ಚನ್ನಪಟ್ಟಣದ ಶಾಸಕ ಸಿಪಿ ಯೋಗೇಶ್ವರ್ ಪುತ್ರನ ಸೈನಿಕ-2 ಟೀಸರ್ ಬಿಡುಗಡೆ!
ಸೈನಿಕ 2 ಸಿನಿಮಾವು ಈ ಹಿಂದೆ ಸಿ. ಪಿ. ಯೋಗೇಶ್ವರ್ ಅವರ ಅಭಿನಯದಲ್ಲಿ ಮೂಡಿಬಂದಿದ್ದ ಸೈನಿಕ ಸಿನಿಮಾದ ಮುಂದುವರೆದ ಭಾಗವಾಗಿದೆ.

ನಟ ಹಾಗೂ ಕಾಂಗ್ರೆಸ್ ಶಾಸಕ ಸಿ.ಪಿ. ಯೋಗೇಶ್ವರ್ ಅವರ ಪುತ್ರ ಧ್ಯಾನ್ ಯೋಗೇಶ್ವರ್ ಅವರ ಚೊಚ್ಚಲ ಸಿನಿಮಾ 'ಸೈನಿಕ 2' ಚಿತ್ರದ ಟೀಸರ್ ಭಾನುವಾರ ಬಿಡುಗಡೆಯಾಗಿದೆ.
ಸೈನಿಕ 2 ಸಿನಿಮಾವು ಈ ಹಿಂದೆ ಸಿ. ಪಿ. ಯೋಗೇಶ್ವರ್ ಅವರ ಅಭಿನಯದಲ್ಲಿ ಮೂಡಿಬಂದಿದ್ದ ಸೈನಿಕ ಸಿನಿಮಾದ ಮುಂದುವರೆದ ಭಾಗವಾಗಿದೆ.
ಈ ಚಿತ್ರದಲ್ಲಿ ಸಿ. ಪಿ. ಯೋಗೇಶ್ವರ್ ಕೂಡಾ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸಿ.ಪಿ. ಯೋಗೇಶ್ವರ್ ತಮ್ಮ ಸಾಮಾಜಿಕ ಮಾಧ್ಯಮ ಇನ್ ಸ್ಟಾಗ್ರಾಂನಲ್ಲಿ ಪುತ್ರನ ಸೈನಿಕ 2 ಸಿನಿಮಾದ ಟೀಸರ್ ನ್ನು ಹಂಚಿಕೊಂಡಿದ್ದಾರೆ.
ಸಿನಿಮಾದ ಟೀಸರ್ ಪೌರಾಣಿಕ ಕಥೆಯಿಂದ ಆರಂಭವಾಗುತ್ತದೆ. ರಾಜರ ಕಾಲದಲ್ಲಿನ ಸೈನಿಕರಿಂದ ಹಿಡಿದು ಈವರೆಗೆ ಸೈನಿಕರ ಬಲಿದಾನವನ್ನು ಟೀಸರ್ ನಲ್ಲಿ ಆರಂಭದಲ್ಲಿ ತೋರಿಸಲಾಗಿದೆ. ಬಳಿಕ ತಂದೆ ಮತ್ತು ಮಗ ಇಬ್ಬರೂ ಸೈನಿಕ ಪಾತ್ರದಲ್ಲಿ ಎದುರಾಳಿಗಳ ಮೇಲೆ ಯುದ್ಧ ಮಾಡುವುದನ್ನು ನೋಡಬಹುದು.
ಸೈನಿಕ 2 ಚಿತ್ರದ ಅಧಿಕೃತ ಟೀಸರ್ ಇದೀಗ ನಿಮ್ಮ ಮುಂದೆ. ದೇಶಭಕ್ತಿ, ಧೈರ್ಯ, ಕರ್ತವ್ಯ ಮತ್ತು ಹೋರಾಟದ ಮತ್ತೊಂದು ಅದ್ಭುತ ಅಧ್ಯಾಯಕ್ಕೆ ಸಾಕ್ಷಿಯಾಗುವ ಕ್ಷಣ ಬಂದಿದೆ ಎಂದು ಸಿಪಿ ಯೋಗೇಶ್ವರ್ ಬರೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



