ರಜನಿ ಆಧ್ಯಾತ್ಮಿಕ ಪ್ರಯಾಣ: ಗಂಗಾ ನದಿ ದಡದಲ್ಲಿ ಧ್ಯಾನ, ಬೀದಿ ಬದಿಯಲ್ಲೇ ಊಟ; ಸೂಪರ್ ಸ್ಟಾರ್ ಸರಳತೆಗೆ ಭಾರೀ ಮೆಚ್ಚುಗೆ!
ರಜನಿಕಾಂತ್ ಋಷಿಕೇಶದಲ್ಲಿರುವ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ನೀಡಿ ಸ್ವಾಮಿ ದಯಾನಂದರಿಗೆ ಗೌರವ ಸಲ್ಲಿಸಿದರು. ಅಲ್ಲಿದ್ದ ಸಮಯದಲ್ಲಿ, ತಲೈವಾ ಗಂಗಾ ನದಿಯ ದಡದಲ್ಲಿ ಧ್ಯಾನ ಮಾಡಿದ್ದರು.

ಇಳಿ ವಯಸ್ಸಲ್ಲೂ ಸೂಪರ್ ಹಿಟ್ ಸಿನಿಮಾಗಳನ್ನ ಕೊಡ್ತಿರೋ ಸೂಪರ್ ಸ್ಟಾರ್ ಈಗ ಸಿನಿಮಾಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ. ಸ್ವಲ್ಪ ಸಮಯದವರೆಗೆ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿರುವ ರಜನಿಕಾಂತ್, ಪ್ರಸ್ತುತ ಆಧ್ಯಾತ್ಮಿಕ ಪ್ರಯಾಣ ಪ್ರಾರಂಭಿಸಿದ್ದಾರೆ.
ರಜನಿಕಾಂತ್ ಋಷಿಕೇಶದಲ್ಲಿರುವ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ನೀಡಿ ಸ್ವಾಮಿ ದಯಾನಂದರಿಗೆ ಗೌರವ ಸಲ್ಲಿಸಿದರು. ಅಲ್ಲಿದ್ದ ಸಮಯದಲ್ಲಿ, ತಲೈವಾ ಗಂಗಾ ನದಿಯ ದಡದಲ್ಲಿ ಧ್ಯಾನ ಮಾಡಿದ್ದರು ಮತ್ತು ಗಂಗಾ ಆರತಿಯಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ.
ಅವರ ಆಧ್ಯಾತ್ಮಿಕ ಪ್ರವಾಸದ ಅನೇಕ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ಒಂದು ಫೋಟೋದಲ್ಲಿ ರಜನಿಕಾಂತ್ ಬಿಳಿ ಬಟ್ಟೆಗಳನ್ನು ಧರಿಸಿ, ರಸ್ತೆಬದಿಯ ಕಲ್ಲಿನ(ತಡೆಗೋಡೆ) ಮೇಲ್ಮೈಯಲ್ಲಿ ಇರಿಸಲಾದ ಎಲೆ ತಟ್ಟೆಯಲ್ಲಿ ಬಡಿಸಿದ ಆಹಾರವನ್ನು ಊಟ ಮಾಡುತ್ತಿದ್ದಾರೆ. ಅಲ್ಲದೆ, ಬೆಟ್ಟದ ಹಿನ್ನೆಲೆಯಲ್ಲಿ ನಿಲ್ಲಿಸಿದ್ದ ಕಾರು ಕಂಡುಬಂದಿದೆ.
ಇನ್ನೊಂದು ಫೋಟೋದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್, ಆಶ್ರಮವೊಂದರಲ್ಲಿ ತಮ್ಮ ಸ್ನೇಹಿತರೊಂದಿಗೆ ಮಾತನಾಡುತ್ತಿರುವುದನ್ನು ತೋರಿಸಲಾಗಿದೆ. ನಂತರ ರಜನಿಕಾಂತ್ ಒಬ್ಬ ಪುರೋಹಿತರ ಪಕ್ಕದಲ್ಲಿ ನಿಂತು ಗೌರವ ಸಲ್ಲಿಸುತ್ತಿರುವ ಚಿತ್ರ ಕೂಡ ಇದೆ. ರಜನಿಕಾಂತ್ ಅವರ ಸರಳತೆಗೆ ಅವರ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಅವರಿಗೆ ಇನ್ನೂ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



