ಸಿನಿಮಾ ಸುದ್ದಿ

ಎ.ಆರ್ ರೆಹಮಾನ್ ಕೋಮುವಾದ ಹೇಳಿಕೆ: ಜನ ಬೊಗಳಲು ಆರಂಭಿಸಿದ್ದಾರೆ; ಕಂಗನಾ ವಿರುದ್ದ ಪ್ರಕಾಶ್ ರೈ ವಾಗ್ದಾಳಿ

ಎ.ಆರ್. ರೆಹಮಾನ್ ಚಲನಚಿತ್ರೋದ್ಯಮದಲ್ಲಿ ತಮ್ಮ ಕೆಲಸದ ಅವಕಾಶಗಳ ಬಗ್ಗೆ ಮಾತನಾಡಿದ ನಂತರ "ಬೊಗಳುವುದು" ಪ್ರಾರಂಭವಾಯಿತು ಎಂದು ವರ್ಷದ ಪ್ರಕಾಶ್ ರಾಜ್ ಹೇಳಿದರು.

ಎ.ಆರ್ ರೆಹಮಾನ್ ಕೋಮುವಾದ ಹೇಳಿಕೆ: ಜನ ಬೊಗಳಲು ಆರಂಭಿಸಿದ್ದಾರೆ; ಕಂಗನಾ ವಿರುದ್ದ ಪ್ರಕಾಶ್ ರೈ ವಾಗ್ದಾಳಿ
ಎ.ಆರ್ ರೆಹಮಾನ್, ಕಂಗನಾ ಮತ್ತು ಪ್ರಕಾಶ್ ರೈ
Published On :

ಕೇರಳ: ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತಗಾರ ಎ.ಆರ್. ರೆಹಮಾನ್ ಬಗ್ಗೆ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರ ಹೇಳಿಕೆಗೆ ನಟ ಮತ್ತು ನಿರ್ದೇಶಕ ಪ್ರಕಾಶ್ ರಾಜ್ ಟೀಕಿಸಿದ್ದಾರೆ.

ಕೇರಳ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಪ್ರಕಾಶ್​ ರಾಜ್​, ಈ ದೇಶದಲ್ಲಿ ಭಿನ್ನಾಭಿಪ್ರಾಯವನ್ನು ಅಪರಾಧೀಕರಿಸಲಾಗುತ್ತಿದೆ ಮಾತನಾಡಿದ್ದಕ್ಕಾಗಿ ಯಾರನ್ನು ಬಂಧಿಸಲಾಗುತ್ತದೆ? ಎಂದು ಇತ್ತೀಚೆಗೆ ಎ.ಆರ್​. ರೆಹಮಾನ್​ ಅವರಿಗೆ ಎದುರಾಧ ವಿರೋಧವನ್ನು ಉದಾಹರಿಸಿ ಅವರು ಮಾತನಾಡಿದರು.

ಎ.ಆರ್. ರೆಹಮಾನ್ ಚಲನಚಿತ್ರೋದ್ಯಮದಲ್ಲಿ ತಮ್ಮ ಕೆಲಸದ ಅವಕಾಶಗಳ ಬಗ್ಗೆ ಮಾತನಾಡಿದ ನಂತರ "ಬೊಗಳುವುದು" ಪ್ರಾರಂಭವಾಯಿತು ಎಂದು ವರ್ಷದ ಪ್ರಕಾಶ್ ರಾಜ್ ಹೇಳಿದರು. ತಮ್ಮ ಸಿನಿಮಾದಲ್ಲಿ ಭಾಗವಹಿಸಿಲು ನಿರಾಕರಿಸಿದ್ದಕ್ಕೆ ರೆಹಮಾನ್ ವಿರುದ್ಧ ಮಾತನಾಡಿದ ಕಂಗನಾ ರಣಾವತ್ ಅವರನ್ನು ಪ್ರಕಾಶ್​ ರಾಜ್​ ಟೀಕಿಸಿದ್ದಾರೆ.

