ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮಲ್ಲಮ್ಮ!
ಯಾದಗಿರಿ ಜಿಲ್ಲೆಯವರಾದ ಮಲ್ಲಮ್ಮ, ಮನೆ ಪ್ರವೇಶಿಸುವ ಮುನ್ನ ತಮ್ಮ ಉತ್ಸಾಹ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹೆಸರು ಮಾಡಿರುವ ಬಲವಿತ್ತು.

ಕಲರ್ಸ್ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮನೆಯಿಂದ ಮಲ್ಲಮ್ಮ ಹೊರಗೆ ಬಂದಿದ್ದಾರೆ.
ಕೆಲ ದಿನಗಳ ಹಿಂದೆ ವೈಯಕ್ತಿಕ ಕಾರಣದಿಂದ ಮಲ್ಲಮ್ಮ ಬಿಗ್ ಬಾಸ್ ಮನೆಯನ್ನು ತೊರೆದಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈಗ ಕಡಿಮೆ ವೋಟ್ ಪಡೆದು ಡೊಡ್ಮನೆಯಿಂದ ಔಟ್ ಆಗಿದ್ದಾರೆ.
ಯಾದಗಿರಿ ಜಿಲ್ಲೆಯವರಾದ ಮಲ್ಲಮ್ಮ, ಮನೆ ಪ್ರವೇಶಿಸುವ ಮುನ್ನ ತಮ್ಮ ಉತ್ಸಾಹ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹೆಸರು ಮಾಡಿರುವ ಬಲವಿತ್ತು.
ಆದರೆ ಮನೆಗೆ ಹೋದ ಮಲ್ಲಮ್ಮ ಅವರಿಗೆ ಆರಂಭದಲ್ಲಿ ಅವರಿಗೆ ಟಾಸ್ಕ್ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿತ್ತು. ಅಷ್ಟೇ ಅಲ್ಲದೇ ಟಾಸ್ಕ್ ಸಮಯದಲ್ಲಿ ಮನೆಯ ಸದಸ್ಯರು ಅವರನ್ನು ಅಷ್ಟಾಗಿ ಪರಿಗಣಿಸುತ್ತಿರಲಿಲ್ಲ. ಈ ವಿಚಾರದ ಬಗ್ಗೆ ಸುದೀಪ್ ಅವರು ಮನೆ ಮಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.
ಮಲ್ಲಮ್ಮ ಹೆಚ್ಚಾಗಿ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ಜೊತೆ ಗುರುತಿಸಿಕೊಳ್ಳುತ್ತಿದ್ದರು. ಈ ವಾರದ ಟಾಸ್ಕ್‌ನಲ್ಲೂ ಅವರು ಉತ್ತಮ ಪ್ರದರ್ಶನ ನೀಡಿರಲಿಲ್ಲ. ಶನಿವಾರ ಸುದೀಪ್ ಜೊತೆ ಮಾತನಾಡುತ್ತಿದ್ದಾಗ ನಾನು ಕಾಲೇಜಿಗೆ ಹೋಗಿರಲಿಲ್ಲ ಎಂದು ಹೇಳಿ ಕಣ್ಣೀರಿಟ್ಟಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


