ಸಿನಿಮಾ ಸುದ್ದಿ

ನಟ ಧನುಷ್ ಜೊತೆ Dating ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದ ಮೃಣಾಲ್ ಠಾಕೂರ್!

ಈ ಗಾಸಿಪ್ ಗಳಿಗೆ ಮೃಣಾಲ್ ಅಥವಾ ಧನುಷ್ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ಇತ್ತೀಚೆಗೆ ಮೃಣಾಲ್ ಈ ಸುದ್ದಿಗಳನ್ನು ನಿಜವಾಗಿಸುವತ್ತ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.

ನಟ ಧನುಷ್ ಜೊತೆ Dating ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದ ಮೃಣಾಲ್ ಠಾಕೂರ್!
ಧನುಷ್ ಮತ್ತು ಮೃಣಾಲ್ ಠಾಕೂರ್
Published On :

ಕಾಲಿವುಡ್‌ನಲ್ಲಿ ಈಗ ಹಾಟ್ ಟಾಪಿಕ್ ಅಂದ್ರೆ ಧನುಷ್ - ಮೃಣಾಲ್ ಠಾಕೂರ್ ಪ್ರೀತಿ ಪ್ರಕರಣ. ಇತ್ತೀಚೆಗೆ ಇಬ್ಬರೂ ಒಟ್ಟಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರೋದು ಈ ಗಾಳಿಸುದ್ದಿಗೆ ಕಾರಣ. ಧನುಷ್ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿರುವುದರಿಂದ ಅಲ್ಲಿನ ಪಾರ್ಟಿಗಳಲ್ಲೂ ಭಾಗವಹಿಸುತ್ತಿದ್ದಾರೆ. ಈ ಪಾರ್ಟಿಗಳಲ್ಲಿ ಹೆಚ್ಚಾಗಿ ಮೃಣಾಲ್ ಠಾಕೂರ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರಂತೆ.

ಹೀಗಾಗಿ ಇಬ್ಬರ ಪ್ರೀತಿಯ ಗಾಳಿಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬೆಂಕಿಯಂತೆ ಹರಡುತ್ತಿವೆ. ಆದರೆ ಈ ಗಾಸಿಪ್ ಗಳಿಗೆ ಮೃಣಾಲ್ ಅಥವಾ ಧನುಷ್ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ಇತ್ತೀಚೆಗೆ ಮೃಣಾಲ್ ಈ ಸುದ್ದಿಗಳನ್ನು ನಿಜವಾಗಿಸುವತ್ತ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಅದು ಹೇಗೆಂದರೆ ಧನುಷ್ ಅವರ ಸಹೋದರಿಯರಾದ ಡಾ. ಕಾರ್ತಿಕಾ ಕೃಷ್ಣಮೂರ್ತಿ ಮತ್ತು ವಿಮಲಾ ಗೀತಾ ಅವರನ್ನು ಮೃಣಾಲ್​​ Instagram ನಲ್ಲಿ ಫಾಲೋ ಪ್ರಾರಂಭಿಸಿದ್ದಾರೆ. ಈ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ಪ್ರಕ್ರಿಯೆಯಲ್ಲಿ, ಇಬ್ಬರೂ ಸಹೋದರಿಯರು ಕೂಡ ಮೃಣಾಲ್ ಅವರನ್ನು ಫಾಲೋ ಮಾಡುತ್ತಿದ್ದಾರೆ.

ನಟಿ ಮೃಣಾಲ್ ಠಾಕೂರ್ ಇತ್ತೀಚಿನ ದಿನಗಳಲ್ಲಿ ತಮ್ಮ ಸಿನಿಮಾಗಳಿಗಿಂತ ತಮ್ಮ ವೈಯಕ್ತಿಕ ಜೀವನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಡೇಟಿಂಗ್ ಸುದ್ದಿಗಳ ಹೊರತಾಗಿಯೂ, ಅವರು ಧನುಷ್ ಕುಟುಂಬಕ್ಕೆ ಹತ್ತಿರವಾಗುತ್ತಿದ್ದಾರೆ. ಈ ಸುದ್ದಿಗಳು ನಿಜ ಎಂಬ ಅಂಶವನ್ನು ಇದು ಮತ್ತಷ್ಟು ಬಲಪಡಿಸುತ್ತದೆ. ಜೊತೆಗೆ ಧನುಷ್ ಮೃಣಾಲ್ ಠಾಕೂರ್ ಅವರನ್ನು ತಮ್ಮ ಕುಟುಂಬ ಸದಸ್ಯರಿಗೆ ಪರಿಚಯಿಸಿದ್ದಾರೆಯೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.