ಸಿನಿಮಾ ಸುದ್ದಿ

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

'ಟಾಕ್ಸಿಕ್' ಸಿನಿಮಾ ಮೊದಲ ದಿನವೇ ಕನ್ನಡ ಆವೃತ್ತಿಗಿಂತ ಹಿಂದಿ ಭಾಷೆಯಲ್ಲೇ ಡಬಲ್ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದಿದೆ.

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!
ಟಾಕ್ಸಿಕ್ ಸಿನಿಮಾ ಸ್ಟಿಲ್
Published On :

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್'(Toxic: A Fairy Tale for Grown-Ups) ಬುಧವಾರ ವಿಶ್ವದಾದ್ಯಂತ ಏಕ ಕಾಲಕ್ಕೆ ತೆರೆ ಕಂಡಿದ್ದು, ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ.

'ಟಾಕ್ಸಿಕ್' ಸಿನಿಮಾ ಮೊದಲ ದಿನವೇ ಕನ್ನಡ ಆವೃತ್ತಿಗಿಂತ ಹಿಂದಿ ಭಾಷೆಯಲ್ಲೇ ಡಬಲ್ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದಿದೆ.

'ಟಾಕ್ಸಿಕ್' ಸಿನಿಮಾ ಮೊದಲ ದಿನ ವಿಶ್ವದಾದ್ಯಂತ 140.75 ಕೋಟಿ ರೂ. ಗಳಿಸಿದ್ದು, ಭಾರತದಲ್ಲೇ 101.10 ಕೋಟಿ ರೂ, ನೆಟ್ ಕಲೆಕ್ಷನ್ ಆಗಿದೆ.

ಟಾಕ್ಸಿಕ್ ಸಿನಿಮಾ ಬುಧವಾರ ಭಾರತದಾದ್ಯಂತ 24,579 ಪ್ರದರ್ಶನಗಳನ್ನು ಕಂಡಿದ್ದು, ಒಟ್ಟು 120.75 ಕೋಟಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ.

ಟಾಕ್ಸಿಕ್ ಹಿಂದಿ ಆವೃತ್ತಿಯು ಅತಿ ಹೆಚ್ಚು ಗಳಿಕೆ ಮಾಡಿದ್ದು, ಮೊದಲ ದಿನವೇ 55 ಕೋಟಿ ರೂ.ಗಳನ್ನು ಗಳಿಸಿದೆ. ಕನ್ನಡ ಆವೃತ್ತಿಯು 23.30 ಕೋಟಿ ಗಳಿಸಿದೆ.

ಇನ್ನುಳಿದಂತೆ ದಕ್ಷಿಣ ಭಾರತದ ಇತರ ಭಾಷೆಗಳಲ್ಲೂ ‘ಟಾಕ್ಸಿಕ್’ ಉತ್ತಮ ಪ್ರದರ್ಶನ ನೀಡಿದೆ. ತೆಲುಗಿನಲ್ಲಿ 16.00 ಕೋಟಿ ರೂಪಾಯಿ, ತಮಿಳಿನಲ್ಲಿ 5.50 ಕೋಟಿ ರೂಪಾಯಿ ಹಾಗೂ ಮಲಯಾಳಂನಲ್ಲಿ 1.30 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಆಗಿದೆ. ಭಾಷೆಯ ಗಡಿ ದಾಟಿ ಭಾರತದಾದ್ಯಂತ ಪ್ರೇಕ್ಷಕರು ಚಿತ್ರವನ್ನು ಅದ್ದೂರಿಯಾಗಿ ಸ್ವೀಕರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.