ಲಾಯರ್ ಜಗದೀಶ್ ಮೇಲೆ ಭೀಕರ ಹಲ್ಲೆ: ರಕ್ತ ಸುರಿಯುತ್ತಿದ್ರು ವಿಡಿಯೋ ಮಾಡಿ ವಾರ್ನಿಂಗ್!
Bigg Boss Kannada 11ನೇ ಆವೃತ್ತಿಯ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಕೈಕೈ ಮಿಲಾಯಿಸಿ ಬಿಗ್ ಬಾಸ್ ಮನೆಯಿಂದ ಜಗದೀಶ್ ಹೊರಬಂದಿದ್ದರು.

Bigg Boss Kannada 11ನೇ ಆವೃತ್ತಿಯ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಕೈಕೈ ಮಿಲಾಯಿಸಿ ಬಿಗ್ ಬಾಸ್ ಮನೆಯಿಂದ ಜಗದೀಶ್ ಹೊರಬಂದಿದ್ದರು. ನಂತರ ಸುಮ್ಮನಿರದೆ ಅವರಿವರ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಇನ್ನು ನಿನ್ನೆಯಷ್ಟೇ ಜಗದೀಶ್ ಅವರು ವ್ಯಕ್ತಿಯೊಬ್ಬರ ಜೊತೆ ಜಗಳವಾಗಿತ್ತು. ಇದರ ಬೆನ್ನಲ್ಲೇ ಇಂದು ಜಗದೀಶ್ ಮೇಲೆ ಭೀಕರವಾಗಿ ಹಲ್ಲೆ ಮಾಡಲಾಗಿದೆ. ಜಗದೀಶ್ ಮೂಗು, ತುಟಿಗಳಿಂದ ರಕ್ತ ಹೊರಬರುವಂತೆ ಹಲ್ಲೆ ನಡೆದಿದ್ದು, ರಕ್ತ ಸುರಿಯುತ್ತಿರುವಾಗಲೇ ಫೇಸ್ ಬುಕ್ ಮೂಲಕ ಲೈವ್ ಬಂದು ಜಗದೀಶ್ ಮಾತನಾಡಿದ್ದಾರೆ.
ಪೊಲೀಸ್ ಜೀಪಿನಲ್ಲಿ ಕುಳಿತುಕೊಂಡೇ ಜಗದೀಶ್ ಅವರು ಲೈವ್ ಮಾಡಿದ್ದು ಇವತ್ತು ನನ್ನ ಮತ್ತು ನನ್ನ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಆಗಿದೆ. ಪೊಲೀಸರು ಬಂದು ನಮ್ಮನ್ನು ಕಾಪಾಡಿದರು. ನನ್ನ ಸ್ಕಾರ್ಪಿಯೋ ಕಾರನ್ನು ಧ್ವಂಸ ಮಾಡಿದ್ದಾರೆ. ನನ್ನು ಗನ್ ಮ್ಯಾನ್ ಮೇಲೂ ಹಲ್ಲೆ ಮಾಡಿದ್ದಾರೆ. ಜನಪರ ಧ್ವನಿ ಎತ್ತುವರರ ಮೇಲೆ ಹಲ್ಲೆ ಆಗಿದೆ. ಎಲ್ಲಿದೆ ಕಾನೂನು ಸುವ್ಯವಸ್ಥೆ. ಸಿಎಂ ಸಿದ್ದರಾಮಯ್ಯ ಅವರೇ ಏನು ಮಾಡುತ್ತಿದ್ದೀರಿ. ಅನ್ಯಾಯದ ವಿರುದ್ಧ ಧ್ವನಿ ಎತ್ತುವವರ ಸ್ಥಿತಿ ಏನಾಗಿದೆ. ಇದು ಟೆರರಿಸ್ಟ್ ಗಳ ರಾಜ್ಯವಾಗಿದೆ ಎಂದು ಹೇಳಿದ್ದಾರೆ.
ನನ್ನನ್ನು, ನನ್ನ ಕುಟುಂಬವನ್ನು ಕೊಲ್ಲಲು ಕೆಲವು ಪುಡಿ ರೌಡಿಗಳು ನಮ್ಮ ಮೇಲೆ ದಾಳಿ ಮಾಡಿದ್ದಾರೆ. ಕರ್ನಾಟಕದಲ್ಲಿ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದೆ. ಸುಮಾರು 500ಕ್ಕೂ ಹೆಚ್ಚು ಜನ, ಮದ್ಯ ಸೇವಿಸಿ, ಗಾಂಜಾ ಮತ್ತಿನಲ್ಲಿ ನಮ್ಮ ಮೇಲೆ ದಾಳಿ ಮಾಡಿದ್ದಾರೆ. ನನ್ನು ಕಾಪಾಡಿ ಎಂದು ನಾನು ಗೋಗರಿಯಲ್ಲ. ನನ್ನ ಜೀವ ಹೋದರೂ ನಾನು ಯೋಚನೆ ಮಾಡಲ್ಲ. ಆದರೆ ಅನ್ಯಾಯ ಗೆಲ್ಲಬಾರದು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನಾನು ಇವರನ್ನು ಬಿಡುವುದಿಲ್ಲ. ದಾಳಿಕೋರರ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದಾಗಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



