಅಲ್ವಾ? ನಟಿ ರಮ್ಯಾ
ಹಾಗೆಯೇ ತುಂಬಾ ಮಹಿಳೆಯರಿಗೆ ತಮ್ಮ ಮಾತು ಅನ್ವಯವಾಗದೇ ಇರಬಹುದು ಎಂದು ಹೇಳಿರುವ ರಮ್ಯಾ, ಮದುವೆಯಾದ ಬಳಿಕವೂ ಖುಷಿಯಾಗಿರಬಹುದು ಎಂದಿದ್ದಾರೆ.

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ, ಮೋಹಕ ತಾರೆ ರಮ್ಯಾ ಸಿನಿಮಾರಂಗದಲ್ಲಿ ಸದ್ಯಕ್ಕೆ ಸಕ್ರಿಯರಾಗಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಸುದ್ದಿಯಲ್ಲಿರುತ್ತಾರೆ. ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ರೂ, ರಮ್ಯಾ ಚಿತ್ರರಂಗದ ಆಪ್ತರ ಜತೆ ಈಗಲೂ ಉತ್ತಮ ಸ್ನೇಹ ಬಾಂಧವ್ಯವನ್ನು ಹೊಂದಿದ್ದಾರೆ.
ರಮ್ಯಾ ಅವರಿಗೆ ಅಪಾರ ಅಭಿಮಾನಿಗಳ ಬಳಗವಿದೆ. ಆ ಅಭಿಮಾನಿಗಳಲ್ಲಿ ಒಂದು ಪ್ರಶ್ನೆಯಂತೂ ಯಾವಾಗಲೂ ಕಾಡುತ್ತಿರುತ್ತದೆ. ತನ್ನ ನೆಚ್ಚಿನ ನಟಿ ಯಾವಾಗ ಮದುವೆ ಆಗುತ್ತಾರೆ ಎನ್ನುವುದು. 43 ವರ್ಷದ ನಟಿ ರಮ್ಯಾ ಮದುವೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಮದುವೆ ಜೀವನದ ಅನಿವಾರ್ಯ ಭಾಗವೇ ಎಂಬ ಪ್ರಶ್ನೆಗೆ ಸಂದರ್ಶನವೊಂದರಲ್ಲಿ ರಮ್ಯಾ ತಮ್ಮದೇ ರೀತಿಯಲ್ಲಿ ಉತ್ತರಿಸಿದ್ದಾರೆ. ಮದುವೆಯಾಗಿರುವುದು ಅಥವಾ ಇಲ್ಲದಿರುವುದಕ್ಕಿಂತ ಜೀವನದಲ್ಲಿ ಸಂತೋಷವಾಗಿರುವುದು ಮುಖ್ಯ ಎಂದು ಹೇಳಿದ್ದಾರೆ.
ಮದುವೆಯಾಗುವುದು ಅಷ್ಟು ಮುಖ್ಯವೇ? ಖಂಡಿತಾ ಇಲ್ಲ. ನಾನು ಯಾರೆಂಬುದು ಮದುವೆಯಿಂದ ನಿರ್ಧಾರವಾಗುವುದಿಲ್ಲ. ಮದುವೆ ಇಲ್ಲದೆಯೂ ನಾವು ಖುಷಿಯಾಗಿದ್ದೇವೆ ಅಲ್ಲವಾ? ಖುಷಿಯಾಗಿ ಇರುವುದೇ ಎಲ್ಲಕ್ಕಿಂತ ಮುಖ್ಯ ಎಂದು ರಮ್ಯಾ ಅಭಿಪ್ರಾಯಪಟ್ಟಿದ್ದಾರೆ.
ಹಾಗೆಯೇ ತುಂಬಾ ಮಹಿಳೆಯರಿಗೆ ತಮ್ಮ ಮಾತು ಅನ್ವಯವಾಗದೇ ಇರಬಹುದು ಎಂದು ಹೇಳಿರುವ ರಮ್ಯಾ, ಮದುವೆಯಾದ ಬಳಿಕವೂ ಖುಷಿಯಾಗಿರಬಹುದು ಎಂದಿದ್ದಾರೆ. ಒಬ್ಬ ವ್ಯಕ್ತಿ ನಿಮ್ಮೊಂದಿಗೆ ಹೊಂದಾಣಿಕೆಯಾಗುವ ಸಂಗಾತಿಯಾಗಿದ್ದು, ಉತ್ತಮ ಸ್ನೇಹಿತರಾಗಿದ್ದು, ಅವರೊಂದಿಗೆ ಇಡೀ ಜೀವನ ಕಳೆಯಲು ನಿಮಗೆ ಇಷ್ಟವಿದ್ದರೆ ಮದುವೆಯಾಗುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಮದುವೆ ಸಂಬಂಧದಲ್ಲಿ ಸ್ನೇಹ ಮತ್ತು ಮೌಲ್ಯಗಳ ಹೊಂದಾಣಿಕೆ ಬಹಳ ಮುಖ್ಯ ಎಂದು ರಮ್ಯಾ ಹೇಳಿದ್ದಾರೆ. ಮನುಷ್ಯನ ಜೀವನದಲ್ಲಿ ಬದಲಾವಣೆ ನಿರಂತರವಾಗಿರುತ್ತದೆ. ನಾವು ಸದಾ ಬದಲಾಗುತ್ತಲೇ ಇರುತ್ತೇವೆ. ಇದೇ ಕೆಲವೊಮ್ಮೆ ಸಂಬಂಧಗಳಲ್ಲಿ ಸಮಸ್ಯೆಗಳನ್ನು ಸೃಷ್ಟಿಸಬಹುದು ಎಂದು ಹೇಳಿದ್ದಾರೆ. ಇಬ್ಬರು ವ್ಯಕ್ತಿಗಳು ಉತ್ತಮ ಸ್ನೇಹಿತರಾಗಿದ್ದು, ಅವರ ಜೀವನದ ಮೌಲ್ಯಗಳು ಒಂದೇ ರೀತಿಯಾಗಿದ್ದರೆ ಮದುವೆ ಉತ್ತಮ ನಿರ್ಧಾರವಾಗಬಹುದು ಎಂದು ರಮ್ಯಾ ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ರಮ್ಯಾ, ಸದ್ಯ ತಮಗೆ ಜೀವನ ಸಂಗಾತಿಯಾಗುವಂತಹ ವ್ಯಕ್ತಿ ಸಿಕ್ಕಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಮಾತ್ರವಲ್ಲ, ಈ ವಿಚಾರದ ಬಗ್ಗೆ ತಾವು ಸದ್ಯ ಹೆಚ್ಚು ಗಮನ ಹರಿಸುತ್ತಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



