ಮಾರ್ಚ್ 4ರಂದು ರಶ್ಮಿಕಾ-ವಿಜಯ್ ಆರತಕ್ಷತೆ: ಶಿವಣ್ಣ, ಸುದೀಪ್ ಸೇರಿ ಕನ್ನಡ ಚಿತ್ರರಂಗದ 11ಮಂದಿಗಷ್ಟೇ ಆಮಂತ್ರಣ
ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ರಿಸೆಪ್ಷನ್‌ಗೆ ಕನ್ನಡದ ಕೆಲವು ಸ್ಟಾರ್‌ಗಳಿಗೆ ಮಾತ್ರ ಆಹ್ವಾನ ಪತ್ರಿಕೆ ತಲುಪಿಸಲಾಗಿದೆ. ರಶ್ಮಿಕಾ ಸ್ವತಃ ವೈಯಕ್ತಿಕವಾಗಿ ಮೆಸೇಜ್ ಮಾಡಿ ಆಮಂತ್ರಣ ನೀಡಿರುವುದು ವಿಶೇಷವಾಗಿದೆ.

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ವಿವಾಹ ಉದಯಪುರದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿದೆ. ಈ ಮಧ್ಯೆ ಕನ್ನಡದ ಯಾವ ನಟರಿಗೆ ರಶ್ಮಿಕಾ ತಮ್ಮ ಮದುವೆಗೆ ಆಹ್ವಾನಿಸಿದ್ದಾರೆ ಅನ್ನೋ ಕುತೂಹಲ ಹಲವರಲ್ಲಿದೆ.
ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ರಿಸೆಪ್ಷನ್‌ಗೆ ಕನ್ನಡದ ಕೆಲವು ಸ್ಟಾರ್‌ಗಳಿಗೆ ಮಾತ್ರ ಆಹ್ವಾನ ಪತ್ರಿಕೆ ತಲುಪಿಸಲಾಗಿದೆ. ರಶ್ಮಿಕಾ ಸ್ವತಃ ವೈಯಕ್ತಿಕವಾಗಿ ಮೆಸೇಜ್ ಮಾಡಿ ಆಮಂತ್ರಣ ನೀಡಿರುವುದು ವಿಶೇಷವಾಗಿದೆ. ಸ್ಯಾಂಡಲ್ವುಡ್ ಬಹು ಬೇಡಿಕೆ ನಟರಿಗೆ ಮಾತ್ರ ಮದುವೆ ಆಹ್ವಾನ ಪತ್ರಿಕೆ ನೀಡಿರುವುದು ಇದೀಗ ಸ್ಯಾಂಡಲ್ವುಡ್ನಲ್ಲಿ ಹಲವು ಚರ್ಚೆಗೂ ಕಾರಣವಾಗಿದೆ.
ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಯಶ್, ಅಶ್ವಿನಿ ಪುನೀತ್ ರಾಜ್ ಕುಮಾರ್, ರವಿಚಂದ್ರನ್, ಧ್ರುವ ಸರ್ಜಾ, ಗಣೇಶ್, ನಿರ್ದೇಶಕ ಎ.ಹರ್ಷ, ನಂದ ಕಿಶೋರ್, ಸಿಂಪಲ್ ಸುನಿ, ಅಶಿಕಾ ರಂಗನಾಥ್ ಗೆ ಮಾತ್ರ ಆಹ್ವಾನ ಪತ್ರಿಕೆ ನೀಡಲಾಗಿದೆ.
ರಶ್ಮಿಕಾಗೆ ಮೊದಲ ಅವಕಾಶ ಕೊಟ್ಟ ಶೆಟ್ಟಿ ಬಳಗ ಅಥವಾ ಆ ತಂಡದ ಮುಖ್ಯಸ್ಥರು ಈ ಪಟ್ಟಿಯಲ್ಲಿ ಇಲ್ಲ. ರಶ್ಮಿಕಾ ಮೊದಲು 'ಕಿರಿಕ್ ಪಾರ್ಟಿ'ಯಲ್ಲಿ ನಟಿಸಿದ್ದು, ಆ ಚಿತ್ರದಲ್ಲಿ ಶೆಟ್ಟಿ ತಂಡದವರು ದೊಡ್ಡ ಪಾತ್ರ ವಹಿಸಿದ್ದರು. ಆದರೆ ಈಗ ರಶ್ಮಿಕಾ ದೊಡ್ಡ ಸ್ಟಾರ್ ಆಗಿರುವಾಗ ಅವರಿಗೆ ಆಹ್ವಾನ ನೀಡದಿರುವುದು ಚರ್ಚೆಗೆ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



