ಸಿನಿಮಾ ಸುದ್ದಿ

ಮೊದಲ ಬಾರಿಗೆ ಸಿನಿಮಾ ಹಾಡಿಗೆ 'ರೀಲ್ಸ್ ರಾಣಿ' ಸೋನು ಶ್ರೀನಿವಾಸ್ ಗೌಡ ಡ್ಯಾನ್ಸ್! ಕೇಕೆ' ಐಟಂ ಸಾಂಗ್ ಬಿಡುಗಡೆ, Video

ಇನ್ನೂ ‘ಉಪೇಂದ್ರ ಐ ಲವ್ ಯೂ’ ಚಿತ್ರದ ಖ್ಯಾತಿಯ ಕಿರಣ್ ತೋಟಂಬೈಲ್ ಸಂಗೀತ ಸಂಯೋಜಿಸಿದ್ದಾರೆ. ಇದೀಗ ಬಿಡುಗಡೆಯಾಗಿರುವ ‘ಗುಂಟೂರು ಅಮ್ಮಾಯಿ’ ಹಾಡಿಗೆ ಸಂಗೀತದ ಜೊತೆಗೆ ಸಾಹಿತ್ಯವನ್ನೂ ಕಿರಣ್ ಅವರೇ ಬರೆದಿದ್ದಾರೆ.

ಮೊದಲ ಬಾರಿಗೆ ಸಿನಿಮಾ ಹಾಡಿಗೆ 'ರೀಲ್ಸ್ ರಾಣಿ' ಸೋನು ಶ್ರೀನಿವಾಸ್ ಗೌಡ ಡ್ಯಾನ್ಸ್! ಕೇಕೆ' ಐಟಂ ಸಾಂಗ್ ಬಿಡುಗಡೆ, Video
ಸೋನು ಶ್ರೀನಿವಾಸ್ ಗೌಡ
Published On :

ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ಸ್ ಮೂಲಕವೇ ಹೆಚ್ಚು ಗುರುತಿಸಿಕೊಂಡಿರುವ ಸೋನು ಶ್ರೀನಿವಾಸ್ ಗೌಡ ಮೊದಲ ಬಾರಿಗೆ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಹೌದು. ಸೋನು ಶ್ರೀನಿವಾಸ್ ಗೌಡ ಅವರ‘ಕೇಕೆ' ಚಿತ್ರದ ಐಟಂ ಹಾಡನ್ನು (Item song) ಇಂದು ಬೆಂಗಳೂರಿನ ಕಲಾವಿದರ ಸಂಘದಲ್ಲಿ ಲೋಕಾರ್ಪಣೆ ಮಾಡಲಾಯಿತು. ಈ ಚಿತ್ರವನ್ನು ಸೋಮಶೇಖರ್ ಜಿ.ಕೆ. ನಿರ್ದೇಶಿಸಿದ್ದು, ರಮಾಲಿ ನಾಯ್ಕ್ ಮತ್ತು ಕಲ್ಯಾಣ್ (ಬಳ್ಳಾರಿ-ಹೊಸಪೇಟೆ) ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಇನ್ನೂ ‘ಉಪೇಂದ್ರ ಐ ಲವ್ ಯೂ’ ಚಿತ್ರದ ಖ್ಯಾತಿಯ ಕಿರಣ್ ತೋಟಂಬೈಲ್ ಸಂಗೀತ ಸಂಯೋಜಿಸಿದ್ದಾರೆ. ಇದೀಗ ಬಿಡುಗಡೆಯಾಗಿರುವ ‘ಗುಂಟೂರು ಅಮ್ಮಾಯಿ’ ಹಾಡಿಗೆ ಸಂಗೀತದ ಜೊತೆಗೆ ಸಾಹಿತ್ಯವನ್ನೂ ಕಿರಣ್ ಅವರೇ ಬರೆದಿದ್ದಾರೆ.

ಐಶ್ವರ್ಯ ರಂಗರಾಜನ್ ಧ್ವನಿಯಾಗಿದ್ದು, ಆಲಾಪನಾ ಆಡಿಯೋ ಮೂಲಕ ಹಾಡು ಬಿಡುಗಡೆಯಾಗಿದೆ. ಆಲಾಪನಾ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಹಾಡು ವೀಕ್ಷಣೆಗೆ ಲಭ್ಯವಿದೆ. ‘ಗುಂಟೂರು ಅಮ್ಮಾಯಿ’ ಸಾಂಗ್ ತೆಲುಗು ಮಿಶ್ರಿತ ಕನ್ನಡ ಹಾಡಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಚಾರಗಳಿಗೆ ವೈರಲ್ ಆಗಿದ್ದ ಸೋನು ಶ್ರೀನಿವಾಸ್ ಗೌಡ (Sonu Sinivas Gowda) ಈ ಹಾಡಿಗೆ ಹೆಜ್ಜೆ ಹಾಕಿರುವುದು ವಿಶೇಷ.

‘ಗುಂಟೂರು ಅಮ್ಮಾಯಿ’ ಹಾಡಿನ ಬಿಡುಗಡೆಯೊಂದಿಗೆ ಸೋನು ಅವರ ಹುಟ್ಟುಹಬ್ಬವನ್ನೂ ಚಿತ್ರತಂಡ ಆಚರಿಸಿತು. ‘ಕೇಕೆ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಚಿತ್ರದ ಇನ್ನಿತರ ಮಾಹಿತಿಗಳನ್ನು ಹಂಚಿಕೊಳ್ಳುವುದಾಗಿ ಚಿತ್ರತಂಡ ತಿಳಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.