ಸಿನಿಮಾ ಸುದ್ದಿ

ಡ್ರಗ್ಸ್ ಸಮೇತ ಸಿಕ್ಕಿ ಬಿದ್ದ ನಟಿ ಅಂಜು ಕೃಷ್ಣ: ಎಂಟು ಮಂದಿ ಬಂಧನ

ಪ್ರಕರಣಕ್ಕೆ ಸಂಬಂಧಿಸಿದಂತೆ ವಲಸರವಕ್ಕಂ ಎಂಬಲ್ಲಿ 33 ವರ್ಷದ ವಿಘ್ನೇಶ್ವರನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆತನ ವಿಚಾರಣೆ ಮಾಡಿದಾಗ ಆತ ವೆಂಕಟೇಶ್ ಹೆಸರಿನ ವ್ಯಕ್ತಿಯಿಂದ ಮಾದಕ ವಸ್ತುಗಳನ್ನು ಖರೀದಿ ಮಾಡಿರುವ ಅಂಶ ತಿಳಿದು ಬಂತು.

ಡ್ರಗ್ಸ್ ಸಮೇತ ಸಿಕ್ಕಿ ಬಿದ್ದ ನಟಿ ಅಂಜು ಕೃಷ್ಣ: ಎಂಟು ಮಂದಿ ಬಂಧನ
ಅಂಜು ಕೃಷ್ಣ
Published On :

ತಮಿಳು ಚಿತ್ರರಂಗದ ಯುವ ನಟಿ ಅಂಜು ಕೃಷ್ಣ ಸೇರಿದಂತೆ ಒಟ್ಟು 8 ಮಂದಿಯನ್ನು ಡ್ರಗ್ಸ್ ಸಮೇತ ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ತಮಿಳು ಸಿನಿಮಾ ಸಹಾಯಕ ನಿರ್ದೇಶಕಿ ವಿನ್ಸಿ ನಿವೇದಾ ಹಾಗೂ ಆರು ಯುವಕರು ಸೇರಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಲಸರವಕ್ಕಂ ಎಂಬಲ್ಲಿ 33 ವರ್ಷದ ವಿಘ್ನೇಶ್ವರನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆತನ ವಿಚಾರಣೆ ಮಾಡಿದಾಗ ಆತ ವೆಂಕಟೇಶ್ ಹೆಸರಿನ ವ್ಯಕ್ತಿಯಿಂದ ಮಾದಕ ವಸ್ತುಗಳನ್ನು ಖರೀದಿ ಮಾಡಿರುವ ಅಂಶ ತಿಳಿದು ಬಂತು.

ಬಳಿಕ ವೆಂಕಟೇಶ್ ಎಂಬಾತನನ್ನು ಪೊಲೀಸರೇ ಗ್ರಾಹಕನ ರೀತಿ ಸಂಪರ್ಕ ಮಾಡಿ, ಡ್ರಗ್ಸ್ ಮಾರುವಂತೆ ಹೇಳಿ, ನಿಗದಿತ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಆ ವ್ಯಕ್ತಿ ಬಂದಾಗ ಆತನನ್ನು ಬಂಧಿಸಿ, ಆತನಿಂದ ಆರು ಗ್ರಾಂ ಮೆಥಾಫೆಟಮೈನ್, ಏಳು ಗ್ರಾಂ ಓಜಿ ಗಾಂಜಾ, ಹದಿನೈದು ಗ್ರಾಂ ಗಾಂಜಾ, ಸ್ಮೋಕಿಂಗ್ ಬಾಂಗ್, ಸ್ಟ್ಯಾಂಪ್ ಮತ್ತು ಒಂಬತ್ತು ಮೊಬೈಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ವಾಹನ ತಪಾಸಣೆ ನಡೆಸಿದಾಗ ಈ ಎಂಟು ಮಂದಿ ಡ್ರಗ್ಸ್ ಸಮೇತ ಸಿಕ್ಕಿಬಿದ್ದಿದ್ದಾರೆ. ನಟಿ ಅಂಜು ಕೃಷ್ಣ, ಮಲಯಾಳಂ ನಟ ಜೋಜು ನಾಯಕರಾಗಿದ್ದ ‘ಆರೋ’ ಸಿನಿಮಾದಲ್ಲಿ ನಟಿಸಿದ್ದರು.

ನಟಿ ಅಂಜು ಕೃಷ್ಣ ಮತ್ತು ಕೆಲವು ತಮಿಳು ಸಿನಿಮಾಗಳಿಗೆ ಸಹಾಯಕಿ ನಿರ್ದೇಶಕಿಯಾಗಿ ಕೆಲಸ ಮಾಡಿರುವ ವಿನ್ಸಿ ನಿವೇತಾ ಅವರುಗಳನ್ನು ತಮಿಳುನಾಡು ಪೊಲೀಸ್ ಇಲಾಖೆಯ ಮಾದಕ ವಸ್ತು ನಿಯಂತ್ರಣ ವಿಭಾಗದ ತಂಡ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಾನಿ ಚೆಲ್ಲಪ್ಪ ಹೆಸರಿನ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ನಡೆದ ಆಪರೇಷನ್​​ನಲ್ಲಿ ನಟಿ ಸೇರಿದಂತೆ ಇತರರ ಬಂಧನವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.