ಎ ಆರ್‌ರೆಹಮಾನ್‌ ಅವರ ವಿಚಾರದಲ್ಲಿ ಏನಾಗ್ತಿದೆ? ಸಮಾಜದ ಪ್ರತಿಕ್ರಿಯೆ ಏನು? ‘ಮಾ ತುಜೆ ಸಲಾಂ’, ‘ಜೈ ಹೋ’ ಹಾಡಿಗೆ ಎರಡು ಆಸ್ಕರ್‌ ಪ್ರಶಸ್ತಿ ಸಿಕ್ಕಿದಾಗ ಖುಷಿಯಿಂದ ಸಂಭ್ರಮಿಸಿದ್ದೀರಿ. ಅವರು ಹಾಗೆ ಜನರಲ್‌ ಆಗಿ ಮಾತನಾಡಿದ್ದಾರೆ. ಅವರು ಕೆಲಸಕ್ಕಾಗಿ ಎಲ್ಲಿಯೂ ಅಲೆದಿಲ್ಲ. ಅದಕ್ಕೂ ಮೀರಿ ಅವರಿದ್ದಾರೆ ಎಂದು ನಿಮಗೆ ಮಾಹಿತಿ ಇರಬೇಕು. ಇದೇ ಸತ್ಯ, ಆದರೆ ಜನರು ಬೊಗಳೋಕೆ ಶುರು ಮಾಡಿದ್ರು” ಎಂದು ಅವರು ಹೇಳಿದ್ದಾರೆ.

ಕೋಮುವಾದಿ ವಿಚಾರಗಳಿಗೋಸ್ಕರವೇ ಹಿಂದಿ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆ ಇವೆ" ಎಂದಿದ್ದರು. ಈ ಬಗ್ಗೆ ದೊಡ್ಡ ಚರ್ಚೆ ಆಯಿತು, ಅನೇಕರು ರೆಹಮಾನ್‌ಅವರನ್ನು ದೂರಿದರು.

ರೆಹಮಾನ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಕಂಗನಾ ರಣಾವತ್, ರೆಹಮಾನ್ ಅವರೇ, ನಾನು ಕೇಸರಿ ಪಕ್ಷವನ್ನು ಬೆಂಬಲಿಸುವೆ ಎಂದು ಬಾಲಿವುಡ್‌ನಲ್ಲಿ ಬೇದಭಾವ ಮಾಡುತ್ತಾರೆ. ನಿಮ್ಮಷ್ಟು ಪೂರ್ವಾಗ್ರಹ ಪೀಡಿತ, ದ್ವೇಷಯುತವಾದ ವ್ಯಕ್ತಿಯನ್ನು ನಾನು ನೋಡಿಲ್ಲ.

ನಾನು 'ಎಮರ್ಜೆನ್ಸಿ' ಸಿನಿಮಾದ ಕಥೆ ಹೇಳಲು ಬಂದಾಗ ನೀವು ನನ್ನನ್ನು ಭೇಟಿ ಮಾಡಲು ಸಹ ನಿರಾಕರಿಸಿದ್ದೀರಿ. ನೀವು ದ್ವೇಷದಿಂದ ಕುರುಡಾಗಿದ್ದೀರಿ. ಪ್ರೊಪಗಂಡ ಸಿನಿಮಾದ ಭಾಗ ಆಗಲು ನಿಮಗೆ ಇಷ್ಟ ಇರಲಿಲ್ಲ ಎಂದು ಹೇಳಿದರು. ಎಲ್ಲ ವಿಮರ್ಶಕರಿಂದ ಎಮರ್ಜೆನ್ಸಿ ಸಿನಿಮಾವು ಮಾಸ್ಟರ್ ಪೀಸ್‌ಎಂದು ಕರೆಸಿಕೊಳ್ತು. ವಿರೋಧ ಪಕ್ಷಗಳು ಕೂಡ, ಸಿನಿಮಾ ಬ್ಯಾಲೆನ್ಸ್‌ ಆಗಿತ್ತು ಎಂದು ಹೊಗಳಿ ಪತ್ರ ಬರೆದರು ಎಂದು ಕಂಗನಾ ಹೇಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.