ಸಿನಿಮಾ ಸುದ್ದಿ

'ಹನುಮಾನ್' ಯಶಸ್ಸು: ರಾಮಮಂದಿರ ಉದ್ಘಾಟನೆ ದಿನವೇ ಸೀಕ್ವೆಲ್ 'ಜೈ ಹನುಮಾನ್' ಗೆ ಸಿದ್ಧತೆ

'ಹನುಮಾನ್' ಚಿತ್ರದ ಅಭೂತಪೂರ್ವ ಯಶಸ್ಸಿನ ಬಳಿಕ ಅದೇ ಹುಮ್ಮಸ್ಸಿನಲ್ಲೇ ಚಿತ್ರತಂಡ ಚಿತ್ರದ ಸೀಕ್ವೆಲ್ ಗೆ ಕೈ ಹಾಕಿದ್ದು, ರಾಮಮಂದಿರ ಉದ್ಘಾಟನೆ ದಿನವೇ ಚಿತ್ರದ ಪ್ರೀ ಪ್ರೊಡಕ್ಷನ್ ಕಾರ್ಯವನ್ನು ಕೈಗೆತ್ತಿಕೊಂಡಿದೆ.

'ಹನುಮಾನ್' ಯಶಸ್ಸು: ರಾಮಮಂದಿರ ಉದ್ಘಾಟನೆ ದಿನವೇ ಸೀಕ್ವೆಲ್ 'ಜೈ ಹನುಮಾನ್' ಗೆ ಸಿದ್ಧತೆ
ಜೈ ಹನುಮಾನ್ ಚಿತ್ರಕ್ಕೆ ಸಿದ್ಧತೆ
Published On :

ಹೈದರಾಬಾದ್: 'ಹನುಮಾನ್' ಚಿತ್ರದ ಅಭೂತಪೂರ್ವ ಯಶಸ್ಸಿನ ಬಳಿಕ ಅದೇ ಹುಮ್ಮಸ್ಸಿನಲ್ಲೇ ಚಿತ್ರತಂಡ ಚಿತ್ರದ ಸೀಕ್ವೆಲ್ ಗೆ ಕೈ ಹಾಕಿದ್ದು, ರಾಮಮಂದಿರ ಉದ್ಘಾಟನೆ ದಿನವೇ ಚಿತ್ರದ ಪ್ರೀ ಪ್ರೊಡಕ್ಷನ್ ಕಾರ್ಯವನ್ನು ಕೈಗೆತ್ತಿಕೊಂಡಿದೆ.

ಹೌದು.. ಅಯೋಧ್ಯೆಯಲ್ಲಿ ರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದ್ದು, ಐತಿಹಾಸಿಕ ಕ್ಷಣಕ್ಕೆ ಇಡೀ ದೇಶವೇ ಸಾಕ್ಷಿ ಆಯಿತು. ಈ ಶುಭ ದಿನದಂದು ರಾಮಾಯಣಕ್ಕೆ ಸಂಬಂಧಿಸಿದ ಕೆಲ ಸಿನಿಮಾಗಳು ಸೆಟ್ಟೇರಿದ್ದು, ‘ಶ್ರೀ ರಾಮ್ ಜೈ ಹನುಮಾನ್’ ಹೆಸರಿನ ಸಿನಿಮಾ ಸೆಟ್ಟೇರಿತ್ತು. ಅದೇ ರೀತಿ ಇದೀಗ ‘ಹನುಮಾನ್’ (Hanuman Movie) ಚಿತ್ರದ ಸೀಕ್ವೆಲ್ ‘ಜೈ ಹನುಮಾನ್’ ಸ್ಕ್ರಿಪ್ಟ್ ಪೂಜೆ ನಡೆದಿದೆ. ನಿರ್ದೇಶಕ ಪ್ರಶಾಂತ್ ವರ್ಮಾ ಅವರು ಸೀಕ್ವೆಲ್ ಬಗ್ಗೆ ಆಸಕ್ತಿ ತೋರಿಸಿದ್ದು, ಚಿತ್ರದ ಸೀಕ್ವೆಲ್ ಸ್ಕ್ರಿಪ್ಟ್ ಗೆ ಪೂಜೆ ಸಲ್ಲಿಸಿದ್ದಾರೆ.

