ಸಿನಿಮಾ ಸುದ್ದಿ

ಬಿಗ್ ಬಾಸ್ ಕನ್ನಡ 10: ನಮ್ರತಾ ಗೌಡ ಹೊರಕ್ಕೆ; 6 ಸ್ಪರ್ಧಿಗಳು ಅಂತಿಮ ವಾರಕ್ಕೆ ಪ್ರವೇಶ!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ 10' ರಿಂದ ನಮ್ರತಾ ಗೌಡ ಅವರ ಪ್ರಯಾಣ ಈ ವಾರಾಂತ್ಯದಲ್ಲಿ ಕೊನೆಗೊಂಡಿದೆ. ವಾರದ ಮಧ್ಯಭಾಗದಲ್ಲಿ ತನಿಷಾ ಕುಪ್ಪಂಡ ಎಲಿಮಿನೇಟ್ ಆಗಿದ್ದರು. ಈಗ ನಮ್ರತಾ ಗೌಡ ಡೊಡ್ಮನೆಯಿಂದ ಹೊರಗೆ ಬಂದಿದ್ದು, ಆರು ಸ್ಪರ್ಧಿಗಳು ಅಂತಿಮ ವಾರಕ್ಕೆ ಪ್ರವೇಶಿಸಿದ್ದಾರೆ.

ಬಿಗ್ ಬಾಸ್ ಕನ್ನಡ 10: ನಮ್ರತಾ ಗೌಡ ಹೊರಕ್ಕೆ; 6 ಸ್ಪರ್ಧಿಗಳು ಅಂತಿಮ ವಾರಕ್ಕೆ ಪ್ರವೇಶ!
ಬಿಗ್ ಬಾಸ್ ಕನ್ನಡ 10ನೇ ಆವೃತ್ತಿಯಲ್ಲಿನ ಸ್ಪರ್ಧಿಗಳು
Published On :

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ 10' ರಿಂದ ನಮ್ರತಾ ಗೌಡ ಅವರ ಪ್ರಯಾಣ ಈ ವಾರಾಂತ್ಯದಲ್ಲಿ ಕೊನೆಗೊಂಡಿದೆ. ವಾರದ ಮಧ್ಯಭಾಗದಲ್ಲಿ ತನಿಷಾ ಕುಪ್ಪಂಡ ಎಲಿಮಿನೇಟ್ ಆಗಿದ್ದರು. ಈಗ ನಮ್ರತಾ ಗೌಡ ಡೊಡ್ಮನೆಯಿಂದ ಹೊರಗೆ ಬಂದಿದ್ದು, ಆರು ಸ್ಪರ್ಧಿಗಳು ಅಂತಿಮ ವಾರಕ್ಕೆ ಪ್ರವೇಶಿಸಿದ್ದಾರೆ.  

ಈಗ ಸಂಗೀತಾ, ಪ್ರತಾಪ್, ವರ್ತೂರು ಸಂತೋಷ್, ಕಾರ್ತಿಕ್ ಮತ್ತು ತುಕಲಿ ಸಂತೋಷ್, ವಿನಯ್ ಫಿನಾಲೆ ವೀಕ್‌ಗೆ ಎಂಟ್ರಿ ಕೊಟ್ಟಿದ್ದಾರೆ. ವಾರದ ಮಧ್ಯದಲ್ಲಿ ಇವರಲ್ಲಿ ಒಬ್ಬರನ್ನು ಎಲಿಮಿನೇಟ್ ಮಾಡಲಾಗುತ್ತದೆ. ಅಂತಿಮವಾಗಿ ಐದು ಸ್ಪರ್ಧಿಗಳು ಫೈನಲ್ ಗೆ ಬರಲಿದ್ದಾರೆ.

ಕಳೆದ ವಾರ ನಮ್ರತಾ ಗೌಡ, ಡ್ರೋನ್ ಪ್ರತಾಪ್, ವರ್ತೂರು ಪ್ರಕಾಶ್, ವಿನಯ್ ಗೌಡ ಮತ್ತು ಕಾರ್ತಿಕ್ ಮಹೇಶ್ ಎಲಿಮಿನೇಷನ್ ಪರೀಕ್ಷೆ ಎದುರಿಸಿದರು. ಆದರೆ ಶನಿವಾರದ ಸಂಚಿಕೆಯಲ್ಲಿ, ವರ್ತೂರ್ ಸುರಕ್ಷಿತ ಘೋಷಿಸಲಾಯಿತು. ಬಳಿಕ ಭಾನುವಾರದ ಸಂಚಿಕೆಯಲ್ಲಿ ಪ್ರತಾಪ್, ಕಾರ್ತಿಕ್ ಅವರನ್ನು ಸುರಕ್ಷಿತ ಎಂದು ಘೋಷಿಸಿದ ಕಿಚ್ಚ ಸುದೀಪ್, ನಮ್ರತಾ ಗೌಡ ದೊಡ್ಮನೆಯಿಂದ ಹೊರಗೆ ಹೋಗುವ ವಿಷಯ ಖಚಿತಪಡಿಸಿದರು. 

ಈ ಮಧ್ಯೆ ಸಂಗೀತಾ ಮತ್ತು ಪ್ರತಾಪ್ ಫಿನಾಲೆಗೆ ಪ್ರವೇಶಿಸಲು ನೆಚ್ಚಿನವರು ಎಂದು ಟ್ರೆಂಡ್‌ಗಳು ಸೂಚಿಸುತ್ತವೆ. ವಿನಯ್, ಕಾರ್ತಿಕ್, ವರ್ತೂರ್ ಸಂತೋಷ್ ಮತ್ತು ತುಕಲಿ ಸಂತೋಷ್ ಅವರಲ್ಲಿ ಮೂವರು ಸ್ಪರ್ಧಿಗಳು ಆಟದ ಕೊನೆಯ ಹಂತಕ್ಕೆ ಪ್ರವೇಶಿಸಲಿದ್ದಾರೆ. 'ಬಿಗ್ ಬಾಸ್ ಕನ್ನಡ 10' ರ ಗ್ರ್ಯಾಂಡ್ ಫಿನಾಲೆ ಜನವರಿ 28 ರಂದು ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.