ಸಿನಿಮಾ ಸುದ್ದಿ

Cannes 2026 Closing Ceremony: ಬಿಳಿ ಪ್ಯಾಂಟ್ ಸೂಟ್ ನಲ್ಲಿ ಕಂಗೊಳಿಸಿದ ಐಶ್ವರ್ಯ ರೈ!

ಜೊತೆಗೆ ಆಕೆಯ ಕೋಟ್‌ನಲ್ಲಿ ಕಟಿಂಗ್ ಹಾಗೂ ಲ್ಯಾಪಲ್ ಡಿಸೈನ್‌ಗಳು ಅದ್ಭುತವಾಗಿ ಎದ್ದು ಕಾಣುತ್ತಿದ್ದವು. ಐಶ್ವರ್ಯಾ ಈ ಉಡುಪನ್ನು ಅತ್ಯಂತ ವಿಶ್ವಾಸದಿಂದ ಧರಿಸಿ, ತನ್ನ ಸುಂದರವಾದ ಮುಕ್ತವಾದ ಕೇಶವಿನ್ಯಾಸ ಮತ್ತು ಮಿನಿಮಲ್ ಮೇಕಪ್‌ನೊಂದಿಗೆ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಇಟ್ಟಿದ್ದರು.

Cannes 2026 Closing Ceremony: ಬಿಳಿ ಪ್ಯಾಂಟ್ ಸೂಟ್ ನಲ್ಲಿ ಕಂಗೊಳಿಸಿದ ಐಶ್ವರ್ಯ ರೈ!
ಐಶ್ವರ್ಯ ರೈ
Published On :

ಕ್ಯಾನೆಸ್‌: 79 ನೇ ಕೇನ್ಸ್ ಚಲನಚಿತ್ರೋತ್ಸವದ (Cannes Film Festival) ಸಮಾರೋಪ ಸಮಾರಂಭ ಫ್ರಾನ್ಸ್‌ನ ಕ್ಯಾನೆಸ್‌ನಲ್ಲಿರುವ ಪ್ಯಾಲೇಸ್ ಡೆಸ್ ಫೆಸ್ಟಿವಲ್ಸ್‌ನಲ್ಲಿ ನಿನ್ನೆ ಅದ್ಧೂರಿಯಾಗಿ ಜರುಗಿತು.

ಈ ವರ್ಣರಂಜಿತ ಸಮಾರಂಭದಲ್ಲಿ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಕಾಣಿಸಿಕೊಂಡರು. ಅವರ 2ನೇ ರೆಡ್ ಕಾರ್ಪೆಟ್ ವಾಕಿಂಗ್ ಮೊದಲು ಧರಿಸಿದ್ದ ನೀಲಿ ಗೌನ್‌ಗೆ ಸಂಪೂರ್ಣ ವ್ಯತಿರಿಕ್ತವಾಗಿತ್ತು. ಈ ಬಾರಿ ಅವರು ಬಿಳಿ ಪ್ಯಾಂಟ್‌ಸೂಟ್‌ನಲ್ಲಿ ಹೆಜ್ಜೆ ಹಾಕಿದರು.

ಚೀನಾ ಮೂಲದ ಖ್ಯಾತ ಡಿಸೈನರ್ ಚೆನ್ನಿ ಚಾನ್ ಈ ವಿಶಿಷ್ಟವಾದ ಬಿಳಿ ಬಣ್ಣದ ಡಿಸೈನರ್ ಉಡುಪನ್ನು ವಿನ್ಯಾಸಗೊಳಿಸಿದ್ದರು. ಈ ಆಕರ್ಷಕ ಪವರ್ ಸೂಟ್‌ನಲ್ಲಿ ಬ್ಲೇಜರ್ ಮತ್ತು ಕಸೂತಿ ಕೆಲಸವಿರುವ ಟ್ರೌಸರ್ ಜೊತೆಗೆ ಸುಂದರವಾದ ಗರಿಗಳ ಕಂಪು ಇತ್ತು.

ಜೊತೆಗೆ ಆಕೆಯ ಕೋಟ್‌ನಲ್ಲಿ ಕಟಿಂಗ್ ಹಾಗೂ ಲ್ಯಾಪಲ್ ಡಿಸೈನ್‌ಗಳು ಅದ್ಭುತವಾಗಿ ಎದ್ದು ಕಾಣುತ್ತಿದ್ದವು. ಐಶ್ವರ್ಯಾ ಈ ಉಡುಪನ್ನು ಅತ್ಯಂತ ವಿಶ್ವಾಸದಿಂದ ಧರಿಸಿ, ತನ್ನ ಸುಂದರವಾದ ಮುಕ್ತವಾದ ಕೇಶವಿನ್ಯಾಸ ಮತ್ತು ಮಿನಿಮಲ್ ಮೇಕಪ್‌ನೊಂದಿಗೆ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಇಟ್ಟಿದ್ದರು.

ಈ ಬಾರಿ ಐಶ್ವರ್ಯಾ ಕೇನ್ಸ್‌ನಲ್ಲಿ ಒಬ್ಬಂಟಿಯಾಗಿರಲಿಲ್ಲ. ಅವರ ಪಕ್ಕದಲ್ಲಿ ಅವರ ಮಗಳು ಆರಾಧ್ಯ ಇದ್ದರು. ಆರಾಧ್ಯ ಕೆಂಪು ರೇಷ್ಮೆ ಗೌನ್‌ನಲ್ಲಿ ಕೆಂಪು ಲಿಪ್‌ಸ್ಟಿಕ್ ಮತ್ತು ಸೈಡ್-ಪಾರ್ಟೆಡ್ ಕೇಶವಿನ್ಯಾಸದೊಂದಿಗೆ ಕಾಣಿಸಿಕೊಂಡರು.

ಚಿತ್ರರಂಗದಿಂದ ದೂರ ಉಳಿದಿರುವ ಐಶ್ವರ್ಯ ರೈ, ಕೊನೆಯದಾಗಿ ಪೊನ್ನಿಯಿನ್ ಸೆಲ್ವನ್: ಭಾಗ I (2022) ಮತ್ತು ಪೊನ್ನಿಯಿನ್ ಸೆಲ್ವನ್: ಭಾಗ II (2023) ನಲ್ಲಿ ಕಾಣಿಸಿಕೊಂಡರು. ಅಲ್ಲಿಂದಾಚೆಗೆ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಅವರ ಮುಂದಿನ ಚಿತ್ರಗಳ ಬಗ್ಗೆಯೂ ಯಾವುದೇ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.