ಸದ್ದಿಲ್ಲದೆ ದಾಂಪತ್ಯಕ್ಕೆ ಕಾಲಿಟ್ಟ ನಟಿ ಚೈತ್ರಾ ರಾವ್: ದೇವಸ್ಥಾನದಲ್ಲಿ ಕೌಶಿಕ್ ಜೊತೆ ಸಪ್ತಪದಿ ತುಳಿದ 'ಜೋಡಿಹಕ್ಕಿ' ಟೀಚರ್!
ಕರಾವಳಿಯ ಸುಂದರ ಸಂಪ್ರದಾಯ ಹಾಗೂ ಪ್ರೀತಿಪಾತ್ರರ ಹಾರೈಕೆಗಳ ನಡುವೆ, ಚೈತ್ರಾ ಮತ್ತು ಕೌಶಿಕ್ ದೇವಾಲಯದ ಆವರಣದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಜೋಡಿ ಹಕ್ಕಿ' ಮೂಲಕ ನಾಡಿನ ಮನೆಮಾತಾಗಿದ್ದ ಪ್ರತಿಭಾವಂತ ನಟಿ ಚೈತ್ರಾ ರಾವ್ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಯಾವುದೇ ಆಡಂಬರ, ಅದ್ಧೂರಿತನವಿಲ್ಲದೆ ಅತ್ಯಂತ ಸರಳವಾಗಿ ರಂಗಭೂಮಿ ಕಲಾವಿದ ಕೌಶಿಕ್ ಅವರ ಕೈಹಿಡಿಯುವ ಮೂಲಕ ಸಪ್ತಪದಿ ತುಳಿದಿದ್ದಾರೆ.
ಈ ಕಲಾವಿದ ಜೋಡಿ ಮಾತ್ರ ಯಾವುದೇ ಆಡಂಬರಕ್ಕೆ ಹೋಗದೆ, ಕೇವಲ ಎರಡೂ ಕುಟುಂಬದ ಹಿರಿಯರು ಮತ್ತು ಅತ್ಯಂತ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ.
ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ನವದಂಪತಿ, ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ. ಕರಾವಳಿಯ ಸುಂದರ ಸಂಪ್ರದಾಯ ಹಾಗೂ ಪ್ರೀತಿಪಾತ್ರರ ಹಾರೈಕೆಗಳ ನಡುವೆ, ದೇವಾಲಯದ ಆವರಣದಲ್ಲಿ ಚೈತ್ರಾ ಮತ್ತು ಕೌಶಿಕ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕ್ಯಾಮೆರಾ, ತೆರೆಯ ಮೇಲಿನ ಲೈಮ್‌ಲೈಟ್ ಬದಿಗೊತ್ತಿ, ಅತ್ಯಂತ ನೈಜ ಹಾಗೂ ಮನದಾಳದ ಕ್ಷಣಗಳೊಂದಿಗೆ ಹೊಸ ಅಧ್ಯಾಯ ಆರಂಭವಾಗಿದೆ' ಎಂದು ಮದುವೆಯ ಕ್ಷಣಗಳನ್ನು ವರ್ಣಿಸಿದ್ದಾರೆ.
ಚೈತ್ರಾ ರಾವ್ ಕನ್ನಡ ಕಿರುತೆರೆಯ ಬಹುಮುಖ ಪ್ರತಿಭೆ. ಜೀ ಕನ್ನಡದ ಸೂಪರ್ ಹಿಟ್ ಧಾರಾವಾಹಿ 'ಜೋಡಿ ಹಕ್ಕಿ'ಯಲ್ಲಿ 'ಜಾನಕಿ ಟೀಚರ್' ಆಗಿ ಇವರು ನಿಭಾಯಿಸಿದ್ದ ಮುಗ್ಧ ಪಾತ್ರ ಪ್ರತಿಯೊಬ್ಬ ಕನ್ನಡಿಗರ ಹೃದಯ ಗೆದ್ದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



