ಸಿನಿಮಾ ಸುದ್ದಿ

ನಟ ಧರ್ಮ ಕೀರ್ತಿರಾಜ್- ರಾಗಿಣಿ ದ್ವಿವೇದಿ ಮುಖಾಮುಖಿ; ತೀವ್ರ ಕುತೂಹಲ ಕೆರಳಿಸಿದ 'ಸಿಂಧೂರಿ'

ಚಿತ್ರವನ್ನು ಶಂಕರ್ ಕೋನಮಾನಹಳ್ಳಿ ಬರೆದು ನಿರ್ದೇಶಿಸಿದ್ದು, ಎಸ್ ರಮೇಶ್ ಬಂಡವಾಳ ಹೂಡಿದ್ದಾರೆ. ಅಕ್ಷಯ ತೃತೀಯ ಏಪ್ರಿಲ್ 30ರಂದು ಚಿತ್ರದ ಅಧಿಕೃತ ಮುಹೂರ್ತ ಸಮಾರಂಭ ನಡೆಯಲಿದೆ.

ನಟ ಧರ್ಮ ಕೀರ್ತಿರಾಜ್- ರಾಗಿಣಿ ದ್ವಿವೇದಿ ಮುಖಾಮುಖಿ; ತೀವ್ರ ಕುತೂಹಲ ಕೆರಳಿಸಿದ 'ಸಿಂಧೂರಿ'
ನಟ ಧರ್ಮ ಕೀರ್ತಿರಾಜ್ - ರಾಗಿಣಿ ದ್ವಿವೇದಿ
Published On :

ನಟ ಧರ್ಮ ಕೀರ್ತಿರಾಜ್ ತಮ್ಮ ಮುಂಬರುವ ಚಿತ್ರಗಳಾದ ಟಕೀಲಾ, ಅಮರಾವತಿ ಪೊಲೀಸ್ ಸ್ಟೇಷನ್ ಮತ್ತು ಬ್ಲಡ್ ರೋಸಸ್ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಸದ್ಯ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರುವ ಅವರು, ಇತ್ತೀಚೆಗೆ 'ಸಿಂಧೂರಿ' ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ. ಚಿತ್ರತಂಡದ ಪ್ರಕಾರ, ಧರ್ಮ ಕೀರ್ತಿರಾಜ್ ಅವರು ನಟಿ ರಾಗಿಣಿ ದ್ವಿವೇದಿ ಅವರೊಂದಿಗೆ ತೆರೆ ಮೇಲೆ ತೀವ್ರವಾದ ಮುಖಾಮುಖಿಯಾಗಲಿದ್ದಾರೆ.

ಚಿತ್ರವನ್ನು ಶಂಕರ್ ಕೋನಮಾನಹಳ್ಳಿ ಬರೆದು ನಿರ್ದೇಶಿಸಿದ್ದು, ಎಸ್ ರಮೇಶ್ ಬಂಡವಾಳ ಹೂಡಿದ್ದಾರೆ. ಅಕ್ಷಯ ತೃತೀಯ ಏಪ್ರಿಲ್ 30ರಂದು ಚಿತ್ರದ ಅಧಿಕೃತ ಮುಹೂರ್ತ ಸಮಾರಂಭ ನಡೆಯಲಿದೆ.

ಚಿತ್ರದ ಬಗ್ಗೆ ಮಾತನಾಡಿದ ಧರ್ಮ, 'ಸಿಂಧೂರಿಯಲ್ಲಿ ನಾನು ಎರಡು ಛಾಯೆಗಳಲ್ಲಿ ನಟಿಸಿದ್ದೇನೆ. ಒಂದು ನಾಯಕನಾಗಿ ಮತ್ತು ಇನ್ನೊಂದು ನಕಾರಾತ್ಮಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ರಾಗಿಣಿ ದ್ವಿವೇದಿ ಅವರೊಂದಿಗಿನ ಘರ್ಷಣೆ ಆಸಕ್ತಿದಾಯಕವಾಗಿರುತ್ತದೆ. ನನ್ನ ಪ್ರೇಯಸಿಯಾಗಿ ನಟಿಸುವ ಮತ್ತೊಬ್ಬ ನಾಯಕಿ ಕೂಡ ಇದ್ದಾರೆ. ಆದರೆ ಆ ಪಾತ್ರವನ್ನು ಇನ್ನೂ ಅಂತಿಮಗೊಳಿಸಿಲ್ಲ' ಎಂದರು.

ನಿರ್ದೇಶಕರು 1990ರ ದಶಕದ ಶೈಲಿಯ ನಿರೂಪಣೆ ಮತ್ತು ಹಿನ್ನೆಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದು ಚಿತ್ರಕ್ಕೆ ಹಿಂದಿನ ಶೈಲಿಯ ವಿನ್ಯಾಸವನ್ನು ನೀಡಿದೆ. ಚಿತ್ರದ ಸಂಪೂರ್ಣ ಚಿತ್ರೀಕರಣ ಸಕಲೇಶಪುರದಲ್ಲಿ ನಡೆಯಲಿದ್ದು, ಒಂದೇ ಹಂತದಲ್ಲಿ ಚಿತ್ರೀಕರಣಗೊಳ್ಳಲಿದೆ ಎನ್ನುತ್ತಾರೆ ಧರ್ಮ.

ಈಮಧ್ಯೆ, ಧರ್ಮ ಮತ್ತೊಂದು ಯೋಜನೆಗೆ ಹಸಿರು ನಿಶಾನೆ ತೋರಿದ್ದಾರೆ. ನಿರ್ದೇಶಕ ಪುನೀತ್ ಕೆಜಿಆರ್ ಅವರ 'ನಯನ ಮಧುರ' ಎಂಬ ಚಿತ್ರದಲ್ಲಿಯೂ ನಟಿಸಲಿದ್ದಾರೆ. ಚಿತ್ರದ ಅಧಿಕೃತ ಘೋಷಣೆ ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.