ಪ್ರಶಾಂತ್ ವರ್ಮಾ ನಿರ್ದೇಶನದ, ತೇಜ ಸಜ್ಜಾ ನಟನೆಯ ‘ಹನುಮಾನ್’ ಸಿನಿಮಾ ಜನವರಿ 12ರಂದು ರಿಲೀಸ್ ಆಗಿತ್ತು. ವರಲಕ್ಷ್ಮಿ ಶರತ್‌ಕುಮಾರ್, ಕನ್ನಡದ ನಟಿ ಅಮೃತ ಅಯ್ಯರ್ ಮತ್ತು ವಿನಯ್ ರೈ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗೆಲುವು ಕಂಡಿದೆ. ಇದೀ ಚಿತ್ರದೊಂದಿಗೆ ಮಹೇಶ್ ಬಾಬೂ ನಿರ್ದೇಶನದ ಗುಂಟೂರು ಖಾರಂ ಚಿತ್ರ ಕೂಡ ಬಿಡುಗಡೆಯಾಗಿತ್ತು. ಮಿಶ್ರಪ್ರತಿಕ್ರಿಯೆಯ ಹೊರತಾಗಿಯೂ ಈ ಚಿತ್ರ ಉತ್ತಮ ಗಳಿಕೆ ಕಂಡಿತ್ತು. 

ಇನ್ನು ಹನುಮಾನ್ ಚಿತ್ರ ಕೂಡ ಉತ್ತಮ ಗ್ರಾಫಿಕ್ಸ್, ಕಥೆ, ಚಿತ್ರಕಥೆ ವಿಚಾರವಾಗಿ ಪ್ರೇಕ್ಷಕರ ಮನಗೆದ್ದಿತ್ತು. ಅಲ್ಲದೆ ಈ ಚಿತ್ರ ತಂಡ ಮಾರಾಟವಾಗುವ ಪ್ರತಿ ಟಿಕೆಟ್​ ಮೇಲೆ ಐದು ರೂಪಾಯಿ ಹಣವನ್ನು ರಾಮ ಮಂದಿರಕ್ಕೆ ನೀಡಲಾಗುವುದು ಎಂದು ಘೋಷಣೆ ಮಾಡಿತ್ತು. ಈ ಸಿನಿಮಾದ 53.28 ಲಕ್ಷ ಟಿಕೆಟ್​ಗಳು ಮಾರಾಟ ಆಗಿವೆ. ಈ ಮೂಲಕ 2.66 ಕೋಟಿ ರೂಪಾಯಿ ಮೊತ್ತವನ್ನು ಚಿತ್ರತಂಡ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದೆ. 

ಈ ಯಶಸ್ಸಿನ ಬೆನ್ನಲ್ಲೇ ನಿರ್ದೇಕರು ‘ಜೈ ಹನುಮಾನ್’ ಚಿತ್ರದ ಕೆಲಸ ಆರಂಭಿಸಿದ್ದಾರೆ. ‘ಹನುಮಾನ್’ ಸಿನಿಮಾ ಮೂಲಕ ನಿರ್ದೇಶಕ ಪ್ರಶಾಂತ್ ವರ್ಮಾ ರಾಷ್ಟ್ರವ್ಯಾಪಿ ಖ್ಯಾತಿ ಪಡೆದಿದ್ದು, ಈಗ ಸಿದ್ಧವಾಗುತ್ತಿರುವ ಸಿನಿಮಾ ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್ (PVCU) ಅಡಿಯಲ್ಲಿ ಸಿದ್ಧವಾಗಲಿದೆ. ಈಗಾಗಲೇ ಚಿತ್ರಕ್ಕೆ ಸ್ಕ್ರಿಪ್ಟ್ ರೆಡಿ ಮಾಡಲಾಗಿದೆ. ಹೈದರಾಬಾದ್‌ನ ಹನುಮಾನ್ ದೇವಾಲಯದಲ್ಲಿ ಸ್ಕ್ರಿಪ್ಟ್ ಪೂಜೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಿನಿಮಾದ ಪಾತ್ರವರ್ಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ತಂಡ ಮಾಹಿತಿ ನೀಡಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.