ರಜನಿಕಾಂತ್ ನಟನೆಯ ಮುಂದಿನ ಚಿತ್ರಕ್ಕೆ 'ಧರ್ಮನ್' ಎಂದು ಹೆಸರಿಟ್ಟ ಚಿತ್ರತಂಡ; ಫಸ್ಟ್ ಲುಕ್ ಪೋಸ್ಟರ್ ರಿಲೀಸ್!
ಫಸ್ಟ್-ಲುಕ್ ಪೋಸ್ಟರ್‌ನಲ್ಲಿ ರಜನಿಕಾಂತ್, ಆಪರೇಷನ್ ಥಿಯೇಟರ್‌ನೊಳಗೆ ರಕ್ತಸಿಕ್ತ ಸ್ಕಾಲ್ಪಲ್ ಹಿಡಿದು ವ್ಯಕ್ತಿಯೊಬ್ಬರ ಮೇಲೆ ನಿಂತಿರುವುದು ಕಂಡುಬಂದಿದೆ.

ಮುಂಬೈ: ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಮತ್ತು ನಟ-ನಿರ್ಮಾಪಕ ಕಮಲ್ ಹಾಸನ್ ಅವರ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಚಿತ್ರಕ್ಕೆ 'ಧರ್ಮನ್' ಎಂದು ಶೀರ್ಷಿಕೆ ನೀಡಲಾಗಿದೆ ಎಂದು ಚಿತ್ರತಂಡ ಬುಧವಾರ ಘೋಷಿಸಿದ್ದಾರೆ.
ಚೆನ್ನೈನಲ್ಲಿ ನಡೆದ ಪೂಜಾ ಸಮಾರಂಭದಲ್ಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಲಾಯಿತು.
ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬೆಂಬಲದೊಂದಿಗೆ, ಈ ಚಿತ್ರವನ್ನು 'ಓ ಮೈ ಕಡವುಲೆ' ಮತ್ತು 'ಡ್ರ್ಯಾಗನ್' ಖ್ಯಾತಿಯ ಅಶ್ವತ್ಥ್ ಮಾರಿಮುತ್ತು ನಿರ್ದೇಶಿಸಲಿದ್ದಾರೆ. 'ಡಾನ್' ನಿರ್ದೇಶಕ ಸಿಬಿ ಚಕ್ರವರ್ತಿ ಬದಲಿಗೆ ಮಾರಿಮುತ್ತು ಈ ಯೋಜನೆಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಫಸ್ಟ್-ಲುಕ್ ಪೋಸ್ಟರ್‌ನಲ್ಲಿ ರಜನಿಕಾಂತ್, ಆಪರೇಷನ್ ಥಿಯೇಟರ್‌ನೊಳಗೆ ರಕ್ತಸಿಕ್ತ ಸ್ಕಾಲ್ಪಲ್ ಹಿಡಿದು ವ್ಯಕ್ತಿಯೊಬ್ಬರ ಮೇಲೆ ನಿಂತಿರುವುದು ಕಂಡುಬಂದಿದೆ.
ಪೋಸ್ಟರ್‌ನಲ್ಲಿ ಶೀರ್ಷಿಕೆಗೆ 'ದಿ ಡೆಡ್ಲಿ ಡಾಕ್ಟರ್' ಎಂಬ ಟ್ಯಾಗ್‌ಲೈನ್ ಇದೆ. ಚಿತ್ರದಲ್ಲಿ ಸಿಮ್ರಾನ್, ರಾಶಿ ಖನ್ನಾ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಯೋಜನೆ ಇದ್ದು, ನಿಕೇತ್ ಬೊಮ್ಮಿ ಛಾಯಾಗ್ರಾಹಕರಾಗಿ ಮತ್ತು ಪ್ರದೀಪ್ ಇ. ರಾಘವ್ ಅವರ ಸಂಕಲನವಿದೆ.


'ನಾನು ಕೈ ಬೀಸುತ್ತಿದ್ದೆ ಆದರೆ ಯಾರೂ ನನ್ನತ್ತ ನೋಡಲಿಲ್ಲ, ಆಗಲೇ ನನ್ನ ಅಹಂಕಾರ ಛಿದ್ರವಾಯಿತು': ರಜನಿಕಾಂತ್; Video
ಈ ಹಿಂದೆ 'ತಲೈವರ್ 173' ಎಂದು ಕರೆಯಲಾಗುತ್ತಿದ್ದ ಈ ಚಿತ್ರವು ರಜನಿಕಾಂತ್ ಮತ್ತು ಕಮಲ್ ಹಾಸನ್ ನಡುವಿನ ಮತ್ತೊಂದು ಸಹಯೋಗವನ್ನು ಸೂಚಿಸುತ್ತದೆ. ಈ ಇಬ್ಬರು ನೆಲ್ಸನ್ ನಿರ್ದೇಶನದ ಮುಂಬರುವ ಚಿತ್ರದಲ್ಲಿ ಮತ್ತೆ ಒಟ್ಟಿಗೆ ನಟಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


