ಸಿನಿಮಾ ಸುದ್ದಿ

ನಾನು ಶಿವನ ಭಕ್ತ, ಅದಕ್ಕಾಗಿಯೇ ಇಲ್ಲಿ ಬಂದೆ: 'ರಾವಣ' ಶೂಟಿಂಗ್ ಗೂ ಮುನ್ನ ಮಹಾಕಾಳೇಶ್ವರನ ಸನ್ನಿಧಿಯಲ್ಲಿ ಯಶ್ ಪೂಜೆ!

ಯಶ್ ಅವರು ಶಿವನ ಭಕ್ತರು. ಅವರ ಮನೆಯ ಕುಲದೇವರು ಕೂಡ ಶಿವನೇ. ಈ ಕಾರಣಕ್ಕೆ ಶಿವನ ದರ್ಶನ ಪಡೆಯಲು ಅವರು ಮಹಾ ಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ನಾನು ಶಿವನ ಭಕ್ತ, ಅದಕ್ಕಾಗಿಯೇ ಇಲ್ಲಿ ಬಂದೆ: 'ರಾವಣ' ಶೂಟಿಂಗ್ ಗೂ ಮುನ್ನ ಮಹಾಕಾಳೇಶ್ವರನ ಸನ್ನಿಧಿಯಲ್ಲಿ ಯಶ್ ಪೂಜೆ!
ಮಹಾಕಾಳೇಶ್ವರನ ಸನ್ನಿಧಿಯಲ್ಲಿ ಯಶ್ ಪೂಜೆ!
Published On :

ನಿತೇಶ್ ತಿವಾರಿ ರಾಮಾಯಣದ ಬಗ್ಗೆ ಬಾಲಿವುಡ್‌ನ ಕಾರಿಡಾರ್‌ಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಚಿತ್ರದಲ್ಲಿ ಇಡೀ ತಾರೆಯರ ಗುಂಪೇ ಕಾಣಿಸಿಕೊಳ್ಳಲಿದೆ. ಈ ಚಿತ್ರದಲ್ಲಿ ದಕ್ಷಿಣ ಭಾರತದ ಸೂಪರ್‌ಸ್ಟಾರ್ ಯಶ್ 'ರಾವಣ' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅವರು ತಮ್ಮ ಪಾತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ.

ಶೂಟಿಂಗ್ ಆರಂಭಕ್ಕೂ ಮುನ್ನ ಯಶ್ ಮಧ್ಯ ಪ್ರದೇಶದ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಯಶ್ ಅವರು ಶಿವನ ಭಕ್ತರು. ಅವರ ಮನೆಯ ಕುಲದೇವರು ಕೂಡ ಶಿವನೇ. ಈ ಕಾರಣಕ್ಕೆ ಶಿವನ ದರ್ಶನ ಪಡೆಯಲು ಅವರು ಮಹಾ ಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಯಶ್ ಅವರು ‘ರಾಮಾಯಣ’ ಚಿತ್ರದಲ್ಲಿ ರಾವಣನ ಪಾತ್ರ ಮಾಡುತ್ತಿದ್ದಾರೆ. ಮಂಗಳವಾರದಿಂದ (ಏಪ್ರಿಲ್ 22) ಅವರು ಶೂಟಿಂಗ್​ನಲ್ಲಿ ಭಾಗಿ ಆಗಲಿದ್ದಾರೆ. ಅದಕ್ಕೂ ಮೊದಲು ಅವರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ವಿಶೇಷ ಎಂದರೆ ರಾವಣ ಕೂಡ ಶಿವನ ದೊಡ್ಡ ಭಕ್ತ.

ನಿತೇಶ್ ತಿವಾರಿ ತಮ್ಮ ಮುಂಬರುವ ಚಿತ್ರದಲ್ಲಿ ಯಶ್, ರಣಬೀರ್ ಕಪೂರ್, ಸನ್ನಿ ಡಿಯೋಲ್, ರವಿ ದುಬೆ ಮತ್ತು ಸಾಯಿ ಪಲ್ಲವಿ ಅವರಂತಹ ಶ್ರೇಷ್ಠ ನಟರನ್ನು ಆಯ್ಕೆ ಮಾಡಿದ್ದಾರೆ. ರಾಮಾಯಣದ ಪ್ರಮುಖ ಭಾಗವಾಗಿರುವುದರ ಜೊತೆಗೆ, ನಟ ಈ ಚಿತ್ರದ ಸಹ-ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಈ ವಾರದಿಂದ ಅವರು ಮುಂಬೈನಲ್ಲಿ ತಮ್ಮ ಏಕವ್ಯಕ್ತಿ ದೃಶ್ಯಗಳ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ. ಹೊಸ ಆರಂಭಕ್ಕೂ ಮುನ್ನ ದೇವರ ಆಶೀರ್ವಾದ ಪಡೆದರು.

ದೇವರ ದರ್ಶನ ಮಾಡಿ ಮಾತನಾಡಿದ ನಟ ತಾನು ಚಿಕ್ಕಂದಿನಿಂದಲೇ ಶಿವನ ಭಕ್ತ, ದೇವಸ್ಥಾನಕ್ಕೆ ಭೇಟಿ ನೀಡಿ ಖುಷಿಯಾಯಿತು. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದೆ ಎಂದು ಹೇಳಿದ್ದಾರೆ. 'ರಾಮಾಯಣ' ಎರಡು ಭಾಗಗಳಲ್ಲಿ ಬರಲಿದೆ. ನಿತೇಶ್ ತಿವಾರಿ ಅವರ ಈ ಬಹುನಿರೀಕ್ಷಿತ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಮೊದಲ ಭಾಗವು 2026 ರ ದೀಪಾವಳಿಯಂದು ಬಿಡುಗಡೆಯಾಗಲಿದ್ದು, ಎರಡನೇ ಭಾಗವು 2027 ರ ದೀಪಾವಳಿಯಂದು ಬಿಡುಗಡೆಯಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.