ಋಣಭಾರ ದಕ್ಷಿಣಕ್ಕೂ ವ್ಯಾಪಿಸುತ್ತಿದೆ: 'ಧುರಂಧರ್' ಸಿನಿಮಾ ಪ್ರಶಂಸಿಸಿದ ನಟರಿಗೆ Prakash raj ತರಾಟೆ
'ಚಿತ್ರ ಹೇಗಿದೆ ಅಂದರೆ, ಆಸಕ್ತಿ ಇಲ್ಲದ ಪಠ್ಯಪುಸ್ತಕದ ಕೊನೆಯೇ ಇಲ್ಲದ ಅಧ್ಯಾಯಗಳನ್ನು ಓದಿದ ಹಾಗೆ ಅನಿಸುತ್ತದೆ.

ಹೈದರಾಬಾದ್: ನಟ ರಣವೀರ್ ಸಿಂಗ್ ಅಭಿನಯದ ಧುರಂದರ್ 2 ಚಿತ್ರ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿರುವಂತೆಯೇ ಚಿತ್ರದ ಕುರಿತು ಕೆಲ ಖ್ಯಾತನಾಮ ನಟರು ಮೂಗು ಮುರಿಯುತ್ತಿದ್ದಾರೆ.
ಹೌದು.. ಈ ಹಿಂದೆ ಕನ್ನಡದ ಖ್ಯಾತ ನಟಿ ರಮ್ಯ ಧುರಂದರ್ ಚಿತ್ರದ ಕುರಿತು ನಕಾರಾತ್ಮಕ ಮಾತುಗಳನ್ನಾಡಿದ್ದರು. 'ಚಿತ್ರ ಹೇಗಿದೆ ಅಂದರೆ, ಆಸಕ್ತಿ ಇಲ್ಲದ ಪಠ್ಯಪುಸ್ತಕದ ಕೊನೆಯೇ ಇಲ್ಲದ ಅಧ್ಯಾಯಗಳನ್ನು ಓದಿದ ಹಾಗೆ ಅನಿಸುತ್ತದೆ.
ಈ ಚಿತ್ರ ವೀಕ್ಷಿಸುವಾಗ ನಿಮ್ಮ ಮಿದುಳು ಕೆಲಸ ಮಾಡುವುದನ್ನು ನಿಲ್ಲಿಸಬಹುದು. ವೀಕ್ಷಕರು ಚಿತ್ರಮಂದಿರಕ್ಕೆ ಹೋಗಿ ಹಣ ವ್ಯರ್ಥ ಮಾಡಿಕೊಳ್ಳುವುದಕ್ಕಿಂತ ಸ್ವಲ್ಪ ದಿನ ಕಾದು OTT ಯಲ್ಲಿ ಚಿತ್ರ ವೀಕ್ಷಿಸುವುದು ಉತ್ತಮ ಎಂದು ಸಲಹೆ ನೀಡಿ' ಎಂದು ಪೋಸ್ಟ್ ಮಾಡಿದ್ದರು.
ಇದೀಗ ಅಂಹುದೇ ಪ್ರತಿಕ್ರಿಯೆಯನ್ನು ನಟ ಪ್ರಕಾಶ್ ರಾಜ್ ಕೂಡ ನೀಡಿದ್ದು, 'ಧುರಂಧರ್ 2' ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ತೆಲುಗು ನಟರನ್ನು ಟೀಕಿಸಿದ್ದಾರೆ.
ತೆಲುಗು ನಟರ ವಿರುದ್ಧ ಕಿಡಿ
ನಿನ್ನೆ ಬಿಡುಗಡೆಯಾದ ರಣವೀರ್ ಸಿಂಗ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ 'ಧುರಂಧರ್: ದಿ ರಿವೆಂಜ್' ಸಿನಿಮಾ ಬಗ್ಗೆ ಖ್ಯಾತ ನಟರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದರು. ಪ್ರಮುಖವಾಗಿ ತೆಲುಗಿನ ನಟರಾದ ಅಲ್ಲು ಅರ್ಜುನ್, ರಾಮ್ ಚರಣ್, ವಿಜಯ್ ದೇವರಕೊಂಡ, ಮಹೇಶ್ ಬಾಬು ಮತ್ತು ಜ್ಯೂನಿಯರ್ ಎನ್ಟಿಆರ್ ಅವರು ಫೋಸ್ಟ್ ಮಾಡಿ ಧುರಂಧರ್ 2 ಸಿನಿಮಾವನ್ನು ಪ್ರಶಂಸಿಸಿದ್ದರು.
ಈ ಪ್ರಶಂಸೆಯನ್ನು ಟೀಕಿಸಿರುವ ನಟ ಪ್ರಕಾಶ್ ರಾಜ್, “ಋಣಭಾರ ದಕ್ಷಿಣಕ್ಕೂ ವ್ಯಾಪಿಸುತ್ತಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಬಲಪಂಥೀಯ ಸಿನಿಮಾವನ್ನು ಹೊಗಳಿದ್ದ ನಟರಿಗೆ ನೇರವಾಗಿ ಪ್ರಕಾಶ್ ರಾಜ್ ತಿವಿದಿದ್ದಾರೆ.
ರಮ್ಯಾ ಅಷ್ಟೇ ಅಲ್ಲ.. ಆರ್ ಜಿವಿಯಿಂದಲೂ ಟೀಕೆ
ಇನ್ನು ನಟಿ ರಮ್ಯಾ, ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತು ಯುಟ್ಯೂಬರ್ ದ್ರುವ್ ರಾಠಿ ಮೊದಲಾದವರೂ ಧುರಂದರ್ ಸಿನಿಮಾವನ್ನು ಟೀಕಿಸಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ಟೀಕಿಸಿದ್ದಾರೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು, “ಉನ್ನತ ಸಿನಿಮಾಗಳ ಮೇಲೆ ತಮ್ಮ ವೃತ್ತಿಜೀವನ ಮತ್ತು ಅದೃಷ್ಟವನ್ನು ನಿರ್ಮಿಸಿಕೊಂಡ ಚಲನಚಿತ್ರ ನಿರ್ಮಾಪಕರ ಮಟ್ಟಿಗೆ ಈ ಸಿನಿಮಾ ಭಯಾನಕವಾಗಿದೆ. ಮೆದುಳನ್ನು ಮನೆಯಲ್ಲೇ ಬಿಟ್ಟು ಬರಲು ಒತ್ತಾಯಿಸಿರುವ ಸಿನಿಮಾ” ಎಂದು ವಿಮರ್ಶಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



