'ಬಂದರ್' ಟೀಸರ್‌ನಲ್ಲಿ ರಾಜ್ ಬಿ ಶೆಟ್ಟಿ ಮಿಂಚು: ಕೆಲವೇ ಕ್ಷಣಗಳ ಝಲಕ್‌ಗೆ ಫ್ಯಾನ್ಸ್ ಫಿದಾ..!
ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಬಹುನಿರೀಕ್ಷಿತ ಚಿತ್ರ ‘ಬಂದರ್’ ಮೂಲಕ ರಾಜ್ ಬಿ ಶೆಟ್ಟಿ ಬಾಲಿವುಡ್ ಸಿನಿರಂಗ ಪ್ರವೇಶಿಸುತ್ತಿದ್ದು, ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟೀಸರ್ ಸಿನಿಪ್ರಿಯರ ಕುತೂಹಲವನ್ನು ಹೆಚ್ಚಿಸಿದೆ.

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥೆಗಳು, ವಿಶಿಷ್ಟ ಪಾತ್ರಗಳು ಹಾಗೂ ನೈಜ ಅಭಿನಯದ ಮೂಲಕ ತನ್ನದೇ ಆದ ಪ್ರತ್ಯೇಕ ಗುರುತು ನಿರ್ಮಿಸಿಕೊಂಡಿರುವ ರಾಜ್ ಬಿ ಶೆಟ್ಟಿ ಇದೀಗ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಬಹುನಿರೀಕ್ಷಿತ ಚಿತ್ರ ‘ಬಂದರ್’ ಮೂಲಕ ರಾಜ್ ಬಿ ಶೆಟ್ಟಿ ಬಾಲಿವುಡ್ ಸಿನಿರಂಗ ಪ್ರವೇಶಿಸುತ್ತಿದ್ದು, ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟೀಸರ್ ಸಿನಿಪ್ರಿಯರ ಕುತೂಹಲವನ್ನು ಹೆಚ್ಚಿಸಿದೆ.
ಟೀಸರ್‌ನಲ್ಲಿ ರಾಜ್ ಬಿ ಶೆಟ್ಟಿ ಕೆಲವೇ ಕ್ಷಣಗಳ ಕಾಲ ಕಾಣಿಸಿಕೊಂಡರೂ, ಅವರ ಸ್ಕ್ರೀನ್ ಪ್ರೆಸೆನ್ಸ್ ಮತ್ತು ವಿಶಿಷ್ಟ ಲುಕ್ ಚರ್ಚೆಗೆ ಕಾರಣವಾಗಿದೆ.
“ರಾಜ್ ಬಿ ಶೆಟ್ಟಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ?”, “ಅವರ ಪಾತ್ರಕ್ಕೆ ಕಥೆಯಲ್ಲಿ ಎಷ್ಟು ಮಹತ್ವ ಇದೆ?” ಎಂಬ ಪ್ರಶ್ನೆಗಳು ಮೂಡತೊಡಗಿವೆ.
‘ಬಂದರ್’ ಚಿತ್ರದಲ್ಲಿ ಬಾಬಿ ಡಿಯೋಲ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದು, ಇದು ನೈಜ ಘಟನೆಗಳಿಂದ ಪ್ರೇರಿತ ಕ್ರೈಂ ಥ್ರಿಲ್ಲರ್ ಎಂದು ಹೇಳಲಾಗುತ್ತಿದೆ. ಚಿತ್ರವನ್ನು ಅನುರಾಗ್ ಕಶ್ಯಪ್ ನಿರ್ದೇಶಿಸುತ್ತಿರುವುದರಿಂದ ನಿರೀಕ್ಷೆಗಳು ಇನ್ನಷ್ಟು ಹೆಚ್ಚಿಸಿದೆ.
ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿನ ರಾಜ್ ಬಿ ಶೆಟ್ಟಿ ಅಭಿನಯದಿಂದ ಅನುರಾಗ್ ಕಶ್ಯಪ್ ಬಹಳ ಪ್ರಭಾವಿತರಾಗಿದ್ದು, ಈ ಚಿತ್ರದ ಬಗ್ಗೆ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದಾದ ನಂತರ ಅನುರಾಗ್ ಮತ್ತು ರಾಜ್ ನಡುವೆ ಉತ್ತಮ ಸೃಜನಾತ್ಮಕ ಸ್ನೇಹ ಬೆಳೆದಿದ್ದು, ಅದರ ಫಲವಾಗಿಯೇ ‘ಬಂದರ್’ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ವಿಶೇಷವಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ಜೂನ್ 5ರಂದು ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಒಂದು ಹಾಡಿನ ದೃಶ್ಯದಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಪಾತ್ರ ಚಿಕ್ಕದಾದರೂ, ಟೀಸರ್‌ನಲ್ಲಿ ಅವರ ಲುಕ್ ಸಾಕಷ್ಟು ಕುತೂಹಲ ಹುಟ್ಟಿಸಿದೆ.
ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕ ಹಾಗೂ ಕಥೆಗಾರನಾಗಿ ರಾಜ್ ಬಿ ಶೆಟ್ಟಿ ಈಗಾಗಲೇ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ‘ಒಂದು ಮೊಟ್ಟೆಯ ಕಥೆ’, ‘ಗರುಡ ಗಮನ ವೃಷಭ ವಾಹನ’ ಮುಂತಾದ ಚಿತ್ರಗಳ ಮೂಲಕ ಅವರು ವಿಭಿನ್ನ ಕಥನಶೈಲಿ ಮತ್ತು ನೈಜ ಅಭಿನಯಕ್ಕೆ ಹೆಸರಾಗಿದ್ದಾರೆ.
ಇದೀಗ ಬಾಲಿವುಡ್'ಗೆ ಪಾದಾರ್ಪಣೆ ಮಾಡುತ್ತಿದ್ದು, ಇದು ಸಿನಿಪ್ರಿಯದಲ್ಲಿ ನಿರೀಕ್ಷೆ ಹೆಚ್ಚಿಸಿದೆ. ವಿಶೇಷವಾಗಿ ಅನುರಾಗ್ ಕಶ್ಯಪ್‌ರಂತಹ ನಿರ್ದೇಶಕರ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ರಾಜ್ ಬಿ ಶೆಟ್ಟಿ ಕರಿಯರ್‌ಗೆ ಹೊಸ ಮೈಲಿಗಲ್ಲಾಗಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ನಿಜ ಜೀವನದ ಘಟನೆಯಿಂದ ಪ್ರೇರಿತವಾದ ಈ ಕ್ರೈಮ್ ಥ್ರಿಲ್ಲರ್ ಚಿತ್ರಕ್ಕೆ ಸುದೀಪ್ ಶರ್ಮಾ ಮತ್ತು ಅಭಿಷೇಕ್ ಬ್ಯಾನರ್ಜಿ ಕಥೆ ಬರೆದಿದ್ದು. ಸ್ಯಾಫ್ರನ್ ಮ್ಯಾಜಿಕ್‌ವರ್ಕ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಿಸಲಾಗುತ್ತಿದೆ. ಜೀ ಸ್ಟುಡಿಯೋಸ್ ವಿತರಿಸಿರುವ ಈ ಚಿತ್ರದಲ್ಲಿ ಸಬಾ ಆಜಾದ್, ಸನ್ಯಾ ಮಲ್ಹೋತ್ರಾ ಮತ್ತು ಸಪ್ನಾ ಪಬ್ಬಿ ಇತರರು ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



