ಮಾನವೀಯತೆ ಮರೆತ 'ಎಕ್ಕ' ಚಿತ್ರತಂಡ: ಸಿದ್ದಗಂಗಾ ಮಠಕ್ಕೆ ಬಂದಿದ್ದ ವೇಳೆ ಮಹಿಳೆಗೆ ಕಾರು ಡಿಕ್ಕಿ; ತಿರುಗಿಯೂ ನೋಡದೆ ಹೋದ ಬೌನ್ಸರ್‌ಗಳು!
ನಟನ ಬೌನ್ಸರ್‌ಗಳು ಇದ್ದ ಕಾರು ಮಹಿಳೆಯೊಬ್ಬರಿಗೆ ಡಿಕ್ಕಿಯಾದ ಪರಿಣಾಮ ಆಕೆಯ ಕಾಲಿಗೆ ಗಂಭೀರವಾಗಿ ಗಾಯವಾಗಿದೆ.

ತುಮಕೂರು: ನಗರದ ಸಿದ್ಧಗಂಗಾ ಮಠಕ್ಕೆ ನಟ ಯುವ ರಾಜ್‌ಕುಮಾರ್ ನಟನೆಯ ಎಕ್ಕ ಚಿತ್ರತಂಡ ಭಾನುವಾಪ ಭೇಟಿ ನೀಡಿದ್ದು, ಈ ವೇಳೆ ಎಡವಟ್ಟು ನಡೆದಿದೆ,
ನಟನ ಬೌನ್ಸರ್‌ಗಳು ಇದ್ದ ಕಾರು ಮಹಿಳೆಯೊಬ್ಬರಿಗೆ ಡಿಕ್ಕಿಯಾದ ಪರಿಣಾಮ ಆಕೆಯ ಕಾಲಿಗೆ ಗಂಭೀರವಾಗಿ ಗಾಯವಾಗಿದೆ. ಆದರೂ, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸದೇ ಅಮಾನವೀಯ ವರ್ತನೆ ತೋರದ ಆರೋಪ ಕೇಳಿ ಬಂದಿದೆ.
ಎಕ್ಕ ಚಿತ್ರತಂಡವು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ವೇಳೆ ಅಪಘಾತ ನಡೆದಿದೆ. ಸಿದ್ಧಗಂಗಾ ಮಠದ ಶಾಲೆಗೆ ಮಗುವನ್ನು ಬಿಟ್ಟು ಹೋಗಲು ಮಹಿಳೆ ಬಂದಿದ್ದರು. ವಾಪಸ್ ತೆರಳುತ್ತಿದ್ದ ವೇಳೆ ಎಕ್ಕ ಚಿತ್ರತಂಡ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿತ್ತು. ಈ ಸಂದರ್ಭದಲ್ಲೇ ಬೌನ್ಸರ್ ಕಾರು ಮಹಿಳೆಗೆ ಡಿಕ್ಕಿಯಾಗಿದೆ. ಈ ವೇಳೆ ಬಳ್ಳಾರಿ ಮೂಲದ ಲಿಂಗಮ್ಮ ಎಂಬುವರ ಕಾಲಿಗೆ ಪೆಟ್ಟು ಬಿದ್ದಿದೆ. ಅಪಘಾತದಲ್ಲಿ ಮಹಿಳೆಯ ಕಾಲಿಗೆ ಗಂಭೀರ ಪೆಟ್ಟಾಗಿದೆ.
ಮಹಿಳೆ ನರಳಾಡುತ್ತ ಆಸ್ಪತ್ರೆಗೆ ಸೇರಿಸುವಂತೆ ಕೋರಿದರೂ ಗಮನಸದೇ ಎಕ್ಕ ಚಿತ್ರತಂಡ ಸ್ಥಳದಿಂದ ತೆರಳಿದೆ. ಚಿತ್ರತಂಡದ ಜತೆ ನಟ ಯುವರಾಜ್ ಕುಮಾರ್ ಸಹ ಇದ್ದರು ಎಂದು ಹೇಳಲಾಗುತ್ತಿದೆ. ಈ ಸಂಬಂಧ ಕ್ಯಾತಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


