ಪೆಟ್ರೋಲ್ ಬಾಂಬ್ ರೀಲ್ಸ್: Biggboss ಮಾಜಿ ಸ್ಪರ್ಧಿ ರಜತ್ ವಿರುದ್ಧ FIR ದಾಖಲು!
‘Biggboss’ ಖ್ಯಾತಿಯ ರಜತ್ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು ಸಾರ್ವಜನಿಕ ರಸ್ತೆಯಲ್ಲೇ ಪೆಟ್ರೋಲ್ ಬಾಂಬ್ ಮಾದರಿಯ ಭೀಕರ ಸ್ಫೋಟ ನಡೆಸಿ ರೀಲ್ಸ್ ಮಾಡಿದ್ದು ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

‘Biggboss’ ಖ್ಯಾತಿಯ ರಜತ್ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು ಸಾರ್ವಜನಿಕ ರಸ್ತೆಯಲ್ಲೇ ಪೆಟ್ರೋಲ್ ಬಾಂಬ್ ಮಾದರಿಯ ಭೀಕರ ಸ್ಫೋಟ ನಡೆಸಿ ರೀಲ್ಸ್ ಮಾಡಿದ್ದು ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಈ ಹಿಂದೆ ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ಶೂಟಿಂಗ್ ಮಧ್ಯೆ ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ರಜತ್ ಹಾಗೂ ವಿನಯ್ ವಿರುದ್ಧ ಕೇಸ್ ದಾಖಲಾಗಿದ್ದು ಇಬ್ಬರೂ ಪರಪ್ಪನ ಅಗ್ರಹಾರ ಜೈಲು ದರ್ಶನ ಮಾಡಿ ಬಂದಿದ್ದರು. ಇದಾದ ಬಳಿಕ ಮೈಸೂರಿನ ಪಾರಂಪರಿಕ ಕಟ್ಟಡದ ಮುಂದೆ ಫೋಟೋಶೂಟ್ ಮಾಡಿಸಿ ರಜತ್ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಮತ್ತೊಂದು ಅದೇ ರೀತಿಯ ಎಡವಟ್ಟು ಮಾಡಿಕೊಂಡಿದ್ದಾರೆ.
ಹಿಂದೆ ಬೆಂಕಿ.. ಮುಂದೆ ಮಾಡಿಫೈ ಆಗಿರುವ ಬುಲೆಟ್ ಓಡಿಸುತ್ತಾ ತಾವು ಬರುವ ರೀಲ್ಸ್ನ ರಜತ್ ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ, ಸುಮ್ಮನೆ ತಮಾಷೆಗೆ ಮಾಡಿರೋ ಶೂಟ್. ಇದಕ್ಕೂ ಒಂದು ಕೇಸ್ ಹಾಕ್ಬೇಡ್ರಪ್ಪಾ ರಾಜ ಎಂದು ರಜತ್ ಬರೆದುಕೊಂಡಿದ್ದರು.
ಜೊತೆಗೆ, ಈ ಕಂಟೆಂಟ್ ಕ್ರಿಯೇಟ್ ಮಾಡಿರೋದು ಚಿತ್ರೀಕರಣದ ಸಲುವಾಗಿ ಮಾತ್ರ. ಎಲ್ಲಾ ಅವಶ್ಯಕ ಸುರಕ್ಷತಾ ಕ್ರಮಗಳನ್ನ ಕೈಗೊಂಡು, ಪರಿಣತಿ ಹೊಂದಿರುವ ತಜ್ಞರಿಂದ ಮುನ್ನೆಚ್ಚರಿಕಾ ಕ್ರಮಗಳನ್ನ ಪಾಲಿಸಿ ಈ ಚಿತ್ರೀಕರಣ ಮಾಡಿದ್ದೇವೆ. ಇದನ್ನ ಅನುಕರಿಸಬೇಡಿ. ಇದನ್ನ ಮರುಸೃಷ್ಟಿಸಬೇಡಿ. ಬೆಂಕಿ ಅಪಾಯಕಾರಿ. ಚಿತ್ರೀಕರಣದ ವೇಳೆ ಹೆಲ್ಮೆಟ್ ಧರಿಸಿಲ್ಲ. ಇದು ಅಸುರಕ್ಷಿತ. ರಸ್ತೆ ಸುರಕ್ಷತಾ ಕ್ರಮಗಳನ್ನ ಪಾಲಿಸಿ. ವಾಹನ ಚಲಾಯಿಸುವಾಗ ತಪ್ಪದೆ ಹೆಲ್ಮೆಟ್ ಧರಿಸಿ. ಧೂಮಪಾನ ಆರೋಗ್ಯಕ್ಕೆ ಹಾನಿಕರ. ಈ ವಿಡಿಯೋ ಧೂಮಪಾನವನ್ನ ಪ್ರಮೋಟ್ ಮಾಡುವುದಿಲ್ಲ ಎಂಬ ಡಿಸ್ಕ್ಲೈಮರ್ನ ತಮ್ಮ ರೀಲ್ಸ್ ಜೊತೆಗೆ ಹಾಕಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



