ರಜನಿ ಅಭಿಮಾನಿಗಳಿಗೆ ಗುಡ್ ನ್ಯೂಸ್; ಕೊನೆಗೂ 'ಜೈಲರ್ 2' ರಿಲೀಸ್ ಡೇಟ್ ಫಿಕ್ಸ್
ಜೈಲರ್ 2 ಚಿತ್ರದ ನಿರ್ಮಾಪಕರು ಆಕ್ಷನ್-ಪ್ಯಾಕ್ಡ್ ಪ್ರೋಮೋದೊಂದಿಗೆ ಚಿತ್ರದ ಬಿಡುಗಡೆ ದಿನಾಂಕವನ್ನು ಇಂದು ಅಧಿಕೃತವಾಗಿ ಘೋಷಿಸಿದ್ದಾರೆ.

ಚೆನ್ನೈ: ತಮಿಳು ಸೂಪರ್ಸ್ಟಾರ್ ರಜನಿಕಾಂತ್ ಅವರು ಗುರುವಾರ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು, ತಲೈವಾ ಅಭಿನಯದ ಹಾಗೂ ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ ಬಹುನಿರೀಕ್ಷಿತ 'ಜೈಲರ್ 2' ಚಿತ್ರದ ರಿಲೀಸ್ ಡೇಟ್ ಕೊನೆಗೂ ಹೊರಬಿದ್ದಿದೆ.
ಜೈಲರ್ 2 ಚಿತ್ರದ ನಿರ್ಮಾಪಕರು ಆಕ್ಷನ್-ಪ್ಯಾಕ್ಡ್ ಪ್ರೋಮೋದೊಂದಿಗೆ ಚಿತ್ರದ ಬಿಡುಗಡೆ ದಿನಾಂಕವನ್ನು ಇಂದು ಅಧಿಕೃತವಾಗಿ ಘೋಷಿಸಿದ್ದಾರೆ. ಬಹುನಿರೀಕ್ಷಿತ 'ಜೈಲರ್ 2' ಸಿನಿಮಾ ಅಕ್ಟೋಬರ್ 15, 2026 ರಂದು ಬಿಡುಗಡೆಯಾಗಲಿದೆ.
ಕಲಾನಿಧಿ ಮಾರನ್ ನಿರ್ಮಿಸಿರುವ ಈ ಹೈಬಜೆಟ್ ಚಿತ್ರದಲ್ಲಿ ರಜನಿ ಅವರ ಜೊತೆಗೆ ಇತರ ಚಿತ್ರರಂಗದ ದಿಗ್ಗಜ ನಟರು ಕೂಡ ನಟಿಸಿದ್ದು, ವಿಶೇಷ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಕೆರಳಿಸಿದೆ.
ಒಂದಷ್ಟು ವಿಳಂಬದ ಬಳಿಕ ರಿಲೀಸ್ ದಿನಾಂಕವನ್ನು ಹಂಚಿಕೊಂಡಿರುವ ಚಿತ್ರತಂಡ, ಇದೇ ಅಕ್ಟೋಬರ್ 15ಕ್ಕೆ 'ಜೈಲರ್ 2' ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ತಿಳಿಸಿದೆ. ಇದರೊಟ್ಟಿಗೆ ರಜಿನಿ ಅಭಿಮಾನಿಗಳ ಹುಬ್ಬೇರಿಸುವಂತ ಟೀಸರ್ವೊಂದನ್ನು ಕೂಡ ಹರಿಬಿಟ್ಟಿದೆ.
ಟೀಸರ್ ತುಣುಕಿನಲ್ಲಿ ರಜಿನಿ ಅವರದ್ದು ಹೊಸ ಲುಕ್ ಎನ್ನಿಸುವಂತೆ ಕಂಡುಬಂದಿದ್ದೇ ಆದರೂ ಚಿತ್ರತಂಡ ಅಷ್ಟಾಗಿ ಯಾವುದನ್ನೂ ರಿವೀಲ್ ಮಾಡಿಲ್ಲ. ಟೀಸರ್ನಲ್ಲಿ ಬಿಜಿಎಂ ಸದ್ದು ಮಾಡಿದರೆ, ಯಾರೆಲ್ಲ ಕಲಾವಿದರು ನಟಿಸಿದ್ದಾರೋ, ಅವರ ಪಾತ್ರಗಳ ಒಂದು ಸೆಕೆಂಡ್ನಲ್ಲಿ ಪಾಸಿಂಗ್ ಶಾಟ್ ಆಗಿ ತೋರಿಸಲಾಗಿದೆ.
ಚಿತ್ರಕ್ಕೆ ಎಂದಿನಂತೆ ಸೂಪರ್ಹಿಟ್ ಮ್ಯೂಸಿಕಲ್ ಕಂಪೋಸರ್ ಅನಿರುದ್ಧ್ ರವಿಚಂದ್ರನ್ ಅವರೇ ಸಂಗೀತ ನೀಡಿದ್ದಾರೆ. ರಜಿನಿಕಾಂತ್, ಮಿರ್ನಾ ಮೆನನ್, ಮೋಹನ್ ಲಾಲ್, ಹ್ಯಾಟ್ರಿಕ್ ಹೀರೋ ಶಿವಕಾಜ್ಕುಮಾರ್, ಹೃತಿಕ್ ರೋಷನ್, ಮೋಹನ್ ಲಾಲ್, ರಮ್ಯ ಕೃಷ್ಣನ್ ಸೇರಿದಂತೆ ದಿಗ್ಗಜ ಕಲಾವಿದರೇ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



